Breaking News
Home / ವಿಜಯಪುರ (page 7)

ವಿಜಯಪುರ

ಅಶ್ವತ್ಥ ನಾರಾಯಣ್ ಸಹೋದರನ ಪಾತ್ರ ಎಷ್ಟಿದೆ ಅನ್ನೋದನ್ನ ತನಿಖೆ ಮಾಡ್ತಾರೆ: ಶಾಸಕ ಯತ್ನಾಳ್

ವಿಜಯಪುರ : ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಚಿವ ಸಿ.ಎನ್‌.ಅಶ್ವತ್ಥ ನಾರಾಯಣ್​ ಸಹೋದರನ ಹೆಸರು ಕೇಳಿಬಂದಿರುವುದರ ಕುರಿತು ತನಿಖೆಯಾಗಬೇಕು. ಇದರಲ್ಲಿ ಯಾರೇ ಇದ್ದರೂ ಮುಲಾಜಿಲ್ಲದೆ ತನಿಖೆಯಾಗಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮದ ಕುರಿತು ಮಾತನಾಡಿದ ಅವರು, ಬಿಜೆಪಿ ಸರ್ಕಾರವೇ ಇದನ್ನು ತನಿಖೆ ಮಾಡಿದೆ. ನಮ್ಮ ಸರ್ಕಾರದಿಂದಲೇ ಈ ಪ್ರಕರಣ ಹೊರಗೆ ಬಂದಿದೆ. ಹಿಂದೆ ಕೂಡ ಇಂತಹ ಡೀಲ್ ನಡೆದಿವೆ, ಇದೆ ಮೊದಲೇನಲ್ಲ. ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ …

Read More »

ಇಂದೇ ಉಸ್ತುವಾರಿ ಬದಲಾಯಿಸಿ, ನನಗೇನು ಅಭ್ಯಂತರವಿಲ್ಲ: ಬಿ.ಸಿ.ಪಾಟೀಲ ಗರಂ

ಗದಗ: ಅಕ್ರಮ ಮರಳುಗಾರಿಕೆ ವಿಚಾರವಾಗಿ ರೋಣ ಶಾಸಕ ಕಳಕಪ್ಪ ಬಂಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮಧ್ಯೆ ವಾಗ್ವಾದ ನಡೆಯಿತು. ‘ಇವತ್ತೇ ಉಸ್ತುವಾರಿ ಬದಲಾವಣೆ ಮಾಡಿಸಿ ನನಗೇನು ಅಭ್ಯಂತರವಿಲ್ಲ. ಆಸಕ್ತಿಯೂ ಇಲ್ಲ’ ಎಂದು ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಗರಂ ಆದರು.   ಜಿಲ್ಲಾಡಳಿತ ಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಪೊಲೀಸ್ ಇಲಾಖೆ ತೆಗೆದುಕೊಂಡಿರುವ ಕ್ರಮಗಳನ್ನು ಎಸ್ ಪಿ ವಿವರಿಸಿದರು. …

Read More »

ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ಸಾಲದು,:ಬೊಮ್ಮಾಯಿಗೆ ಕಿವಿ ಹಿಂಡಿದ ಹೈಕಮಾಂಡ್

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ನಂತಹ ಧಾರ್ಮಿಕ ವಿಚಾರಗಳು ಸಾಲದು ಉತ್ತಮ ಆಡಳಿತ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯೂ ಮುಖ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಹೈಕಮಾಂಡ್ ಹೇಳಿದೆ. ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಬೊಮ್ಮಾಯಿ ಅವರು ಎರಡು ದಿನಗಳ ಕಾಲ ದೆಹಲಿಗೆ ತೆರಳಿದ್ದರು. ಈ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ಹಲವು ನಾಯಕರನ್ನು ಭೇಟಿ ಮಾಡಿದ್ದಾರೆ. …

Read More »

ಉಚಿತ ಬಸ್​ ಸೇವೆಗಾಗಿ ಹುಡುಗಿಯಾದ ಯುವಕ.. ಕಂಡಕ್ಟರ್​ ಕೈಗೆ ಸಿಕ್ಕಿಬಿದ್ದಿದ್ದು ಹೀಗೆ.. ವಿಡಿಯೋ!

ನವದೆಹಲಿ: ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿನ ಸರ್ಕಾರ ಮಹಿಳೆಯರಿಗೆ ಉಚಿತ ಬಸ್​ ಸೇವೆ ಆರಂಭಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಉಚಿತ ಬಸ್​ ಸೇವೆ ಆನಂದಿಸಲು ಯುವಕನೊಬ್ಬ ತನ್ನ ಎಲ್ಲ ಮಿತಿಗಳನ್ನು ದಾಟಿದ್ದಾನೆ. ಹುಡುಗಿಯಂತೆ ರೆಡಿಯಾದ ಯುವಕ ಬಸ್​ವೊಂದಕ್ಕೆ ಹತ್ತಿ ಪ್ರಯಾಣಿಸುತ್ತಿದ್ದನು. ಆದರೆ ಆತ ಕಂಡಕ್ಟರ್​ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಹೌದು, ಉಚಿತ ಬಸ್​ ಸೌಲಭ್ಯ ಆನಂದಿಸಲು ಯುವಕನೊಬ್ಬ ಹುಡುಗಿಯಂತೆ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು …

Read More »

ಜನಪ್ರತಿನಿಧಿಗಳನ್ನು ಕೆಳಗಿಸುವ ಅಧಿಕಾರ ಜನರ ಕೈಗೆ.. ಶಾಸಕರು, ಸಚಿವರಿಗೆ ಸಿಎಂ ಮಾನ್​ ಹೊಸ ಟಾಸ್ಕ್​​

ಚಂಡೀಗಢ: ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರು ಸಚಿವರ, ಶಾಸಕರ ಭದ್ರತೆ ರದ್ದು, 25 ಸಾವಿರ ಸರ್ಕಾರಿ ಹುದ್ದೆಗಳ ನೇಮಕಕ್ಕೆ ಸೂಚನೆ, ಭ್ರಷ್ಟಾಷಾರ ನಿಗ್ರಹಕ್ಕೆ ಸಹಾಯವಾಣಿ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸದ ಸಚಿವರನ್ನು ‘ಅಧಿಕಾರದಿಂದ ಕೆಳಗಿಳಿಸುವ ಹಕ್ಕನ್ನು ಜನರಿಗೆ ನೀಡಿ’ ಗಮನ ಸೆಳೆದಿದ್ದಾರೆ. ಈ ಬಗ್ಗೆ ಮೊಹಾಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಪಕ್ಷದ ಅಧ್ಯಕ್ಷ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಸಿಎಂ ಭಗವಂತ್​ ಮಾನ್​ ಅವರು ಸರ್ಕಾರದಲ್ಲಿ …

Read More »

ಪತಿಗೆ ಪರಸ್ತ್ರೀಯರೊಂದಿಗೆ ಅಕ್ರಮ ಸಂಬಂಧ ಆರೋಪ: ಡೆತ್​​​​ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ

ಬೆಂಗಳೂರು: ಪ್ರೀತಿಸಿ ಕೈಹಿಡಿದ ಗಂಡ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಯತ್ರಿ ನಗರದಲ್ಲಿ ನಡೆದಿದೆ. ಇಂದುಶ್ರೀ (28) ಮೃತ ದುರ್ದೈವಿ. ಎರಡು ವರ್ಷದಿಂದ ಈಕೆ ರಾಕೇಶ್​ ಎಂಬುವವರನ್ನು ಪ್ರೀತಿಸುತ್ತಿದ್ದರು. 9 ತಿಂಗಳ ಹಿಂದೆಯಷ್ಟೇ ಮನೆಯವರನ್ನು ಒಪ್ಪಿಸಿ ರಾಕೇಶ್​ ಜೊತೆ ವಿವಾಹವಾಗಿದ್ದರು. ಆದರೆ, ಮದುವೆಯಾದ ಬಳಿಕ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ನೊಂದ ಮಹಿಳೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್​​ನೋಟ್​ ಬರೆದಿಟ್ಟು ನೇಣಿಗೆ …

Read More »

ಸಿಟಿ ಬಸ್‌ ತೆರಳದ ಜಾಗಕ್ಕೆ ಕೆಎಸ್ಸಾರ್ಟಿಸಿ ಬಸ್‌

ಮಹಾನಗರ: ಪರವಾನಿಗೆ ಹೊಂದಿರುವ ಮಾರ್ಗಗಳಲ್ಲಿ ಸಿಟಿ ಬಸ್‌ಗಳು ಸಂಚರಿಸದಿದ್ದರೆ ಅಂತಹ ರೂಟ್‌ಗಳಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ತಾತ್ಕಾಲಿಕವಾಗಿ ಪರವಾನಿಗೆ ನೀಡಲು ಆರ್‌ಟಿಒ ಮುಂದಾಗಿದೆ. ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಗಗಳಲ್ಲಿ ಸ್ಥಗಿತಗೊಂಡಿದ್ದ ಸಿಟಿ ಬಸ್‌ ಕಾರ್ಯಾಚರಣೆ ಇನ್ನೂ ಆರಂಭ ಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿ ಕರಿಂದ ದೂರುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಸಾರ್ವಜನಿ ಕರು ಲಿಖೀತ ದೂರು ನೀಡಲು ಆರ್‌ಟಿಒ ಮನವಿ ಮಾಡಿತ್ತು. ಅದರಂತೆ ಈಗಾ ಗಲೇ ಸುಮಾರು 15 ಮಂದಿ …

Read More »

‘ಕಂಬಳಿಯಾದ್ರೂ ಹಾಕ್ತೀನಿ, ಟೋಪಿಯಾದ್ರೂ ಹಾಕ್ತೀನಿ..ಇವನ್ಯಾರು ಕೇಳೋಕೆ? – ಸಿ.ಟಿ ರವಿ ವಿರುದ್ಧ ಸಿದ್ದು ಗರಂ

ವಿಜಯಪುರ: ಕಂಬಳಿಯಾದ್ರೂ ಹಾಕ್ತೀನಿ, ಟೋಪಿಯಾದ್ರೂ ಹಾಕ್ತೀನಿ.. ಇವನ್ಯಾರು ಕೇಳೋಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಕಿಡಿಕಾರಿದ್ದಾರೆ. ಸಿಂದಗಿ‌ ಉಪ ಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕಂಬಳಿ ಹಾಕಿದವರೆಲ್ಲಾ ಕುರುಬ ಸಮಾಜದಲ್ಲಿ ಹುಟ್ಟಿದವರಲ್ಲ ಎಂದಾದರೆ ಟೋಪಿ ಹಾಕಿದವರೆಲ್ಲ ಯಾರು..? ಎಂಬ ಸಿ.ಟಿ ರವಿ ಅವರ ಟ್ವೀಟ್​ಗೆ ತಿರುಗೇಟು ನೀಡಿದ ಅವರು, ನಾನು ಕಂಬಳಿನೂ ಹಾಕುತ್ತೇನೆ ಹಾಕುತ್ತೇನೆ, …

Read More »

ಹೆಣ್ಣು ಶಿಶು ಮಾರಾಟ ಪ್ರಕರಣದ ಬಗ್ಗೆ ಸದನದಲ್ಲಿ ಚರ್ಚೆ : ಎಂ.ಬಿ.ಪಾಟೀಲ

ವಿಜಯಪುರ: ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಶಾಮೀಲಾಗಿ ಜಿಲ್ಲೆಯಲ್ಲಿ ಹೆಣ್ಣು ಶಿಶು ಮಾರಾಟ ಮಾಡಿದ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದು. ಈ ಕುರಿತು ಸದನದಲ್ಲಿ ಚರ್ಚೆ ನಡೆಸುವುದಾಗಿ ಬಬಲೇಶ್ವರ ಶಾಸಕರಾದ ಮಾಜಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಈ ಕುರಿತು ಉದಯವಾಣಿ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಅವರು, ಜಿಲ್ಲೆಯಲ್ಲಿ ಹೆಣ್ಣು ಶಿಶು ಮಾರಾಟದ ಪ್ರಕರಣದ ಕುರಿತು ವಿಶೇಷ ವರದಿ ಮೂಲಕ ಉದಯವಾಣಿ ಪತ್ರಿಕೆ ಉತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದ್ದಾರೆ. ಈ ಘಟನೆ …

Read More »

ಗುರುವಾರ (ಆಗಸ್ಟ್ 26) ಮಲೆಮಹದೇಶ್ವರ ಬೆಟ್ಟದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದೆ. ಶ್ರೀಗಳ ನೇತೃತ್ವದಲ್ಲಿ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಯಲಿದೆ.

ಮೈಸೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಮತ್ತೆ ಸಮುದಾಯದ ಸ್ವಾಮೀಜಿಗಳ ಕೂಗು ಕೇಳಿಬಂದಿದೆ. ಬಸವ ಜಯಮೃತ್ಯುಂಜಯಶ್ರೀ ನೇತೃತ್ವದಲ್ಲಿ ಮತ್ತೆ ಹೋರಾಟ ನಡೆಯಲಿದೆ. ಗುರುವಾರ (ಆಗಸ್ಟ್ 26) ಮಲೆಮಹದೇಶ್ವರ ಬೆಟ್ಟದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದೆ. ಶ್ರೀಗಳ ನೇತೃತ್ವದಲ್ಲಿ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಯಲಿದೆ. ನಾಳೆಯಿಂದ ಅಕ್ಟೋಬರ್ 1 ರವರೆಗೆ ಹೋರಾಟ ನಡೆಯಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಬೇಡಿಕೆ ವಿಚಾರವಾಗಿ ಮೈಸೂರಿನಲ್ಲಿ ಬಸವ …

Read More »