Breaking News
Home / Uncategorized (page 686)

Uncategorized

ಭಾನುವಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಇಂದು ಜಿಲ್ಲೆ ಸಂಪೂರ್ಣ ಸ್ಥಬ್ದವಾಗಿದೆ….

ಬೆಳಗಾವಿ: ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಭಾನುವಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಇಂದು ಜಿಲ್ಲೆ ಸಂಪೂರ್ಣ ಸ್ಥಬ್ದವಾಗಿದೆ. ಶನಿವಾರ ರಾತ್ರಿ 8 ಗಂಟೆಯಿಂದಲೆ ಲಾಕ್ ಡೌನ್ ಜಾರಿಗಿದ್ದರು ಸಹ ಸ್ವಲ್ಪ ಮಟ್ಟಿಗೆ ವಾಹನಗಳು ರಸ್ತೆ ಇಳಿದಿದ್ದವು. ಆದ್ರೆ ಭಾನುವಾರ ಬೆಳಗಿನ ಜಾವದಿಂದ ಬೆಳಗಾವಿ ಸ್ಥಬ್ಧವಾಗಿದೆ. ಪ್ರತಿ ದಿನ ಜನದಟ್ಟನೆ ಯಿಂದ ಕೂಡಿರುವ ಸಂಗೋಳಿ ರಾಮಣ್ಣ ವೃತ್ತ, ಬಸ್ ನಿಲ್ದಾಣ ರಸ್ತೆ, ಚನ್ನಮ್ಮ ವೃತ್ತ, ಖಡೇಬಜಾರ …

Read More »

ಸಂಡೇ ಲಾಕ್‍ಡೌನ್ ಸಂಚಾರ ಸಂಪೂರ್ಣ ಸ್ತಬ್ಧ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಆರಂಭ

ಸಂಡೇ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವೆಡೆ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಈ ಮಧ್ಯೆ ಹಾಸನ ಮತ್ತು ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಆರಂಭವಾಗಿದೆ. ಹಾಸನ ನಗರ ಸೇರಿದಂತೆ ಹಲವೆಡೆ ಬೆಳಗ್ಗೆಯಿಂದಲೇ ಸೋನೆ ಮಳೆ ಆರಂಭವಾಗಿದೆ. ಈ ಮೂಲಕ ಸಂಡೇ ಲಾಕ್‍ಡೌನ್‍ಗೆ ಹಾಸನದಲ್ಲಿ ಮಳೆಯ ಸಪೋರ್ಟ್ ನೀಡಿದಂತಾಗಿದೆ. ಬೆಳ್ಳಂಬೆಳಗ್ಗೆಯೇ ಜಿಟಿಜಿಟಿ ಮಳೆ ಆರಂಭವಾಗಿರುವುದರಿಂದ ಮನೆಯಿಂದ ಜನರು ಹೊರಬರುತ್ತಿಲ್ಲ. ಇನ್ನೂ ಅಗತ್ಯ ವಸ್ತುಕೊಳ್ಳಲು ಮನೆಯಿಂದ ಹೊರಬಂದವರು ಮಳೆಯಿಂದಾಗಿ ಅಂಗಡಿಗಳ ಬಳಿಯೇ ವಾಸ್ತವ್ಯ ಮಾಡುತ್ತಿದ್ದಾರೆ. ಕೆಲವರು …

Read More »

ಕೊರೋನಾ ವಾರಿಯರ್ ತುಂಬು ಗರ್ಭಿಣಿ ಪತ್ನಿ ಬಿಚ್ಚಿಟ್ಟ ಕರಾಳ ಸತ್ಯ!

ಒಂಬತ್ತು ತಿಂಗಳ ಹೆಂಡತಿ ಹಾಗೂ ಆಕೆಯ ಗರ್ಭದಲ್ಲಿರುವ ದಿನ ತುಂಬಿದ ಮಗುವಿನ ಮೇಲೆ ಪ್ರಾಣವನ್ನೇ ಇಟ್ಟುಕೊಂಡ ಡಾಕ್ಟರ್ ಕೋವಿಡ್ ರೋಗಿಗಳನ್ನು ನೋಡುವ ಡ್ಯೂಟಿಯಲ್ಲಿರುವುದರಿಂದ 15 ದಿನಗಳಿಂದ ಮನೆಯತ್ತ ಮುಖ ಮಾಡಿಲ್ಲ. ಲಾಕ್‌ಡೌನ್ ಕಾರಣಕ್ಕೆ ಅತ್ತೆಮಾವರಾಗಲೀ, ಅಪ್ಪಅಮ್ಮರಾಗಲೀ ಗರ್ಭಿಣಿ ಮಿಸಸ್ ಕುಲಕರ್ಣಿಯ ಜೊತೆಗಿರಲು ಬರಲು ಸಾಧ್ಯವಾಗಿಲ್ಲ. ಮನೆಯಲ್ಲೊಬ್ಬಳೇ ಇರುವ ಮಿಸಸ್ ಕುಲಕರ್ಣಿ ತನ್ನ ಹೊಟ್ಟೆಯಲ್ಲಿರುವ ಕಂದನೊಡನೆ ಮಾತಾಡುತ್ತಾ ಪತಿ ಹಾಗೂ ಮಗುವಿನ ಕುರಿತ ತನ್ನ ನೆನಪು ಹಾಗೂ ಕನಸುಗಳನ್ನು ಬಿಚ್ಚಿಡುತ್ತಾ ಹೋಗುತ್ತಾಳೆ. …

Read More »

ಲಾಕ್ ಡೌನ್ : ಎಣ್ಣೆಗಾಗಿ ಮಗುಬಿದ್ದ ಮದ್ಯಪ್ರಿಯರು..

ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೇ, ಜನರು ಮಾತ್ರ ಯಾವುದೇ ಭಯವಿಲ್ಲದೇ ಓಡಾಡುತ್ತಿದ್ದಾರೆ. ಭಾನುವಾರದ ದಿನವಾದ ನಾಳೆ ಸಂಪೂರ್ಣ ಲಾಕ್ ಡೌನ್ ಇರುವ ಕಾರಣದಿಂದಾಗಿ, ಮದ್ಯಪ್ರಿಯರು ಮಾತ್ರ ನಾಳೆ ಎಲ್ಲಿ ಎಣ್ಣೆ ಸಿಗೋದಿಲ್ಲವೋ ಎನ್ನುವಂತೆ ಬಾರ್, ವೈನ್ ಶಾಪ್ ಗಳ ಮುಂದೆ ಕ್ಯೂ ನಿಂತು ಮದ್ಯ ಖರೀದಿಸಲು ಮುಗಿ ಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದೆಡೆ ಆದ್ರೇ.. ಸೋಂಕಿನ ಭೀತಿಯಿಂದ ತಮ್ಮ ಊರುಗಳತ್ತ ಗುಳೇ …

Read More »

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರನನು…

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರನನು ಪಕ್ಷದ ಪದಾಧಿಕಾರಿಗಳು, ಬೆಂಬಲಿಗರು ಅದ್ದೂರಿಯಾಗಿ ಬರ ಮಾಡಿಕೊಂಡು, ಸತ್ಕರಿಸಿದರು. ಸಾಂಬ್ರಾ ವಿಮಾನ ನಿಲ್ದಾಣದಿಂದ ನೇವರಾಗಿ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರಿಗೆ ಮಾಜಿ ಶಾಸಕ ರಾಜುಗೌಡ ಕಾಗೆ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ, ರಾಜು ಸೇಠ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ …

Read More »

ನಾಲ್ವರು ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಗಳು ಸೇರಿದಂತೆ ಇಂದು 25 ಜನರಿಗೆ ಕೊರೊನಾ ಪಾಸಿಟಿವ್

ಹಾಸನ: ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಗಳು ಸೇರಿದಂತೆ ಹಾಸನದಲ್ಲಿ ಇಂದು 25 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ನಾಲ್ವರು ನಿರ್ವಾಹಕರು ಅರಸೀಕೆರೆ, ತುಮಕೂರು, ಬೆಂಗಳೂರು ಮಾರ್ಗದ ಬಸ್‍ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸೋಂಕಿತ ಕಂಡಕ್ಟರ್ ಗಳು ಹಲವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಇವರಷ್ಟೇ ಅಲ್ಲದೆ 25 ಜನರಲ್ಲಿ ಓರ್ವ ಪೊಲೀಸ್, ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಗೂ ಇಂದು ಕೊರೊನಾ ಪಾಸಿಟಿವ್ ಬಂದಿರುವುದು …

Read More »

ತೈಲ ಬೆಲೆ ಏರಿಕೆ ಖಂಡಿಸಿ ಎತ್ತಿನ ಮೂಲಕ ಕೈ ಪ್ರತಿಭಟನೆ…..?

    ಅಥಣಿ: ಕೇಂದ್ರದಲ್ಲಿ ಅಂದು ಕಾಂಗ್ರೆಸ್ ಸರಕಾರದ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಒಂದೆರಡು ರುಪಾಯಿ ತೈಲ ಬೆಲೆ ಹೆಚ್ಚಳ ಮಾಡಿದಾಗ ಬಿಜೆಪಿಯ ಸ್ಮೃತಿ ಇರಾಣಿ ಅವರು ಬಳೆಗಳನ್ನು ಕಳುಹಿಸಿಕೊಟ್ಟಿದ್ದರು. ಆದರೆ ಸುಮಾರು ೭-೪ ರುಪಾಯಿಗಳಷ್ಟು ತೈಲ ಬೆಲೆ ಏರಿಕೆಯಾಗಿದೆ. ಈಗೆಲ್ಲಿದ್ದಾರೆ ಎಂದು ಸ್ಮೃತಿ ಇರಾಣಿಗೆ ಕಾಂಗ್ರೆಸ್ ಮುಖಂಡ ಗಜಾನನ್ ಮಂಗಸೂಳೆ ಪ್ರಶ್ನೆ ಮಾಡಿದ್ದಾರೆ.. ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ತೈಲ ಬೆಲೆ ಖಂಡಿಸಿ ಚಕ್ಕಡಿ ಗಾಡಿಯಲ್ಲಿ ದ್ವೀಚಕ್ರವಾಹನ ಇಟ್ಟುಕೊಂಡು …

Read More »

ಸಾಂಬ್ರಾ ವಿಮಾನ ನಿಲ್ದಾಣದಲ್ಲಿಸತೀಶ್ ಜಾರಕಿಹೊಳಿಅವರಿಗೆ ಅದ್ಧೂರಿ ಸ್ವಾಗತ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಅದ್ದೂರಿಯಾಗಿ ಸ್ವಾಗತಿಸಿದರು. ಜುಲೇ 2 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕೃತವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿದ ಬಳಿಕ ಇದೇ ಮೊದಲ ಬಾರಿಗೆ  ಜಿಲ್ಲೆಗೆ ಆಗಮಿಸಿದ್ದು,ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.  ಕಾರ್ಯಾಧ್ಯಕ್ಷ , ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಸನ್ಮಾನಿ, …

Read More »

ರಾಜ್ಯಾದ್ಯಂತ ಜುಲೈ 4 ರಿಂದ 7 ರವರೆಗೆ ಭಾರೀ ಮಳೆ: ಹವಾಮಾನ ಇಲಾಖೆ

ಹವಾಮಾನ ಇಲಾಖೆ ರಾಜ್ಯದ ಜನತೆಗೆ ಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಜುಲೈ 4 ರಿಂದ 7 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಇನ್ನೂ, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಉತ್ತರ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, …

Read More »

ಕೊರೋನಾದಿಂದ ದುಡ್ಡು ಮಾಡುವ ದರಿದ್ರ ಪರಿಸ್ಥಿತಿ ಸರ್ಕಾರಕ್ಕೆ ಬಂದಿಲ್ಲ.

ಬೆಂಗಳೂರು(ಜು.04): ಕೊರೋನಾದಿಂದ ದುಡ್ಡು ಮಾಡುವ ದರಿದ್ರ ಪರಿಸ್ಥಿತಿ ಸರ್ಕಾರಕ್ಕೆ ಬಂದಿಲ್ಲ. ವೈದ್ಯಕೀಯ ಸಲಕರಣೆಗಳ ದರ ಆರಂಭದಲ್ಲಿ ಹೆಚ್ಚಿತ್ತು. ಈಗ ಸಲಕರಣೆಗಳ ದರ ಇಳಿಕೆಯಾಗಿದೆ. ಮೊದಲಿನ ದರಗಳಿಗೆ ಹೋಲಿಸಿ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ತಿರುಗೇಟು ನೀಡಿದ್ದಾರೆ. 2200 ಕೋಟಿ ಭ್ರಷ್ಟಾಚಾರ: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ …

Read More »