Breaking News

ಹಗಲಿರುಳು  ಕೆಲಸ ಮಾಡಬೇಕಾದ ಪುರಸಭೆ ಸಿಬ್ಬಂದಿಯೊಬ್ಬ ಸರ್ಕಾರಿ ಕಚೇರಿಯಲ್ಲಿಯೇ ಅದ್ದೂರಿಯಾಗಿ  ಜನುಮದಿನ ಆಚರಿಸಿಕೊಂಡ ಆರೋಪ

Spread the love

ಗೋಕಾಕ: ರಾಜ್ಯದಲ್ಲಿ  ಕೊರೊನಾ ಸೋಂಕು ವ್ಯಾಪಕವಾಗಿ ಹಡರುಡುತ್ತಿದ್ದು ಜನರ ಬದುಕು ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಹಗಲಿರುಳು  ಕೆಲಸ ಮಾಡಬೇಕಾದ ಪುರಸಭೆ ಸಿಬ್ಬಂದಿಯೊಬ್ಬ ಸರ್ಕಾರಿ ಕಚೇರಿಯಲ್ಲಿಯೇ ಅದ್ದೂರಿಯಾಗಿ  ಜನುಮದಿನ ಆಚರಿಸಿಕೊಂಡ ಆರೋಪ ಕೇಳಿ ಬಂದಿದೆ. 

ಗೋಕಾಕ ತಾಲೂಕಿನ ಕೊಣ್ಣೂರು ಪುರಸಭೆ ಕಚೇರಿಯಲ್ಲಿಯೇ ನಿನ್ನೆ ಎಫ್ ಡಿಸಿ ರಮೇಶ ಭಾಮನೆ  ಎಂಬಾತ ಅದ್ದೂರಿಯಾಗಿ ತನ್ನ ಜನುಮದಿನ ಆಚರಿಸಿಕೊಂಡಿದ್ದಾನೆ.  ಕಚೇರಿಯಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿಕೊಂಡಿದ್ದಾನೆ.  ಕನಿಷ್ಟ ಮಾಸ್ಕ ಕೂಡ ಧರಿಸಿರದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹಲವು ಗೆಳೆಯರು ಭಾಗಿಯಾಗಿದ್ರು. ಜನರಿಗೆ ತಿಳುವಳಿಕೆ ಹೇಳಬೇಕಾದ ಅಧಿಕಾರಿಗಳೇ ಈ ರೀತಿ ನಿರ್ಲಕ್ಷ್ಯ ತೋರಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. 

ಬೇಲಿಯೇ ಎದ್ದು ಹೊಲ ಮೇಯ್ದಂತೆ ಸರ್ಕಾರಿ ಅಧಿಕಾರಿಯೇ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಅಧಿಕಾರಿಯ ಜನುಮದಿನದ ಪೋಟೋಗಳು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ಈ ಕುರಿತು ಜಿಲ್ಲಾಧಿಕಾರಿಗಳು ತಕ್ಷಣ ಕಠಿಣ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. 


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಗೋಕಾಕ ತಾಲ್ಲೂಕಿನ ಶಿವಾಪುರ (ಕೊ)ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ