Home / ರಾಜ್ಯ (page 983)

ರಾಜ್ಯ

ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ

ರೈತರು ಹಾಗೂ ಗ್ರಾಮೀಣ ಭಾಗದ ಜನರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವಾಸುದೇವ ಮೇಟಿ ಬಣದಿಂದ ನಡೆದ ಪ್ರತಿಭಟನೆಯಲ್ಲಿ ಬೀಜ, ಗೊಬ್ಬರ ಬೆಲೆ ಹೆಚ್ಚಿಗೆ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ತೀವ್ರ …

Read More »

ನಂದಗಡ ರಸ್ತೆಯ ಮಧ್ಯದಲ್ಲಿ ಸುಮಾರು ವರ್ಷಗಳಿಂದ ಉದ್ಘಾಟನೆ ಭಾಗ್ಯ ಇಲ್ಲದೇ ಇದ್ದ ಟ್ರೀ ಪಾರ್ಕ್ ಕೊನೆಗೂ ಉದ್ಘಾಟನೆ

ಖಾನಾಪೂರ- ನಂದಗಡ ರಸ್ತೆಯ ಮಧ್ಯದಲ್ಲಿ ಸುಮಾರು ವರ್ಷಗಳಿಂದ ಉದ್ಘಾಟನೆ ಭಾಗ್ಯ ಇಲ್ಲದೇ ಇದ್ದ ಟ್ರೀ ಪಾರ್ಕ್ ಕೊನೆಗೂ ಉದ್ಘಾಟನೆ ಭಾಗ್ಯ ಕಂಡಿತು. ಅರಣ್ಯ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಧೋರಣೆಯಿಂದ ಸುಮಾರು ಎರಡು, ಮೂರು ವರ್ಷಗಳ ಕಾಲ ಇದು ಸಾರ್ವಜನಿಕರ ಸದುಪಯೋಗಕ್ಕೆ ಅನುಕೂಲ ವಾಗದೇ ರೀತಿಯಲ್ಲಿ ಇತ್ತು ಒಳಗಡೆ ಅಂತೂ ಸುವ್ಯವಸ್ಥಿತ ರೀತಿಯಲ್ಲಿ ಚಿಕ್ಕ ಮಕ್ಕಳಿಗೆ ಆಟವಾಡಲು, ಹಿರಿಯರಿಗೆ ವಾಯು ವಿಹಾರಕ್ಕೆ ಸುಂದರವಾದ ವಾತಾವರಣದಿಂದ ಕೂಡಿದೆ ಆದರೆ ಇದನ್ನು ಸಾರ್ವಜನಿಕರಿಗೆ …

Read More »

ಅಗ್ನಿಪಥ್ ಫೈಟ್: ಬೆಳಗಾವಿಯಲ್ಲಿ 150ಕ್ಕೂ ಅಧಿಕ ಸೇನಾ ಆಕಾಂಕ್ಷಿ ವಶಕ್ಕೆ

ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಚಲೋ, ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಚಲೋ, ಬೆಳಗಾವಿ ಬಂದ್‍ಗೆ ಕೆಲವರು ಕರೆ ನೀಡಿರುವ ಹಿನ್ನೆಲೆ ಈವರೆಗೆ ಬೆಳಗಾವಿಯಲ್ಲಿ 150ಕ್ಕೂ ಅಧಿಕ ಸೇನಾ ಆಕಾಂಕ್ಷಿಗಳನ್ನು  ವಶಕ್ಕೆ ಪಡೆದಿದ್ದಾರೆ.ಹೌದು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಸಂಬಂಧ ಪರ-ವಿರೋಧ ವ್ಯಕ್ತವಾಗುತ್ತಿದೆ. ಬೆಳಗಾವಿ ನಗರದ ವಿವಿಧೆಡೆ ಗುಂಪು ಸೇರಿ ನಿಂತಿದ್ದ 150ಕ್ಕೂ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸೇನಾ ಆಕಾಂಕ್ಷಿಗಳು ಕೇಂದ್ರ …

Read More »

ಬೆಂಗಳೂರಿನ `IISC’ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಇಂದು ಬೆಂಗಳೂರಿಗೆ ಆಗಮಿಸಿದ್ದು, ಪ್ರಧಾನಿ ಮೋದಿ ಅವರು IISc ನ ಮೆದುಳು ಸಂಶೋಧನಾ ಕೇಂದ್ರ (CBR) ಉದ್ಘಾಟಸಿದ್ದಾರೆ. ಇಂದು ಬೆಂಗಳೂರಿನ ಯಲಹಂಕ ವಾಯುನೆಲೆಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ IISc ನ ಮೆದುಳು ಸಂಶೋಧನಾ ಕೇಂದ್ರ (CBR) ಉದ್ಘಾಟಸಿದ್ದಾರೆ ಮತ್ತು ಬಾಗ್ಚಿ ಪಾರ್ಥಸಾರಥಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪ್ರಧಾನಿ …

Read More »

ರೇವಣಸಿದ್ಧೇಶ್ವರ ಗವೀಮಠದ ಮಹಿಮೆ ಅಪಾರವಾದದ್ದು- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

    ಮೂಡಲಗಿ* ಮೂಡಲಗಿಯ ಮೂಲ ದೇವರೆಂದೇ ಭಕ್ತರಿಂದ ಕರೆಸಿಕೊಳ್ಳುವ ರೇವಣಸಿದ್ಧ ಗವಿಮಠದ ಮಹಿಮೆ ಅಪಾರವಾದುದ್ದು. ಮಠದ ಭಕ್ತ ವೃಂದದವರ ಆಶಯದಂತೆ ಮುಖ್ಯ ರಸ್ತೆಯಿಂದ ಗವಿಮಠದವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಪಟ್ಟಣದ ಹೊರವಲಯದಲ್ಲಿರುವ ರೇವಣಸಿದ್ಧೇಶ್ವರ ಗವಿ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಗವಿಮಠವು ಇಲ್ಲಿಯ ಆರಾಧ್ಯದೈವವಾಗಿರುವ ಶಿವಬೋಧರಂಗ ಮಠದಂತೆಯೇ ಪ್ರಸಿದ್ಧಿಯಾಗಿದೆ. ಸಿದ್ಧ ಸಂಸ್ಥಾನಮಠದ ಮೂಲ ಪೀಠಾಧಿಪತಿಗಳು ಮೂಡಲಗಿಯಲ್ಲಿ …

Read More »

ಗೌಂಡವಾಡ ಗ್ರಾಮದ ಯುವಕನ ಅಂತ್ಯಕ್ರಿಯೆ ಕುಟುಂಬಸ್ಥರ ಆಕ್ರಂದನ

ದೇವಸ್ಥಾನ ಜಾಗ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಹತ್ಯೆಯಾಗಿದ್ದ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಯುವಕನ ಅಂತ್ಯಕ್ರಿಯೆ ಕುಟುಂಬಸ್ಥರ ಆಕ್ರಂದನದ ನಡುವೆ ಸ್ವಗ್ರಾಮದಲ್ಲಿ ನೆರವೇರಿದೆ. ಹೌದು ಗೌಂಡವಾಡ ಗ್ರಾಮದ ಕಾಲಭೈರವನಾಥ್ ದೇವಸ್ಥಾನದ ಜಾಗದ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಶನಿವಾರ ರಾತ್ರಿ ಸತೀಶ ಪಾಟೀಲ್ ಹತ್ಯೆಯಾಗಿದ್ದರು. ಇದರಿಂದ ಇಡೀ ಗ್ರಾಮದಲ್ಲಿ ರೋಷಾಗ್ನಿ ಜ್ವಾಲೆ ಹೊತ್ತಿಕೊಂಡು ಉದ್ರಿಕ್ತಗೊಂಡ ಗ್ರಾಮಸ್ಥರಿಂದ ಸಾಕಷ್ಟು ವಾಹನಗಳಿಗೆ ಬೆಂಕಿ ಇಡಲಾಗಿತ್ತು. ಘಟನೆಯಿಂದ ಇಡೀ ಗೌಂಡವಾಡ ಗ್ರಾಮದಲ್ಲಿ ಬಿಗುವಿನ ವಾತಾವರಣವೇ ನಿರ್ಮಾಣವಾಗಿತ್ತು. …

Read More »

ಪಥ್ ಯೋಜನೆ ವಿರೋಧಿಸಿ ಖಾನಾಪುರ ಬಂದ್ ವಾಪಾಸ್ ಪಡೆಯಲಾಗಿದೆ.: ಅಂಜಲಿ ನಿಂಬಾಳ್ಕರ್

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ಬಂದ್ ಗೆ ಕರೆ ನೀಡಲಾಗಿತ್ತು. ಆದ್ರೇ ಖಾನಾಪುರ ತಾಲೂಕಿನ ಸಂತೆ ಕೂಡ ಇದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಹಿನ್ನಲೆಯಲ್ಲಿ,  ಖಾನಾಪುರ ಬಂದ್ ವಾಪಾಸ್ ಪಡೆಯಲಾಗಿದೆ.    ಈ ಬಗ್ಗೆ ಸುದ್ದಿಗಾರರಿಗೆ ಖಾನಾಪುರದಲ್ಲಿ ಮಾಹಿತಿ ನೀಡಿದಂತ ಶಾಸಕ ಅಂಜಲಿ ನಿಂಬಾಳ್ಕರ್, ಅಗ್ನಿಪಥ್ ಯೋಜನೆ ವಿರೋಧಿಸಿ  ಖಾನಾಪುರ ಬಂದ್ ಗೆ ಕರೆ ನೀಡಲಾಗಿತ್ತು. ಖಾನಾಪುರ ಸಂತೆ ಇರೋ ಕಾರಣ, ಸಾರ್ವಜನಿಕರಿಗೆ …

Read More »

ಅಗ್ನಿಪಥ ಯೋಜನೆ ಬಗ್ಗೆ ಇಂಚು ಇಂಚು ಮಾಹಿತಿ ನೀಡಿದ ಭಾರತೀಯ ಸೇನೆ!

ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಇಂದು ಭಾರತೀಯ ಮೂರು ಸೇನೆಗಳ ಜಂಟಿ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಿವೆ. ಅಲ್ಲದೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಮೂರು ಸೇನಾ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದರು. ಅದರ ನಂತರ ಇದೀಗ ಸೇನಾ ಅಧಿಕಾರಿಗಳು ಯೋಜನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಪ್ರತಿ ವರ್ಷ ಸುಮಾರು 17,600 ಸಿಬ್ಬಂದಿ ಅಕಾಲಿಕ ನಿವೃತ್ತಿ ಹೊಂದುತ್ತಾರೆ, ಇದು ಕೂಡ ಅಗ್ನಿಪಥ್ ಯೋಜನೆಯಡಿ ಮಾತ್ರವಲ್ಲ …

Read More »

ಮೋದಿ ಓಡಾಡುವ ರಸ್ತೆಗಳ ಕಾಲೇಜಿಗೆ ರಜೆ

ಬೆಂಗಳೂರಿನಲ್ಲಿ ಮೋದಿ ಓಡಾಡುವ ರಸ್ತೆಗಳ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಬೆಂಗಳೂರು ವಿವಿ ಸಂಯೋಜನೆಗೆ ಒಳಪಟ್ಟ ವಿವಿ ವ್ಯಾಪ್ತಿಯ ಒಟ್ಟು 64 ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.ಬೆಂಗಳೂರು: ನಾಳೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಕಾರ್ಯಕ್ರಮ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ(Bangalore University) ಸ್ಥಳೀಯ ರಜೆ ಘೋಷಣೆ ಮಾಡಿ ಬೆಂಗಳೂರು ವಿವಿ ಸುತ್ತೋಲೆ ಕಳಿಸಿದೆ. ವಿವಿ ಆವರಣದಲ್ಲಿರುವ ಅಂಬೇಡ್ಕರ್ ಸ್ಕೂಲ್ ಎಕನಾಮಿಕ್ಸ್ ಉದ್ಘಾಟನೆ ಹಿನ್ನೆಲೆ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ರಜೆ …

Read More »

ಬಾಗಲಕೋಟೆ ಜಿಲ್ಲಾಧಿಕಾರಿಗೆ ಕ್ಲಾಸ್​ ತೆಗೆದುಕೊಂಡ ಮಾಜಿ ಸಿಎಂ

ಬಾಗಲಕೋಟೆ: ಜೂನ್ 21 ರಂದು ಪಟ್ಟದಕಲ್ಲಿನಲ್ಲಿ ನಡೆಯುವ ಯೋಗ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಕೇಳದೇ ಹೆಸರು ಹಾಕಿದ್ದಕ್ಕೆ ಗರಂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆ ಡಿಸಿ ಸುನೀಲಕುಮಾರ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಕರೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಿನಗೆ ಶಿಷ್ಟಾಚಾರ ಅಂದ್ರೆ ಏನು ಎಂಬುದು ಗೊತ್ತಿಲ್ವಾ? ನೀನು ಮೊದಲು ಶಿಷ್ಟಾಚಾರವನ್ನು ಪಾಲಿಸಬೇಕು. ಅವನ್ಯಾರೋ ಸಚಿವ ಬರ್ತಾನೆ ಅಂತಾ ನೀನು ಆಮಂತ್ರಣ ಪತ್ರಿಕೆ ಮಾಡಿ ಕಳುಹಿಸಿಬಿಟ್ಟರೆ …

Read More »