Breaking News
Home / Uncategorized (page 631)

Uncategorized

ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ: ಕುಟುಂಬಕ್ಕೆ 30 ಲಕ್ಷ ಪರಿಹಾರ, ಉದ್ಯೋಗ ಘೋಷಿಸಿದ CM

ಬೆಂಗಳೂರು: ಮೈಸೂರಿನ ನಂಜನಗೂಡು THO ಡಾ‌.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ B.S.ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. THO ಡಾ. SR ನಾಗೇಂದ್ರ, ತಾಲ್ಲೂಕು ಆರೋಗ್ಯ ಅಧಿಕಾರಿರವರು ಇಂದು ನಿಧನರಾದ ವಿಷಯನ್ನು ಕೇಳಿ ಅತೀವ ದುಃಖವಾಗಿದ್ದು ಈ ಘಟನೆಯ ಬಗ್ಗೆ ವಿಷಾದಿಸುತ್ತೇನೆ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ, ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ …

Read More »

ಬಾಲಕಿ ಬಾಣಲೆಯಿಂದ ಬೆಂಕಿಗೆ. ಕಣ್ಣೀರುಕ್ಕಿಸುವ ಕತೆ ಇದು

ಗುಂಟೂರು: ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ, ಆಘಾತಗೊಂಡು ತಾಯಿಯ ಮನೆಗೆ ಹೋಗದೆ ಗೆಳತಿಯ ಮನೆಗೆ ಹೊರಟಾಗ ಮಾರ್ಗ ಮಧ್ಯೆ ದುರುಳನ ಕೈಗೆ ಸಿಕ್ಕು ಮತ್ತೆ ಮತ್ತೆ ಅತ್ಯಾಚಾರಕ್ಕೀಡಾದ ಘಟನೆ ಗುಂಟೂರು ಜಿಲ್ಲೆಯಿಂದ ವರದಿಯಾಗಿದೆ. ಆಕೆ 14 ವರ್ಷದ ಬಾಲಕಿ. ಆಕೆಗೆ ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಮಾಡಲಾಗಿದೆ. ಪತಿ ಬೇರೆ ಕಡೆ ವಾಸಿಸುತ್ತಿದ್ದಾನೆ. ಈಕೆ ತಾಯಿಯ ಮನೆಯಲ್ಲಿದ್ದಾಳೆ. ಪತಿಗೆ ಪರಿಚಿತನಾದ ತನ್ನ ನೆರೆಮನೆಯಾತನಿಂದಾಗಿ ಅತ್ಯಾಚಾರಕ್ಕೊಳಗಾದ ಆಕೆ ತನಗೇನಾಯಿತು ಎಂದು ಆಘಾತಕ್ಕೊಳಗಾಗಿ ತಾಯಿಯ ಮನೆಗೆ ಹೋಗುವ …

Read More »

ಗಲಭೆ: ಮತ್ತೆ ಮಂದಿ ಅರೆಸ್ಟ್ – ತನಿಖೆಯಲ್ಲಿ ಬಯಲಾಯ್ತು ಫೇಸ್ ಬುಕ್ ಪೋಸ್ಟ್ ರಹಸ್ಯ

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯ ಜಾಡನ್ನ ಹಿಡಿದು ಹೊರಟಿರೋ ಸಿಸಿಬಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿಗಳ ಬೆಂಡೆತ್ತುತ್ತಿದ್ದಾರೆ. ಹೀಗಿದ್ದೂ ಕೆಲವು ಆರೋಪಿಗಳಿಗೆ ಇರುವ ಕೊಬ್ಬು, ಧಿಮಾಕು ಕಡಿಮೆ ಆಗಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಅಳಿಯ ಹಾಗೂ ಗಲಭೆಯ ಪ್ರಮುಖ ಆರೋಪಿ ನವೀನ್ ಮನೆಗೆ ಬೆಂಕಿ ಇಟ್ಟ ಆರೋಪಿಯನ್ನ ಸಿಸಿಬಿ ಇಂದು ಬಂಧಿಸಿದೆ. ಯೂಸುಫ್ ಬಂಧಿತ ಆರೋಪಿ. ಈತ ಗಲಾಟೆ ನಡೆದ ದಿನ ನವೀನ್ ಮನೆಗೆ ನುಗ್ಗಿ ದಾಂಧಲೆ …

Read More »

ತಾಳ್ಮೆ ಪರೀಕ್ಷಿಸದೇ ಮೊದಲು ಆಸ್ಪತ್ರೆ ನಿರ್ಮಿಸಿ ಕೊಡಿ: ಇದು ಬ್ಯಾನರ್ ಚಳವಳಿ! ಎಲ್ಲಿ?

ಚಿಕ್ಕಮಗಳೂರು: ‘ಶೃಂಗೇರಿಯ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಉತ್ತಮ ಆಸ್ಪತ್ರೆಗಳಿಲ್ಲ, ನಿಮ್ಮ ಹಾಗೂ ಊರಿನ ಜನರ ಆರೋಗ್ಯದ ಹಿತದೃಷ್ಠಿಯಿಂದ ವಾಹನಗಳನ್ನ ನಿಧಾನವಾಗಿ ಚಲಿಸಿ” ಎಂಬ ಬ್ಯಾನರ್ ಶೃಂಗೇರಿಯ ಎಲ್ಲೆಡೆ ಕಂಡುಬರುತ್ತದೆ. ಪ್ರವಾಸಿಗರು ಕೂಡ ಆತಂಕದಿಂದ ನೋಡುತ್ತಿದ್ದಾರೆ! ವ್ಯವಸ್ಥೆ ಅಲ್ಲಲ್ಲ. ಅವ್ಯವಸ್ಥೆಯ ಅಣಕವನ್ನ ಇದೀಗ ಜನರೇ ತೆರೆದಿಡುತ್ತಿದ್ದಾರೆ. ಈ ರೀತಿಯ ಬ್ಯಾನರ್​ಗಳು ಶೃಂಗೇರಿಯ ಹಲವೆಡೆ ಕಂಡು ಬರುತ್ತಿವೆ. ಈ ವಿಭಿನ್ನ ಬ್ಯಾನರ್ ಕಂಡು ಸ್ಥಳೀಯರ ಜೊತೆ ಜಿಲ್ಲೆಗೆ ಬರೋ ಪ್ರವಾಸಿಗರು ಕೂಡ ಆತಂಕದಿಂದ ನೋಡುತ್ತಿದ್ದಾರೆ! …

Read More »

ಮನೆಯಲ್ಲೇ ಪೂಜೆ ಮಾಡಿ, ಬೀದಿಗೆ ಬರಬೇಡಿ..!!

ಬೆಂಗಳೂರು : ಗಣೇಶ ಚತುರ್ಥಿಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಮನವಿ ಮಾಡಿದೆ. ಯಾವುದೇ ಕಾರಣಕ್ಕೂ ಜನತೆ ಬಹಿರಂಗವಾಗಿ ಬೀದಿಗಳಲ್ಲಿ ಗಣಪತಿಯನ್ನು ಕೂರಿಸಿ ಹಬ್ಬ ಆಚರಿಸಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.  ಈ ಕುರಿತು ಜನತೆಗೆ ಕಳಕಳಿಯ ವಿನಂತಿ ಮಾಡಿರುವ ಅವರು, ಕೊರೊನಾ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಯಾವುದೇ ಬಹಿರಂಗ ಕಾರ್ಯಕ್ರಮ ಆಯೋಜಿಸಬೇಡಿ. ನಿಮ್ಮ ನಿಮ್ಮ ಮನೆಗಳಲ್ಲಿ ಗಣಪನನ್ನು ಆರಾಧಿಸಿ ಎಂದು ಸಿಎಂ …

Read More »

ರಾಜ್ಯಕಾರಣದಲ್ಲಿ ಸದ್ದು ಮಾಡಿದ ಫೋನ್ ಟ್ಯಾಪ್

ಬೆಂಗಳೂರು,  : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಫೋನ್ ಟ್ಯಾಪ್ ಆಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಇಂದು (ಶುಕ್ರವಾರ) ಮಾತನಾಡಿರುವ ಅವರು, ನನ್ನ ಫೋನ್ ಟ್ಯಾಪ್ ಆಗಿದೆ. ಟ್ಯಾಪ್ ಮಾಡಿರುವ ಬಗ್ಗೆ ದೂರು ದಾಖಲಿಸುತ್ತೇನೆ. ನಿನ್ನೆಯಿಂದ ಕರೆಗಳೇ ಬರುತ್ತಿಲ್ಲ, ಹೋಗುತ್ತಿಲ್ಲ. ಶೇಕಡ 100 ರಷ್ಟು ಫೋನ್ ಟ್ಯಾಪ್ ಆಗಿದೆ ಎಂದು ಆರೋಪಿಸಿದರು. ನಿರ್ಮಲಾನಂದ ಸ್ವಾಮೀಜಿಯ ಫೋನ್ ಟ್ಯಾಪ್: ಅಶೋಕ್ ಕ್ಷಮೆ ಪ್ರಶ್ನಿಸಿದ ಕುಮಾರಸ್ವಾಮಿ ನಮ್ಮ ಸುದರ್ಶನ್ 25 ಕಾಲ್ …

Read More »

ಭಾರತದಲ್ಲಿ IPL ಅನ್ನೋದು ದೊಡ್ಡ ಹಬ್ಬ. ದೇಶದಲ್ಲಿ

ಚೆನ್ನೈ: ಜಾತ್ಯಾತೀತ ಭಾರತದಲ್ಲಿ IPL ಅನ್ನೋದು ದೊಡ್ಡ ಹಬ್ಬ. ದೇಶದಲ್ಲಿ ಕೊರೊನಾ ಹಾವಳಿಯಿಂದಾಗಿ IPL ಪಂದ್ಯಾವಳಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮುಂದಿನ ತಿಂಗಳು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳಿಗಾಗಿ ಎಲ್ಲಾ ತಂಡಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸಹ ಕಪ್ ಗೆಲ್ಲುವ ಹಾಟ್ ಫೇವರೀಟ್ ತಂಡವಾಗಿದ್ದು, ಇಂದು ಚೆನ್ನೈ ವಿಮಾನ ನಿಲ್ದಾಣದಿಂದ ದುಬೈಗೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ …

Read More »

ನಡು ರಸ್ತೆಯಲ್ಲಿ ಪುಂಡರಿಗೆ ಬಸ್ಕಿ ಹೊಡೆಸಿದ ಪೊಲೀಸರು.. ಎಲ್ಲಿ?

ಇಂದೋರ್: ಅಪರಾಧಿಗಳನ್ನು ಬಂಧಿಸಿ ಶಿಕ್ಷೆ ನೀಡುವ ಪದ್ದತಿ ಸಾಮಾನ್ಯವಾಗಿ ಕಾಣಬಹುದು. ಆದರೆ ಇಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಇಬ್ಬರು ಅಪರಾಧಿಗಳಿಗೆ ಅವರ ಅಡ್ಡಾದಲ್ಲೇ ಶಿಕ್ಷೆ ನೀಡಿದ್ದಾರೆ. ಹಾಗೂ ಅಲ್ಲಿನ ಜನರಿಗೆ ಅಪರಾಧಿಗಳು ಕ್ಷಮೆ ಕೇಳುವಂತೆ ಮಾಡಿದ್ದಾರೆ. ಅಪರಾಧ ಎಸಗಿದ ಇಬ್ಬರು ವ್ಯಕ್ತಿಗಳನ್ನು ನಡು ರಸ್ತೆಯಲ್ಲೇ ಕಿವಿ ಹಿಡಿದು ಬಸ್ಕಿ ಹೊಡೆಸಿರುವ ಅಪರೂಪದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುರುವಾರ ಸಂಜೆ ನಡೆದಿದೆ. ಈ ವೇಳೆ ನೆರೆಹೊರೆಯವರು ತಮ್ಮ ಬಾಲ್ಕನಿಗಳಿಂದಲೇ ಚಪ್ಪಾಳೆ ತಟ್ಟಿ ಅಪರಾಧಿಗಳ …

Read More »

ಕೃಷ್ಣಾರೋಗಿಗೆ ‘ಡ್ರೋನ್‌’ನಿಂದ ಮಾತ್ರೆ ರವಾನೆ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಕೃಷ್ಣಾನದಿಯ ಕರಕಲಗಡ್ಡಿ ನಡುಗಡ್ಡೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಗೆ ಡ್ರೋನ್‌ ಮೂಲಕ ಮಾತ್ರೆ ಹಾಗೂ ಔಷಧಿಗಳನ್ನು ಶುಕ್ರವಾರ ಯಶಸ್ವಿಯಾಗಿ ತಲುಪಿಸಲಾಯಿತು. ಕರಕಲಗಡ್ಡಿಯಲ್ಲಿ ಒಂದೇ ಕುಟುಂಬದ ನಾಲ್ಕು ಜನರು ಉಳಿದುಕೊಂಡಿದ್ದಾರೆ. ತಿಪ್ಪಣ್ಣ ಎನ್ನುವವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ವೈದ್ಯರ ಸಲಹೆಯಂತೆ ಅವರು ನಿರಂತರ ತೆಗೆದುಕೊಳ್ಳುತ್ತಿದ್ದ ಮಾತ್ರೆಗಳು ಖಾಲಿಯಾಗಿದ್ದವು. ಮಾತ್ರೆಗಳನ್ನು ಕಳುಹಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಡುಗಡ್ಡೆ ಜನರು ಗುರುವಾರ ಮನವಿ ಮಾಡಿದ್ದರು. ನಾರಾಯಣಪುರ ಜಲಾಶಯದಿಂದ 2.72 ಲಕ್ಷ ಕ್ಯುಸೆಕ್‌ ನೀರನ್ನು …

Read More »

ರೈತರ `ಪಶು ಸಂಜೀವಿನಿ’ ಸಂಚಾರಿ ಚಿಕಿತ್ಸಾಲಯಕ್ಕೆ ಸಿಎಂ ಚಾಲನೆ

ಬೆಂಗಳೂರು,  : ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಸರಕಾರ ಸಜ್ಜಾಗಿದ್ದು, ರೈತರ ಕರೆಗಳಿಗೆ ತುರ್ತಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಲಿದೆ. ಈ ಸೇವೆಗಳನ್ನು ಇಲಾಖೆಯ ಸಹಾಯವಾಣಿ ಸೇವೆಗಳಿಗೆ ಲಿಂಕ್ ಮಾಡಿ 24/7 ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಗುರುವಾರ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಬಳಿ ಪಶುಸಂಗೋಪನಾ ಇಲಾಖೆಯ ವತಿಯಿಂದ ಆಯೋಜಿಸಿದ್ದ `ಪಶುಸಂಜೀವಿನಿ’ ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ವಾಹನಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು …

Read More »