ಲಕ್ಷ್ಮೀ ನ್ಯೂಸ್ ಬಡವರ ಶೋಷಿತ ವರ್ಗದ ಪರವಾದ ಧ್ವನಿಯಾಗಲಿ: ಲಖನ್ ಜಾರಕಿಹೊಳಿ
ಸಮಾಜದ ಅಂಕುಕೊಂಡುಗಳನ್ನು ತಿದ್ದುವ ಶಕ್ತಿ ಮಾಧ್ಯಮಕ್ಕೆ ಇದೆ ಆದ್ದರಿಂದ ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ (ವೆಬ್ ಪೇಜ್) ಬಡವರ ಶೋಷಿತ ವರ್ಗದ ಪರವಾದ ಧ್ವನಿಯಾಗಲಿ ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ ಗೆ ಹಾರೈಸಿದರು.
ಶನಿವಾರ ದಂದು ಲಕ್ಷ್ಮೀ ನ್ಯೂಸ್ ತಂಡ ಹೊಸ ವರ್ಷದಂದು ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ ನಿಮಿತ್ಯ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಅವರಿಗೆ ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಲಖನ್ ಜಾರಕಿಹೊಳಿ ಅವರು ಲಕ್ಷ್ಮೀ ನ್ಯೂಸ್ ಪ್ರಾಮಾಣಿಕ, ನಿಷ್ಠ ವರದಿಗೆ ಹೆಚ್ಚಿನ ಮಹತ್ವ ನೀಡುವುದರ ಜತೆಗೆ ಸಮಾಜದಲ್ಲಿ ನೊಂದವರ, ಬಡವರ ಧ್ವನಿಯಾಗಲಿ ಎಂದರು.ಹಾಗೂ ಲಕ್ಷ್ಮೀ ನ್ಯೂಸ್ ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ಏರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಲಕ್ಷ್ಮೀ ನ್ಯೂಸ್ ಮುಖ್ಯಸ್ಥರು ಉಪಸ್ಥಿತರಿದ್ದರು.