Home / ಜಿಲ್ಲೆ / ಕೋಲಾರ (page 8)

ಕೋಲಾರ

ಹುಟ್ಟುಹಬ್ಬಕ್ಕೆ ಕೂಡಿಟ್ಟ 11,111 ರೂ. ಕೊರೊನಾ ಹೋರಾಟಕ್ಕೆ ನೀಡಿದ ಬಾಲಕಿ

ಕೋಲಾರ: ಕಳೆದ ಒಂದು ವರ್ಷದಿಂದ ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಪುಟಾಣಿ ಬಾಲಕಿಯೊರ್ವಳು ಮಾದರಿಯಾಗಿದ್ದಾಳೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಮೂಲದ 2ನೇ ತರಗತಿ ವಿದ್ಯಾರ್ಥಿನಿ ಚರಿತ ಆರ್. ರಾಯಲ್ ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ. ಹುಟ್ಟುಹಬ್ಬಕ್ಕೆಂದು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನ ಕೊರೊನಾ ಪರಿಹಾರ ನಿಧಿಗೆ ಬಾಲಕಿ ನೀಡಿದ್ದಾಳೆ. ಕೋವಿಡ್-19 ಚಿಕಿತ್ಸೆಗಾಗಿ ತಾನೂ ಕೂಡಿಟ್ಟಿದ್ದ 11,111 ರೂಪಾಯಿ ಹಣವನ್ನು ಕೋಲಾರ ಜಿಲ್ಲಾಧಿಕಾರಿ …

Read More »

ಮದ್ಯ ಸಿಗದ್ದಕ್ಕೆ ಕೋಲಾರದಲ್ಲಿ 8 ಮದ್ಯದಂಗಡಿ ಕಳವು, 6 ಕಳ್ಳಭಟ್ಟಿ ಪ್ರಕರಣ ದಾಖಲು

ಕೋಲಾರ: ಕೋಲಾರದಲ್ಲಿ ಮದ್ಯ ಸಿಗದ ಹಿನ್ನೆಲೆಯಲ್ಲಿ ಮದ್ಯ ಪ್ರಿಯರು ಅನ್ಯ ಮಾರ್ಗಗಳನ್ನ ಕಂಡುಕೊಳ್ಳುತ್ತಿದ್ದು, ಮದ್ಯ ಕಳವು, ಕಳ್ಳಭಟ್ಟಿಯಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ. ಲಾಕ್‍ಡೌನ್‍ನಿಂದಾಗಿ ಮದ್ಯದಂಗಡಿಗಳು ಬಂದ್ ಆದ ಕಾರಣ ಗಡಿ ಜಿಲ್ಲೆ ಕೋಲಾರದ ಜನರು ಕಳ್ಳಭಟ್ಟಿ, ಸೇಂದಿಗೆ ಮೊರೆ ಹೋಗುತ್ತಿದ್ದಾರೆ. ಮತ್ತೆ ಕೆಲವರು ಬಾರ್‍ಗಳಿಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮದ್ಯ ಕಳ್ಳತನ ಮಾಡುತ್ತಿದ್ದಾರೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಯಲ್ಲಿ ಅಕ್ರಮ ಕಳ್ಳಬಟ್ಟಿ ಹಾಗೂ ಸೇಂಧಿ ಮಾರಾಟ, ಸಾಗಾಟ ನಿಯಂತ್ರಣಕ್ಕೆ ಬರುತ್ತಿಲ್ಲ. …

Read More »

ಓಟಿ ಕ್ವಾಟರ್ ಗೆ 800 ರೂ, ಬಿಯರ್ 1 ಸಾವಿರ ರೂ. ಅಬಕಾರಿ ಸಚಿವ ಎಚ್.ನಾಗೇಶ್ ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ

ಕೋಲಾರ: ಅಬಕಾರಿ ಸಚಿವ ಎಚ್.ನಾಗೇಶ್ ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಸಾಮಾನ್ಯ ದರಕ್ಕಿಂತ ಹತ್ತು ಪಟ್ಟು ಹೆಚ್ಚಳ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೋಲಾರ ಹೊರವಲಯದ ಟಮಕದ ಕಾಲೋನಿಯಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲೆಯ ಬಹುತೇಕ ಬಾರ್‍ಗಳಲ್ಲಿ ಮದ್ಯ ಖಾಲಿಯಾಗಿದ್ದು, ಕೆಲವೇ ಬಾರ್‍ಗಳಲ್ಲಿ ಸ್ಟಾಕ್ ಇದೆ. ಬಾಗಿಲು ಕ್ಲೋಸ್ ಮಾಡಿ ಹಿಂದೆ ಬಾಗಿಲು ತೆರೆದು ಬಾರ್ ಮಾಲೀಕರು ಮಾರಾಟ ಮಾಡಲಾಗುತ್ತಿದೆ. ಹತ್ತು ಪಟ್ಟು ಹೆಚ್ಚಿನ …

Read More »

ಕೋಲಾರ:ಸ್ವತಃ ಹೆಗಲ ಮೇಲೆ ಪೈಪ್‍ಗಳನ್ನು ಹೊತ್ತು ಸಾಗಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಾಮಾನ್ಯರಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಅನೇಕ ರಾಜಕಾರಣಿಗಳು ಮನೆಯಲ್ಲೇ ಕಳೆಯುತ್ತಿದ್ದರೆ, ಕೆಲವರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಆದರೆ ರಮೇಶ್ ಕುಮಾರ್ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುವ ಮೂಲಕ ಲಾಕ್‍ಡೌನ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ. ಕಾಂಗ್ರೆಸ್‍ನ ಟಾಸ್ಕ್ ಪೋರ್ಸ್ ಕಮಿಟಿ ಅಧ್ಯಕ್ಷ ರಮೇಶ್ ಕುಮಾರ್ ಅವರು ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ …

Read More »

55 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ

ಕೋಲಾರ: ಜಿಲ್ಲೆಯ ಮಾಲೂರಲ್ಲಿ 55 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಅಲ್ಲದೆ ರೈತರ ತೋಟಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ, ಧೈರ್ಯ ತುಂಬಿದರು. ಸಂಕಷ್ಟದಲ್ಲಿರುವ ರೈತರ ತೋಟಗಳಿಗೆ ಭೇಟಿ ನೀಡಿ ರೈತರ ಸಂಕಷ್ಟ ಕೇಳುವುದರ ಜೊತೆಗೆ ಅವರು ಬೆಳೆದಿರುವ ತರಕಾರಿ ಖರೀದಿ ಮಾಡಿ ಜನರಿಗೆ ಹಂಚಲು ಕಾಂಗ್ರೆಸ್ ಮುಂದಾಗಿದೆ. ಎಲೆಕೋಸು, ಕ್ಯಾರೆಟ್, ಟೊಮ್ಯಾಟೋ, ಕ್ಯಾಪ್ಸಿಕಂ ತೋಟಗಳಿಗೆ ಡಿಕೆಶಿ ಭೇಟಿ ನೀಡಿದರು. ಅಲ್ಲದೆ …

Read More »

ಗ್ಯಾಸ್ ಏಜೆನ್ಸಿ ಮಾಲೀಕ ಪೊಲೀಸರು, ಪೌರ ಕಾರ್ಮಿಕರಿಗೆ ಬಿರಿಯಾನಿ ಊಟ ನೀಡುತ್ತಿದ್ದಾರೆ

ಕೋಲಾರ: ಕೊರೊನಾ ಮಹಾಮಾರಿ ಆವರಿಸಿದ್ದರಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ಕಳೆದ 21 ದಿನಗಳಿಂದ ನಮ್ಮನ್ನು ಕಾಯುತ್ತಿರುವ ಕೊರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಗೆ ಕೋಲಾರದಲ್ಲಿ ಬಿರಿಯಾನಿ ವಿತರಣೆ ಮಾಡಲಾಯಿತು. ಕೋಲಾರದ ರೇವತಿ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕರಿಂದ ವಾರಕ್ಕೊಮ್ಮೆ ಬಿರಿಯಾನಿ ವಿತರಣೆ ಮಾಡಲಾಗುತ್ತಿದೆ. ಕೋಲಾರ ನಗರ ಹಾಗೂ ಬಂಗಾರಪೇಟೆ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ನಗರಸಭೆ ಸಿಬ್ಬಂದಿಗೆ ಬಿರಿಯಾನಿ ವಿತರಣೆ ಮಾಡಲಾಯಿತು. ಕಳೆದ ಬುಧವಾರವೂ ಹೀಗೆ ಕರ್ತವ್ಯದಲ್ಲಿದ್ದ ನೂರಾರು ಪೊಲೀಸರಿಗೆ ಬಿರಿಯಾನಿ …

Read More »

ಪ್ರಧಾನಿ ಮೋದಿ ಭಾಷಣದ ಬಳಿಕ ಮದ್ಯದಂಗಡಿ ತೆರೆಯುವ ಕುರಿತು ನಿರ್ಧಾರ: ಸಚಿವ ನಾಗೇಶ್

  ಕೋಲಾರ: ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯುವ ವಿಚಾರವಾಗಿ ಚರ್ಚೆ ನಡೆಸಲಾಗಿದ್ದು, ನಾಳೆ ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ. ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮದ್ಯದಂಗಡಿ ತೆರೆಯಲು ಚಿಂತನೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರ ಭಾಷಣದ ನಂತರ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯಲು ತೀರ್ಮಾನ ಮಾಡಲಾಗುವುದು. ಕಳ್ಳಬಟ್ಟಿ ಸಾರಾಯಿ ತಡೆಗಟ್ಟಲು ನಮ್ಮ ಅಧಿಕಾರಿಗಳು ಹಗಲು ರಾತ್ರಿ ಕೆಲಸ …

Read More »

ಕೋಲಾರ ಸೇಫ್: ಸೊಂಕಿತರ ಜೊತೆ ಸಂಪರ್ಕದಲ್ಲಿದ್ದ 18 ಜನರ ವರದಿ ನೆಗೆಟಿವ್

ಕೋಲಾರ: ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ 18 ಜನರ ವರದಿ ನೆಗೆಟಿವ್ ಬಂದಿದ್ದು, ಕೋಲಾರ ಜನತೆ ಹಾಗೂ ಜಿಲ್ಲಾಡಳಿತ ಕೋವಿಡ್ ಆತಂಕದಿಂದ ಕೊಂಚ ನಿರಾಳವಾಗಿದೆ. ಜಿಲ್ಲೆಯ ಎರಡು ಕುಟುಂಬಗಳೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೈಲ್ ನರಸಾಪುರದ ಸೋಂಕಿತ ವ್ಯಕ್ತಿ ಸಂಪರ್ಕ ಹೊಂದಿದ್ದ ಪರಿಣಾಮ ಜಿಲ್ಲೆಯ ಸುಮಾರು 21 ಜನರನ್ನು ಹೋಮ್ ಕ್ವಾರಂಟೇನ್ ಮಾಡಲಾಗಿತ್ತು. ಅಲ್ಲದೆ 21 ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 18 ಜನರ ವರದಿ …

Read More »

ಟೊಮೆಟೊವನ್ನು ರಸ್ತೆಗೆ ಸುರಿದ ರೈತರು – ಮುಗಿಬಿದ್ದ ಮಹಿಳೆಯರು,ಉಚಿತವಾಗಿ ಬಾಳೆಹಣ್ಣು ಕೊಟ್ಟ ರೈತ

ಕೋಲಾರ: ಕೊರೊನಾ ವೈರಸ್ ಜಿಲ್ಲೆಯ ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಟೊಮೆಟೊ ಹಾಗೂ ಹೂವಿನ ಬೆಲೆ ತೀವ್ರವಾಗಿ ಕುಸಿತವಾದ ಪರಿಣಾಮ ರೈತರು ರಸ್ತೆಗೆ ಸುರಿಯುತ್ತಿದ್ದಾರೆ. ಇನ್ನೂ ರಸ್ತೆಗೆ ಸುರಿದ ಟೊಮೆಟೊಗಾಗಿ ಮಹಿಳೆಯರು ಮುಗಿಬಿದ್ದ ಸನ್ನಿವೇಶ ನಡೆದಿದೆ. ಬೆಳೆದ ಟೊಮೆಟೊಗೆ ಬೆಲೆ ಇಲ್ಲದ ಕಾರಣ ಕೋಲಾರ ನಗರದ ಬಸ್ ನಿಲ್ದಾಣ ಸಮೀಪ ರಸ್ತೆ ಮಧ್ಯೆದಲ್ಲಿ ಟೊಮೆಟೊವನ್ನು ರೈತ ಸುರಿದಿದ್ದಾನೆ. ಇನ್ನೂ ರಸ್ತೆಯಲ್ಲಿದ್ದ ಟೊಮೆಟೊವನ್ನು ಅನೇಕ ಮಹಿಳೆಯರು ಎತ್ತಿಕೊಂಡಿದ್ದಾರೆ. ಕೊರೊನಾದಿಂದ ಒಂದು ಕಡೆ …

Read More »

ಆಂಧ್ರ ಗಡಿಯಲ್ಲಿ ಪರದಾಡುತ್ತಿದ್ದಾರೆ ಸಾವಿರಕ್ಕೂ ಹೆಚ್ಚು ಮೀನುಗಾರರು

ಕೋಲಾರ: ಮಂಗಳೂರು ಬಂದರಿನಿಂದ ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದ ಮೀನುಗಾರರನ್ನು ಕೋಲಾರದ ಗಡಿ ಭಾಗವಾದ ನಂಗಲಿ ಚೆಕ್ ಪೋಸ್ಟ್ ಬಳಿ ಆಂಧ್ರಪ್ರದೇಶ ಪೊಲೀಸರು ತಡೆ ಹಿಡಿದಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗಡಿಯಲ್ಲಿ ಆಂಧ್ರ ಪೊಲೀಸರು ಮೀನುಗಾರರಿಗೆ ತಡೆ ಮಾಡಿದ್ದು, ಆಂಧ್ರ ಮೂಲದ ನೂರಾರು ಮಂದಿ ಮೀನುಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಮಂಗಳೂರಿನಲ್ಲಿ ಮೀನುಗಾರಿಕೆ ಮಾಡಿಕೊಂಡು ಇವರು ಜೀವನ ನಡೆಸುತ್ತಿದ್ದರು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲೆಡೆ ಲಾಕ್‍ಡೌನ್ …

Read More »