ಬೆಳಗಾವಿ: ಮಹಾಮಾರಿ ಕೊರೊನಾ ಸೋಂಕು ಹೊಡೆದೊಡಿಸಲು ಪ್ರತಿಯೊಬ್ಬರು ಬೆಂಬಲಿ ಮನೆಯಲ್ಲಿಯೇ ಕಾಲ ಕಳೆಯುವಂತೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೋನಿಗಳಲ್ಲಿ ಬ್ಲಿಂಚಿಗ್ ಪೌಡರ್ ಸಿಂಪಡಿಸಿ ಬಳಿಕ ಕ್ಷೇತ್ರದ ಜನರಿಗೆ ಜಾಗೃತಿ ಮೂಡಿಸಿದ ಅವರು, ಬಹಳಷ್ಟು ಜನರು ತರಕಾರಿಗಾಗಿ ದಿನಸಿ ಅಂಗಡಿಗಳಲ್ಲಿ ಮುಗಿ ಬೀಳುತ್ತಿದ್ದಾರೆ. ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಿದೆ. 25 ಲಕ್ಷ ಜನಸಂಖ್ಯೆ ಇರುವ ಬೆಳಗಾವಿ ಜಿಲ್ಲೆಯಲ್ಲಿ ಕೇವಲ 82 ವೆಂಟಿಲೇಟರ್ ಗಳಿವೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಜನರು ಮನೆಯಲ್ಲಿಯೇ ಉಳಿದುಕೊಂಡು ಲಾಕ್ ಡೌನ್ ಗೆ ಬೆಂಬಲಿಸಬೇಕು ಎಂದು ಹೇಳಿದ್ರು.
ಇದಕ್ಕೂ ಮೊದಲು ಶಾಸಕಿ ಹೆಬ್ಬಾಳ್ಕರ್ ಹಿಂಡಲಗಾ ವ್ಯಾಪ್ತಿಯ ಕಾಲೋನಿಯೊಂದರಲ್ಲಿ ಸ್ವತಃ ತಾವೇ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ಗಮನ ಸೆಳೆದರು.