Breaking News
Home / new delhi / ಏಪ್ರಿಲ್ 14ರ ನಂತರ ಲಾಕ್‍ಡೌನ್ ಮುಂದುವರಿಗೆ ಸುಳ್ಳು ಸುದ್ದಿ ಎಂದ ಕೇಂದ್ರ : ರಾಜೀವ್ ಗೌಬಾ ಸ್ಪಷ್ಟನೆ

ಏಪ್ರಿಲ್ 14ರ ನಂತರ ಲಾಕ್‍ಡೌನ್ ಮುಂದುವರಿಗೆ ಸುಳ್ಳು ಸುದ್ದಿ ಎಂದ ಕೇಂದ್ರ : ರಾಜೀವ್ ಗೌಬಾ ಸ್ಪಷ್ಟನೆ

Spread the love

ನವದೆಹಲಿ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ 21 ದಿನಗಳ ಕಾಲ ಅಂದರೆ ಏ.14ರವರೆಗೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ನಡುವೆ ಏಪ್ರಿಲ್ 14ರ ನಂತರ ಲಾಕ್‍ಡೌನ್ ಮುಂದುವರಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ರಾಜೀವ್ ಗೌಬಾ, ಏಪ್ರಿಲ್ 14ರ ನಂತರ ಲಾಕ್‍ಡೌನ್ ಮುಂದುವರಿಸುವ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. ಹಾಗೆಯೇ ಸರ್ಕಾರ ಮುಂದೆ ಈ ರೀತಿಯ ಯಾವ ಯೋಜನೆಗಳು ಇಲ್ಲ. ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದಾರೆ.

ಲಾಕ್​ಡೌನ್​ ಅವಧಿ ಏಪ್ರಿಲ್​ 14ರ ನಂತರವೂ ಮುಂದುವರಿಯಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ಇದರಿಂದಾಗಿ ದೇಶದ ಜನತೆ ಇನ್ನಷ್ಟು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸಾರ್ಕಾರ ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದ್ದು, ಏ.14 ರ ನಂತರ ಲಾಕ್ ಡೌನ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದೆ.


Spread the love

About Laxminews 24x7

Check Also

ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು 10 ಕೋಟಿ ಮೌಲ್ಯದ ವಾಹನಗಳ ಜೊತೆ ಪರಾರಿ

Spread the loveಬೆಂಗಳೂರು : ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ