ಗೋಕಾಕ್ನ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಚೇರಿ ಹೊರಗಡೆ ಜನ ಕಿಕ್ಕಿರಿದು ತುಂಬಿರುವುದನ್ನ ಗಮನಿಸದೇ ಕಸ್ತೂರಿ ಮುಳವಾಡ ಎಂಬ ಹಿರಿಯ ಉಪ ನೋಂದಣಾಧಿಕಾರಿ ಮೊಬೈಲ್ ಚಾಟಿಂಗ್ನಲ್ಲಿ ತೊಡಗಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೇ ತಮ್ಮ ಕೆಲಸಕ್ಕಾಗಿ ಹತ್ತಾರು ಮಂದಿ ಕಚೇರಿಯ ಹೊರಗಡೆ ಕಾಯುತ್ತಿದ್ದರೂ ಅಧಿಕಾರಿಗಳು ಅದರ ಪರಿವೇ ಇಲ್ಲದಂತೆ ವರ್ತಿಸಿದ್ದಾರೆ ಎನ್ನಲಾಗಿದೆ.
Laxmi News 24×7