” ಸಿರಿ ಎಂದರೆ ಚಿಗುರು, ಸಿರಿ ಎಂದರೆ ಮಹಿಳೆ, ಸಿರಿ ಎಂದರೆ ಸಂಪತ್ತು ”
ಪರಶುರಾಮ ಸೃಷ್ಟಿ ಎಂದೇ ಪ್ರಸಿದ್ಧವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಹಳೇ ಪೇಟೆಯಲ್ಲಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭೇಟಿ ನೀಡಿ, ಸಿದ್ಧ ಉಡುಪುಗಳು, ಖಾದಿ ಮತ್ತು ಕೈಮಗ್ಗದ ಸಾಂಪ್ರದಾಯಿಕ ಉಡುಪುಗಳು ಮತ್ತು ಗೃಹೋಪಯೋಗಿ ವಸ್ತುಗಳು ತಯಾರಾಗುವ ವಿಧಾನಗಳನ್ನು ವೀಕ್ಷಿಸಿ, ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
“ಹನಿ ಹನಿ ಸೇರಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳ” ಎಂಬ ಆಡು ಮಾತಿಗೆ ಮತ್ತೊಂದು ಹೆಸರು “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ”. ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಜಿ, ಯವರ ಕನಸಿನ ಕೂಸಾದ ಯೋಜನೆ ಇಂದು ಕರ್ನಾಟಕದ ಹಳ್ಳಿ ಹಳ್ಳಿಯಲ್ಲೂ ತಲೆಯೆತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪರಿವರ್ತನೆಗೆ ಹೊಸ ಭಾಷ್ಯ ಬರೆದಿದೆ. ಸ್ವ- ಉದ್ಯೋಗ ಮತ್ತು ಗ್ರಾಮಾಭಿವೃದ್ಧಿ ದೃಷ್ಟಿಯಿಂದ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿರುವ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ, ಯವರ ಕನಸು ಮತ್ತು ಗಾಂದೀಜಿಯವರ ಗ್ರಾಮ ರಾಜ್ಯದ ಪರಿಕಲ್ಪನೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಸಾಕಾರಗೊಳ್ಳುತ್ತಿದೆ.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಹರೀಶ ಪೂಂಜ, ಆಡಳಿತ ನಿರ್ದೇಶಕರಾದ ಶ್ರೀ ಜನಾರ್ಧನ್ ನಾರಾಯಣ್, ಸಲಹಾ ಸಮಿತಿ ನಿರ್ದೇಶಕರಾದ ಶ್ರೀ ರಾಮಸ್ವಾಮಿ ಹಾಗೂ ಸಿರಿ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.