Breaking News

ಕಲ್ಲಿದ್ದಲು ಆಮದು ಶೇ 13.2ರಷ್ಟು ಹೆಚ್ಚಳ

Spread the love

ವದೆಹಲಿ: ಏಪ್ರಿಲ್‌ ತಿಂಗಳಲ್ಲಿ 2.61 ಕೋಟಿ ಟನ್‌ ಕಲ್ಲಿದ್ದಲು ದೇಶಕ್ಕೆ ಆಮದಾಗಿದೆ ಎಂದು ಇ-ವಾಣಿಜ್ಯ ಸಂಸ್ಥೆ ಎಂ-ಜಂಕ್ಷನ್‌ ಸರ್ವಿಸಸ್‌ ಲಿಮಿಟೆಡ್‌ ತಿಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ 2.30 ಕೋಟಿ ಟನ್‌ ಕಲ್ಲಿದ್ದಲು ಆಮದಾಗಿತ್ತು. ಈ ಆಮದಿಗೆ ಹೋಲಿಸಿದರೆ ಶೇ 13.2ರಷ್ಟು ಏರಿಕೆಯಾಗಿದೆ.

ಕೋಕಿಂಗ್‌ ಅಲ್ಲದ (ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಬಳಸುವ ಕಲ್ಲಿದ್ದಲು) ಕಲ್ಲಿದ್ದಲು 1.74 ಕೋಟಿ ಟನ್‌ ಮತ್ತು 49.7 ಲಕ್ಷ ಟನ್‌ ಕೋಕಿಂಗ್‌ (ಉತ್ತಮ ಗುಣಮಟ್ಟ) ಕಲ್ಲಿದ್ದಲು ಆಮದಾಗಿದೆ ಎಂದು ತಿಳಿಸಿದೆ.

2023-24ರ ಪೂರ್ಣ ಹಣಕಾಸು ವರ್ಷದಲ್ಲಿ 26.82 ಕೋಟಿ ಟನ್‌ ಕಲ್ಲಿದ್ದಲು ಆಮದಾಗಿದೆ. ಇದರ ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 24.90 ಕೋಟಿ ಟನ್‌ ಆಮದಾಗಿತ್ತು.

ಸಾಗಣೆ ವೆಚ್ಚ ಇಳಿಕೆ ಮತ್ತು ಬೇಸಿಗೆಯಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಳದಿಂದ ಕಲ್ಲಿದ್ದಲು ಆಮದು ಪ್ರಮಾಣ ಏರಿಕೆಯಾಗಿದೆ ಎಂದು ತಿಳಿಸಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ