Breaking News
Home / ಜಿಲ್ಲೆ / ನಗರದ ಪ್ರತಿ ಗಲ್ಲಿಯ ಜನರ ಮನೆ ಬಾಗಿಲಿಗೆ ಹಣ್ಣು, ತರಕಾರಿ ಮಾರಾಟ ವಾಹನಗಳು ಸಿದ್ಧವಾಗಿವೆ

ನಗರದ ಪ್ರತಿ ಗಲ್ಲಿಯ ಜನರ ಮನೆ ಬಾಗಿಲಿಗೆ ಹಣ್ಣು, ತರಕಾರಿ ಮಾರಾಟ ವಾಹನಗಳು ಸಿದ್ಧವಾಗಿವೆ

Spread the love

ಬೆಳಗಾವಿ: ನಗರದ ಪ್ರತಿ ಗಲ್ಲಿಯ ಜನರ ಮನೆ ಬಾಗಿಲಿಗೆ ಹಣ್ಣು, ತರಕಾರಿ ಮಾರಾಟ ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ ಮಾಡಲಾಗಿದ್ದು, ತಮ್ಮ ಕೆಲಸ ನಿರ್ವಹಿಸಲು ವಾಹನಗಳು ಸಿದ್ಧವಾಗಿವೆ.

ಕೊರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗೃತ ಕ್ರಮವಾಗಿ ಸರ್ಕಾರ ಲಾಕ್ ಡೌನ್ ಘೋಷಿಸುವ ಮೂಲಕ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಆದರೆ ಸಾರ್ವಜನಿಕರು ಸಹ ಅಗತ್ಯ ಸಾಮಗ್ರಿಗಳ ಖರೀದಿ ನೆಪದಲ್ಲಿ ಸಂಚರಿಸುವ ಮೂಲಕ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಇದ್ದರಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಪ್ರತಿ ದಿನ ದನಿ ವರ್ಧಕಗಳ ಅಳವಡಿಸಿಕೊಂಡು ತರಕಾರಿ , ಹಣ್ಣು ಮಾರಾಟ ಮಾಡುವ ವಾಹನಗಳು ಪ್ರತಿಯೊಂದು ವಾರ್ಡ್ ಗಳಿಗೆ ಬರಲಿವೆ. ಇದು ಕೊರೊನಾ ಸೋಂಕು ನಿಯಂತ್ರಣ ಹಾಗೂ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದೆ.

ಗ್ರಾಹಕರಿಗೆ ತರಕಾರಿ ತಲುಪಿಸಲು ವಾಹನಗಳು ಮನೆ ಬಾಗಿಲಿಗೆ ಬರಲಿದ್ದು, ಸಾರ್ವಜನಿಕರು ಗುಂಪು ಗುಂಪಾಗಿ ಮಾರುಕಟ್ಟೆಗೆ ಆಗಮಿಸುವ ಅಗತ್ಯವಿಲ್ಲದಾಗಿದೆ. ದನಿ ವರ್ಧಕ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಸಹ ವಾಹನಗಳು ಜಾಗೃತಿ ಮೂಡಿಸುತ್ತವೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ