Home / new delhi / ಭಾರತ ಸರ್ಕಾರ ಶಿಫಾರಸು ಮಾಡಿದ ಔಷಧಿಗೆ ವಿಶ್ವಾದ್ಯಂತ ಭಾರೀ ಬೇಡಿಕೆ

ಭಾರತ ಸರ್ಕಾರ ಶಿಫಾರಸು ಮಾಡಿದ ಔಷಧಿಗೆ ವಿಶ್ವಾದ್ಯಂತ ಭಾರೀ ಬೇಡಿಕೆ

Spread the love

ನವದೆಹಲಿ(ಏ. 06): ಕೊರೋನಾ ವೈರಸ್ ಸೋಂಕು ನಿವಾರಣೆಗೆ ಇನ್ನೂ ಆಧಿಕೃತವಾಗಿ ಮದ್ದು ಘೋಷಿಸಿಲ್ಲ. ಈಗಲೂ ವಿಶ್ವಾದ್ಯಂತ ಔಷಧಿ ಕಂಡುಹಿಡಿಯಲು ಪ್ರಯೋಗಗಳಾಗುತ್ತಿವೆ. ಒಂದೆರಡು ದೇಶಗಳಲ್ಲಿ ಔಷಧಿ ಕಂಡು ಹಿಡಿದು ಮಾನವರ ಮೇಲೆ ಪ್ರಯೋಗಗಳು ಮಾತ್ರ ಬಾಕಿ ಇವೆ. ಸದ್ಯಕ್ಕೆ ಇರುವ ಕೊರೋನಾ ರೋಗಿಗಳಿಗೆ ಆಯಾ ದೇಶದ ವೈದ್ಯರು ಬೇರೆ ಬೇರೆ ಕಾಯಿಲೆಗಳಿಗೆ ಬಳಕೆಯಲ್ಲಿರುವ ಔಷಧಗಳನ್ನು ಪ್ರಯೋಗಾತ್ಮಕವಾಗಿ ನೀಡುತ್ತಿದ್ದಾರೆ. ಭಾರತ ಸರ್ಕಾರ ಕೆಲ ದಿನಗಳ ಹಿಂದೆ ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಔಷಧವನ್ನು ಕೊರೋನಾ ಸೋಂಕಿತರ ಚಿಕಿತ್ಸೆ ಬಳಸಬೇಕೆಂದು ವೈದ್ಯರಿಗೆ ಸೂಚನೆ ಹೊರಡಿಸಿತ್ತು.

ಹೈಡ್ರಾಕ್ಸಿಕ್ಲೋರೋಕ್ಯೂನ್ (HCQ) ಮಲೇರಿಯಾ ಶಮನಕ್ಕೆ ಬಳಸಲಾಗುವ ಔಷಧವಾಗಿದೆ. ಇದು ಕೊರೋನಾ ಸೋಂಕು ನಿವಾರಣೆಗೆ ಮಹತ್ವದ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಆದರೆ ಭಾರತ ಸರ್ಕಾರ ಈ ಔಷಧ ಸೂಚಿಸಿದ ನಂತರ ವಿಶ್ವದ ಕೆಲ ತಜ್ಞರು ಇದೇನೂ ಪ್ರಯೋಜನ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ಕುತೂಹಲದ ಸಂಗತಿ ಎಂದರೆ ವಿಶ್ವಾದ್ಯಂತ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಕ್ಕೆ ಬೇಡಿಕೆ ಹೆಚ್ಚಾಗುತ್ತದೆ.

ಅಮೆರಿಕ ಕೂಡ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಕೋವಿಡ್-19 ಚಿಕಿತ್ಸೆ ಬಳಸಬೇಕೆಂದು ಶಿಫಾರಸು ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಔಷಧವನ್ನು ತಮಗೆ ಸರಬರಾಜು ಮಾಡಿ ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಬ್ರೆಜಿಲ್ ದೇಶದ ಅಧ್ಯಕ್ಷರು ಸೇರಿದಂತೆ ವಿಶ್ವದ ಅನೇಕ ಕಡೆಗಳಿಂದಲೂ ಈ ಔಷಧಕ್ಕೆ ಬೇಡಿಕೆ ಇಟ್ಟಿದ್ದಾರೆ.

ಭಾರತ ಸರ್ಕಾರ ಮಾರ್ಚ್ 26ರಂದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ರಫ್ತನ್ನು ನಿಷೇಧಿಸಿದ್ದಾರೆ. ಮುಂಬೈನ ಇಪ್ಕಾ ಲ್ಯಾಬೋರೇಟರೀಸ್, ಗುಜರಾತ್​ನ ಜೈಡಸ್ ಕ್ಯಾಡಿಲಾ ಫಾರ್ಮಾ ಸಂಸ್ಥೆಗಳಿಗೆ 10 ಕೋಟಿ ಮಾತ್ರೆ ಉತ್ಪಾದಿಸುವಂತೆ ಆರ್ಡರ್ ನೀಡಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಸಿಂಕೋನಾ ಎಂಬ ಸಸ್ಯದಿಂದ ತಯಾರಿಸಲಾಗುತ್ತದೆ. ಈ ಸಸ್ಯ ಅಮೆರಿಕ ಮತ್ತು ಆಫ್ರಿಕನ್ ಖಂಡದ ಮೂಲವಾಗಿದೆ. ಇದರ ಹೈಬ್ರಿಡ್ ಸಸ್ಯಪ್ರಬೇಧ ಭಾರತ ಸೇರಿದಂತೆ ಕೆಲ ಏಷ್ಯನ್ ದೇಶಗಳಲ್ಲಿವೆ. ದ್ವಿತೀಯ ಮಹಾಯುದ್ಧದ ಸಂದರ್ಭದಿಂದಲೂ ಈ ಔಷಧದ ಬಳಕೆ ಇದೆ. ಕಿಡ್ನಿ, ಲಿವರ್ ಸಮಸ್ಯೆ ಇರುವವರಿಗೆ, ಕೆಲ ಹೃದಯ ಸಮಸ್ಯೆ ಇರುವವರಿಗೆ ಈ ಔಷಧದ ಬಳಕೆ ಅಪಾಯ ತರಬಹುದು


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ