ನೆಲಮಂಗಲ: ವೈದ್ಯಕೀಯ ಸಚಿವ ಕೆ. ಸುಧಾಕರ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ನೆಲಮಂಗಲ ಕಾಂಗ್ರೆಸ್ ಕಾರ್ಯಕರ್ತರಿಂದ ಕಾರ್ಯಕ್ರಮ ಆಯೋಜನೆ ಮಾಡಿ ದಿನಸಿ ವಿತರಣೆ ಮಾಡಿದರು. ಲಾಕ್ ಡೌನ್ ಸಂದರ್ಭದಲ್ಲಿ ಸಚಿವ ಸುಧಾಕರ್ ಈಜು ಕೊಳದಲ್ಲಿ ಸ್ವಿಮ್ಮಿಂಗ್ ವಿಚಾರ ಮಾತನಾಡಿದ ಡಿಕೆಶಿ, ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಗಾಳಿ ಮತ್ತು ನೀರಿನಿಂದ ಕೊರೊನಾ ಬೇಗ ಹಬ್ಬುತ್ತಿದೆ ಎಂಬುದು ನನಗೆ ಶಾಕಿಂಗ್ ನ್ಯೂಸ್ ಆಗಿದೆ. ಒಬ್ಬ ಮೆಡಿಕಲ್ ಮಿನಿಸ್ಟರ್ ಗೆ ಬೆಂಗಳೂರು ಜವಬ್ದಾರಿ ಕೊಟ್ಟಿದ್ದಾರೆ. ಇಂತವರ ನಡತೆ ಬಹಳ ಮುಖ್ಯ. ಇದು ಅವರ ನೈತಿಕವಾದ ವಿಚಾರ. ಹೀಗಾಗಿ ಇಂದೇ ರಾಜಿನಾಮೆಯನ್ನು ಅವರು ತಮ್ಮ ಸ್ವ-ಇಚ್ಚೆಯಿಂದ ಕೊಡಬೇಕಾಗುತ್ತೆ ಎಂದು ಗರಂ ಆದರು.
ನಮ್ಮ ನಡತೆಗಳು ದೇಶಕ್ಕೆ ಹಾಗೂ ಜನತೆಗೆ ಮಾದರಿಯಾಗಬೇಕು. ನಿಮ್ಮ ನಡತೆಯಲ್ಲಿ ನೀವು ಅನುತ್ರ್ತೀಣರಾಗಿದ್ದೀರಿ. ಹೀಗಾಗಿ ಕೂಡಲೇ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು. ಇದೇ ವಿಚಾರದಲ್ಲಿ ಕೇಂದ್ರದ ನಾಯಕರು ಉತ್ತರ ಕೊಡುತ್ತಾರೆ. ಇಲ್ಲ ಅಂದ್ರೆ ರಾಜ್ಯಪಾಲರು ವೈದ್ಯಕೀಯ ಸಚಿವರನ್ನು ಡಿಸ್ಮಿಸ್ ಮಾಡುತ್ತಾರೆ ಎಂದು ಡಿಕೆಶಿ ಹೇಳಿದ್ದಾರೆ.
Laxmi News 24×7