Breaking News
Home / ಜಿಲ್ಲೆ / ಮನುಷ್ಯನ ಕಣ್ಣುಗಳಲ್ಲಿ ನೀರು ಬರುವುದು ಸಹಜ. ಇಲ್ಲೊಬ್ಬ ಮಹಿಳೆಯ ಕಣ್ಣುಗಳಿಂದ ವಿಚಿತ್ರವಾದ ಹುಳುಗಳು ಹೊರ ಬರುತ್ತಿದ್ದು ಕುಟುಂಬಸ್ಥರು ಹಾಗೂ ವೈದ್ಯರಿಗೆ ಅಚ್ಚರಿಯನ್ನುಂಟು ಮಾಡಿದೆ.

ಮನುಷ್ಯನ ಕಣ್ಣುಗಳಲ್ಲಿ ನೀರು ಬರುವುದು ಸಹಜ. ಇಲ್ಲೊಬ್ಬ ಮಹಿಳೆಯ ಕಣ್ಣುಗಳಿಂದ ವಿಚಿತ್ರವಾದ ಹುಳುಗಳು ಹೊರ ಬರುತ್ತಿದ್ದು ಕುಟುಂಬಸ್ಥರು ಹಾಗೂ ವೈದ್ಯರಿಗೆ ಅಚ್ಚರಿಯನ್ನುಂಟು ಮಾಡಿದೆ.

Spread the love

ಹುಬ್ಬಳ್ಳಿ,ಜ,12- ಸಾಮಾನ್ಯವಾಗಿ ಮನುಷ್ಯನ ಕಣ್ಣುಗಳಲ್ಲಿ ನೀರು ಬರುವುದು ಸಹಜ. ಆದರೇ ಇಲ್ಲೊಬ್ಬ ಮಹಿಳೆಯ ಕಣ್ಣುಗಳಿಂದ ವಿಚಿತ್ರವಾದ ಹುಳುಗಳು ಹೊರ ಬರುತ್ತಿದ್ದು ಕುಟುಂಬಸ್ಥರು ಹಾಗೂ ವೈದ್ಯರಿಗೆ ಅಚ್ಚರಿಯನ್ನುಂಟು ಮಾಡಿದೆ. ಮನುಷ್ಯ ಸೇರಿದಂತೆ ಇತರ ಪ್ರಾಣಿಗಳ ಕಣ್ಣಲ್ಲಿ ನೀರು ಬರುವುದು ಏನಾದರೂ ಗಾಯಗಳಾದರೇ ರಕ್ತ ಬರುವುದು ಸಹಜವಾಗಿದೆ.

ಆದರೆ ಈ ಮಹಿಳೆಯ ಕಣ್ಣುಗಳಿಂದ ವಿಚಿತ್ರವಾದ ಹುಳುಗಳು ಹೊರ ಬೀಳುತ್ತಿವೆ. ತಡಸ ಗ್ರಾಮದ ಅಶಾಬೀ ಬೆಂಡಿಗೇರಿ ಎಂಬುವವರೇ ಈ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವವರು. ಇವರಿಗೆ ಸುಮಾರು ದಿನಗಳಿಂದ ಕಣ್ಣುಗಳಿಂದ ಹುಳಗಳು ಹೊರ ಬೀಳುತ್ತಿವೆ. ಹುಳುಗಳು ಹೊರ ಬೀಳುತ್ತಿರುವುದರಿಂದ ಮನೆಯವರು ಮಾತ್ರವಲ್ಲದೆ ಗ್ರಾಮದ ಜನರು ಕೂಡ ಅಚ್ಚರಿಗೊಂಡಿದ್ದಾರೆ.

ಸುಮಾರು 42 ವಯೋಮಾನದವರಾದ ಆಶಾಬೀ ಅವರು ದೈಹಿಕ ಹಾಗೂ ಮಾನಸಿನ ನ್ಯೂನತೆಯಿಂದ ಬಳಲುತಿದ್ದು,ಅವರ ಪಾಲನೆ ಪೋಷಣೆಯನ್ನು ಮನೆಯ ಸದಸ್ಯರು ಮಾಡುತ್ತಿದ್ದಾರೆ.ಅಲ್ಲದೇ ಅಶಾಬೀಯವರು ಪ್ರತಿನಿತ್ಯ ನಮಾಜ ಹಾಗೂ ರಂಜಾನ್ ತಿಂಗಳಲ್ಲಿ ತಿಂಗಳ ಪರ್ಯಂತರವಾಗಿ ರೋಜಾ ಮಾಡುತ್ತಾರೆ. ಈಗ ಅವರ ಕಣ್ಣುಗಳಿಂದ ಹುಳು ಹೊರ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಶಾಬೀಯವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸ ಲಾಗಿದ್ದು,ಚಿಕಿತ್ಸೆ ನೀಡಲಾಗುತ್ತಿದೆ.

ಆಶಾಬೀಯವರ ಕಣ್ಣುಗಳಿಂದ ವಿಚಿತ್ರವಾದ ಹುಳುಗಳು ಹೊರಬೀಳುತ್ತಿರುವುದರಿಂದ ಜನರು ಗಾಬರಿಗೊಂಡಿದ್ದಾರೆ. ಅಲ್ಲದೇ ಆಶಾಬೀಯವರ ಪೋಷಣೆಗೆ ಸರ್ಕಾರ ಏನಾದರೂ ಸಹಾಯ ಸೌಲಭ್ಯಗಳನ್ನು ಒದಗಿಸಬೇಕು ಎಂಬುವುದು ಅವರ ಸಂಬಂಧಿಗಳ ಒತ್ತಾಯವಾಗಿದೆ.

ಒಟ್ಟಿನಲ್ಲಿ ಮಹಿಳೆಯ ಕಣ್ಣಿನಲ್ಲಿ ಬರುವ ಹುಳುಗಳು ವೈದ್ಯರನ್ನು ಚಕಿತಗೊಳಿಸಿದ್ದು, ಚಿಕಿತ್ಸೆ ಮುಂದುವರೆಸಿದ್ದು, ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಗೆ ರೋಗದಿಂದ ಮುಕ್ತಿ ಕೊಡಿಸಲು ಎಂದು ಕುಟುಂಬಸ್ಥರು ಪ್ರಯತ್ನಿಸುತ್ತಿದ್ದಾರೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ನಡೆಯಲಿದೆ ಚಳಿಗಾಲ ಅಧಿವೇಶನ

Spread the loveಬೆಂಗಳೂರು: ಕೊರೊನಾ ಆತಂಕ ಕಡಿಮೆಯಾದ್ರೂ ರೂಪಾಂತರಿಯ ಆತಂಕ ಕಡಿಮೆಯಾಗ್ತಿಲ್ಲ. ಈಗ ಎಲ್ಲೆಲ್ಲೂ ಓಮಿಕ್ರಾನ್ ಭಯ ಶುರುವಾಗಿದೆ. ಇದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ