Breaking News

ದಂಡ ಕಟ್ಟಿಸಿಕೊಳ್ಳುವ ಬದಲು ಯುವತಿಗೆ ಕಿಸ್ ಕೊಟ್ಟ ಪೊಲೀಸ್ ಅಧಿಕಾರಿ.!

Spread the love

ಪೆರು:ವಿಲಕ್ಷಣ ಘಟನೆಯೊಂದರಲ್ಲಿ,ಪೆರುವಿನಲ್ಲಿ ದಂಡ ವಿಧಿಸುವ ಬದಲು ಪೊಲೀಸ್ ಅಧಿಕಾರಿ ಮಹಿಳೆಯೊಬ್ಬಳನ್ನು ಚುಂಬಿಸಿದ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ. ಈಗ ವೈರಲ್ ಆಗಿರುವ ಸಿಸಿಟಿವಿ ವಿಡಿಯೋ ತುಣುಕಿನಲ್ಲಿ, ಲಿಮಾದಲ್ಲಿ ಕೋವಿಡ್ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಅಧಿಕಾರಿ ಮಹಿಳೆಗೆ ದಂಡ ವಿಧಿಸುವುದಕ್ಕೆ ನಿಲ್ಲಿಸಿರುವುದನ್ನು ಕಾಣಬಹುದು. ದಂಡ ಕೊಡದೆ ಚುಂಬನ ಕೊಡುವಂತೆ ಅಧಿಕಾರಿ ಆಕೆಯ ಮನವೊಲಿಸಿದ್ದು ವೀಡಿಯೋದಲ್ಲಿ ಕಾಣುತ್ತದೆ.

ದಂಡದ ಶುಲ್ಕ ವಿಧಿಸಲು ಪ್ರಾರಂಭಿಸಿದಾಗ ಮಹಿಳೆ ಅಧಿಕಾರಿಗೆ ಹತ್ತಿರವಾಗುವುದನ್ನು ಕಾಣಬಹುದು, ಆದರೆ ಕೆಲವು ಸೆಕೆಂಡುಗಳ ಹಿಂಜರಿಕೆಯ ನಂತರ, ಅಧಿಕಾರಿ ಅವಳನ್ನು ಚುಂಬಿಸಲು ಮುಂದಾಗುತ್ತಾನೆ.ಇವಿಷ್ಟೂ ಸಿಸಿಟಿವಿಯಲ್ಲಿ ದಾಖಲಾಗಿದ್ದು ತನಿಖೆಯ ನಂತರ ಪೋಲಿಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಮಿರಾಫ್ಲೋರ್ಸ್ ಬೋರ್ಡ್ವಾಕ್ ಎಂದು ಕರೆಯಲ್ಪಡುವ ಮಾಲೆಕಾನ್ ಡೆ ಲಾ ಮರೀನಾದಲ್ಲಿ ಪೊಲೀಸ್ ಅಧಿಕಾರಿ ಮಹಿಳೆಯನ್ನು ತಡೆದಿದ್ದರು. ಈ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸುವ ನಿರ್ಧಾರವನ್ನು ಮೇಯರ್ ಲೂಯಿಸ್ ಮೊಲಿನಾ ತೆಗೆದುಕೊಂಡಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ