Home / ಜಿಲ್ಲೆ / ಬಿಜಾಪುರ (page 18)

ಬಿಜಾಪುರ

ಕೊರೊನಾ ಪಾಸಿಟಿವ್- ಕರೆದೊಯ್ಯಲು ಬಂದ ಅಧಿಕಾರಿಗಳಿಗೆ ಅಜ್ಜಿ ಅವಾಜ್

ವಿಜಯಪುರ: ಕೊರೊನಾ ಪಾಸಿಟಿವ್ ಇರುವವರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದವರಿಗೆ ಅಜ್ಜಿಯೊಬ್ಬರು ಅವಾಜ್ ಹಾಕಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ತಾಂಡಾದಲ್ಲಿ ನಡೆದಿದೆ. ಮಹಾರಾಷ್ಟ್ರದಿಂದ ಬಂದವರನ್ನು ಮೊದಲು 14 ದಿನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಆ ಬಳಿಕ ಸ್ವಾಬ್ ಟೆಸ್ಟ್ ಗೆ ಕಳಿಸಿ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಸರ್ಕಾರದ ಆದೇಶದಂತೆ ವರದಿಗೂ ಮುನ್ನವೇ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ ಅವರ ವರದಿ ಪಾಸಿಟಿವ್ ಬಂದ ಕಾರಣಕ್ಕೆ …

Read More »

ವಿಜಯಪುರದಲ್ಲಿ ಗರಿಷ್ಠ 45.3 ಡಿಗ್ರಿ ಉಷ್ಣಾಂಶ ದಾಖಲು………

ವಿಜಯಪುರ: ಗುಮ್ಮಟಗಳ ಜಿಲ್ಲೆ ವಿಜಯಪುರ ಜನರಲ್ಲಿ ಒಂದು ಕಡೆ ಕೊರೊನಾ ಭೀತಿ ಎದುರಾಗಿದ್ದರೆ, ಇನ್ನೊಂದೆಡೆ ಭಯಾನಕ ಬಿಸಿಲಿನಿಂದ ಆತಂಕ ಶುರುವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಇತಿಹಾಸದಲ್ಲಿಯೇ ಅತಿ ಹೆಚ್ಚು ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ತಾಪಮಾನ ವಿಜಯಪುರ ಜಿ. ಆಲಮೇಲ ಪಟ್ಟಣದಲ್ಲಿ ದಾಖಲಾಗಿದೆ. ಗರಿಷ್ಠ 45.3 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಈ ತಾಪಮಾನ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ …

Read More »

ಹೊರ ರಾಜ್ಯದ ಪುಂಡರಿಂದ ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವನ ಮೇಲೆ ಹಲ್ಲೆ……..

ವಿಜಯಪುರ: ಕೊರೊನಾ ವಾರೊಯರ್ಸ್‍ಗಳಂತೆಯೇ ಕೆಲಸ ಮಾಡುತ್ತಿರುವ ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವನ ಮೇಲೆ ಹೊರ ರಾಜ್ಯದ ಪುಂಡರು ಹಲ್ಲೆ ಮಾಡಿದ್ದಾರೆ. ಜಿಲ್ಲೆಯ ಸಿಂದಗಿಪಟ್ಟಣದ ಸರ್ಕಾರಿ ಶಾಲೆ, ವಸತಿ ನಿಲಯದಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಅಡುಗೆ ಕೆಲಸ ಮಾಡುತ್ತಿದ್ದ ಮೈಬೂಬಸಾಬ ಬನ್ನೆಟ್ಟಿ(60) ಅವರ ಮೇಲೆ ಯುವಕರಾದ ದೇವರನಾವದಗಿಯ ಅರುಣ ರಾಠೋಡ್ ಹಾಗೂ ರಾಹುಲ್ ರಾಠೋಡ್ ಹಲ್ಲೆ ನಡೆಸಿದ್ದಾರೆ. ಯುವಕರಿಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕೊರೊನಾ ವೈರಸ್ ಹಿನ್ನೆಲೆ ಹೊರ ರಾಜ್ಯದಿಂದ …

Read More »

ಗೋವಾದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ಇಲ್ಲ ………..

ಗೋವಾ ರಾಜ್ಯ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ ವಿವಿಧ ರಾಜ್ಯಗಳಿಂದ ಆಗಮಿಸಿದ ಒಟ್ಟು 17,626 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ. ಬೇರೆ ರಾಜ್ಯಗಳಿಂದ ಆಗಮಿಸಿದವರಲ್ಲಿ ಅಧಿಕೃತ ಪರವಾನಿಗೆ ಪಡೆದು 9987 ಹಾಗೂ ಪರವಾನಿಗೆ ಪಡೆಯದೆ 7639 ಜನರು ಜಿಲ್ಲೆಗೆ ಆಗಮಿಸಿದ್ದು, ಒಟ್ಟು 17,626 ಜನರು ಜಿಲ್ಲೆಗೆ ಆಗಮಿಸಿದ್ದು ಅವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ನಗರ …

Read More »

ವಿಜಯಪುರದಲ್ಲಿ ಬಸ್ ಸಂಚಾರ ಆರಂಭ; ಆದರೆ ಪ್ರಯಾಣಿಕರದ್ದೇ ಸಮಸ್ಯೆ; ಯಾಕೆ ಗೊತ್ತಾ?

ವಿಜಯಪುರ(ಮೇ.19): ವಿಜಯಪುರ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಾಕಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ 55 ದಿನಗಳ ಬಳಿಕ ಬಸ್ ಸಂಚಾರ ಆರಂಭವಾಗಿದ್ದು, ಬೆಳಿಗ್ಗೆ ಕೇವಲ ನಾಲ್ಕಾರು ಜನರು ಮಾತ್ರ ಬಸ್​ ನಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿದೆ. ನಗರದಲ್ಲಿ  ಇಂದು ಸುಮಾರು 200 ರಿಂದ 250 ಬಸ್ಸುಗಳನ್ನು ಓಡಿಸಲಾಗುತ್ತಿದೆ. ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು 180 ರಿಂದ 190 ಮತ್ತು ಸೆಟಲೈಟ್ ಬಸ್ ನಿಲ್ದಾಣದಿಂದ ಸುಮಾರು …

Read More »

ವಿಜಯಪುರಕ್ಕೆ ಮಹಾರಾಷ್ಟ್ರದ 1,590 ಕಾರ್ಮಿಕರ ಆಗಮನ………..

ವಿಜಯಪುರ: ಶುಕ್ರವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ವಿಜಯಪುರಕ್ಕೆ ಆಗಮಿಸಲಿದ್ದಾರೆ. ಶ್ರಮಿಕ್ ವಿಶೇಷ ರೈಲಿನ ಮೂಲಕ ಮಹಾರಾಷ್ಟ್ರದ ಸಿಂಧದುರ್ಗದಿಂದ ಒಟ್ಟು 1,590 ಕಾರ್ಮಿಕರು ಬೆಳಗಿನ ಜಾವ 4 ಗಂಟೆಗೆ ವಿಜಯಪುರಕ್ಕೆ ಬಂದಿಳಿಯಲಿದ್ದಾರೆ. ಜಿಲ್ಲೆಗೆ ಆಗಮಿಸುವ ಎಲ್ಲ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕಾರ್ಮಿಕರನ್ನು ಅವರ ತಾಲೂಕುಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗುವುದು. ರೈಲ್ವೇ ನಿಲ್ದಾಣದಿಂದಲೇ ಕಾರ್ಮಿಕರನ್ನ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲು …

Read More »

ವಿಜಯಪುರ: ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ,ಐವರ ವಿರುದ್ಧ ಎಫ್‍ಐಆರ್

ವಿಜಯಪುರ: ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಯತ್ನಿಸಿದ ಐವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ದೇವರ ಹಿಪ್ಪರಗಿ ಮತ ಕ್ಷೇತ್ರದ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಲಗೋಡ ಎಲ್‍ಟಿ ಗ್ರಾಮದ ಪ್ರಮೋದ ರಾಠೋಡ (ಎ1), ಲಕ್ಷ್ಮಿ ರಾಠೋಡ (ಎ2), ರವಿ ರಾಠೋಡ(ಎ3), ಸಂಜು ರಾಠೋಡ (ಎ4), ರಾಹುಲ್ ರಾಠೋಡ್ (ಎ5) ಮೇಲೆ ಐಪಿಸಿ ಸೆಕ್ಷನ್ 353, 504ಸ ಅನ್ವಯ …

Read More »

ಕಾರ್ಯಕ್ರಮಕ್ಕೆ ತೆರಳಿ ಸನ್ಮಾನ ಸ್ವೀಕರಿಸಿ ಪಿಎಸ್‍ಐ ಎಡವಟ್ಟು……

ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದರೆ ಇನ್ನೊಂದೆಡೆ ಜಿಲ್ಲೆಯ ಚಡಚಣ ಪಿಎಸ್‍ಐ ಮಹಾ ಯಡವಟ್ಟು ಮಾಡಿದ್ದಾರೆ. ಲಾಕ್‍ಡೌನ್ ನಡುವೆ ಚಡಚಣ ಪಿಎಸ್‍ಐ ಮಹಾದೇವ ಯಲಿಗಾರ್ ಭರ್ಜರಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಅಲ್ಲದೆ ಸನ್ಮಾನ ಸ್ವೀಕರಿಸಿದ್ದಾರೆ. ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಕೆಲ ಜನ ಕೊರೊನ ವಾರಿಯರ್ಸ್‍ಗೆಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮ ತಡೆಯುವುದನ್ನು ಬಿಟ್ಟು ಖುದ್ದು ತಾವು ಹಾಗೂ ತಮ್ಮ ಸಿಬ್ಬಂದಿ ಸಮೇತ ಹೋಗಿ ಸನ್ಮಾನ ಸ್ವೀಕರಿಸಿದ್ದಾರೆ. …

Read More »

ಅರಷಣಗಿ ಗ್ರಾಮದಲ್ಲಿ ಸಂಪೂರ್ಣವಾಗಿ ಜಾತ್ರೆಯನ್ನು ಮಾಡದೆ ಮಾನವಿತೆ ಮೆರೆದ ಅರಷಣಗಿ ಗ್ರಾಮಸ್ಥರು

ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನಲ್ಲಿ ಬರುವ ಅರಷಣಗಿ ಗ್ರಾಮದಲ್ಲಿ ವರ್ಷಕೊಮ್ಮ ಬಸವ ಜಯಂತಿ ಆದ ದಿನದಲ್ಲಿ ಶ್ರೀ ಮಾರುತ್ತೇಶ್ವರ ಜಾತ್ರೆ ಹಾಗೂ ನೀರೋಕಳಿ ಕಾರ್ಯಕ್ರಮ ಐದು ದಿನಗಳ ಕಾಲ ಅತೀ ವಿಜೃಂಭಣೆಯಿಂದ ಮಾಡಲಾಗುತ್ತಿತ್ತು ಈ ಜಾತ್ರಗೆ ರಾಜ್ಯ ಹಾಗೂ ಬೇರೆ ಕಡೆಗಳಿಂದ ಸಾಕಷ್ಟು ಅಪಾರ ಭಕ್ತ ವೃಂದ ಹರಿದು ಬರುತ್ತಿತ್ತು ಆದರೆ ಇಡೀ ದೇಶಕ್ಕೆ ಮಾರಕವಾದ ಕೋವಿಡ್ 19 ಕರೋನಾ ಏಂಬ ರೋಗದಿಂದಾಗಿ ಇಡೀ ದೇಶವೆ ತತ್ತರಿಸುತ್ತಿದ್ದು ಕೇಂದ್ರ ಹಾಗೂ …

Read More »

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ರ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಚಿಂತನೆ:ರಮೇಶ ಜಾರಕಿಹೊಳಿ

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ರ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಕೇಂದ್ರದ ಜಲಸಂಪನ್ಮೂಲ ಸಚಿವರ ಜೊತೆಯೂ ಚರ್ಚಿಸಲಾಗಿದೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಆಲಮಟ್ಟಿಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಹಿನ್ನಲೆಯಲ್ಲಿ ಈ ಯೋಜನೆಗೆ ಅಲ್ಪ ಅಡೆತಡೆಯಾಗಿದೆ. ಕೃಷ್ಣಾ ನದಿ ನೀರು ಬಳಕೆಗಾಗಿ ಕೇಂದ್ರ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು. ಕೃಷ್ಣಾ …

Read More »