Breaking News

ಕಾಡಾನೆ ಜಟಾಪಟಿ | ನಾವು ರಾಜೀನಾಮೆ ಬಗ್ಗೆ ಚರ್ಚೆ ಮಾಡಿಲ್ಲ – ಯೂಟರ್ನ್‌ ಹೊಡೆದ ಶಾಸಕರು

Spread the love

ಚಿಕ್ಕಮಗಳೂರು: ಹಾಸನದ  ಬೇಲೂರು ಭಾಗದಿಂದ ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ಭದ್ರಾ ಅಭಯಾರಣ್ಯ ಭಾಗಕ್ಕೆ ಕಾಡಾನೆಗಳನ್ನು  ಅಟ್ಟಿರುವುದಕ್ಕೆ ಅಸಮಾಧಾನಗೊಂಡಿದ್ದ ಚಿಕ್ಕಮಗಳೂರಿನ ಮೂವರು ಕಾಂಗ್ರೆಸ್‌  ಶಾಸಕರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಆನೆಗಳನ್ನು ಚಿಕ್ಕಮಗಳೂರು  ಭಾಗಕ್ಕೆ ಅಟ್ಟಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಇದೇ ವಿಚಾರವಾಗಿ ಚಿಕ್ಕಮಗಳೂರು ಕಾಂಗ್ರೆಸ್  ಶಾಸಕ ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ  ಹಾಗೂ ಶೃಂಗೇರಿ ಶಾಸಕ ರಾಜೇಗೌಡ ಅವರು ಸ್ಪೀಕರ್‌ ಜಿ.ಎಸ್ ಪಾಟೀಲ್ ಅವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ನಡೆದ ಚರ್ಚೆ ಬಳಿಕ ರಾಜೀನಾಮೆ ನಿರ್ಧಾರದಿಂದ ಶಾಸಕರು ಹಿಂದೆ ಸರಿದಿದ್ದಾರೆ.

ಇದಕ್ಕೂ ಮುನ್ನ ಸಿಎಂ ಡಿ.ಕೆ ಶಿವಕುಮಾರ್‌ ಅವರು ಮೂವರು ಶಾಸಕರ ಮನವೊಲಿಕೆ ಮಾಡಿದ್ದರು. ಇದಾದ ಬಳಿಕ ರಾಜೀನಾಮೆ ನಿರ್ಧಾರದಿಂದ ಶಾಸಕರು ಹಿಂದೆ ಸರಿದಿದ್ದರು. ಈಗ ಸ್ಪೀಕರ್ ಬಳಿ ಚರ್ಚಿಸಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಶಾಸಕರು ಘೋಷಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶಾಸಕ ಟಿಡಿ ರಾಜೇಗೌಡ ಅವರು, ನಾವು ರಾಜೀನಾಮೆ ಬಗ್ಗೆ ಸ್ಪೀಕರ್ ಜತೆ ಚರ್ಚೆ ಮಾಡಲಿಲ್ಲ. ಅಧಿಕಾರಿಗಳಿಗೆ ಸ್ಪೀಕರ್ ಸೂಚನೆ ಕೊಟ್ಡಿದ್ದಾರೆ. ನಾನು ರಾಜೀನಾಮೆ ಘೋಷಣೆ ಮಾಡಲಿಲ್ಲ ಎಂದಿದ್ದಾರೆ.

ಭದ್ರಾಗೆ 56 ಕಾಡೆನೆ ಸ್ಥಳಾಂತರ ಮಾಡುತ್ತೇವೆ ಎಂದಿದ್ದಾರೆ. ನಮಲ್ಲಿ 400 ಆನೆಗಳು ಇವೆ. ನಮ್ಮಲ್ಲೂ ಸಾಕಷ್ಟು ಸಾವು ಕೂಡ ಆಗಿದೆ. ಹೊರಗಿನಿಂದ ಆನೆ ತಂದು ಬಿಟ್ಟರೇ ಹೇಗೆ? ಬಲಾತ್ಕಾರವಾಗಿ ಮುತ್ತೋಡಿ ಫಾರೆಸ್ಟ್‌ಗೆ ಬಿಡೋದು ಬೇಡ ಎಂದಿದ್ದೇವೆ. ಸಭಾದ್ಯಕ್ಷರು ಅಧಿಕಾರಿಗಳನ್ನು ಕರೆದು ಮಾತಾಡಿದ್ದಾರೆ. ನ.30ಕ್ಕೆ ಈ ಬಗ್ಗೆ ಸಭೆ ನಡೆಯಲಿದೆ. ಸಿಎಂ ಇಲ್ಲ ಅದಕ್ಕೆ ಸಭಾಪತಿಗಳು ಕರೆದು ಮಾತಾಡಿದ್ದಾರೆ. ಅರಣ್ಯ ಸಚಿವರಿಗೂ ನಾವು ಮನವಿ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ನಯನಾ ಮೋಟಮ್ಮ ಅವರು ಮಾತನಾಡಿ, ಕಾಡಾನೆ ಸ್ಥಳಾಂತರ ಸ್ಥಗಿತ ಆಗಿದ್ದು, ಸಮಸ್ಯೆ ಬಗೆಹರಿದಿದೆ. ನಾವು ಒತ್ತಡ ಹೇರಲು ರಾಜೀನಾಮೆ ಘೋಷಣೆ ಮಾಡಲಿಲ್ಲ. ನಮ್ಮ ರಾಜೀನಾಮೆ ಮುಖ್ಯನಾ ಅಥವಾ ಸಮಸ್ಯೆಗೆ ಪರಿಹಾರ ಮುಖ್ಯನಾ? ಈಗ ಡ್ರೈವ್ ನಿಲ್ಲಿಸೋದಾಗಿ ಹೇಳಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಅಧಿಕೃತ ಘೋಷಣೆ ಮಾಡುತ್ತಾರೆ.

ನಮ್ಮ ಹಾಗೂ ಜನರ ಗಮನಕ್ಕೆ ಬಾರದೇ ಕಾರ್ಯಾಚರಣೆ ಮಾಡಿದ್ರು. ಅದು ಗೊತ್ತಾದ ಮೇಲೆ ರಾಜೀನಾಮೆ ಕೊಟ್ಟಿದ್ದು. ಅದು ಸ್ವೀಕಾರ ಆಗಿರಲಿಲ್ಲ. ಜನರಲ್ಲಿ ಭಯ ಆತಂಕ ಇದೆ. ಸ್ಪೀಕರ್ ಅಧಿಕಾರಿಗಳು ಹಾಗೂ ನಮ್ಮ ಜೊತೆ ಮಾತಾಡಿದ್ದಾರೆ. ಮುಂದೆ ನನ್ನ ನಿರ್ಧಾರ ತಿಳಿಸುತ್ತೇನೆ. ನಾವೇನು ಡ್ರಾಮಾ ಮಾಡಿಲ್ಲ. ಡ್ರಾಮಾ, ಹೈಡ್ರಾಮಾ ಅಂತ ನೀವು ಅಂದ್ಕೊಂಡ್ರೆ ಹಾಗೆ ಎಂದುಕೊಳ್ಳಿ. ರಾಜೀನಾಮೆ ಘೋಷಣೆ ಮಾಡಿದ್ದು ಹೌದು, ಅದನ್ನು ಇನ್ನೂ ವಾಪಸ್ ಪಡೆದಿಲ್ಲ. ರಾಜೀನಾಮೆ ಬಗ್ಗೆ ನಾನು ಮಾತಾಡಲ್ಲ. ಜನರ ಸಮಸ್ಯೆ ಬಗೆಹರೀಬೇಕು ಎಂದಿದ್ದಾರೆ.


Spread the love

About Laxminews 24x7

Check Also

ಹೋಟೆಲ್‌ನಲ್ಲಿ ಕೂಡಿ ಹಾಕಿ ಮಹಿಳೆಯ ಅತ್ಯಾಚಾರ – ಎನ್‌ಕೌಂಟರ್‌ ನಡೆಸಿ ಕಾಮುಕನ ಬಂಧನ

Spread the loveಲಕ್ನೋ: ಉತ್ತರ ಪ್ರದೇಶದ ಮಿರತ್‌ನ ಹೋಟೆಲ್ ಒಂದರಲ್ಲಿ ದಲಿತ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ