Breaking News
Home / ರಾಷ್ಟ್ರೀಯ (page 578)

ರಾಷ್ಟ್ರೀಯ

ಕಡೋಲಿಯಲ್ಲಿ ಬಾವಿಗೆ ಬಿದ್ದು ವ್ಯಕ್ತಿ ಸಾವು..!

ಬೆಳಗಾವಿ : ಹೊಲದಲ್ಲಿನ ಬಾವಿಗೆ ಅಳವಡಿಸಿದ ಪಂಪಸೇಟ್ ರಿಪೇರಿ ಮಾಡಲು ಹೋಗಿ ಕಾಲು ಜಾರಿ ಬಿದ್ದು ಕಡೋಲಿ ಗ್ರಾಮದ ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ನಿನ್ನೆ (ಶನಿವಾರ) ರಾತ್ರಿ ವೇಳೆ ನಡೆದಿದೆ. ಕಡೋಲಿ ಗ್ರಾಮದ ಲಕ್ಷ್ಮಿ ಗಲ್ಲಿಯ ಅನೀಲ ಕಲ್ಲಪ್ಪಾ ಉಚ್ಚುಕರ  (48 ವರ್ಷ ) ಮೃತ ವ್ಯಕ್ತಿ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸ್ಥಳಕ್ಕೆ ಕಾಕತಿ ಪಿಎಸ್ಐ ಅವಿನಾಶ್ ಯರಗೊಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ …

Read More »

ಮಾನವನಿಗೆ ಕಣ್ಣು ಅತೀ ಮುಖ್ಯವಾದ ಅಂಗವಾಗಿದ್ದು, ಅದರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು : ಬಿಇಒ ಜಿ.ಬಿ.ಬಳಗಾರ

ಗೋಕಾಕ:ಮಾನವನಿಗೆ ಕಣ್ಣು ಅತೀ ಮುಖ್ಯವಾದ ಅಂಗವಾಗಿದ್ದು, ಅದರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು : ಬಿಇಒ ಜಿ.ಬಿ.ಬಳಗಾರ ಮಾನವನಿಗೆ ಕಣ್ಣು ಅತೀ ಮುಖ್ಯವಾದ ಅಂಗವಾಗಿದ್ದು, ಅದರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು ಮಂಗಳವಾರದಂದು ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ತಾಲೂಕಾ ಸಾರ್ವಜನಿಕ ಆಸ್ಪತ್ರೆ ಹಾಗೂ ರೋಟರಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಗೋಕಾಕ ವಲಯದ 1ನೇ ತರಗತಿಯಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲಾ …

Read More »

ಮೂವರು ಯುವತಿಯರು ನಾಪತ್ತೆ ದೂರು ದಾಖಲು

ಬೆಳಗಾವಿಯ ವಿವಿಧ ಆಧಾರ ಕೇಂದ್ರಗಳಲ್ಲಿದ್ದ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ.       ಕಂಪೌಂಡ್ ಜಿಗಿದು ನಾಪತ್ತೆ ಇಲ್ಲಿನ ಸದಾಶಿವ ನಗರದಲ್ಲಿರುವ ಸಮೃದ್ಧಿ ಸೇವಾ ಸಂಸ್ಥೆ ಸ್ಪೂರ್ತಿ ಸ್ವಾಧಾರ ಗೃಹ ಆಶ್ರಯದಲ್ಲಿದ್ದ ಮೇಘಾ ಮಲ್ಲಪ್ಪ ಹಳಬರ ಎಂಬ ಮಹಿಳೆ ಜನವರಿ ೨೨ ರಂದು ಮುಂಜಾನೆ ಯಾರಿಗೂ ಹೇಳದೆ ಕೇಳದೆ ಸ್ವಾಧಾರ ಗೃಹದ ಕಾಂಪೌಂಡ್ ಜಿಗಿದು ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ. ಕಾಣೆಯಾದವರು ಮೂಲತಃ ರಾಯಭಾಗ ತಾಲ್ಲೂಕಿನ ವಡಕಿ ತೋಟ ಹಾರೂಗೇರಿ ನಿವಾಸಿಯಾಗಿದ್ದು, …

Read More »

ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ರಿಲೀಸ್​​.. ಲವ್ ಜಿಹಾದ್‌ಗೆ ಶಿಕ್ಷೆ; ಮತ್ತೇನಿದೆ?

ಉತ್ತರದ ನಾಡಿನ ಚುನಾವಣೆಗೆ ಇನ್ನೊಂದು ದಿನ ಬಾಕಿ ಇದೆ. ಚುನಾವಣೆಗೂ 48 ಗಂಟೆಯ ಮುಂಚೆಯೇ ಕಮಲ ಪಡೆ ತನ್ನ ಪ್ರಣಾಳಿಕೆಯನ್ನ ರಿಲೀಸ್​ ಮಾಡಿದೆ. ನಾಡಿನ ರೈತರು ಹಾಗೂ ವಿದ್ಯಾರ್ಥಿಗಳಿಗೆ ಭರಪೂರದ ಭರವಸೆಗಳನ್ನೇ ಉಣಬಡಿಸಿದೆ. ಮುಖ್ಯವಾಗಿ ಲವ್‌ ಜಿಹಾದ್‌ಗೆ ಕಾಯ್ದೆ ಜಾರಿ ತರುವ ಭರವಸೆ ಪ್ರಸ್ತಾಪವಾಗಿದೆ. ಲವ್ ಜಿಹಾದ್‌ಗೆ ಶಿಕ್ಷೆ, ಮತದಾರರಿಗೆ ಭರಪೂರ ಭರವಸೆ ಒಂದು ದಿನ.. ಉತ್ತರದ ಚುನಾವಣಾ ಕದನಕ್ಕೆ ಇನ್ನೊಂದೇ ದಿನ ಬಾಕಿ. ಭಾರೀ ಜಿದ್ದಾಜಿದ್ದಿನ ಪ್ರಚಾರದ ನಡುವೆಯೇ …

Read More »

ಬೆಂಕಿ ಬಿದ್ದ ಮೇಲೆ ಬಾವಿ ತೋಡಿದ್ರು.. ಹಿಜಾಬ್ ವಿವಾದದಲ್ಲಿ ಸರ್ಕಾರ ಎಡವಿದ್ದು ಎಲ್ಲಿ..?

ಇಲ್ಲಿ ಯಾವ ಆಶಯಗಳಿದ್ವೋ ಏನೋ? ಆದ್ರೆ, ಸಂವಿಧಾನದ ಆಶಯಗಳು ಗಾಳಿ ಗೋಪುರವಾದವು.. ಈವರೆಗೆ ಇಲ್ಲದ ಹಿಜಾಬ್ ವಿವಾದ ಧುತ್ತನೇ ಎದ್ದು, ರಾಜ್ಯ ಧರ್ಮಾಧಾರಿತ ರಾಜಕಾರಣದ ಪ್ರಯೋಗಶಾಲೆ ಆಯ್ತು.. ಗುಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಸರ್ಕಾರ ಬಾವಿ ತೋಡಿತು. ಪರಿಸ್ಥಿತಿ ಕೈಮೀರಿದ ಮೇಲೆ ಎಚ್ಚೆತ್ತುಕೊಂಡಿತಾ ಸರ್ಕಾರ? ರಾಜ್ಯದೆಲ್ಲೆಡೆ ಹಿಜಾಬ್ ವಿವಾದ ಜೋರಾಗಿದೆ. ಇದನ್ನ ನಂದಿಸಲು ಸರ್ಕಾರ 3 ದಿನಗಳ ಕಾಲ ಕಾಲೇಜುಗಳಿಗೆ ರಜೆಯನ್ನೂ ಘೋಷಿಸಿದೆ. ಆದ್ರೆ, ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ …

Read More »

ಒಂದೇ ಕುಟುಂಬ ಐವರ ಬರ್ಬರ ಮರ್ಡರ್​​ಗೆ ರೋಚಕ ಟ್ವಿಸ್ಟ್​; ಕೊಲೆ ಆರೋಪಿ ಬಂಧನ

ಮಂಡ್ಯ: ಫೆಬ್ರವರಿ 6 ರಂದು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಗ್ರಾಮದಲ್ಲಿ ಒಂದೇ ಕುಟುಂಬದ ಐವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ. ಒಂದೇ ಕುಟುಂಬದ ಲಕ್ಷ್ಮೀ (26), ರಾಜ್ (12), ಕೋಮಲ್ (7), ಕುನಾಲ್ (4), ಗೋವಿಂದ (8) ಅವ್ರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕಗ್ಗೊಲೆ ಮಾಡಲಾಗಿತ್ತು. ಇದೀಗ ಕೊಲೆ ಆರೋಪಿಯನ್ನ ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀ (30) ಬಂಧಿತ ಆರೋಪಿ. …

Read More »

ಖಾಸಗಿ ಮಾರುಕಟ್ಟೆ ನಿರ್ಮಾಣಕ್ಕೆ ಅಧಿಕಾರಿಗಳು ಶಾಮೀಲು, ಸರ್ಕಾರ ಸಾಥ್:‌ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

  ಬೆಳಗಾವಿ: ” ಖಾಸಗಿ ಮಾರುಕಟ್ಟೆ ನಿರ್ಮಾಣಕ್ಕೆ ಕೆಲವೊಂದು ಅಧಿಕಾರಿಗಳು ಶಾಮೀಲು ಆಗಿದ್ದು, ಇದಕ್ಕೆ ಸರ್ಕಾರವೂ ಸಾಥ್‌ ನೀಡಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.   ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮಾದ್ಯಮರೊಂದಿಗೆ ಮಾತನಾಡಿದ ಅವರು, ರೈತರ ಹಿತದೃಷ್ಟಿಯಿಂದ 50 ಕೋಟಿ ರೂ. ವೆಚ್ಚದಲ್ಲಿ ಕೃಷಿ ಉತ್ಪನ ಮಾರುಕಟ್ಟೆ ನಿರ್ಮಿಸಲಾಗಿದೆ. ಪ್ರಭಾವಿಗಳಿಂದ ಖಾಸಗಿ ಮಾರುಕಟ್ಟೆ ಆರಂಭವಾಗುತ್ತಿದೆ. ಹೀಗಾಗಿ ಎರಡು ಮಾರುಕಟ್ಟೆ ಉಳಿಯುವ ಸಾಧ್ಯತೆ ಕಾಣುತ್ತಿದೆ. …

Read More »

ಸಿಬಿಐ ತನಿಖೆಯ ಸಿಂಧುತ್ವ ಪ್ರಶ್ನಿಸಿದ್ದ ಮೇಲ್ಮನವಿ: ವಿನಯ್ ಕುಲಕರ್ಣಿ ಅರ್ಜಿ ವಜಾ

ನವದೆಹಲಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣದ ಸಿಬಿಐ ತನಿಖೆಯ ಸಿಂಧುತ್ವವನ್ನು ಪ್ರಶ್ನಿಸಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ರವೀಂದ್ರ ಭಟ್ ಹಾಗೂ‌ ಪಿ.ಎಸ್.ನರಸಿಂಹ ಅವರಿದ್ದ ಪೀಠವು ಕೊಲೆ ಪ್ರಕರಣದ ಸಿಬಿಐ ತನಿಖೆಯನ್ನು ಪ್ರಶ್ನಿಸಿ ಕುಲಕರ್ಣಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾ‌ ಮಾಡಿತು.   ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು 2019ರಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು. …

Read More »

ಜಿಲ್ಲಾ ಕಾರ್ಯಾಧ್ಯಕ್ಷರಾಗಿ ವೈಶಾಲಿ ಭರಭರಿ ನೇಮಕ

ಗೋಕಾಕ ಫೆ, 7 :- ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಆಯೋಗದ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಕರದಂಟು ನಾಡು       ಗೋಕಾಕದ ವೈಶಾಲಿ ಭರಭರಿ ಅವರು ನೇಮಕಗೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಗೋಕಾಕ ತಾಲೂಕಿನಲ್ಲಿ ಮಾಡುತ್ತಿರುವ ಸಾಮಾಜಿಕ ಸೇವೆಯನ್ನು ಗುರುತಿಸಿ ಬೆಳಗಾವಿ ಜಿಲ್ಲಾಧ್ಯಕ್ಷ ಅಶೋಕ ಕೆಂಗಣ್ಣವರ ಮತ್ತು ರಾಜ್ಯಾಧ್ಯಕ್ಷ ಡಿ.ಶೇಖರರೆಡ್ಡಿ ಅವರ ಶಿಫಾರಸಿನ ಮೇರೆಗೆ ರಾಷ್ಟ್ರೀಯ ಅಧ್ಯಕ್ಷ ಮೆಹತಾಬ ರಾಯ ಆದೇಶ ಹೊರಡಿಸಿದ್ದಾರೆ.

Read More »

ಬೆಳಗಾವಿ ಬೆಂಗಳೂರಿಗೆ ಅತಿಹೆಚ್ಚು ಸಚಿವ ಸ್ಥಾನ ನೀಡಿದ್ದಾರೆ: ಅಸಮಾಧಾನ ಹೊರಹಾಕಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ರಾಜ್ಯ ಸರಕಾರ ಮಂತ್ರಿಗಿರಿ ಹಂಚಿಕೆ ವಿಚಾರದಲ್ಲಿ ಭೌಗೋಳಿಕವಾಗಿ ಅಸಮತೋಲನ ಮಾಡಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿ ಹಾಗೂ ಬೆಂಗಳೂರಿಗೆ ಹೆಚ್ಚು ಮಂತ್ರಿ ಸ್ಥಾನಗಳನ್ನು ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಸಚಿವ ಸಂಪುಟ ರಚನೆ ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ಇದು ಅವರ ವಿವೇಚನೆಗೆ ಬಿಟ್ಟಿದ್ದು. ಅದನ್ನು ಪ್ರಶ್ನೆಮಾಡುವ ನೈತಿಕ ಹಕ್ಕು ನನಗಿಲ್ಲ. ಆದರೆ ಭೌಗೋಳಿಕವಾಗಿ ಸಚವ ಸ್ಥಾನ …

Read More »