Breaking News
Home / ಜಿಲ್ಲೆ / ಪ್ರವಾಹ ಸಂದರ್ಭದಲ್ಲಿ ಬೆಳೆಹಾನಿ ಪರಿಹಾರ ವಿತರಿಸುವಲ್ಲಿ ಅಕ್ರಮ.

ಪ್ರವಾಹ ಸಂದರ್ಭದಲ್ಲಿ ಬೆಳೆಹಾನಿ ಪರಿಹಾರ ವಿತರಿಸುವಲ್ಲಿ ಅಕ್ರಮ.

Spread the love

ಬೆಳಗಾವಿ: ಪ್ರವಾಹ ಸಂದರ್ಭದಲ್ಲಿ ಬೆಳೆಹಾನಿ ಪರಿಹಾರ ವಿತರಿಸುವಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ರಾಯಬಾಗ ತಾಲೂಕಿನ ಮೂವರು ಗ್ರಾಮ ಲೆಕ್ಕಿಗರನ್ನು ಅಮಾನತುಗೊಳಿಸಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.


ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮ ಲೆಕ್ಕಿಗ ಪಿ.ಎಂ ಹಾಲವಡೆರ್, ದಿಗ್ಗೆವಾಡಿಯ ಎಸ್.ಎ. ಬಸ್ತವಾಡೆ, ಭಿರಡಿಯ ಬಿ.ಪಿ ಹಳ್ಳಿ ಅಮಾನತುಗೊಂಡ ಗ್ರಾಮ ಲೆಕ್ಕಿಗರು.

ಬೆಳೆ ಪರಿಹಾರ ವಿತರಸುವಲ್ಲಿ ಅಕ್ರಮ ಎಸಗಿದ ಗ್ರಾಮ ಲೆಕ್ಕಿಗರ ವಿರುದ್ದ ಕ್ರಮ ಜರುಗಿಸಲು ಚಿಕ್ಕೋಡಿ ಎಸಿ, ರಾಯಬಾಗ ತಹಸೀಲ್ದಾರ್ ಅವರಿಗೆ ವರದಿ ನೀಡುವಂತೆ ತಿಳಿಸಿದ್ದರು. ಬೆಳೆ ಪರಿಹಾರಕ್ಕೆ ಸಂಬಂಧಪಟ್ಟಂತೆ ರಾಯಬಾಗ ತಾಲೂಕಿನಲ್ಲಿ ಒಟ್ಟು 799 ತಾಳೆಯಾಗದ ಪ್ರಕರಣ ಪತ್ತೆಯಾಗಿದ್ದವು.

ಇದರಲ್ಲಿ 65 ಪ್ರಕರಣದಲ್ಲಿ ಗ್ರಾಮ ಲೆಕ್ಕಿಗರು ನಿಜವಾದ ಫಲಾನುಭವಿಗಳ ಹೊರಗಿಟ್ಟು, ಅನ್ಯರ ಖಾತೆಗೆ ಹಣ ವರ್ಗಾಯಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಮೂವರು ಗ್ರಾಮಲೆಕ್ಕಿಗರು ಒಟ್ಟು 51 ಪ್ರಕರಣದಲ್ಲಿ ಅನರ್ಹ ಫಲಾನುವಿಗಳ ಖಾತೆಗೆ ಹಣ ಸಂದಾಯ ಮಾಡಿರುವುದು ಸಾಭೀತಾಗಿದ ಹಿನ್ನಲೆ ಅಮಾನತುಗೊಳಿಸ ಸಕ್ಷಮ ಪ್ರಧಾಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಸೂಚಿಸಿದ್ದಾರೆ.

ಇನ್ನು ಪ್ರಕರಣ ಸಂಬಂಧ ಗ್ರಾಮ ಲೆಕ್ಕಿಗರ ಅಧಿಕಾರಿಗಳಿಗೆ ಸಹಕರಿಸಿದ ಖಾಸಗಿ ಆಪರೇಟರ್, ಅಕ್ರಮ ಹಣ ಸಂಪಾದಿಸಿದ ವ್ಯಕ್ತಿಗಳ ಮೇಲೆ ರಾಯಬಾಗ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love

About Laxminews 24x7

Check Also

ಸಾರ್ವಜನಿಕ ಆಸ್ತಿ ಮಾರಿದ್ದೇ ಮೋದಿ ಸಾಧನೆ: ಖರ್ಗೆ ಟೀಕೆ

Spread the love ನವದೆಹಲಿ: ‘ದೇಶದಲ್ಲಿನ ಸಾರ್ವಜನಿಕ ಆಸ್ತಿಗಳನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಪ್ರಧಾನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ