Breaking News

ರಾಷ್ಟ್ರೀಯ

ಕೋವಿಡ್ ಎಂದು ಆಸ್ಪತ್ರೆಗೆ ದಾಖಲಾದ ಒಂದೇ ದಿನಕ್ಕೆ ಕೊನೆಯುಸಿರೆಳೆದ ಮಹಿಳೆ: ಬಿಲ್ ಎಷ್ಟಾಗಿತ್ತು ಗೊತ್ತಾ..?

ಕೋವಿಡ್-19 ಸೋಂಕಿಗೆ ತುತ್ತಾದ 38 ವರ್ಷದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮಾರನೇ ದಿನವೇ ಮೃತಪಟ್ಟಿದ್ದಾರೆ. ಆಕೆಯ ಅಗಲಿಕೆಯ ನೋವಿನಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಬರೆಯ ರೂಪದಲ್ಲಿ ಮೂರು ಲಕ್ಷಗಳ ಆಸ್ಪತ್ರೆ ಬಿಲ್ ಬಂದಿದೆ. ಆರ್‌.ಟಿ. ನಗರದ ಮಹಿಳೆಗೆ ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಬೆನ್ನಿಗೇ, ಸೋಮವಾರದಂದು ಆಕೆಯನ್ನು ಅಸ್ಟೆರ್‌ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚೇತರಿಕೆ ಕಾಣದ ಆಕೆ ಮಂಗಳವಾದ ನಿಧನರಾಗಿದ್ದಾರೆ. ಇಷ್ಟರಲ್ಲಾಗಲೇ ಮೂರು ಲಕ್ಷ ರೂ.ಗಳ ಬಿಲ್‌ …

Read More »

ತಮಿಳುನಾಡು ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟ

ಬೆಂಗಳೂರು, ಫೆ.26- ಕಾವೇರಿ ನದಿ ಜೋಡಣೆ ಸಂಬಂಧ ಏಕಾಏಕಿ 115ಕಿಮೀ ಉದ್ದದ ಕಾಲುವೆ ತೋಡಲು ಹೊರಟಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಕನ್ನಡ ಒಕ್ಕೂಟ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ತಮಿಳುನಾಡಿನಲ್ಲಿ ಬಿಜೆಪಿ ಚುನಾವಣೆ ಗೆಲ್ಲಲು ಕೇಂದ್ರ ಸರ್ಕಾರ ರಾಜ್ಯದ ಕಾವೇರಿ ನದಿಯನ್ನು ಬಲಿ ಕೊಡುತ್ತಿದೆ ಎಂದು ಆರೋಪಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಈ ಕ್ರಮದಿಂದ ಹಿಂದೆ …

Read More »

ತೈಲ ಬೆಲೆ ಏರಿಕೆ ಖಂಡಿಸಿ ಇಂದು `ಭಾರತ್ ಬಂದ್’ : ಏನಿರುತ್ತೆ, ಏನಿರಲ್ಲ?

ನವದೆಹಲಿ: ಹೆಚ್ಚುತ್ತಿರುವ ಇಂಧನ ಬೆಲೆಗಳು, ಸರಕು ಮತ್ತು ಸೇವಾ ತೆರಿಗೆ, ಇ-ಬಿಲ್ ಇತ್ಯಾದಿಗಳನ್ನು ವಿರೋಧಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಶುಕ್ರವಾರ ಅಂದ್ರೆ ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಈ ನಡುವೆ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ ಕೂಡ (ಎಐಟಿಡಬ್ಲ್ಯೂಎ) ಭಾರತ್ ಕರೆಗೆ ಬೆಂಬಲ ನೀಡಿದ್ದು ಇಂದು ಚಕ್ಕಾ ಜಾಮ್ ನಡೆಸಲಿದ್ದಾರೆ. 8 ಕೋಟಿ ವರ್ತಕರನ್ನು ಪ್ರತಿನಿಧಿಸುವ 40 ಸಾವಿರ ವರ್ತಕರ ಸಂಘಟನೆಗಳು ಬಂದ್ ಬೆಂಬಲಿಸಿರುವ ಹಿನ್ನಲೆಯಲ್ಲಿ …

Read More »

ಕುತೂಹಲಕ್ಕೆ ಕಾರಣವಾಯ್ತು ಶಾಸಕ ಜಮೀರ್‌ ಮನೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಭೇಟಿ

ಆಪಾರ ಅಭಿಮಾನಿ ಬಳಗವನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಇತ್ತೀಚೆಗೆ ನವರಸ ನಾಯಕ ಜಗ್ಗೇಶ್‌ ಕೊಟ್ಟಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದರು. ಬಳಿಕ ಈ ವಿವಾದ ಈಗ ಅಂತ್ಯಗೊಂಡಿದೆ. ಪ್ರಸ್ತುತ ದರ್ಶನ್‌ ತಮ್ಮ ಮುಂಬರುವ ಚಿತ್ರ ‘ರಾಬರ್ಟ್’ ಪ್ರಮೋಟ್ ಮಾಡುವಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆ ಶಾಸಕ ಜಮೀರ್‌ ಅಹ್ಮದ್‌ ಮನೆಗೆ ನಟ ದರ್ಶನ್‌ ಭೇಟಿ ನೀಡಿದ್ದಾರೆ. ಯಾವ ಕಾರಣಕ್ಕೆ ಜಮೀರ್‌ ಅಹ್ಮದ್‌ ಮನೆಗೆ ಚಾಲೆಂಜಿಂಗ್‌ ಸ್ಟಾರ್‌ ಭೇಟಿ ನೀಡಿದ್ದರು …

Read More »

ಎಂ.ಎಸ್.ಧೋನಿ ಟೆಸ್ಟ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ನವದೆಹಲಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ, ವಿರಾಟ್ ಕೊಹ್ಲಿ ಎಂ.ಎಸ್.ಧೋನಿ ಅವರನ್ನು ಹಿಂದಿಕ್ಕಿ ತವರು ನೆಲದಲ್ಲಿ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿ ಭಾರತದ ನಾಯಕರಾದರು. ನಾಯಕನಾಗಿ 29 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಈಗ 22 ಜಯಗಳಿಸಿದ್ದಾರೆ.   ಸ್ವದೇಶದಲ್ಲಿ 30 ಟೆಸ್ಟ್ ಪಂದ್ಯಗಳಲ್ಲಿ 21 ಜಯಗಳಿಸಿ ಧೋನಿ ತಮ್ಮ ವೃತ್ತಿಜೀವನವನ್ನು ಮುಗಿಸಿದರು. ಅಹಮದಾಬಾದ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ 2 ನೇ ದಿನದಂದು ಭಾರತ 10 ವಿಕೆಟ್‌ಗಳಿಂದ …

Read More »

ರಾಜ್ಯಾದ್ಯಂತ ಲಾರಿ ಮುಷ್ಕರ; ಡಿಸೇಲ್​ ಸೆಸ್ ದ​ರ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಆಗ್ರಹ

ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ,  ಒಂದು ಕಿಲೋಮೀಟರ್ ಗೆ ಲಾರಿ ಓಡಿಸಲು ಮಾಲೀಕರಿಗೆ 36 ರೂ. ವೆಚ್ಚವಾಗುತ್ತಿದೆ. ರಾಜ್ಯದಿಂದ 40 ಸಾವಿರ ಲಾರಿಗಳು ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ಹೊರ ರಾಜ್ಯದಲ್ಲಿ ಡಿಸೇಲ್ ಕಡಿಮೆ ಇದೆ. ಕಡಿಮೆ ಇರುವ ರಾಜ್ಯಗಳಿಂದ ಮಾಲೀಕರು ಡಿಸೇಲ್ ಹಾಕಿಸಿಕೊಂಡು ಬರುತ್ತಿದ್ದಾರೆ. …

Read More »

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ.!

ಗೋಕಾಕ್: ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಫೆ.೨೭ ರಿಂದ ಮಾ.೨ ರ ವರಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.೨೭ ರಂದು ೧೦ ಗಂಟೆಗೆ ನಗರದ ಎನ್‌ಇಎಸ್ ಶಾಲಾ ಆವರಣದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು, ಸಂಜೆ ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಫೆ.೨೮ ರಂದು ಗೋಕಾಕ ತಾಲೂಕಿನ ಜಮನಾಳ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದ ಹತ್ತಿರ ಆಣೆಕಟ್ಟು ಸ್ಥಳ …

Read More »

ಮಠದ ಆಸ್ತಿ ಕಬಳಿಸಲು ಹುನ್ನಾರ: ವಿದ್ಯಾರಣ್ಯ ಭಾರತೀ ಸ್ವಾಮೀಜಿ ಆರೋಪ

ಚಿತ್ರದುರ್ಗ: ಶಿವಮೊಗ್ಗ ಜಿಲ್ಲೆಯ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಕ್ಕೆ ಸೇರಿದ ಆಸ್ತಿಯನ್ನು ಕಬಳಿಸಲು ಗುಂಪೊಂದು ಹುನ್ನಾರ ನಡೆಸಿದೆ ಎಂದು ಮಹಾಸಂಸ್ಥಾನದ ಪೀಠಾಧಿಪತಿ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಆರೋಪ ಮಾಡಿದರು. ‘ಈಚೆಗೆ ಮಠದೊಳಗೆ ಏಕಾಏಕಿ ನುಗ್ಗಿದ ಗುಂಪೊಂದು ಶಿಷ್ಯರ ಮೇಲೆ ಹಲ್ಲೆ ಮಾಡಿದೆ. ಈ ಕುರಿತು ಪ್ರಕರಣ ದಾಖಲಿಸಿದ್ದೇವೆ. ಅದೇ ಊರಿನವರೇ ಇದರಲ್ಲಿ ಭಾಗಿಯಾಗಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಮಹಾಸಂಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಬೆಂಗಳೂರು ಸೇರಿ ರಾಜ್ಯದ …

Read More »

ಕಾಡಿನಲ್ಲಿ ಕಳೆದುಹೋಗಿ 35 ಕೆಜಿ ಉಣ್ಣೆ ಬೆಳೆಸಿಕೊಂಡಿದ್ದ ಕುರಿ: ವಿಡಿಯೋ ಸಖತ್ ವೈರಲ್!

ಆಸ್ಟ್ರೇಲಿಯಾದ ಕಾಡೊಂದರಲ್ಲಿ ಸಿಕ್ಕಿರುವ ವಯಸ್ಸಾದ ಕುರಿಯೊಂದನ್ನು ರಕ್ಷಿಸಲಾಗಿದ್ದು, ಅದರ ಮೈಮೇಲೆ ಬೆಳೆದಿದ್ದ ಸುಮಾರು 35 ಕೆಜಿಯಷ್ಟು ಉಣ್ಣೆಯನ್ನು ತೆಗೆದು ಅದರ ದೇಹದ ಭಾರವನ್ನು ಇಳಿಸಲಾಗಿದೆ. ಈ ಕುರಿಗೆ ‘ಬರಾಕ್’ ಎಂದು ಹೆಸರು ಇಡಲಾಗಿದೆ. ಹೌದು, ಕುರಿಗಳು ಉಣ್ಣೆಗೆ ಪ್ರಸಿದ್ಧಿ. ಆದರೆ ಈ ಕುರಿ ಮೈಮೇಲೆ ಬೆಳೆದಿದ್ದ ಉಣ್ಣೆಯನ್ನು ನೋಡಿ ಸ್ವತಃ ಅದನ್ನು ರಕ್ಷಿಸಿದ ಜನರೇ ಬೆಚ್ಚಿಬಿದ್ದಿದ್ದಾರೆ. ತನ್ನ ಮೈಮೇಲೆಲ್ಲಾ ಉಣ್ಣೆ ಬೆಳೆಸಿಕೊಂಡಿರುವ ಈ ಕುರಿ ನೋಡಲು ಬೇರೆ ಪ್ರಾಣಿ ರೀತಿ …

Read More »

1.20 ಕೋಟಿ ರೂ. ಮೊತ್ತದ ಜೆಜೆಎಂ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಗುದ್ದಲಿ ಪೂಜೆ

ಗೋಕಾಕ : ಪೈಪಲೈನ್ ಮೂಲಕ 1242 ಮನೆಗಳಿಗೆ ಕುಡಿಯುವ ನೀರಿನ ಸೌಕರ್ಯ ತಲುಪಲಿದ್ದು, ಈ ಯೋಜನೆಗಾಗಿ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇತ್ತೀಚೆಗೆ ತಾಲೂಕಿನ ಕೌಜಲಗಿಯಲ್ಲಿ ಜರುಗಿದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಮಾತನಾಡಿದ ಅವರು, ಮನೆ ಮನೆಗೆ ಗಂಗೆ ಎಂಬ ವಿನೂತನ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಇದನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು. ಈಗಾಗಲೇ ಜಲಜೀವನ …

Read More »