Spread the love
ಬೆಳಗಾವಿ -: ದೆಹಲಿಯ ಮರ್ಕಜ್ ಧಾರ್ಮಿಕ ಸಭೆಗೆ ಹೋಗಿಬಂದಿರುವ ಬೆಳಗಾವಿ ಜಿಲ್ಲೆಯ 62 ಜನರ ಮಾಹಿತಿ ಲಭಿಸಿದೆ. ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
62 ಜನರ ಪೈಕಿ ಡಯಾಬಿಟಿಸ್, ಅಸ್ಥಮಾ, ಹೈಪರ್ ಟೆನ್ಷನ್ ಹೊಂದಿರುವ ಐವತ್ತಕ್ಕೂ ಅಧಿಕ ವಯೋಮಾನದ 27 ಜನರನ್ನು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದು ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ.
ಇದುವರೆಗೆ ನಡೆಸಲಾದ ವೈದ್ಯಕೀಯ ತಪಾಸಣೆಯ ಪ್ರಕಾರ ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
Spread the love