Breaking News

ರಾಷ್ಟ್ರೀಯ

ಮೂಡಲಗಿಯಲ್ಲಿ ಅರಭಾವಿ ಶಾಸಕರ ಕಛೇರಿ ಉದ್ಘಾಟನೆ ಸಾರ್ವಜನಿಕರ ಅನುಕೂಲಕ್ಕಾಗಿ ಕಛೇರಿ ಕಾರ್ಯಾರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರೀಕರಿಗೆ ಅನುಕೂಲವಾಗಲು ಪಟ್ಟಣದಲ್ಲಿರುವ ತಹಶೀಲ್ದಾರ ಕಛೇರಿ ಬಳಿ ತಮ್ಮ ಶಾಸಕರ ಕಛೇರಿಯನ್ನು ಪ್ರಾರಂಭಿಸಲಾಗಿದ್ದು, ಇದರ ಸದ್ಬಳಕೆಯನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಪಟ್ಟಣದ ಬಸವನಗರದಲ್ಲಿ ನೂತನವಾಗಿ ಆರಂಭಿಸಲಾದ ಅರಭಾವಿ ಶಾಸಕರ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಡಲಗಿ ಹೊಸ ತಾಲೂಕು ರಚನೆ ಬಳಿಕ ಸಾರ್ವಜನಿಕರ ಹಿತದೃಷ್ಟಿಯಿಂದ ಮೂಡಲಗಿಯಲ್ಲಿ ತಮ್ಮ ಕಛೇರಿಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. …

Read More »

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಪಾಟ್ನಾ: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ , ಕೊಲೆಗೈದಿದ್ದ ಆರೋಪಿಗೆ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯವೊಂದು ಮರಣ ದಂಡನೆ ಶಿಕ್ಷೆಯನ್ನು ಶನಿವಾರ ಪ್ರಕಟಿಸಿದೆ. ಕೇಸ್ ದಾಖಲಾದ ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಿ ನ್ಯಾಯಾಲಯ ಈ ಮಹತ್ವದ ಶಿಕ್ಷೆ ಪ್ರಕಟಿಸಿದೆ. ಪಾಟ್ನಾದಿಂದ 140 ಕಿ.ಮೀ. ದೂರದಲ್ಲಿರುವ ಬಾಕ್ರೌರು ಹಳ್ಳಿಯಲ್ಲಿನ ಪ್ರಮುಖ ಶಂಕಿತನ ಮನೆಯಿಂದ ಬ್ಯಾಂಗ್ ವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೃತದೇಹವನ್ನು ಆಗಸ್ಟ್ 25 ರಂದು ಗೋಪಾಲ್ ಗಂಜ್ …

Read More »

ದಂಡ ಕಟ್ಟಿಸಿಕೊಳ್ಳುವ ಬದಲು ಯುವತಿಗೆ ಕಿಸ್ ಕೊಟ್ಟ ಪೊಲೀಸ್ ಅಧಿಕಾರಿ.!

ಪೆರು:ವಿಲಕ್ಷಣ ಘಟನೆಯೊಂದರಲ್ಲಿ,ಪೆರುವಿನಲ್ಲಿ ದಂಡ ವಿಧಿಸುವ ಬದಲು ಪೊಲೀಸ್ ಅಧಿಕಾರಿ ಮಹಿಳೆಯೊಬ್ಬಳನ್ನು ಚುಂಬಿಸಿದ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ. ಈಗ ವೈರಲ್ ಆಗಿರುವ ಸಿಸಿಟಿವಿ ವಿಡಿಯೋ ತುಣುಕಿನಲ್ಲಿ, ಲಿಮಾದಲ್ಲಿ ಕೋವಿಡ್ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಅಧಿಕಾರಿ ಮಹಿಳೆಗೆ ದಂಡ ವಿಧಿಸುವುದಕ್ಕೆ ನಿಲ್ಲಿಸಿರುವುದನ್ನು ಕಾಣಬಹುದು. ದಂಡ ಕೊಡದೆ ಚುಂಬನ ಕೊಡುವಂತೆ ಅಧಿಕಾರಿ ಆಕೆಯ ಮನವೊಲಿಸಿದ್ದು ವೀಡಿಯೋದಲ್ಲಿ ಕಾಣುತ್ತದೆ. ದಂಡದ ಶುಲ್ಕ ವಿಧಿಸಲು ಪ್ರಾರಂಭಿಸಿದಾಗ ಮಹಿಳೆ ಅಧಿಕಾರಿಗೆ ಹತ್ತಿರವಾಗುವುದನ್ನು ಕಾಣಬಹುದು, ಆದರೆ ಕೆಲವು ಸೆಕೆಂಡುಗಳ ಹಿಂಜರಿಕೆಯ ನಂತರ, ಅಧಿಕಾರಿ …

Read More »

ದೆಹಲಿಯಲ್ಲಿ ಸಭೆ , ಜಲವಿವಾದ, ಕೃಷ್ಣ ಕಾವೇರಿ,ಮಹದಾಯಿ, ವಿಷಯ ಗಳನ್ನೊಳ ಗೊಂಡು ತಜ್ಞರೊಂದಿಗೆ ಸಭೆ ನಡೆಸಿದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ

ನವದೆಹಲಿ: ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ದೆಹಲಿ ಪ್ರಯಾಣ ಬೆಳೆಸಿದ್ದು ಇಂದು ಬೆಳಿಗ್ಗೆ ಕರ್ನಾಟಕ ಭವನದಲ್ಲಿ ಕೃಷ್ಣ ,ಕಾವೇರಿ, ಹಾಗೂ ಮಹದಾಯಿ ಹಾಗೂ ಅಂತರ್ ರಾಜ್ಯ ಜಲ ವಿವಾದಗಳ ಬಗ್ಗೆ ಸಭೆ ನಡೆಸಿದರು. ಇನ್ನು ಸರ್ವೋಚ್ಚ ನ್ಯಾಯಾಲಯ ದಲ್ಲಿರುವ ಪ್ರಕರಣ ಗಳ ಬಗ್ಗೆ ಕೂಡ ಚರ್ಚೆ ನಡೆಯಿತು. ಈ ಸಭೆಯಲ್ಲಿ ತಾಂತ್ರಿಕ ವರ್ಗ ಹಾಗೂ ಕಾನೂನು ಸಲಹೆಗಾರರು ಹಾಗೂ ತಜ್ಞರು ಹಾಗೂ ತಾಂತ್ರಿಕ ಸಲಹೆಗಾರರೊಂದಿಗೆ ಸಭೆ ನಡೆಯಿತು. …

Read More »

ಇಟ್ಟಂಗಿ ಭಟ್ಟಿ ಮಕ್ಕಳ ಕೈಗೆ ಬುಕ್ ಕೊಟ್ಟು, ಕನಸು ನಿಮ್ಮದು ಕೆಲಸ ನಮ್ಮದು ಎಂದ ಎಸಿ..

ಬೆಳಗಾವಿಯ ಉಪವಿಭಾಗಾಧಿಕಾರಿಯೊಬ್ಬರು ಬಡ ದೀನ- ದಲಿತ- ನಿರ್ಗತಿಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಜಾಗ್ರತ ಪ್ರಜ್ಞೆ ಮೂಡಿಸುವ ಕಾರ್ಯಕ್ಕೆ ಇಳಿದಿದ್ದಾರೆ. ಇಂತಹ ಕಾರ್ಯ ಖಾನಾಪೂರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಂಡು ಬಂದಿದೆ. ಇದು ಗ್ರಾಮಸ್ಥರ ಹಾಗೂ ಬಡ ಪಾಲಕ-ಪೋಷಕರ ಮೆಚ್ಚುಗೆಗೆ ಕಾರಣವಾಗಿದೆ. ನಿಜ, ಎಸಿ ಅಶೋಕ ತೇಲಿ ಕಳೆದೆರಡು ದಿನಗಳ ಹಿಂದೆ ಖಾನಾಪೂರದ ಸಮೀಪದ ಗ್ರಾಮಗಳ ಇಟ್ಟಂಗಿ ಭಟ್ಟಿಯಲ್ಲಿ ದುಡಿಯುತ್ತಿರುವ ಮಕ್ಕಳನ್ನು ಕಂಡೊಡನೆ ದಿಢೀರ್ ಸ್ಥಳಕ್ಕೆ ಭೇಟಿ ಕೊಟ್ಟು ಪಾಲಕರಿಗೆ ಮಕ್ಕಳ …

Read More »

ಅಧಿಕಾರಿಗಳ ಜೊತೆ ನವದೆಹಲಿಗೆ ತೆರಳಿದ ರಮೇಶ್ ಸಾಹುಕಾರ್…

ಬೆಳಗಾವಿ-ಕರ್ನಾಟಕ ರಾಜ್ಯದ ಹಲವು ನೀರಾವರಿ ಯೋಜನೆಗಳ ಕುರಿತು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ರಾಜ್ಯದ ಜಲಸಂಪನ್ಮೂಲ ಸಚಿವ ಶ್ರೀ ರಮೇಶ್ ಜಾರಕಿಹೊಳಿ‌, ನವದೆಹಲಿಯಲ್ಲಿ ಸೋಮವಾರ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಆ ಸಭೆಗೂ ಮುನ್ನ ನವದೆಹಲಿಯ ಕರ್ನಾಟಕ ಭವನದಲ್ಲಿ ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಅಂತರರಾಜ್ಯ ಜಲವಿವಾದಗಳ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ತಜ್ಞರು ಮತ್ತು ತಾಂತ್ರಿಕ ಸಲಹೆಗಾರರ ಸಭೆಯಲ್ಲಿ …

Read More »

ಆರ್ಥಿಕವಾಗಿ ಸಬಲರಾಗಿರುವ ಜಾತಿಗಳನ್ನು 2ಎ ಗೆ ಸೇರಿಸಲು ವಿರೋಧ

ಗೋಕಾಕ: ಆರ್ಥಿಕವಾಗಿ ಸಬಲರಾಗಿರುವ ಜಾತಿಗಳನ್ನು 2ಎ ಗೆ ಸೇರ್ಪಡೆ ಮಾಡುವುದಕ್ಕೆ ರಾಜ್ಯ ಆರ್ಯ ಈಡಿಗ ಸಂಘದ ಯುವ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಈಳಿಗೇರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಡಿಗ, ಬಿಲ್ಲವ ಸೇರಿ ಅನೇಕ ಜಾತಿಗಳು ಈಗಾಗಲೇ 2ಎ ನಲ್ಲಿವೆ. ಇದರಲ್ಲಿ ಈಡಿಗ ಸಮುದಾಯ 60 ಲಕ್ಷದಿಂದ 70 ಲಕ್ಷ ಜನಸಂಖ್ಯೆ ಹೊಂದಿದೆ. 2ಎ ನಲ್ಲಿ ಈಗಾಗಲೇ ಇರುವ ಸಮುದಾಯಗಳಿಗೆ ಸರಿಯಾಗಿ ಮೀಸಲಾತಿ …

Read More »

ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು: ಚಾಲಕ ಸಜೀವ ದಹನ

ರಾಯಚೂರು: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಚಾಲಕ ಸಜೀವ ದಹನವಾದ ಘಟನೆ ತಾಲೂಕಿನ ಕಲ್ಮಲ ಸಮೀಪ ಸಂಭವಿಸಿದೆ. ಮೃತ ಕಾರು ಚಾಲಕನನ್ನು ಮಲ್ಲಟ ಗ್ರಾಮದ ಸದಾನಂದಗೌಡ ಮಾಲೀಪಾಟೀಲ (60) ಎಂದು ಗುರುತಿಸಲಾಗಿದೆ. ಮಲ್ಲಟದಿಂದ ರಾಯಚೂರು ಕಡೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡದಿದೆ. ಇದರಿಂದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣದಲ್ಲೇ ಹೊತ್ತಿ ಉರಿದಿದೆ. ಕಾರು ಲಾಕ್ ಆಗಿರುವ ಕಾರಣ ಚಾಲಕ …

Read More »

ಮಸಗುಪ್ಪಿ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೇಟಿ ಶಾಸಕರಿಂದ ಭಜರಂಗದಳ ಘಟಕ ಉದ್ಘಾಟನೆ

ಮೂಡಲಗಿ : ಮಸಗುಪ್ಪಿ ಮಹಾಲಕ್ಷಿ ದೇವಿ ದೇವಸ್ಥಾನವು ಭಕ್ತರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವ ಪುಣ್ಯಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸುಮಾರು 5 ಕೋಟಿ ವೆಚ್ಚದಲ್ಲಿ ಮಹಾಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. 2.50 ಕೋಟಿ ರೂ.ವೆಚ್ಚದಲ್ಲಿ ದೇವಸ್ಥಾನದ ಹೊಸ ಕಟ್ಟಡ, 50 ಲಕ್ಷ ರೂ.ವೆಚ್ಚದಲ್ಲಿ ದೇವಸ್ಥಾನದ ಸಿಖರ , …

Read More »

ಬೆಳಗಾವಿ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ನೇಕಾರನ ಕುಟುಂಬಕ್ಕೆ ಸಚಿವರ ಸಾಂತ್ವನ

ಬೆಳಗಾವಿ: ನಗರದ ವಡಗಾವಿಯಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ನೇಕಾರ ಸಿದ್ದಲಿಂಗೇಶ್ವರ ಗಂಗಪ್ಪ ಹೊರಕೇರಿ ಅವರ ಮನೆಗೆ ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಶನಿವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕುಟುಂಬದವರಿಗೆ ತಮ್ಮ ‘ಶ್ರೀಮಂತ ಪಾಟೀಲ ಪ್ರತಿಷ್ಠಾನ’ದಿಂದ ಆರ್ಥಿಕ ನೆರವು ನೀಡಿದರು. ಆದಷ್ಟು ಬೇಗ ಇಲಾಖೆಯಿಂದಲೂ ನೆರವು ಕೊಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಇಲಾಖೆಯ ಅಧಿಕಾರಿಗಳು, ಮುಖಂಡರು ಹಾಗೂ ಸ್ಥಳೀಯರು ಇದ್ದರು.

Read More »