Breaking News
Home / ಜಿಲ್ಲೆ / ಹುಬ್ಬಳ್ಳಿ:ಮದ್ಯ ಸಿಗದೇ ಮತ್ತೊಬ್ಬ ವ್ಯಕ್ತಿ ನೇಣಿಗೆ ಶರಣು..!

ಹುಬ್ಬಳ್ಳಿ:ಮದ್ಯ ಸಿಗದೇ ಮತ್ತೊಬ್ಬ ವ್ಯಕ್ತಿ ನೇಣಿಗೆ ಶರಣು..!

Spread the love

ಹುಬ್ಬಳ್ಳಿ: ಮದ್ಯ ಸಿಗುತ್ತಿಲ್ಲಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊಸೂರಿನ ಗಣೇಶ ಪಾರ್ಕ್ ನಲ್ಲಿ ನಡೆದಿದೆ. ಧಾರವಾಡ ಮೂಲದ ಉಮೇಶ ಹಡಪದ (46) ಮೃತ ವ್ಯಕ್ತಿ. ಈತ 15 ದಿನಗಳ ಹಿಂದೆ ಗಣೇಶ ಪಾರ್ಕ್ನ ಮನೆಯೊಂದರಲ್ಲಿವಾಚ್ಮನ್‌ ಕೆಲಸಕ್ಕೆ ಸೇರಿಕೊಂಡಿದ್ದ. ಒಂದು ವಾರದಿಂದ ಮದ್ಯದಂಗಡಿ ಬಂದ್‌ ಆಗಿದ್ದು, 5 ದಿನದಿಂದ ಮದ್ಯ ಸಿಕ್ಕಿರಲಿಲ್ಲ. ಮದ್ಯ ಸಿಗದೇ ಕಂಗಾಲಾಗಿ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈತ 3 ವರ್ಷದಿಂದ ಕುಟುಂಬದವರಿಂದ ದೂರ ಉಳಿದಿದ್ದ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

# ಸಾಲ ತೀರಸಾಲಗದೇ ರೈತ ಆತ್ಮಹತ್ಯೆ
ಸತತ ಬರಗಾಲ ಹಾಗೂ ಅತಿವೃಷ್ಟಿಯಿಂದಾಗಿ ಸಾಲ ತೀರಿಸಲಾಗದೇ ಮನನೊಂದು ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಕೃಷಿಕ ಮಂಜುನಾಥ ಹನುಮಂತಪ್ಪ ಭಜಂತ್ರಿ (40) ಎಂಬುವವರು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇವರು 11 ಎಕರೆ 11 ಗುಂಟೆ ಜಮೀನಿನಲ್ಲಿ ವ್ಯವಸಾಯಕ್ಕಾಗಿ ಕುಬಿಹಾಳದ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ಎಂಟು ಲಕ್ಷ ರೂ ಸಾಲ ಪಡೆದಿದ್ದು, ಈ ವರ್ಷ ಹತ್ತಿ, ಶೇಂಗಾ, ಮೆಣಸಿನಕಾಯಿ ಬೆಳೆಗಳು ಅತಿವೃಷ್ಟಿಯಿಂದ ಕೈಕೊಟ್ಟಿದ್ದರಿಂದ ಸಾಲ ತೀರಿಸಲಾಗದೇ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪತ್ನಿ ರೇಖಾ ಭಜಂತ್ರಿ ಕುಂದಗೋಳ ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love

About Laxminews 24x7

Check Also

ಸಾರ್ವಜನಿಕ ಆಸ್ತಿ ಮಾರಿದ್ದೇ ಮೋದಿ ಸಾಧನೆ: ಖರ್ಗೆ ಟೀಕೆ

Spread the love ನವದೆಹಲಿ: ‘ದೇಶದಲ್ಲಿನ ಸಾರ್ವಜನಿಕ ಆಸ್ತಿಗಳನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಪ್ರಧಾನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ