Home / ರಾಜಕೀಯ (page 60)

ರಾಜಕೀಯ

ಪಕ್ಷ ಶುದ್ದವಾಗಬೇಕು, ಕುಟುಂಬ ರಾಜಕಾರಣ ದೂರ ಆಗಬೇಕು: ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯದ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಭೇಟಿಗೆ ಬಂದಿದ್ದರು. ಬಂಡಾಯ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಸಿದರು. ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ಕಾಂತೇಶ್ ಗೆ ಎಂಎಲ್ ಸಿ ಮಾಡುವುದಾಗಿ ತಿಳಿಸಿದರು. ಇದು ಎಂಎಲ್‌ಎ, ಎಂಪಿ ಮಾಡುವ ವಿಚಾರವಲ್ಲ ಪಕ್ಷ ಶುದ್ದಿಕರಣವಾಗಬೇಕು. ರಾಜ್ಯದ ಅನೇಕ ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ. ಅದು ಸರಿಯಾಗಬೇಕು. ಹಿಂದುತ್ವವಾದಿಗಳಿಗೆ ತುಳಿಯುತ್ತಿದ್ದಾರೆ. …

Read More »

ಕಲಬುರಗಿಯಲ್ಲೂ ದರ್ಶನ ಕೊಟ್ಟ ಮಳೆ

ಸುಡುವ ಬಿಸಿಲಿನ ನಡುವೆಯೂ ಕರ್ನಾಟಕದ ಹಲವು ಕಡೆಗಳಲ್ಲಿ ಲಘು ಮಳೆಯಾಗುತ್ತಿದೆ. ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳ ಹಲವು ಕಡೆ ಮಳೆಯಾದ ಬಳಿಕ ಶನಿವಾರ ಸಂಜೆ ಕಲಬುರಗಿಯಲ್ಲಿ ಲಘು ಮಳೆಯಾಗಿದೆ.ಶನಿವಾರ ನಗರದಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇತ್ತು. ಸಂಜೆ ಕಲಬುರಗಿ ನಗರದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಕೆಲವು ಕಡೆ 10 ನಿಮಿಷಗಳ ಸಾಧಾರಣ ಮಳೆಯಾಗಿದೆ. ಸುಡುವ ಬಿಸಿಲಿನ ನಡುವೆ ಹೀಗೆ 10- 15 ನಿಮಿಷ ಮಳೆಯಾದರೆ …

Read More »

ಕ್ಲಾಸ್​ರೂಮ್​​​​ನಲ್ಲಿ ‘ಐಟಂ ಸಾಂಗ್​​​​’ಗೆ ಡ್ಯಾನ್ಸ್ ಮಾಡಿದ ಶಿಕ್ಷಕಿ

ನವದೆಹಲಿ: ಶಿಕ್ಷಕಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಆಗಿದಿಷ್ಟು..2005 ರಲ್ಲಿ ಬಿಡುಗಡೆಯಾದ ಅಮಿತಾಬ್ ಬಚ್ಚನ್ ನಟನೆಯ ‘ಬಂಟಿ ಔರ್ ಬಬ್ಲಿ’ ಸಿನಿಮಾದ ‘ಕಜ್ರಾ ರೇ’ ಹಾಡಿಗೆ ಶಿಕ್ಷಕಿ ತರಗತಿಯೊಳಗೆ ನೃತ್ಯ ಮಾಡಿದರು. ಆ ನಂತರ ಶಿಕ್ಷಕಿಯ ಡ್ಯಾನ್ಸ್ ಸೋಶಿಯಲ್ ಮೀಡಿಯಾ ಬಳಕೆದಾರರ ಹೃದಯಕ್ಕೆ ನೇರವಾಗಿ ಲಗ್ಗೆಯಿಟ್ಟಿತು.   ಅವರ ಇಬ್ಬರು ವಿದ್ಯಾರ್ಥಿಗಳು ಸಹ ಶಿಕ್ಷಕಿಯೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಈ ವೈರಲ್ ವಿಡಿಯೋ ನೋಡಿ ಜನ ಸಾಮಾಜಿಕ ಜಾಲತಾಣಗಳಲ್ಲಿ …

Read More »

ಮನೆ ಕಟ್ಟೋರಿಗೆ ಗುಡ್ ನ್ಯೂಸ್ : ಸಿಮೆಂಟ್, ಕಬ್ಬಿಣದ ಬೆಲೆಯಲ್ಲಿ ಇಳಿಕೆ

ನವದೆಹಲಿ : ಮನೆ ಕಟ್ಟೋರಿಗೆ ಸಿಹಿಸುದ್ದಿ ಸಿಕ್ಕಿದ್ದು, ಪ್ರಸ್ತುತ, ದೇಶದಲ್ಲಿ ಸಿಮೆಂಟ್ ಮತ್ತು ಕಬ್ಬಿಣದ ಬಾರ್ ಗಳ ಬೆಲೆಗಳು ಕುಸಿಯುತ್ತಿವೆ. ಹೌದು, ದೇಶದಲ್ಲಿ ಸಿಮೆಂಟ್ ನ ಮಾರುಕಟ್ಟೆ ಬೆಲೆಯನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ಐಸಿಆರ್ ಎ ವರದಿ ಮಾಡಿದ್ದು, ಮನೆ ನಿರ್ಮಾಣದಲ್ಲಿ ಬಳಸುವ ಸಿಮೆಂಟ್‌ ಹಾಗೂ ಕಬ್ಬಿಣದ ಎರಡೂ ವಸ್ತುಗಳ ಬೆಲೆಗಳು ಕುಸಿದಿವೆ. ಇತ್ತೀಚಿನ ತಿಂಗಳುಗಳಲ್ಲಿ ಅವುಗಳ ಬೆಲೆಗಳಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ನೀವು ಮನೆ ಕಟ್ಟಲು ಆಸಕ್ತಿ ಹೊಂದಿದ್ದರೆ, …

Read More »

ಶಿಕ್ಷಕರು ಅರ್ಧಗಂಟೆ ಮುಂಚೆ ಶಾಲೆಗೆ ಬರಬೇಕು, ಸ್ಕೂಲ್‌ ಟೈಮಲ್ಲಿ ಹೊರಗೆ ಹೋಗುವಂತಿಲ್ಲ: ಮಹತ್ವದ ಆದೇಶ

ಬೆಂಗಳೂರು: ಲೋಕಸಭೆ ಚುನಾವಣೆಗೂ ಮುನ್ನ ಶಾಲಾ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು ಸರ್ಕಾರಿ ಶಾಲೆಗಳಲ್ಲಿ ಪಠ್ಯ ಬೋಧನೆ ಮತ್ತು ಮಕ್ಕಳ ಕಲಿಕಾ ಗುಣಮಟ್ಟ ಬಲವರ್ಧನೆಗೊಳಿಸುವ ಸಲುವಾಗಿ ಶಿಕ್ಷಕರು ನಿಗದಿತ ಅವಧಿಗಿಂತ ಅರ್ಧಗಂಟೆ ಮೊದಲೇ ಶಾಲೆಗೆ ಹಾಜರಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಮಕ್ಕಳ ಶೈಕ್ಷಣಿಕ, ಬೌದ್ಧಿಕ ಹಾಗೂ ಸಾಮಾಜಿಕ ಬೆಳೆವಣಿಗೆ ದೃಷ್ಟಿಯಿಂದ ಶಿಕ್ಷಕರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕು. ಪ್ರತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು, …

Read More »

ಬೆಳಗಾವಿ : ‘ಹೆಲ್ಮೆಟ್’ ಧರಿಸದಿದ್ದಕ್ಕೆ ಅಪಘಾತದಲ್ಲಿ ‘ASI’ ಸಾವು : ‘PSI’ ಅಮಾನತುಗೊಳಿಸಿ SP ಆದೇಶ

ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಕೃಷ್ಣಾ ಬಡಾವಣೆ ಬಳಿ ತಡರಾತ್ರಿ ನಡೆದಿದೆ. ಹೆಲ್ಮೆಟ್ ಧರಿಸದೇ ಅತಿವೇಗವಾಗಿ ಬೈಕ್ ಚಾಲಾಯಿಸಿ ಹಂಪ್ ಜಿಗಿಸಿದಕ್ಕೆ ಅಪಘಾತ ಸಂಭವಿಸಿದೆ. ಇದೀಗ ಹೆಲ್ಮೆಟ್ ಧರಿಸಿ ಕಡ್ಡಾಯ ಆದೇಶವನ್ನು ನಿರ್ಲಕ್ಷ ವಹಿಸಿದಕ್ಕೆ ದೊಡವಾಡ ಠಾಣೆ ಪಿಎಸ್‌ಐ ನಂದೀಶ್‌ರನ್ನು ಅಮಾನತ್ತು ಮಾಡಿ ಅದೇಶಿಸಲಾಗಿದೆ.

Read More »

ಬಂಡಾಯ ಒಂದೆರಡು ದಿನಗಳಲ್ಲಿ ಸರಿಹೋಗಲಿದೆ- ಯಡಿಯೂರಪ್ಪ

ಹುಬ್ಬಳ್ಳಿ: ‘ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್‌ ಸಿಗದೇ ಬಂಡಾಯವೆದ್ದಿರುವವರ ಜೊತೆ ಮಾತುಕತೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈಶ್ವರಪ್ಪ ಸೇರಿದಂತೆ ಬಂಡಾಯ ಎದ್ದಿರುವವರ ಜೊತೆಗೆ ಮಾತುಕತೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.   ‘ಲೋಕಸಭೆ ಚುನಾವಣೆಗೆ ದಿನಾಂಕವೂ ಘೋಷಣೆಯಾಗಿದೆ. ದೇಶದಾದ್ಯಂತ ಬಿಜೆಪಿ ಪರ ಅಲೆ ಇದೆ. …

Read More »

543 ಕ್ಷೇತ್ರಗಳಲ್ಲೂ ಇಂಡಿಯಾ ಮಿತ್ರಕೂಟ ಸ್ಪರ್ಧೆ : ಖರ್ಗೆ

ಬೆಂಗಳೂರು,ಮಾ.16- ಇಂಡಿಯಾ ರಾಜಕೀಯ ಮೈತ್ರಿಕೂಟದ ನಡುವೆ ಯಾವುದೇ ಗೊಂದಲಗಳಿಲ್ಲ. ಕ್ಷೇತ್ರಗಳ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಬಹುತೇಕ ಮಾ.17 ಅಥವಾ 18 ರಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟ ಲೋಕಸಭೆಯ 543 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದೆ. ಕೆಲವು ಕಡೆ ನಮಗೆ ಬೇಕಾದ ಕ್ಷೇತ್ರವನ್ನು ಅವರು ಕೇಳುತ್ತಾರೆ. ಅವರಿಗೆ ಬೇಕಾದ ಕ್ಷೇತ್ರಗಳನ್ನು ನಾವು ಕೇಳುತ್ತಿದ್ದೇವೆ. ಹೀಗಾಗಿ …

Read More »

ದೇವಸ್ಥಾನ, ಮಠ, ಧಾರ್ಮಿಕ ಸಂಸ್ಥೆಗಳಲ್ಲಿ ರಾಜಕೀಯ ಚಟುವಟಿಕೆ ನಿರ್ಬಂಧ

ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಅಂಗವಾಗಿ ಶಾಂತಿಯುತ ಹಾಗೂ ಮುಕ್ತ ರೀತಿಯಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನ, ಮಠ, ಧಾರ್ಮಿಕ ಸಂಸ್ಥೆಗಳು ಹಾಗೂ ಧಾರ್ಮಿಕ ಸ್ಥಳಗಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಹೆಚ್.ಗಂಗಾಧರ್ ಅವರು ತಿಳಿಸಿದ್ದಾರೆ.   ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ …

Read More »

ಕಾಡಿನ ಕೂಸು’ಗಳಿಗೂ ತಪ್ಪದ ನೀರಿನ ಬವಣೆ

ಖಾನಾಪುರ: ಈಚಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದೆ. ಕಾರಣ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಪ್ರಮುಖ ಜಲಮೂಲಗಳಾದ ಮಲಪ್ರಭಾ, ಪಾಂಡರಿ ನದಿಗಳು, ಕೆರೆಗಳು ಮತ್ತು ಹಳ್ಳಕೊಳ್ಳಗಳು ಸಂಪೂರ್ಣ ಬತ್ತಿವೆ. ಇದು ಸದ್ಯದ ಬರದ ಪರಿಸ್ಥಿತಿಗೆ ಜ್ವಲಂತ ಸಾಕ್ಷಿ. ತಾಲ್ಲೂಕಿನ ಪ್ರಮುಖ ಜಲಮೂಲಗಳು ಬತ್ತಿರುವ ಕಾರಣ ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನು ಅವಲಂಬಿಸಬೇಕಾಗಿದೆ. ದಟ್ಟ ಅರಣ್ಯವನ್ನು ಸುತ್ತುವರಿದ ತಾಲ್ಲೂಕಿನ ಪಶ್ಚಿಮ ಭಾಗದ ಕರ್ನಾಟಕ- ಗೋವಾ ಗಡಿಯಲ್ಲಿರುವ …

Read More »