Breaking News

ರಾಜಕೀಯ

ಸತೀಶ ಲ ಜಾರಕಿಹೊಳಿ ಅವರ ಸೂಚನೆಯಂತೆ ಗೋಕಾಕ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ರಮೇಶ್ ಲ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಹೆಸ್ಕಾಂ ಘಟಪ್ರಭಾಉಪ ವಿಭಾಗದ ಗ್ರಾಹಕರ ಸಲಹಾ ಸಮಿತಿ ರಚನೆ

ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸತೀಶ ಲ ಜಾರಕಿಹೊಳಿ ಅವರ ಸೂಚನೆಯಂತೆ ಗೋಕಾಕ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ರಮೇಶ್ ಲ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಹೆಸ್ಕಾಂ ಘಟಪ್ರಭಾಉಪ ವಿಭಾಗದ ಗ್ರಾಹಕರ ಸಲಹಾ ಸಮಿತಿ ರಚನೆ ಮಾಡಲಾಗಿದೆ ಈ ಸಮಿತಿಯಲ್ಲಿ ಘಟಪ್ರಭಾದ ಹಿರಿಯ ವೈದ್ಯರಾದ ಡಾ, ವಿರೂಪಾಕ್ಷ ಈಶ್ವರಪ್ಪ ಪತ್ತಾರ, ಸ್ನೇಹಿತರಾದ ಶ್ರೀ ಮಲ್ಲಿಕಾರ್ಜುನ ತುಕ್ಕಾನಟ್ಟಿ, …

Read More »

ವಿಶ್ವವನ್ನೇ ಬೆರಗುಗೊಳಿಸಿದ ವೀರ ಸನ್ಯಾಸಿ ವಿವೇಕಾನಂದರು: ವಿವೇಕ ಜತ್ತಿ ಗೋಕಾಕದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ವಿಶ್ವವನ್ನೇ ಬೆರಗುಗೊಳಿಸಿದ ವೀರ ಸನ್ಯಾಸಿ ವಿವೇಕಾನಂದರು: ವಿವೇಕ ಜತ್ತಿ ಗೋಕಾಕದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಗೋಕಾಕ: ನಗರದ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಕಾಂಗ್ರೆಸ್‌ ಮುಖಂಡ ವಿವೇಕ ಜತ್ತಿ ಮಾತನಾಡಿ, “ವಿವೇಕನಾಂದರು ಹೊಂದಿರುವ ಜ್ಞಾನವನ್ನು ಮತ್ತೆ ಯಾರೂ ಹೊಂದಿರಲಿಲ್ಲ. ಅದಕ್ಕೆ ಅವರನ್ನು ತಿಳಿದುಕೊಳ್ಳಬೇಕೆಂದರೆ ಮತ್ತೊಬ್ಬ ವಿವೇಕಾನಂದರು ಹುಟ್ಟ ಬೇಕಾಗುತ್ತದೆ” ಎಂದು ಹೇಳಿದರು. ಭಾರತದ ಅತ್ಯಂತ …

Read More »

ಔಡಲ ಗಿಡದ ಕಾಯಿ ತಿಂದು ಅಸ್ವಸ್ಥರಾಗಿ ಮಕ್ಕಳು ಆಸ್ಪತ್ರೆಗೆ ದಾಖಲ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಲಾಡ್

ಧಾರವಾಡ: ಔಡಲ ಗಿಡದ ಕಾಯಿ ತಿಂದು ಅಸ್ವಸ್ಥರಾಗಿ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸಂತೋಷ್​ ಲಾಡ್ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಂಭ್ಯಾಪುರ ಗ್ರಾಮದಲ್ಲಿ‌ ನಿನ್ನೆ ಸಂಜೆ ಶಾಲೆಯಿಂದ ಬರುತ್ತಿದ್ದ ವಿದ್ಯಾರ್ಥಿಗಳು ದಾರಿಯಲ್ಲಿ ಔಡಲ ಗಿಡದ ಕಾಯಿ ತಿಂದು ಅಸ್ವಸ್ಥರಾಗಿದ್ದರು. ಬಳಿಕ ರಾತ್ರಿ ವಾಂತಿ ಬೇದಿಯಿಂದ ಬಳಲಿದ್ದು, ಪೋಷಕರು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ …

Read More »

ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆ, 18 ಕಾರ್ಮಿಕರು ಅಸ್ವಸ್ಥ

ಕಾರವಾರ, ಜನವರಿ 11: ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆಯಿಂದ (Chemical Leak) 18 ಕಾರ್ಮಿಕರು ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಬಳಿಯ ಆದಿತ್ಯ ಬಿರ್ಲಾ ಗ್ರೂಪ್​ನ ಕಾಸ್ಟಿಕ್ ಸೋಡಾ ಉತ್ಪಾದಿಸುವ ಗ್ರಾಸಿಮ್ ಇಂಡಸ್ಟ್ರೀಸ್​ನಲ್ಲಿ ನಡೆದಿದೆ. ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರವಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ನೀಲಕಂಠ, ಜಹನ್ನೂರು, ಕಮಲೇಶ್ ವರ್ಮಾ, ನಂದಕಿಶೋರ್, ದೀಪು, ಸೃಜನ್, ನಜೀದುಲ್ಲಾ, ಬೇಜನ್ ಕುಮಾರ್, ಕಿಶನ್ ಕುಮಾರ್, ಅಜೀಜ್, ಮೋಹಿತ್ ವರ್ಮಾ ಸೇರಿದಂತೆ ಕರ್ನಾಟಕ, …

Read More »

ಕರ್ನಾಟಕ ಕಾಂಗ್ರೆಸ್​ನಲ್ಲಿ ಡಿನ್ನರ್ ಮತ್ತು ಡಿಶುಂ ಡಿಶುಂ ಪಾಲಿಟಿಕ್ಸ್

ಬೆಂಗಳೂರು, ಜನವರಿ 12: ಕರ್ನಾಟಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಎಷ್ಟೇ ಒಗ್ಗಟ್ಟಿನ ಬಲ ಪ್ರದರ್ಶನ ತೋರಿದರೂ ಅದರ ಒಳಬೇಗುದಿ ಮತ್ತು ಆಂತರಿಕ ಕಚ್ಚಾಟ ಆಗಾಗ್ಗೆ ಬಹಿರಂಗಗೊಳ್ಳುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ ಸತೀಶ್ ಜಾರಕಿಹೊಳಿ ಮನೆಯಲ್ಲಿ ಕೆಲ ನಾಯಕರು ಸಿಎಂ ಜೊತೆ ಡಿನ್ನರ್​ನಲ್ಲಿ ಪಾಲ್ಗೊಂಡಿದ್ದು ಸಾಕಷ್ಟು ಹುಬ್ಬೇರಿಸಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಬಣಗಳ ನಡುವಿನ ಕಚ್ಚಾಟವು ಜಾತಿ ಸ್ವರೂಪದಂತಹ ಅತಿರೇಕಕ್ಕೆ ಹೋಗಿದೆ. ಇದು ಈಗ …

Read More »

2025ರಲ್ಲಿ ಬರಲಿವೆ ಸಖತ್ ಐಪಿಒಗಳು

ನವದೆಹಲಿ, ಜನವರಿ 12: ಕಳೆದ ವರ್ಷ (2024) ಸಾಕಷ್ಟು ಐಪಿಒಗಳು ಬಿಡುಗಡೆಯಾಗಿ ಲಕ್ಷಾಂತರ ಕೋಟಿ ರೂ ಮೊತ್ತದ ಬಂಡವಾಳ ಸಂಗ್ರಹಣೆ ಆಗಿತ್ತು. ಈ ವರ್ಷವೂ ಅದೇ ಟ್ರೆಂಡ್ ಮುಂದುವರಿಯಲಿದೆ. ಮಾರುಕಟ್ಟೆ ಹಿನ್ನಡೆಯಲ್ಲಿದ್ದರೂ ಐಪಿಒಗಳು ಅಬಾಧಿತವಾಗಿ ಮುಂದುವರಿಯುವ ನಿರೀಕ್ಷೆ ಇದೆ. ಕೋಟಕ್ ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್ ಸಂಸ್ಥೆ ಮಾಡಿರುವ ಅಂದಾಜು ಪ್ರಕಾರ ಮುಂದಿನ 12 ತಿಂಗಳಲ್ಲಿ 35 ಬಿಲಿಯನ್ ಡಾಲರ್ (ಮೂರು ಲಕ್ಷ ಕೋಟಿ ರೂ) ಮೌಲ್ಯದ ಐಪಿಒಗಳು ಪ್ರಾಥಮಿಕ ಮಾರುಕಟ್ಟೆಗೆ (primary market) …

Read More »

ಸಿ ಟಿ ರವಿ ಕೇಸ್​ ರೂಲಿಂಗ್ ಬಳಿಕವೂ ಸಿಐಡಿ ತನಿಖೆಗೆ ವಹಿಸಿರುವುದಕ್ಕೆ ಆಕ್ಷೇಪ; ಗೃಹ ಸಚಿವರಿಗೆ ಹೊರಟ್ಟಿ ಪತ್ರ

ಬೆಂಗಳೂರು: ರೂಲಿಂಗ್ ನೀಡಿದರೂ ವಿಧಾನ ಪರಿಷತ್​ ಬಿಜೆಪಿ ಸದಸ್ಯ ಸಿ.ಟಿ. ರವಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಬಗ್ಗೆ ಆಕ್ಷೇಪಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವ ಜಿ. ಪರಮೇಶ್ವರ್​​ಗೆ ಪತ್ರ ಬರೆದಿದ್ದಾರೆ.‌ ಬೆಳಗಾವಿ ವಿಧಾನ ಪರಿಷತ್ ಕಲಾಪದಲ್ಲಿನ ಅವಾಚ್ಯ ಶಬ್ದ ಬಳಕೆ ಆರೋಪದ ಘಟನೆ ಕುರಿತು ಸಿಐಡಿ ತನಿಖೆ ಬಗ್ಗೆ ಪತ್ರ ಬರೆದಿರುವ ಸಭಾಪತಿ, ರೂಲಿಂಗ್ ನೀಡಿದ್ದರೂ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಕ್ರಮ ಪ್ರಶ್ನಿಸಿದ್ದಾರೆ. ಸಭಾಪತಿ ಅಧಿಕಾರಕ್ಕೆ …

Read More »

ಕಂಬಳೋತ್ಸವವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು : ”ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ.‌ ನಮ್ಮದು ಬಹುತ್ವದ ದೇಶ‌” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ”ಜನಪದ ಕ್ರೀಡೆ ಕಂಬಳ ಸರ್ವ ಜಾತಿ, ಧರ್ಮದ ಜನ ಸಮುದಾಯವನ್ನು ಬೆಸೆಯುವಂತೆ ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಕರಾವಳಿ ಜಿಲ್ಲೆಗಳ ಒಂದು ಸಂಸ್ಕೃತಿಯಾಗಿದೆ. ನಮ್ಮ ಸರ್ಕಾರ ಕೂಡ ಎಲ್ಲಾ …

Read More »

ಸಿಎಂ ಕುರ್ಚಿ ಕಿತ್ತಾಟದಿಂದ ಕಾಂಗ್ರೆಸ್‌ ಸರ್ಕಾರದ ಪತನ ಖಚಿತ: ಜಗದೀಶ್​ ಶೆಟ್ಟರ್

ಹುಬ್ಬಳ್ಳಿ: ಕಾಂಗ್ರೆಸ್​ನ ಕುರ್ಚಿ ಗುದ್ದಾಟ ಜೋರಾಗಿದೆ. ಸಿಎಂ ಕುರ್ಚಿಗಾಗಿ ಅವರಲ್ಲೇ ಗುದ್ದಾಟ ನಡೆದಿದೆ. ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಿಂದ ಕಾಂಗ್ರೆಸ್ ಸರ್ಕಾರ ಪತನವಾಗುವುದು ಖಚಿತ ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಇದು ಒಂದಲ್ಲ ಒಂದು ದಿನ ಇದು ಹೊರ ಬರುತ್ತೆ ಅಂತ ಹೇಳಿದ್ದೆ.‌ ಈಗಾಗಲೇ ಔತಣಕೂಟ ಆರಂಭವಾಗಿದೆ.‌ ಕೆಲ ಸಚಿವರು ಸೇರಿ ಔತಣಕೂಟ ಆಯೋಜನೆ ಮಾಡಿದರು. ಆದರೆ, ಎಸ್‌ಸಿ, ಎಸ್‌ಟಿ …

Read More »

ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್; ಡಿಸಿಎಂ ಡಿಕೆ ಶಿವಕುಮಾ‌ರ್

ಸಿ ಟಿ ರವಿ ಒಬ್ಬ ದೊಡ್ಡ ಡ್ರಾಮಾ ಮಾಸ್ಟರ್. ಸುಳ್ಳಿಗೆ ಸುಳ್ಳು ಪೋಣಿಸಿ ಕತೆ ಹೆಣೆಯುವುದರಲ್ಲಿ ನಿಸ್ಸಿಮ ಎಂದು ಡಿಸಿಎಂ ಡಿ ಕೆ ಶಿವಕುಮಾ‌ರ್ ಅವರು ಟೀಕಿಸಿದ್ದಾರೆ. ಶೃಂಗೇರಿಯಲ್ಲಿ ಅವರು ಮಾಧ್ಯಮದವರಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ಲಕ್ಷ್ಮಿ ಹೆಬ್ಬಾಳ್ಳರ್‌ ಅವರಿಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಸಿ.ಟಿ. ರವಿ ಅವರಿಗೆ ಬೆದರಿಕೆ ಪತ್ರ ಬಂದಿದೆ ಎಂದು ಕೇಳಿದಾಗ, “ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟ‌ರ್ ಆಗಿದ್ದಾರೆ. ಅವರನ್ನು ರಾಷ್ಟ್ರೀಯ ನಾಯಕರು, …

Read More »