Home / ರಾಜ್ಯ / ದೆಹಲಿಯಲ್ಲಿ ಸಭೆ , ಜಲವಿವಾದ, ಕೃಷ್ಣ ಕಾವೇರಿ,ಮಹದಾಯಿ, ವಿಷಯ ಗಳನ್ನೊಳ ಗೊಂಡು ತಜ್ಞರೊಂದಿಗೆ ಸಭೆ ನಡೆಸಿದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ

ದೆಹಲಿಯಲ್ಲಿ ಸಭೆ , ಜಲವಿವಾದ, ಕೃಷ್ಣ ಕಾವೇರಿ,ಮಹದಾಯಿ, ವಿಷಯ ಗಳನ್ನೊಳ ಗೊಂಡು ತಜ್ಞರೊಂದಿಗೆ ಸಭೆ ನಡೆಸಿದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ

Spread the love

ನವದೆಹಲಿ: ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ದೆಹಲಿ ಪ್ರಯಾಣ ಬೆಳೆಸಿದ್ದು ಇಂದು ಬೆಳಿಗ್ಗೆ ಕರ್ನಾಟಕ ಭವನದಲ್ಲಿ ಕೃಷ್ಣ ,ಕಾವೇರಿ, ಹಾಗೂ ಮಹದಾಯಿ ಹಾಗೂ ಅಂತರ್ ರಾಜ್ಯ ಜಲ ವಿವಾದಗಳ ಬಗ್ಗೆ ಸಭೆ ನಡೆಸಿದರು.

ಇನ್ನು ಸರ್ವೋಚ್ಚ ನ್ಯಾಯಾಲಯ ದಲ್ಲಿರುವ ಪ್ರಕರಣ ಗಳ ಬಗ್ಗೆ ಕೂಡ ಚರ್ಚೆ ನಡೆಯಿತು. ಈ ಸಭೆಯಲ್ಲಿ ತಾಂತ್ರಿಕ ವರ್ಗ ಹಾಗೂ ಕಾನೂನು ಸಲಹೆಗಾರರು ಹಾಗೂ

ತಜ್ಞರು ಹಾಗೂ ತಾಂತ್ರಿಕ ಸಲಹೆಗಾರರೊಂದಿಗೆ ಸಭೆ ನಡೆಯಿತು. ಈ ಸಭೆಯಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸೀನಿಯರ್ ಅಡ್ವೋಕೇಟ್ ಮೋಹನ ಕಾತರಕಿ, ಅಡ್ವೋಕೇಟ್ ವಿ. ಎನ್. ರಘುಪತಿ, ನಿಶಾಂತ ಪಾಟೀಲ್, ರಾಜೇಶ್ವರ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅನೀಲ್ ಕುಮಾರ್, ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನು ಸತತವಾಗಿ ಒಂದು ವರ್ಷದಿಂದ ನಮ್ಮ ಕರ್ನಾಟದಲ್ಲಿ ನಡೆಯುವ ಎಲ್ಲಾ ನದಿ ಜೋಡಣೆ ಹಾಗೂ ಜಲ ವಿವಾದಿತ ಸಮಸ್ಯೆ ಗಳ ಬಗ್ಗೆ ರಮೇಶ್ ಜಾರಕಿಹೊಳಿ ಅವರು ಹೆಚ್ಚಿನ ಕಾಳಜಿ ವಹಿಸುತ್ತಿದ್ದ ಎಲ್ಲರಲ್ಲೂ ಇದೊಂದು ಹೊಸ ಉತ್ಸಾಹ ತುಂಬಿದೆ.

ಸತತವಾಗಿ ಕರ್ನಾಟಕದ ಎಲ್ಲ ವಿವಾದ ಹಾಗೂ ಉತ್ತರ ಕರ್ನಾಟಕದ ಪ್ರಮುಖ ನದಿ ಯೋಜನೆಗಳಾದ ಕೃಷ್ಣ ಹಾಗೂ ಮಹದಾಯಿ ಯೋಜನೆಯ ಬಗ್ಗೆ ರಮೇಶ್ ಜಾರಕಿಹೊಳಿ ಅವರು ಗಮನ ಹರಿಸುತ್ತಿರುವುದು ಉತ್ತರ ಕರ್ನಾಟಕದ ಭಾಗದ ಜನತೆಗೆ ತುಂಬಾ ಖುಷಿ ತಂದಿದೆ..
ಇಷ್ಟು ದಿನ ನಮ್ಮ ಭಾಗದ ಜನತೆಯ ಅಭಿವೃದ್ಧಿ ಕಾರ್ಯಗಳು ತುಂಬಾ ನಿಧಾನ ಗತಿಯಲ್ಲಿ ಸಗುತ್ತಿದುವು.ಆದ್ರೆ ರಮೇಶ್ ಜಾರಕಿಹೊಳಿ ಅವರು ಸಚಿವರಾದ ಮೇಲೆ ಎಲ್ಲ ಅಭಿವೃದ್ಧಿ ಕಾರ್ಯಗಳು ಅತೀ ವೇಗವಾಗಿ ನಡೆಯುತ್ತಿವೆ ಎಂದು ಎಲ್ಲರಲ್ಲೂ ಚರ್ಚೆ ನಡೆಯುತ್ತಿದೆ


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ