ಬಳ್ಳಾರಿ: ಕ್ವಾರಂಟೈನ್ ಮಾಡಲು ಬಂದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಿಡಿಗೇಡಿಗಳು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆಂಧ್ರ ಗಡಿ ಭಾಗದಿಂದ ವಲಸೆ ಬಂದ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಆಶಾ ಕಾರ್ಯಕರ್ತೆಯರು ಮುಂದಾದಗ ಹಲ್ಲೆಗೆ ಯತ್ನಿಸಿದ್ದಾರೆ. ಉದ್ದೇಶ ಪೂರಕವಾಗಿ ಕ್ವಾರಂಟೈನ್ ಮಾಡುತಿದ್ದಾರೆ ಎಂದು ಆರೋಪಿಸಿ ಕೊರೊನಾ ವಾರಿಯರಸ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಂಧ್ರ …
Read More »ನೋಡ ನೋಡುತ್ತಿದ್ದಂತೆಯೇ ನಡು ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ
ಮಂಗಳೂರು: ನೋಡ ನೋಡುತ್ತಿದ್ದಂತೆಯೇ ನಡು ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾದ ಘಟನೆ ಮಂಗಳೂರಿನ ಜೆಪ್ಪು ಮಾರುಕಟ್ಟೆ ಬಳಿ ನಡೆದಿದೆ. ಮಾರ್ಕೆಟ್ ನ ಗ್ಯಾಸ್ ಸಿಲಿಂಡರ್ ಏಜೆನ್ಸಿ ಅಂಗಡಿಯಲ್ಲಿ ಲೀಕ್ ಆಗಿದ್ದ ಗ್ಯಾಸ್ ಸಿಲಿಂಡರನ್ನು ಸ್ಥಳೀಯರು ಅಂಗಡಿಯಿಂದ ಹೊರಗೆ ತಂದಿದ್ದರು. ಅಷ್ಟರಲ್ಲೇ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸಿಲಿಂಡರ್ 50 ಮೀಟರ್ ಎತ್ತರಕ್ಕೆ ಚಿಮ್ಮಿದೆ. ಅದೃಷ್ಟವಶಾತ್ ಯಾರಿಗೂ ಗಾಯ ಸಂಭವಿಸಿಲ್ಲ. ಸಿಲಿಂಡರ್ ನಲ್ಲಿ ಬೆಂಕಿಯಿದ್ದರೂ …
Read More »ಲಕ್ಷ ದ್ವೀಪದಿಂದ ಹಡಗಿನಲ್ಲಿ ಬಂದ ಮಂಗ್ಳೂರು ಕಾರ್ಮಿಕರು………..
ಮಂಗಳೂರು: ಕಡಲಾಚೆಯಲ್ಲಿ ಅತಂತ್ರರಾಗಿದ್ದ ಕಾರ್ಮಿಕರನ್ನ ರಕ್ಷಿಸುವಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಲಕ್ಷ ದ್ವೀಪದಲ್ಲಿ ಸಿಲುಕಿದ್ದ ಮೂರು ಮಹಿಳೆಯರು ಸೇರಿದಂತೆ 19 ಮಂದಿಯನ್ನ ಗುರುವಾರ ಅಮಿನ್ ದೀವಿ ಹೆಸರಿನ ನೌಕೆ ಮುಖಾಂತರ ಮಂಗಳೂರಿಗೆ ಕರೆ ತರಲಾಯಿತು. ಬಳಿಕ ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು. ನೌಕರರು ಬಂದಿಳಿಯುತ್ತಿದ್ದಂತೆ ಜನಪ್ರತಿನಿಧಿಗಳು ಕಾರ್ಮಿಕರ ರಕ್ಷಣೆಗೆ ಮುಗಿಬಿದ್ದಿದ್ದರು. ಸಾಮಾಜಿಕ ಅಂತರ ಮರೆತ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಕಾಂಗ್ರೆಸ್ ಎಂ.ಎಲ್.ಸಿ ಐವಾನ್ …
Read More »ಶೃಂಗೇರಿ ತಾಲೂಕಿನ ಆರೋಗ್ಯ ಅಧಿಕಾರಿಗಳು ಮಾಡಿರೋ ಎಡವಟ್ಟಿಗೆ ಇಡೀ ಶೃಂಗೇರಿ ತಾಲೂಕಿನಾದ್ಯಂತ ಆತಂಕ
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಆರೋಗ್ಯ ಅಧಿಕಾರಿಗಳು ಮಾಡಿರೋ ಎಡವಟ್ಟಿಗೆ ಇಡೀ ಶೃಂಗೇರಿ ತಾಲೂಕಿನಾದ್ಯಂತ ಆತಂಕ ಹೆಚ್ಚಾಗಿದೆ. ಮೇ 17ರಂದು ದೆಹಲಿಯಿಂದ ಬಂದು ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಯ ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಅಧಿಕಾರಿಗಳು ಆತನನ್ನ ಮನೆಗೆ ಕಳಿಸಿ ಮಹಾ ಎಡವಟ್ಟು ಮಾಡಿದ್ದಾರೆ. ಇದರಿಂದ ಇಡೀ ಶೃಂಗೇರಿ ತಾಲೂಕಿನಾದ್ಯಂತ ಆತಂಕ ಹೆಚ್ಚಾಗಿದೆ. ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಗೆ ಕೊರೊನಾ ನೆಗೆಟಿವ್ ಎಂದು ಅಧಿಕಾರಿಗಳು ಆತನನ್ನ ಮನೆಗೆ ಕಳುಹಿಸಿದ್ದರು. ಆದರೆ ಗುರುವಾರದ ಹೆಲ್ತ್ ಬುಲೆಟಿನ್‍ನಲ್ಲಿ …
Read More »ಲಾಕ್‍ಡೌನ್ 4.0 ಮುಗಿಯಲು ಇನ್ನೂ ಮೂರು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಜೂನ್ 1 ರಿಂದ ಹೊಸ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆ?………
ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮಾಡಲಾಗಿದ್ದ ಲಾಕ್‍ಡೌನ್ 4.0 ಮುಗಿಯಲು ಇನ್ನೂ ಮೂರು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಜೂನ್ 1 ರಿಂದ ಹೊಸ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಎಲ್ಲ ರಾಜ್ಯಗಳ ಸಿಎಂಗಳ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸುತ್ತಿದ್ದು, ಲಾಕ್‍ಡೌನ್ ಸ್ವರೂಪದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಲಾಕ್‍ಡೌನ್ ರಿಲೀಫ್ ಬಗ್ಗೆ ರಾಜ್ಯಗಳ ಅಭಿಪ್ರಾಯ ಪಡೆದಿದ್ದಾರೆ. ಹೀಗಾಗಿ ಜನರಿಗೆ ಜೂನ್ …
Read More »ಕೊರೋನಾ ಯುದ್ಶದಲ್ಲಿ ಗೆದ್ದು ಗುಣಮುಖರಾಗಿ ಮನೆಗಳಿಗೆ ತೆರಳಿದ ಮುಂಬೈ ಕನ್ನಡಿಗರು ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಸಮರ್ಪಿಸಿ ತಮ್ಮ ಮನೆಗಳಿಗೆ ತೆರಳಿದರು.
ಮಂಡ್ಯ ಕೃಷ್ಣರಾಜಪೇಟೆಯ ಗವಿಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದು ಗುಣಮುಖರಾಗಿರುವ ಮುಂಬೈ ಕನ್ನಡಿಗರಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಬಿಡುಗಡೆ ಪತ್ರವನ್ನು ನೀಡಿ ಅಗತ್ಯ ಆರೋಗ್ಯ ಮುನ್ಸೂಚನೆಯನ್ನು ನೀಡಿ ಶುಭ ಹಾರೈಸಿ ಬೀಳ್ಕೊಟ್ಟರು. ಕಳೆದ 14ದಿನಗಳಿಂದಲೂ ಹೋಂ ಕ್ವಾರಂಟೈನ್ ನಲ್ಲಿದ್ದು ಕೊರೋನಾ ಟೆಸ್ಟಿಂಗ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶದಲ್ಲಿ ಗೆದ್ದು ಬಂದಿರುವ ಮುಂಬೈ ಕನ್ನಡಿಗರಿಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಶುಭ ಹಾರೈಸಿ ಬಿಡುಗಡೆ ಪತ್ರಗಳನ್ನು ನೀಡಿ ಬೀಳ್ಕೊಟ್ಟರು. ಕೊರೋನಾ ಮಹಾಮಾರಿಯನ್ನು …
Read More »ದಿ. 29.05.2020 ರ ನಂತರ ಯಾವುದೇ ದಿನದಂದು ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ (ಅಸಹಕಾರ ಚಳುವಳಿ ಹೋರಾಟ) ಮುಷ್ಕರಕ್ಕಿಳಿಯುತ್ತಿದ್ದೆವೆಂದು ಸಂಘದಿಂದ ಸರ್ಕಾರಕ್ಕೆ ಅಂತಿಮ ಗಡುವು
ಬೆಂಗಳೂರು :ಸರ್ಕಾರದ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ನಮ್ಮ ಬೇಡಿಕೆಗಳನ್ನು ನಿರ್ದಿಷ್ಟಾವಧಿಯಲ್ಲಿ (ಕಾಲಮಿತಿಯಲ್ಲಿ) ಈಡೇರಿಸಲು ಕ್ರಮವಹಿಸುವ ಬಗ್ಗೆ ಸನ್ಮಾನ ಸಚಿವರಿಗೆ ಹಾಗೂ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕು. ಕ. ಸೇವೆಗಳು ಹಾಗೂ ವೈ. ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಇವರಿಗೆ ಅಧಿಕೃತವಾಗಿ ಪತ್ರದ ಮುಖೇನ ಈಗಾಗಲೇ ತಿಳಿಸಲಾಗಿದೆ. ಅದಲ್ಲದೆ ಸಂಘದ ವತಿಯಿಂದ ಗೌರವಾಧ್ಯಕ್ಷರಾದ ಮಾನ್ಯ ಶ್ರೀ ಆಯನೂರು ಮಂಜುನಾಥ್ ರವರು ಸರ್ಕಾರದ ಅಪರ …
Read More »ಚುನಾವಣೆ ಗದ್ದಲದಲ್ಲಿ ಸಾಮಾಜಿಕ ಅಂತರವನ್ನೇ ಮರೆತ ಜನಪ್ರತಿನಿಧಿಗಳು, ಅಧಿಕಾರಿಗಳು
ಗದಗ: ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆಯ್ಕೆವೇಳೆ ಶಾಸಕರು ಹಾಗೂ ತಹಶಿಲ್ದಾರರಿಂದ ಸರ್ಕಾರದ ನಿಯಮ ಉಲ್ಲಂಘನೆಯಾಗಿದ್ದು, ಸಾಮಾಜಿಕ ಅಂತರ ಮರೆತು ಬೇಕಾಬಿಟ್ಟಿಯಾಗಿ ವರ್ತಿಸಿದ್ದಾರೆ. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಘಟನೆ ನಡೆದಿದೆ. ಗುರುವಾರ ಲಕ್ಷ್ಮೇಶ್ವರ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು. ಈ ವೇಳೆ ಸಾಮಾಜಿಕ ಅಂತರ, ಕೆಲವರು ಮುಖಕ್ಕೆ ಮಾಸ್ಕ್ ಧರಿಸದೆ ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ, ತಹಶೀಲ್ದಾರ್ ಬ್ರಮರಾಂಭ ಗುಬ್ಬಿಶೆಟ್ಟಿ ಹಾಗೂ …
Read More »ಕೊರೊನಾ ವಿರುದ್ಧ ಹೋರಾಟಲು ದೇಹಕ್ಕೆ ವಿಟಮಿನ್ ಡಿ ಅತ್ಯಗತ್ಯ
ಬೆಂಗಳೂರು: ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಹಲವು ತಜ್ಞರು ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇತ್ತ ಕೊರೊನಾ ದಿನದಿಂದ ದಿನಕ್ಕೆ ತನ್ನ ಕಬಂಧಬಾಹುಗಳನ್ನು ಚಾಚಿಕೊಳ್ಳುತ್ತಿರುವುದು ಬಹುದೊಡ್ಡ ಸವಾಲಾಗಿದೆ. ಲಾಕ್‍ಡೌನ್, ಸಾಮಾಜಿಕ ಅಂತರ, ಶುಚಿತ್ವ ಕುರಿತು ಜಾಗೃತಿ ಮೂಡಿಸಿದರು ಕೊರೊನಾ ನಿಯಂತ್ರಣ ಮಾತ್ರ ಕಷ್ಟಸಾಧ್ಯವಾಗಿದೆ. ಕೊರೊನಾ ಸೋಂಕಿಗೆ ತುತ್ತಾಗಿರುವವರಿಗೆ ಚಿಕಿತ್ಸೆ ನೀಡುವುದು ಕೂಡ ವೈದ್ಯ ಲೋಕಕ್ಕೆ ಸವಾಲಾಗಿದೆ. ಪರಿಣಾಮ ಮಾನವನ ದೇಹದಲ್ಲಿನ ರೋಗ ನಿರೋಧ ಶಕ್ತಿ ಹೆಚ್ಚಿಸುವ …
Read More »ಹಗಲಿರುಳು ಕೆಲಸ ಮಾಡಬೇಕಾದ ಪುರಸಭೆ ಸಿಬ್ಬಂದಿಯೊಬ್ಬ ಸರ್ಕಾರಿ ಕಚೇರಿಯಲ್ಲಿಯೇ ಅದ್ದೂರಿಯಾಗಿ ಜನುಮದಿನ ಆಚರಿಸಿಕೊಂಡ ಆರೋಪ
ಗೋಕಾಕ: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಡರುಡುತ್ತಿದ್ದು ಜನರ ಬದುಕು ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಹಗಲಿರುಳು ಕೆಲಸ ಮಾಡಬೇಕಾದ ಪುರಸಭೆ ಸಿಬ್ಬಂದಿಯೊಬ್ಬ ಸರ್ಕಾರಿ ಕಚೇರಿಯಲ್ಲಿಯೇ ಅದ್ದೂರಿಯಾಗಿ ಜನುಮದಿನ ಆಚರಿಸಿಕೊಂಡ ಆರೋಪ ಕೇಳಿ ಬಂದಿದೆ. ಗೋಕಾಕ ತಾಲೂಕಿನ ಕೊಣ್ಣೂರು ಪುರಸಭೆ ಕಚೇರಿಯಲ್ಲಿಯೇ ನಿನ್ನೆ ಎಫ್ ಡಿಸಿ ರಮೇಶ ಭಾಮನೆ ಎಂಬಾತ ಅದ್ದೂರಿಯಾಗಿ ತನ್ನ ಜನುಮದಿನ ಆಚರಿಸಿಕೊಂಡಿದ್ದಾನೆ. ಕಚೇರಿಯಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿಕೊಂಡಿದ್ದಾನೆ. ಕನಿಷ್ಟ ಮಾಸ್ಕ ಕೂಡ ಧರಿಸಿರದೆ, ಸಾಮಾಜಿಕ ಅಂತರ …
Read More »
Laxmi News 24×7