Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಮುದ್ದು ಅಳಿಯನನ್ನು ನೊಡಲು ಬಂದ ಪ್ರಿಯಾಂಕಾ ಸತೀಶ ಜಾರಕಿಹೊಳಿ..!!

ಮುದ್ದು ಅಳಿಯನನ್ನು ನೊಡಲು ಬಂದ ಪ್ರಿಯಾಂಕಾ ಸತೀಶ ಜಾರಕಿಹೊಳಿ..!!

Spread the love

ಮುದ್ದು ಅಳಿಯನನ್ನು ನೊಡಲು ಬಂದ ಪ್ರಿಯಾಂಕಾ ಸತೀಶ ಜಾರಕಿಹೊಳಿ..!!

2020 ರ ಹೊಸ ವರ್ಷ ಜಾರಕಿಹೊಳಿ ಕುಟುಂಬದಲ್ಲಿ ಸಂಭ್ರಮ ಸೃಷ್ಟಿ ಮಾಡುತ್ತ ಪ್ರಾರಂಭವಾಗಿದೆ.ಜನೇವರಿ ಮೊದಲನೇ ವಾರದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರ ಸುಪುತ್ರ ಸಂತೋಷ ಜಾರಕಹೊಳಿ ತಮ್ಮ ಮೊದಲನೇ ಮಗುವಿಗೆ ತಂದೆ ಆಗಿದ್ದರಿಂದ ಜಾರಕಿಹೊಳಿ ಸಹೋದರರ ಕುಟುಂದ ಸದಸ್ಯರ ಮನದಲ್ಲಿ ಸಂತೋಷ ಮನೆ ಮಾಡಿತ್ತು.ಈ ಶುಭ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಆಸ್ಪತ್ರೆಗೆ ತೆರಳಿ ಜಾರಕಿಹೊಳಿ ಕುಟುಂಬದ ಕುಡಿಯನ್ನು ನೊಡಿ ಸಂಭ್ರಮಿಸಿದ್ದರು.

ದಿ‌.ಲಕ್ಷ್ಮಣರಾವ ಜಾರಕಿಹೊಳಿ ಅವರ ಹಿರಿಯ ಮೊಮ್ಮಗರಾದ ಸಂತೋಷ ಜಾರಕಿಹೊಳಿ ಅವರು ತಂದೆ ಆಗಿದ್ದರಿಂದ ಜಾರಕಿಹೊಳಿ ಕುಟುಂಬದಲ್ಲಿ ಮೊದಲನೇ ಮರಿ ಮೊಮ್ಮಗನ ಆಗಮನ ಆಗಿದೆ.ಆದ್ದರಿಂದ ಎಲ್ಲರೂ ಬಹಳ ಸಂತೋಷ ವ್ಯಕ್ತ ಪಡಿಸಿದ್ದರು.ಜಾರಕಿಹೊಳಿ ಸಹೋದರರಿಗೆ ತಾವು ಅಜ್ಜರಾದೆವು ಎಂಬ ವಿಷಯ ಬಳಹ ಖುಷಿ ತಂದರೇ ಅವರ ಮಕ್ಕಳಲ್ಲಿ ತಾವು ಕೂಡ ಚಿಕ್ಕಪ್ಪ,ದೊಡ್ಡಪ್ಪ ಹಾಗೂ ಸೋದರತ್ತೆ ಆದೆವು ಎಂಬ ವಿಷಯ ಸಂತೋಷಕ್ಕೆ ಕಾರಣವಾಗಿತ್ತು.ಆದ್ದರಿಂದ ನಿನ್ನೆ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರ ರಾಹೂಲ ಜಾರಕಿಹೊಳಿ ಅವರು ಸಹೋದರ ಸಂತೋಷ ಜಾರಕಿಹೊಳಿ ಅವರ ಮನೆಗೆ ತೆರಳಿ ಮುದ್ದು ಕಂದಮ್ಮನನ್ನು ನೊಡಿ ಆನಂದಿಸಿದರು.ಇನ್ನು ತಾನು ಕೂಡ ಸೋದರ ಅತ್ತೆಯಾದೆ ಎಂದು ರಾಹೂಲ ಜೊತೆ ಪ್ರಿಯಾಂಕಾ ಸತೀಶ ಜಾರಕಿಹೊಳಿ ಕೂಡ ಆಗಮಿಸಿ ಮುದ್ದು ಅಳಿಯನನ್ನು ನೊಡಿ ಪುಟ್ಟ ಪುಟ್ಟ ಕೈಗಳ ಜೊತೆ ಆಟ ಆಡಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಜಾರಕಿಹೊಳಿ ಸಹೋದರರ ಅಳಿಯನಾದ ಬಸವರಾಜ ಸಾಯನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ

Spread the love ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನ ದಿನಕ್ಕೂ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇಶದ ಕ್ಯಾಪಿಟಲ್​ ಸಿಟಿಯಲ್ಲಿ ಶದ್ಧಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ