Breaking News

2025ರಲ್ಲಿ ಬರಲಿವೆ ಸಖತ್ ಐಪಿಒಗಳು

Spread the love

ನವದೆಹಲಿ, ಜನವರಿ 12: ಕಳೆದ ವರ್ಷ (2024) ಸಾಕಷ್ಟು ಐಪಿಒಗಳು ಬಿಡುಗಡೆಯಾಗಿ ಲಕ್ಷಾಂತರ ಕೋಟಿ ರೂ ಮೊತ್ತದ ಬಂಡವಾಳ ಸಂಗ್ರಹಣೆ ಆಗಿತ್ತು. ಈ ವರ್ಷವೂ ಅದೇ ಟ್ರೆಂಡ್ ಮುಂದುವರಿಯಲಿದೆ.

ಮಾರುಕಟ್ಟೆ ಹಿನ್ನಡೆಯಲ್ಲಿದ್ದರೂ ಐಪಿಒಗಳು ಅಬಾಧಿತವಾಗಿ ಮುಂದುವರಿಯುವ ನಿರೀಕ್ಷೆ ಇದೆ. ಕೋಟಕ್ ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್ ಸಂಸ್ಥೆ ಮಾಡಿರುವ ಅಂದಾಜು ಪ್ರಕಾರ ಮುಂದಿನ 12 ತಿಂಗಳಲ್ಲಿ 35 ಬಿಲಿಯನ್ ಡಾಲರ್ (ಮೂರು ಲಕ್ಷ ಕೋಟಿ ರೂ) ಮೌಲ್ಯದ ಐಪಿಒಗಳು ಪ್ರಾಥಮಿಕ ಮಾರುಕಟ್ಟೆಗೆ (primary market) ಅಡಿ ಇಡುವ ಸಾಧ್ಯತೆ ಇದೆ.2024ರಲ್ಲಿ ಐಪಿಒಗಳಿಂದ ಭಾರೀ ಮೊತ್ತದ ಬಂಡವಾಳ ಸಂಗ್ರಹವಾಗಿತ್ತು.

ಪ್ರಾಥಮಿಕ ಮಾರುಕಟ್ಟೆಯಲ್ಲಿ ಬರೋಬ್ಬರಿ 74 ಬಿಲಿಯನ್ ಡಾಲರ್ (ಆರು ಲಕ್ಷ ರೂಗೂ ಅಧಿಕ) ಮೊತ್ತದ ಬಂಡವಾಳವನ್ನು ವಿವಿಧ ಕಂಪನಿಗಳು ಪಡೆದಿದ್ದವು. ಈ ವಿಚಾರದಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ