ಹುಬ್ಬಳ್ಳಿ,ಮಾ,27- ಕೊರೊನಾ ವೈರಾಣು ಹರಡದಂತೆ ಸಹಕರಿಸಲು ಪ್ರಧಾನಿ ಮನವಿ ಮಾಡಿದರೂ ಜನರು ಸಮರ್ಪಕವಾಗಿ ಸ್ಪಂದನ ಮಾಡುತಿಲ್ಲ ಆದ್ದರಿಂದ ನಮ್ಮ ಹುಬ್ಬಳ್ಳಿ ಧಾರವಾಡ ಪಾಲಿಕೆ ಕಾರ್ಮಿಕರು. ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಹಗಲಿರುಳು ಹೋರಾಡುತ್ತಿದ್ದಾರೆ.
ಕೊರೊನಾ ವೈರಾಣು ಹರಡದಂತೆ ಸಹಕರಿಸಲು ಪ್ರಧಾನಿ ಮನವಿ ಮಾಡಿದರೂ ಏನು ಪ್ರಯೋಜನವಾಗುತಿಲ್ಲ. ಆದರೂ ಸಹ ಇಲ್ಲಿ ಕೇಲವರು ತಮ್ಮ ಜೀವನದ ಮೇಲಿನ ಆಶೆ ಮೀರಿ ಹೋರಾಟ ಮಾಡುತಿದ್ದಾರೆ. ಅವರೇ ನಮ್ಮ ಹುಬ್ಬಳ್ಳಿ ಧಾರವಾಡ ಪಾಲಿಕೆ ಕಾರ್ಮಿಕರು. ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಯುದ್ಧ ಸೈನಿಕರಂತೆ ಹಗಲಿರುಳು ಹೋರಾಡುತ್ತಿದ್ದಾರೆ!
ಕಣ್ಣಿಗೆ ಕಾಣದ ಕೊರೊನಾ ವೈರಸ್‌ಗಳು ಮಾನವನ ಜೀವನದ ವಿರುದ್ಧ ಯುದ್ಧವನ್ನೇ ಘೋಷಿಸಿದ್ದು, ಇವುಗಳ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಮನೆಯಲ್ಲಿಸುಮ್ಮನೇ ಕುಳಿತುಕೊಳ್ಳಿರಿ ಸಾಕು ಎಂದಿದ್ದಾರೆ. ಆದರೆ, ಮನೆಯಲ್ಲಿಕುಳಿತವರನ್ನು ರಕ್ಷಿಸುವವರ ಜತೆಗೆ ಕೊರೊನಾ ವೈರಸ್ ಹರಡುವಿಕೆ ಹತೋಟಿಗೆ ತರುವಲ್ಲಿಮತ್ತು ಇತರ ರೋಗಾಣುಗಳು ಹರಡದಂತೆ ಪಾಲಿಕೆಯ ನೂರಾರು ಪೌರ ಕಾರ್ಮಿಕರು, ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ತಮ್ಮ ಜೀವ ಲೆಕ್ಕಿಸದೇ ಬೆಳಗ್ಗೆಯಿಂದ ಬೀದಿಗಿಳಿದು ರಾತ್ರಿವರೆಗೂ ಸ್ವಚ್ಛತೆ, ಆರೈಕೆಯಲ್ಲಿತೊ ಡಗಿಕೊಂಡು ಸೈನಿಕರಂತೆ ಹೋರಾಡುತ್ತಿದ್ದಾರೆ.
ಅದೇ ರೀತಿ ರಸ್ತೆಗಳಲ್ಲಿಜನರ ಅನಗತ್ಯ ಓಡಾಡ ತಡೆಯಲು ಪೊಲೀಸರು ಸಹ ಬಿರು ಬಿಸಿಲಿನಲ್ಲಿಸಾಕಷ್ಟು ಪರಿಶ್ರಮಿಸುತ್ತಿದ್ದಾರೆ.
ಕೊರೊನಾ ಯುದ್ಧ ಭೂಮಿಯಲ್ಲಿಕಮಾಂಡರ್, ಮೇಜರ್‌ಗಳ ಪಾತ್ರ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ, ಪಾಲಿಕೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಪೌರಕಾರ್ಮಿಕರೆಂಬ ಸೈನಿಕರ ಪಡೆಗಳಿಂದ ನಿತ್ಯ ಬಡಾವಣೆಗಳ ರಸ್ತೆಗಳು, ಹೊಸ ಮತ್ತು ಬಸ್ ನಿಲ್ದಾಣ, ಸಿಬಿಟಿ ನಿಲ್ದಾಣಗಳನ್ನು ಸೋಡಿಯಂ ಹೈಪೋಕ್ಲೋರೈಟ್ ಸಿಂಪರಣೆ ಮಾಡಲಾಗುತ್ತಿದೆ.
ಇತ್ತೀಚೆಗೆ ಕೊರೊನಾ ವೈರಸ್ ಪಾಸಿಟಿವ್ ಕಂಡು ಬಂದ ವ್ಯಕ್ತಿ ಯಾವ ಯಾವ ಪ್ರದೇಶಗಳಲ್ಲಿಓಡಾಡಿಕೊಂಡಿದ್ದನೋ ಆ ಪ್ರದೇಶಗಳಿಗೆಲ್ಲತೆರಳಿ ರಾಸಾಯನಿಕ ಸಿಂಪರಿಸಿ ಇತರರಿಗೆ ವೈರಸ್ ಹರಡದಂತೆ ನಿಗಾ ವಹಿಸುವಲ್ಲಿಪ್ರಮುಖ ಪಾತ್ರ ವಹಿಸಿದ್ದಾರೆ.
ಅವಳಿ ನಗರದಲ್ಲಿಈಗಾಗಲೇ ಅಪಾರ ಪ್ರಮಾಣದ ಸೋಡಿಯಂ ಹೈಪೋಕ್ಲೋರೈಟ್ ಸಿಂಪರಣೆ ಮಾಡಲಾಗಿದೆ. ಇದು ಖಾಲಿಯಾದ ಬಳಿಕ ಬ್ಲೀಚಿಂಗ್ ಪೌಡರ್‌ನ್ನು ನೀರಿನಲ್ಲಿಬೆರೆಸಿ ಅದನ್ನು ಸೋಡಿಯಂ ಹೈಪೋಕ್ಲೋರೈಟ್‌ನ್ನಾಗಿ ಪರಿವರ್ತಿಸಿ ಸಾರ್ವಜನಿಕ ಪ್ರದೇಶಗಳಲ್ಲಿಸ್ವಚ್ಛಗೊಳಿಸಿದ್ದೇವೆ. ಇದಲ್ಲದೇ ಹುಬ್ಬಳ್ಳಿಯ ಟೆಂಡರ್ ಶ್ಯೂರ್ ರಸ್ತೆ, ಧಾರವಾಡದ ಹೊಸ ಯಲ್ಲಾಪುರದ ಪ್ರಮುಖ ಪ್ರದೇಶಗಳಲ್ಲಿಸ್ಯಾನಿಟೈಸರ್ ಮೆಲಾಥಿನ್‌ನಿಂದ ರಸ್ತೆಗಳನ್ನು ಕ್ಲೀನಿಂಗ್ ಮಾಡುತಿದ್ದಾರೆ.
ಸಾಮಾಜಿಕ ಅಂತರಕ್ಕೂ ಈ ಸೈನಿಕರು ಬೇಕು : ವೈರಾಣು ಹರಡುವಿಕೆ ನಿಯಂತ್ರಣದ ಭಾಗವಾಗಿ ವ್ಯಕ್ತಿಗಳ ನಡುವಣ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಈ ಅಂತರಕ್ಕೆ ನಿಗದಿತ ಸ್ಥಳ ಗುರುತು ಹಾಕುವುದನ್ನೂ ಪೌರ ಕಾರ್ಮಿಕರೇ ಮಾಡುತ್ತಿದ್ದಾರೆ.
ಬೆಳಂಬೆಳಗ್ಗೆ ತರಕಾರಿ, ದಿನಸಿ ಮಾರುಕಟ್ಟೆ ಪ್ರದೇಶಗಳಲ್ಲಿಸಂಚರಿಸಿ ನಿಗದಿತ ಅಂತರದ ಗುರುತನ್ನು ಸುಣ್ಣದ ಪೌಡರ್‌ನಿಂದ ಮಾರ್ಕ್ ಮಾಡಿದ ಹುಬ್ಬಳ್ಳಿ ಧಾರವಾಡ ನಿಗದಿತ ಪ್ರದೇಶಗಳಲ್ಲಿ ನಿಗದಿತ ಸಮಯದಲ್ಲಿ ನಡೆದಿದ್ದು
ಕಂಡುಬಂದಿತು.
ಜನರು ಲಾಕ್ ಡೌನ್‌ನಿಂದ ಮನೆಯಲ್ಲಿದ್ದರೂ ಪಾಲಿಕೆ ಸೈನಿಕರು ನಿತ್ಯ ಬೀದಿಗಳನ್ನು ಶುಚಿಗೊಳಿಸುವುದನ್ನು, ವಾಹನಗಳಲ್ಲಿಕಸ ಸಂಗ್ರಹಿಸುವದನ್ನು ನಿಲ್ಲಿಸಿಲ್ಲ. ಆತಂಕದ ಮಧ್ಯೆಯೂ ಪರೋಕ್ಷ, ಅಪರೋಕ್ಷವಾಗಿ ಕೊರೊನಾ ವಿರುದ್ಧ ಸೈನಿಕರಂತೆ ಕೆಲಸ ಮಾಡುತ್ತಿರುವ ಜನರಿಗೊಂದು ಸಮಾಮ. ನಾಗರಿಕರೆಲ್ಲರೂ ಮನೆಯಲ್ಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ವಿರುದ್ಧ ಮೌನ ಯುದ್ಧ ಮಾಡೋಣ. ಜನರು ಮಾರುಕಟ್ಟೆ, ಬೀದಿಯಲ್ಲಿಕಾಣಸಿಕೊಳ್ಳದಂತೆ ನೋಡಿಕೊಳ್ಳಲು ಪೊಲೀಸರು ರಸ್ತೆಯಲ್ಲಿನಿಗಾ ವಹಿಸಬೇಕಾಗಿದೆ.
ಇನ್ನೊಂದೆಡೆ ವಿವಿಧ ದೇಶಗಳಿಂದ ನಗರಕ್ಕೆ ಬಂದು ಕಡ್ಡಾಯವಾಗಿ ಕ್ವಾರೆಂಟೈನ್ ಡೇಗೆ ಒಳಗಾಗಿರುವ 350ಕ್ಕೂ ಹೆಚ್ಚು ನಾಗರಿಕರ ಮೇಲೆ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ನಿಗಾವಹಿಸುತ್ತಿದ್ದಾರೆ. ಆ ಮನೆಗಳಿಗೆ ನೋಟಿಸ್ ಅಂಟಿಸುವುದೂ ಪೊಲೀಸರ ಕೆಲಸವಾಗುತ್ತಿದೆ. ಚಿಕಿತ್ಸೆ ಪಡೆಯುವವರ ಮಧ್ಯೆ.. ಕೆಲವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದಾಕ್ಷಣ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಕಡೆ ಜನರು ಹೆಜ್ಜೆ ಹಾಕುತ್ತಿಲ್ಲ.
ಆದರೆ, ಮಾಸ್ಕ್‌ವೊಂದನ್ನು ಹೊರತುಪಡಿಸಿ ಯಾವೊಂದು ಸುರಕ್ಷತಾ ಪರಿಕರಗಳನ್ನು ಪಡೆಯದೇ ನೂರಾರು ವೈದ್ಯಕೀಯ, ಅರೆವೈದ್ಯಕೀಯ ಹಾಗೂ ಕಚೇರಿ ಸಹಾಯಕರು ಕೆಲಸ ಮಾಡುತ್ತಿದ್ದು ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದಿ ಅವರಿಗೂ ಸಹ ಋಣಿಯಾರಬೇಕು.