Home / ರಾಷ್ಟ್ರೀಯ (page 731)

ರಾಷ್ಟ್ರೀಯ

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ತಂದೆ ತಾಯಿ ಕೊರೊನಾಗೆ ಬಲಿ

ಧಾರವಾಡ : ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್​​ ಅವರ ತಂದೆ ಮತ್ತು ತಾಯಿ ಇಬ್ಬರೂ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮೂರು ದಿನಗಳ ಹಿಂದೆ ಕಳೆದ 27 ರಂದು ಅರುಣ್ ತಾಯಿ 53 ವರ್ಷದ ಕಸ್ತೂರಮ್ಮ ಬಡಿಗೇರ್ ನಿಧನವಾಗಿದ್ದರು ಅಂದಿನಿಂದ ಮತ್ತಷ್ಟು ಗಂಭೀರವಾಗಿದ್ದ ಅರುಣ್ ತಂದೆ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಚಂದ್ರಶೇಖರ್ ಬಡಿಗೇರ್ ಕೆಇ ಬೋರ್ಡ್ ಶಾಲೆಯ ನಿವೃತ್ತ ಶಿಕ್ಷಕರಾಗಿದ್ದರು ಕೊರೊನಾ ದೃಢ ಪಟ್ಟಿದ್ದರಿಂದ ಅವರನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ …

Read More »

ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಎಲ್ಲ ಇಲಾಖೆಗಳ ಸಮನ್ವಯತೆ ಅಗತ್ಯ ಬಾಲಚಂದ್ರ ಜಾರಕಿಹೊಳಿ, ಅಧ್ಯಕ್ಷರು, ಕೆಎಂಎಫ್

ಕೋವಿಡ್ ಎರಡನೇ ಅಲೆ ಗೋಕಾಕ : ಸರ್ಕಾರ ನೀಡಿದ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಆಚರಣೆ ತರುವುದರೊಂದಿಗೆ ಮಹಾಮಾರಿ ಕೊರೋನಾ ವೈರಸ್‍ನ ಎರಡನೇ ಅಲೆಯನ್ನು ನಿಯಂತ್ರಿಸಲು ಎಲ್ಲ ಇಲಾಖೆಯವರು ಒಗ್ಗಟ್ಟಿನಿಂದ ಶ್ರಮಿಸುವಂತೆ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಹೇಳಿದರು. ಶುಕ್ರವಾರದಂದು ನಗರದ ಹೊರವಲಯದ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ವಿವಿಧ ಇಲಾಖೆಗಳ ಮುಖ್ಯಸ್ಥರ ಕೋವಿಡ್ ನಿಯಂತ್ರಣ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಜೀವ ಮತ್ತು ಜೀವನಕ್ಕೆ ಮಹತ್ವ ನೀಡಿ ಸರ್ಕಾರ …

Read More »

ಮೇ 1ರಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಏರಿಕೆ : ಅದಾನಿ ಕಂಪೆನಿ

ಮಂಗಳೂರು :ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆ ಪಡೆದಿರುವ ಖಾಸಗಿ ಕಂಪೆನಿ ವಿಮಾನ ನಿಲ್ದಾಣದಲ್ಲಿನ ವಾಹನ ನಿಲುಗಡೆ ಶುಲ್ಕವನ್ನು ಗರಿಷ್ಠ ಪ್ರಮಾಣದಲ್ಲಿ ಏರಿಸಿರುವುದು ವಾಹನ ಚಾಲಕರ ಹಾಗೂ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣವನ್ನು ಗುತ್ತಿಗೆ ಪಡೆದಿರುವ ಅದಾನಿ ಕಂಪೆನಿ ಮೇ 1, ರಿಂದ ಹೊಸ ಪಾರ್ಕಿಂಗ್ ದರವನ್ನು ವಿಧಿಸುವುದಾಗಿ ಪ್ರಕಟಿಸಿದೆ. ವಿಮಾನ ನಿಲ್ದಾಣದಲ್ಲಿ ದಿಢೀರ್ ಪಾರ್ಕಿಂಗ್ ಶುಲ್ಕ ಏರಿಸಿರುವುದು ಕೊರೋನ ಸಂಕಷ್ಟದ ಕಾಲದಲ್ಲಿ ಜನರ ಗಾಯದ ಮೇಲೆ ಇನ್ನೊಂದು …

Read More »

ಕೋವಿಡ್-19: ಪರೀಕ್ಷಾ ವರದಿ ವಿಳಂಬ, ಆತಂಕದಲ್ಲಿಯೇ ದಿನ ದೂಡುತ್ತಿರುವ ಬೆಂಗಳೂರು ಜನತೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಭಾರೀ ಪ್ರಮಾಣದಲ್ಲಿ ಹರಡುತ್ತಿದ್ದು, ಈ ನಡುವೆ ಅಲ್ಪ ಸ್ವಲ್ಪ ಲಕ್ಷಣಗಳು ಕಂಡು ಬಂದರೂ ಆತಂಕಕ್ಕೊಳಗಾಗುತ್ತಿರುವ ಜನರು ಸ್ಥಳೀಯ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳಿಗೆ ತೆರಳಿ ಪರೀಕ್ಷೆಗೊಳಗಾಗುತ್ತಿದ್ದಾರೆ. ಈ ನಡುವೆ ಲ್ಯಾಬ್ ಗಳ ವರದಿ ತಡವಾಗಿ ಬರುತ್ತಿದ್ದು, ಇದು ಜನತೆಯ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. ನಗರದಲ್ಲಿ ಸೋಂಕು ಹೆಚ್ಚಾದಂತೆ ಲ್ಯಾಬ್ ಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಹಲವು ಲ್ಯಾಬ್ ಗಳು ಪರೀಕ್ಷಾ …

Read More »

ಆಸ್ಪತ್ರೆಯಲ್ಲೇ ರೆಮಿಡಿಸಿವಿರ್‌ ಬಳಸಿ

ಹೊಸದಿಲ್ಲಿ: ದೇಶದಲ್ಲಿ ಸೋಂಕು ಪರಿಸ್ಥಿತಿ ಬಿಗಡಾಯಿಸುತ್ತಿರುವಂತೆ ಕೇಂದ್ರ ಸರಕಾರ ಹೋಮ್‌ ಐಸೊಲೇಶನ್‌ನ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಿಶೇಷವಾಗಿ ರೋಗಲಕ್ಷಣ ರಹಿತ ಮತ್ತು ಅಲ್ಪ ಪ್ರಮಾಣದ ಲಕ್ಷಣಗಳು ಇರುವವರಿಗೆ ಇದರಿಂದ ಅನುಕೂಲವಾಗಲಿದೆ. ಮನೆಯಲ್ಲಿ ರೆಮಿಡಿಸಿವಿರ್‌ ಇಂಜೆಕ್ಷನ್‌ ಪಡೆಯುವುದನ್ನು ನಿಷೇಧಿಸಲಾಗಿದ್ದು, ಆಸ್ಪತ್ರೆಯಲ್ಲಿ ಮಾತ್ರ ಪಡೆಯಬೇಕು ಎಂದು ಸಲಹೆ ಮಾಡಲಾಗಿದೆ. ಮತ್ತೂಂದು ಗಮನಾರ್ಹ ಅಂಶವೆಂದರೆ ಸೋಂಕು ದೃಢಪಟ್ಟವರು ಮನೆಯಲ್ಲಿರುವಾಗ ಕೂಡ ಮೂರು ಪದರಗಳ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಲಾಗಿದೆ. ಇನ್ನಿತರ ಸಲಹೆಗಳು …

Read More »

ರಾಜ್ಯದಲ್ಲಿಂದು 35024 ಪಾಸಿಟಿವ್ ಪ್ರಕರಣ, 270 ಜನರ ಸಾವು

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿಯೇ ಸಾಗಿದ್ದು, ಇಂದು ಕೂಡ 30 ಸಾವಿರ ಗಡಿ ದಾಡಿದೆ. ಇಂದು ( ಗುರುವಾರ) ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ( ದಿನಾಂಕ:28.04.2021, 00:00 ರಿಂದ 23:59 ) ಅವಧಿಯಲ್ಲಿ ಬರೋಬ್ಬರಿ 35024 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು …

Read More »

ಗೋವಾ ರಾಜ್ಯ ಸರ್ಕಾರ ಗುರುವಾರ ಸಂಜೆಯಿಂದಲಾಕ್‍ಡೌನ್ ಘೋಷಿಸಿದೆ.

ಪಣಜಿ: ಕೊರೊನಾ ಸೋಂಕು ತಡೆಯಲು ಗೋವಾ ರಾಜ್ಯ ಸರ್ಕಾರ ಗುರುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆ ವರೆಗೆ ಮೂರು ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಲಾಕ್‍ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳು ಕೈಗಾರಿಕೆಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ. ಸೋಂಕಿನ ಸರಪಳಿಯನ್ನು ಕತ್ತರಿಸಲು ಗುರುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆಯ ವರೆಗೆ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಅಗತ್ಯ ಸೇವೆಗಳು ಎಂದಿನಂತೆಯೇ ಇರಲಿವೆ ಎಂದರು. ಆದರೆ ವಾರದ ಸಂತೆ ನಡೆಸಲು ಅವಕಾಶ …

Read More »

ಅತ್ಯಾಚಾರಕ್ಕೆ ಯತ್ನ: ಸಂಬಂಧಿಯ ಮರ್ಮಾಂಗ ಕತ್ತರಿಸಿ ಹಂದಿಗಳಿಗೆ ಉಣಬಡಿಸಿದ ಸಂತ್ರಸ್ತೆಯ ಲವರ್​!​

ಬ್ರಾಸಿಲಿಯಾ: ಸೋದರಸಂಬಂಧಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮರ್ಮಾಂಗ ಮತ್ತು ವೃಷಣಗಳನ್ನು ಕತ್ತರಿಸಿ ಕಾಡುಹಂದಿಗೆ ಆಹಾರವಾಗಿ ನೀಡಿರುವ ಘಟನೆ ಏಪ್ರಿಲ್​ 19ರಂದು ಬ್ರೆಜಿಲ್​ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 20 ವರ್ಷದ ಸೋದರಸಂಬಂಧಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವಿಷಯವೂ ಉತ್ತರ ಬ್ರೆಜಿಲಿಯನ್​ ಮುನ್ಸಿಪಾಲಿಟಿಯ ಒಲ್ಹಾಸ್​ ಡಿ ಔಗಾ ಪಟ್ಟಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, 36 ವರ್ಷದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಲಾಗಿದೆ. ಸೋದರಸಂಬಂಧಿ ಮನೆಯಲ್ಲಿ ಮಲಗಿದ್ದ ವೇಳೆ ಪಾನಮತ್ತ …

Read More »

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ. ಬಾಲಚಂದ್ರ ಜಾರಕಿಹೊಳಿ

ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.   ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ ಅಧಿಕಾರಿಗಳನ್ನುದ್ಧೇಶಿಸಿ ದೂರವಾಣಿಯಲ್ಲಿ ಮಾತನಾಡಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಸಕಲ ಸೌಲಭ್ಯಗಳನ್ನೊಳಗೊಂಡ …

Read More »

ಹುಟ್ಟೂರಿನಲ್ಲಿ ನೆರವೇರಿದ ನಿರ್ಮಾಪಕ ರಾಮು ಅಂತ್ಯ ಸಂಸ್ಕಾರ

ತುಮಕೂರು: ಕೋವಿಡ್‌ನಿಂದ ಮೃತಪಟ್ಟ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಪತಿ ರಾಮು ಅಂತ್ಯಕ್ರಿಯೆ ಕುಣಿಗಲ್ ತಾಲ್ಲೂಕಿನ ಕೊಡಗಿಹಳ್ಳಿ ಗ್ರಾಮದಲ್ಲಿರುವ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು. ಕೋವಿಡ್ ನಿಯಮದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು.ರಾಮು ಪಾರ್ಥೀವ ಶರೀರಕ್ಕೆ ಮಾಲಾಶ್ರೀ ಅಂತಿಮ ನಮನ ಸಲ್ಲಿಸಿದರು. ಪುತ್ರ ಆರ್ಯನ್ ಅಂತ್ಯ ಸಂಸ್ಕಾರದ ವಿಧಿಗಳನ್ನು ನೆರವೇರಿಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಪುತ್ರಿ ಅನನ್ಯ ಇದ್ದರು. ಕೋವಿಡ್‌ನಿಂದ ಬಳಲುತ್ತಿದ್ದ ಚಿತ್ರ ನಿರ್ಮಾಪಕ, ನಟಿ ಮಾಲಾಶ್ರೀ ಅವರ ಪತಿ …

Read More »