ಹುಬ್ಬಳ್ಳಿ ಏ,4- ಹುಬ್ಬಳ್ಳಿಯ ಮಂಟೂರು ರಸ್ತೆಯ ಅರಳಿಕಟ್ಟಿ ಕಾಲೋನಿಯಲ್ಲಿ ಪೊಲೀಸರ ಮೇಲೆ ನಡೆದ ಕಲ್ಲು ತೂರಾಟ ಪೂರ್ವನಿಯೋಜಿತ ಕೃತ್ಯ ಎಂಬ ಅನುಮಾನ ಕಾಡುತ್ತಿದೆ.ಪೊಲೀಸರ ಕಣ್ತಪ್ಪಿಸಿ ಒಂದು ಕೋಮಿನ ಜನರು ಪ್ರಾರ್ಥನೆ ನಡೆಸಲು ಮುಂದಾಗಿದ್ದರು. ಆದ್ರೆ ಇದನ್ನು ಪ್ರಶ್ನಿಸಲಯ ಹೋದ ಪೊಲೀಸರ ಮೇಲೆ ಆ ಸಮುದಾಯದ ಮಹಿಳೆಯರು ಹಾಗೂ ಪುರುಷರು ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ.
ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸರು ಪ್ರಾರ್ಥನೆ ತಡೆಯಲು ಬರುತ್ತಾರೆ ಎಂದು ಪೂರ್ವನಿಯೋಜಿಯವಾಗಿ ಕಲ್ಲು ಸಂಗ್ರಹಿಸಿದ್ದರು ಎನ್ನಲಾಗಿದೆ.ಪ್ರಾರ್ಥನ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅಡ್ಡಿ ಮಾಡಿದ್ದ ಪೊಲೀಸರಿಗೆ, ಪ್ರಾರ್ಥನೆಗೆ ಅಡ್ಡಿಪಡಿಸಿದ್ರೆ ಕಲ್ಲೂ ತೂರಲು ಮೊದಲೇ ಸ್ಕೆಚ್ ಮಾಡಿದ್ದರು.
ಕಲ್ಲುಗಳ ಸಂಗ್ರಹ ಮಾಡಿಟ್ಟು ನಂತರ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.ಘಟನೆ ಬಳಿಕ ರಸ್ತೆ ತುಂಬೆಲ್ಲ ಕಲ್ಲುಗಳು ರಾಶಿ ಬಿದ್ದಿರುವದು ಇದಕ್ಕ ಸಾಕ್ಷಿಯಾಗಿದೆ.
ಕಲ್ಲುಗಳಿ ಏಕಾಏಕಿ ಎಲ್ಲಿಂದ ಬಂದವು .ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.