Home / ಜಿಲ್ಲೆ / ಬಿಜಾಪುರ / ವಿಜಯಪುರದಲ್ಲಿ ಬಸ್ ಸಂಚಾರ ಆರಂಭ; ಆದರೆ ಪ್ರಯಾಣಿಕರದ್ದೇ ಸಮಸ್ಯೆ; ಯಾಕೆ ಗೊತ್ತಾ?

ವಿಜಯಪುರದಲ್ಲಿ ಬಸ್ ಸಂಚಾರ ಆರಂಭ; ಆದರೆ ಪ್ರಯಾಣಿಕರದ್ದೇ ಸಮಸ್ಯೆ; ಯಾಕೆ ಗೊತ್ತಾ?

Spread the love

ವಿಜಯಪುರ(ಮೇ.19): ವಿಜಯಪುರ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಾಕಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ 55 ದಿನಗಳ ಬಳಿಕ ಬಸ್ ಸಂಚಾರ ಆರಂಭವಾಗಿದ್ದು, ಬೆಳಿಗ್ಗೆ ಕೇವಲ ನಾಲ್ಕಾರು ಜನರು ಮಾತ್ರ ಬಸ್​ ನಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿದೆ. ನಗರದಲ್ಲಿ  ಇಂದು ಸುಮಾರು 200 ರಿಂದ 250 ಬಸ್ಸುಗಳನ್ನು ಓಡಿಸಲಾಗುತ್ತಿದೆ. ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು 180 ರಿಂದ 190 ಮತ್ತು ಸೆಟಲೈಟ್ ಬಸ್ ನಿಲ್ದಾಣದಿಂದ ಸುಮಾರು 60 ರಿಂದ 70 ಬಸ್​ಗಳನ್ನು ಓಡಿಸಲಾಗುತ್ತಿದೆ. ವಿಜಯಪುರ ಎನ್ ಇ ಕೆ ಆರ್ ಟಿ ಸಿ ಯಲ್ಲಿ ಸುಮಾರು 3500 ಸಿಬ್ಬಂದಿಯಿದ್ದು, ಇಂದು 1000 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ನಿಲ್ಲಲು ಬಿಳಿ ಪೇಂಟ್ ನಿಂದ್ ಮಾರ್ಕ್ ಮಾಡಲಾಗಿದ್ದು, ಬಸ್ ನಿಲ್ದಾಣದ ಆಸನಗಳಲ್ಲಿಯೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕುಳಿತುಕೊಳ್ಳಲು ಗುರುತು ಹಾಕಲಾಗಿದೆ. ಅಷ್ಟೇ ಅಲ್ಲ, ಬಸ್ಸುಗಳಲ್ಲಿಯೂ ಕೇವಲ 30 ಜನ ಪ್ರಯಾಣಿಕರಿಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೀಟುಗಳ ಮೇಲೆ ಗುರುತು ಹಾಕಲಾಗಿದೆ.

ಬಸ್ ಡ್ರೈವರ್ ಮತ್ತು ಕಂಡಕ್ಟರ್​ಗಳನ್ನು ನಿಲ್ದಾಣಗಳಲ್ಲಿಯೇ ಸ್ಕ್ರೀನಿಂಗ್ ಮಾಡಲಾಗುತ್ತಿದೆ.  ಅಲ್ಲದೇ, ಪ್ರತಿಯೊಬ್ಬ ಪ್ರಯಾಣಿಕರ ಆರೋಗ್ಯವನ್ನೂ ತಪಾಸಣೆ ನಡೆಸಲಾಗುತ್ತಿದು, ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರಯಾಣಿಕರು ಮಾಸ್ಕ್ ಬಳಸುವುದನ್ನು ಕಡ್ಡಾಯ ಮಾಡಲಾಗಿದ್ದು, ಪ್ರತಿಯೊಬ್ಬ ಪ್ರಯಾಣಿಕರು ತಮ್ಮ ಹೆಸರು, ವಯಸ್ಸು, ಲಿಂಗ ಮತ್ತು ದೂರವಾಣಿ ಸಂಖ್ಯೆಯನ್ನು ಕಂಡಕ್ಟರ್ ಬಳಿ ನಮೂದಿಸುವುದು ಕಡ್ಡಾಯವಾಗಿದೆ.  55 ದಿನಗಳ ಬಳಿಕ ಬಸ್ ಸಂಚಾರ ಆರಂಭವಾಗಿದ್ದರೂ ಪ್ರಯಾಣಿಕರ ಸಂಖ್ಯೆ ಮಾತ್ರ ನೀರಸವಾಗಿದೆ. ತುರ್ತು ಕೆಲಸಗಳಿಗಾಗಿ ಮಾತ್ರ ಜನ ಬಸ್ ನಿಲ್ದಾಣಗಳಿಗೆ ಬರುತ್ತಿದ್ದು, ಜನರಲ್ಲಿ ಕೊರೋನಾ ಬಗ್ಗೆ ಇರುವ ಭಯ ಇನ್ನೂ ಕಡಿಮೆಯಾಗಿಲ್ಲ ಎಂಬುದಕ್ಕೆ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಸಾಕ್ಷಿಯಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಒಟ್ಟು 750 ಬಸ್ಸುಗಳಿದ್ದು, ಈ ಮುಂಚೆ ಸುಮಾರು 650 ಬಸ್​ಗಳು ನಾನಾ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಪ್ರತಿನಿತ್ಯ ಸುಮಾರು 70 ರಿಂದ 75 ಲಕ್ಷ ಆದಾಯ ಬರುತ್ತಿತ್ತು. ಈಗ ಹಂತ ಹಂತವಾಗಿ ಬಸ್​​ಗಳ ಸಂಚಾರವನ್ನು ಹೆಚ್ಚಿಸಲಾಗುತ್ತಿದೆ. ಇಂದು ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿ ನಾಳೆಯಿಂದ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಎನ್ ಇ ಕೆ ಆರ್ ಟಿ ವಿಜಯಪುರ ವಿಭಾಗ ನಿಯಂತ್ರಣಾಧಿಕಾರಿ ಗಂಗಾಧರ ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ

Spread the love

About Laxminews 24x7

Check Also

ಸರಿಯಾಗಿ ಮನೆ ಕೆಲಸ ಮಾಡುತ್ತಿಲ್ಲ, ಮಕ್ಕಳನ್ನು ನೋಡಿಕೊಳ್ಳುತ್ತಿಲ್ಲ ಎಂದು ಕೋಪಗೊಂಡ ಪತಿ ತನ್ನ ಪತ್ನಿ ಮತ್ತು ಆಕೆಯ ತಾಯಿಯನ್ನು ಕೊಲೆಗೈದ

Spread the love ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿ‌ ಹಾಗೂ ಆಕೆಯ ತಾಯಿಯನ್ನು ಕೊಲೆ‌ ಮಾಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ