Breaking News
Home / ಜಿಲ್ಲೆ / ಬಾಲಿವುಡ್ ಸೂಪರ್ ಹಿಟ್ ಸಿನ್ಮಾ ನೆನಪು ಮಾಡ್ಕೊಂಡ ಟ್ರಂಪ್

ಬಾಲಿವುಡ್ ಸೂಪರ್ ಹಿಟ್ ಸಿನ್ಮಾ ನೆನಪು ಮಾಡ್ಕೊಂಡ ಟ್ರಂಪ್

Spread the love

ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಬಾಲಿವುಡ್ ಸೂಪರ್ ಹಿಟ್ ಸಿನಿಮಾವನ್ನು ನೆನಪು ಮಾಡಿಕೊಂಡರು.

ಮೊಟೆರಾದ ಸ್ಟೇಡಿಯಂಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ದೇಶದ ಪ್ರತಿಯೊಂದು ಕ್ಷೇತ್ರಗಳ ಸಾಧನೆಯನ್ನು ತಿಳಿಸಿ ನಾನು ಭಾರತವನ್ನು ಪ್ರೀತಿಸುತ್ತೇನೆ. ಬಾಲಿವುಡ್ ಮತ್ತು ಹಾಲಿವುಡ್ ಹೊಸತನಕ್ಕೆ ಮಾದರಿಯಾಗಿವೆ. ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ ‘ದಿಲ್‍ವಾಲೇ ದುಲ್ಹನಿಯಾ ಲೇ ಜಾಯೇಂಗೆ’ (ಡಿಡಿಎಲ್‍ಜೆ) ಚಿತ್ರದ ಯಶಸ್ಸು ಭಾರತೀಯ ಸಿನಿಮಾ ಏನು ಎಂಬುದನ್ನು ತೋರಿಸುತ್ತದೆ ಎಂದರು.

ಭಾಷಣದ ವೇಳೆ ಸ್ವಾಮಿ ವಿವೇಕಾನಂದರನ್ನು ಮರೆಯುವುದುಂಟೆ ಎಂದರು. ಕ್ರಿಕೆಟ್ ದೇವರು ಸಚಿನ್ ತೆಂಡಲ್ಕೂರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಆಟದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

2 ದಿನಗಳ ಕಾಲ ಭಾರತದ ಪ್ರವಾಸಕ್ಕೆ ಆಗಮಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ನೀಡಲಾಯಿತು.ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಪ್ರಧಾನಿ ಮೋದಿ ಟ್ರಂಪ್ ಅವರನ್ನು ಅಪ್ಪಿಕೊಂಡು ಬರಮಾಡಿಕೊಂಡರು. ನಂತರ ಮೋದಿ ಅಧಿಕಾರಿ ವರ್ಗದ ಸದಸ್ಯರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಟ್ರಂಪ್ ಅವರಿಗೆ ಪರಿಚಯಿಸಿದರು.


Spread the love

About Laxminews 24x7

Check Also

ಗೋಕಾಕ ಜನತೆಗೆ ಅನುಕೂಲಕ್ಕಾಗಿ ಅತಿ ಸುಂದರವಾದ ಸಮುದಾಯ ಭವನ: ಸತೀಶ್ ಜಾರಕಿಹೊಳಿ ಭೇಟಿನೀಡಿ ವೀಕ್ಷಣೆ. 

Spread the love    ಗೋಕಾಕ: ಗೋಕಾಕ ನಗರದ ಜನತೆಗೆ ಲಕ್ಷ್ಮಿ ದೇವಿಯು ಆರಾಧ್ಯ ದೇವತೆ ಇನ್ನು ಪ್ರತಿಯೊಂದು ಕುಟುಂಬ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ