Home / ರಾಜಕೀಯ (page 28)

ರಾಜಕೀಯ

ಕುರುಡುಮಲೆ ದೇವಸ್ಥಾನದಿಂದ “ಪ್ರಜಾಧ್ವನಿ-2’ಕ್ಕೆ ನಾಳೆ ಚಾಲನೆ

ಬೆಂಗಳೂರು: ಕೋಲಾರ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಉಂಟಾದ ಗೊಂದಲದಿಂದ ಮುಂದೂಡಲ್ಪಟ್ಟಿದ್ದ ಕಾಂಗ್ರೆಸ್‌ನ ಲೋಕಸಭಾ ಚುನಾವಣ ಪ್ರಚಾರ ಕಾರ್ಯಕ್ರಮ ಶನಿವಾರ (ಎ. 6) ನಿಗದಿಯಾಗಿದ್ದು, ಅಂದು ಕುರುಡುಮಲೆ ದೇವಸ್ಥಾನದಿಂದ “ಪ್ರಜಾಧ್ವನಿ-2’ಕ್ಕೆ ಚಾಲನೆ ದೊರೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿರುವ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಚುನಾವಣ ಪ್ರಚಾರಕ್ಕೆ ಕೆಪಿಸಿಸಿ ಅಧಿಕೃತ ಚಾಲನೆ ನೀಡಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಈ ಮೊದಲು …

Read More »

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪೋಸ್ಟ್‌; ಆಯೋಗಕ್ಕೆ ಜೊಲ್ಲೆ ದೂರು

ನಿಪ್ಪಾಣಿ: ತನ್ನ ಹೆಸರಿನಲ್ಲಿ ಕೆಲ ಕಿಡಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ ಎಂದು ಚಿಕ್ಕೋಡಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಕೇಂದ್ರ ಚುನಾವಣ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಇ-ಮೇಲ್‌ ಮೂಲಕ ದೂರು ದಾಖಲಿಸಿದ್ದಾರೆ. ತನಗೆ ದಲಿತ ಹಾಗೂ ಮುಸ್ಲಿಂ ಮತಗಳು ಬೇಡ ಎಂದು ಹೇಳಿದಂತೆ ತಿರುಚಿದ ಫೋಟೋ ಹಾಕಲಾಗಿದ್ದು, ವೈರಲ್‌ ಆಗಿದೆ. ಚುನಾವಣೆ ಹೊಸ್ತಿಲಲ್ಲಿ ನನ್ನ ವರ್ಚಸ್ಸು ಹಾಳು ಮಾಡಲು ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿದ್ದಾರೆ ಎಂದು …

Read More »

ವಿಫ‌ಲ ಕೊಳವೆ ಬಾವಿ ಮುಚ್ಚಿದರೆ 500 ರೂ. ಬಹುಮಾನ: ಕೊಪ್ಪಳದ ರೈತನಿಂದ ಘೋಷಣೆ

ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿರುವ ನಿರುಪಯುಕ್ತ ತೆರೆದ ಕೊಳವೆ ಬಾವಿ ಮುಚ್ಚುವವರಿಗೆ 500 ರೂ. ಬಹುಮಾನ ನೀಡುವುದಾಗಿ ನಗರದ ರೈತ ಗ್ಯಾರೇಜ್‌ ಶಿವಣ್ಣ ಎಂಬವರು ಘೋಷಿಸುವ ಮೂಲಕ ಗಮನ ಸೆಳೆದಿದ್ದಾರೆ. ಕೊರೆಯಿಸಿದ ವಿಫ‌ಲ ಕೊಳವೆ ಬಾವಿಯನ್ನು ಮುಚ್ಚದಿದ್ದರೆ ಆಗುವ ಅನಾಹುತ ಗೊತ್ತಿದ್ದರೂ ಜನ ಅವುಗಳನ್ನು ಮುಚ್ಚಲು ಮುಂದಾಗುತ್ತಿಲ್ಲ. ಈ ಕುರಿತು ಬೀದಿ ನಾಟಕಗಳನ್ನು ಮಾಡಿದ್ದೇನೆ. ಆದರೂ ಜನ ಎಚ್ಚೆತ್ತುಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

Read More »

ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಎಚ್.ವಿಶ್ವನಾಥ್‌ರಿಂದ ಅಚ್ಚರಿಯ ಸಲಹೆ

ಮೈಸೂರು: ಕೆಲವು ದಿನಗಳ ಹಿಂದೆಯ ತನಕವೂ ಕಾಂಗ್ರೆಸ್ ನೊಂದಿಗೆ ಕಾಣಿಸಿಕೊಂಡು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಎಂಎಲ್ ಸಿ ಎಚ್ ವಿಶ್ವನಾಥ್ ಅವರು ಇದೀಗ ರಾಜಕೀಯ ವರಸೆ ಬದಲಿಸಿರುವುದು ಗೋಚರಿಸಿದೆ. ಇದೀಗ ಮಾತನಾಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯ ಪಕ್ಕಕ್ಕಿಟ್ಟು ಮೈಸೂರಿನ ಯದುವಂಶದ ಕುಡಿಯನ್ನು ಪಕ್ಷಾತೀತವಾಗಿ, ಅವಿರೋಧವಾಗಿ ಆಯ್ಕೆ ಮಾಡಿ ಎಂಬ ಸಲಹೆ ನೀಡಿದ್ದಾರೆ. ವಿಶ್ವನಾಥ್ ಅವರ ಈ ನಡೆ ಇದೀಗ …

Read More »

ಕುಮಾರಸ್ವಾಮಿ ಆಸ್ತಿ ಮೌಲ್ಯ 219 ಕೋಟಿ ರೂ.; ಮಾಜಿ ಸಿಎಂ ಬಳಿ ಸ್ವಂತ ಕಾರು ಇಲ್ಲ!

ಮಂಡ್ಯ: ಮಂಡ್ಯ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ಪತ್ರದಲ್ಲಿ ಒಟ್ಟು 219 ಕೋಟಿ ರೂ.ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಚರಾಸ್ತಿ, ಸ್ಥಿರಾಸ್ತಿ ಎರಡರಲ್ಲೂ ಕುಮಾರಸ್ವಾಮಿಗಿಂತ ಪತ್ನಿ ಅನಿತಾ ಕುಮಾರಸ್ವಾಮಿ ಹೆಚ್ಚು ಶ್ರೀಮಂತರಾಗಿದ್ದಾರೆ. ಕುಮಾರಸ್ವಾಮಿ ಬಳಿ 10.41 ಕೋಟಿ ರೂ. ಹಾಗೂ ಅನಿತಾ ಅವರ ಬಳಿ 90.32 ಕೋಟಿ ರೂ. ಚರಾಸ್ತಿ ಇದೆ. ಕುಮಾರಸ್ವಾಮಿ ಅವರ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗಿ 1.20 ಕೋಟಿ ರೂ. …

Read More »

ರಾಜ್ಯದಲ್ಲಿ ಮೊದಲ ಹಂತದ ನಾಮಪತ್ರ ಸಲ್ಲಿಕೆ ಅಂತ್ಯ : ಪ್ರಚಾರ ಅಬ್ಬರ ಶುರು

ಬೆಂಗಳೂರು,- ಪ್ರಸಕ್ತ ಲೋಕಸಭಾ ಸಾರ್ವತ್ರಿಕ ಚುನಾವಣೆಯ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಮುಕ್ತಾಯವಾಗಿದ್ದು, ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಪ್ರಾರಂಭವಾಗಿದೆ.ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ಇಂದು ಬಹುತೇಕ ಎಲ್ಲಾ ಅಭ್ಯರ್ಥಿಗಳು ತನ್ನ ಉಮೇದುವಾರಿಕೆಯನ್ನು ಸಲ್ಲಿಸಿದರು.

Read More »

ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ 3 ಸಾವಿರ,ಗೃಹಜ್ಯೋತಿ 300 ಯುನಿಟ್‌ಗೆ ಹೆಚ್ಚಳ?

ಲಿಂಗಸುಗೂರು:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ ಯೋಜನೆ 3 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜ್‌ ಭರವಸೆ ನೀಡಿದರು. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಜಾರಿಗೊಂಡು ಮಹಿಳೆಯರು, ಬಡವರು, ನಿರುದ್ಯೋಗಿಗಳಿಗೆ ಆಸರೆಯಾಗಿವೆ. ಕಳೆದ ಎಂಟು ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳಿಗೆ 36 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಈ ವರ್ಷ 56 ಸಾವಿರ ಕೋಟಿ ರೂ. …

Read More »

10ರಂದು ಮರಾಠ ಸಮಾಜದ ಶಕ್ತಿ ಪ್ರದರ್ಶನ: ಪದ್ಮಾಕರ ಪಾಟೀಲ

ಬೀದರ್‌: ‘ಏ.10ರಂದು ಭಾಲ್ಕಿ ಪಟ್ಟಣದಲ್ಲಿ ಮರಾಠ ಸಮಾಜದ ಶಕ್ತಿ ಪ್ರದರ್ಶನ ಹಾಗೂ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಸಮಾಜದ ಮುಖಂಡರೂ ಆದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪದ್ಮಾಕರ ಪಾಟೀಲ ತಿಳಿಸಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಲ ಮರಾಠ ಸಮಾಜದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಅಂದಿನ ಸಮಾವೇಶದಲ್ಲಿ ಸುಮಾರು 1 ಲಕ್ಷ ಮರಾಠ ಸಮುದಾಯದವರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು. ಸಮಾಜವು ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, 2ಎ ಮೀಸಲಾತಿ ಕಲ್ಪಿಸುವುದು, …

Read More »

ಬೆಂಗಳೂರಲ್ಲಿ ‘KSRTC’ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ವೃದ್ದೆ ಸಾವು..!

ಬೆಂಗಳೂರು : ಬೆಂಗಳೂರಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ವೃದ್ದೆ ಸಾವನ್ನಪ್ಪಿದ ಘಟನೆ ಇಂದು ಬೆಂಗಳೂರಲ್ಲಿ ನಡೆದಿದೆ. ಮೃತರನ್ನು ಗಂಗಾರೆಡ್ಡಿ(85) ಎಂದು ಗುರುತಿಸಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿ ಹೊಡೆದು ವೃದ್ದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಏಪ್ರಿಲ್ 6 ರಿಂದ ನಾಲ್ಕು ದಿನ ಮಳೆ!

ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿರುವ ಕರ್ನಾಟಕದ (Karnataka) ಜನತೆಗೆ ಸಿಹಿ ಸುದ್ದಿ. ಇನ್ನು ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆಯಾಗುವ (Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.ಇದೇ ಏಪ್ರಿಲ್ 6 ರಿಂದ ನಾಲ್ಕು ದಿನ ಸಾಧಾರಣ ಮಳೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 6 ರಂದು ದಕ್ಷಿಣ‌ಕನ್ನಡ , ಬೀದರ್ ,ಕಲಬುರಗಿ, ಕೊಡಗು, ಮಂಡ್ಯ, ಮತ್ತು ಮೈಸೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಏಪ್ರಿಲ್ 7ರಂದು‌, ಬೆಂಗಳೂರು, …

Read More »