Breaking News

ರಾಜಕೀಯ

30 ಪ್ರಯಾಣಿಕರ ಪ್ರಾಣ ಉಳಿಸಿದ KSRTC ಬಸ್​ ಚಾಲಕ

ದೊಡ್ಡಬಳ್ಳಾಪುರ: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನ ಟೈರ್ ಸ್ಫೋಟಗೊಂಡು, ನಿಯಂತ್ರಣ ತಪ್ಪಿ ರಸ್ತೆಯ ತಡೆಗೋಡೆಗೆ ಗುದ್ದಿದ ಘಟನೆ ಮೆಣಸಿಗೇಟ್​ ಬಳಿ ನಡೆದಿದೆ. ಅದೃಷ್ಟವಶಾತ್​ ಚಾಲಕನ ಸಮಯಪ್ರಜ್ಞೆಯಿಂದಾಗಿ 30ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಘಟನೆ ನಡೆದಿದೆ. ಸೂಲಿಕುಂಟೆ-ದೊಡ್ಡಬಳ್ಳಾಪುರ ಮಾರ್ಗದ ಬಸ್ ದೊಡ್ಡಬಳ್ಳಾಪುರ ನಗರಕ್ಕೆ ಬರುವ ವೇಳೆ ಬಸ್​ನ ಟೈರ್ ಸ್ಪೋಟಗೊಂಡಿದೆ. ಈ ವೇಳೆ ಚಾಲಕ ಮುನಿಶ್ಯಾಮಪ್ಪ ಸಮಯಪ್ರಜ್ಞೆಯಿಂದ ತಕ್ಷಣವೇ ಬಸ್ಸನ್ನು ತಡೆಗೋಡೆಯ ಕಡೆಗೆ …

Read More »

ನಾಪತ್ತೆಯಾಗಿದ್ದ ಖ್ಯಾತ ಕೃಷಿ ವಿಜ್ಞಾನಿ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆ

ಮಂಡ್ಯ: ನಾಪತ್ತೆಯಾಗಿದ್ದ ಖ್ಯಾತ ಕೃಷಿ ವಿಜ್ಞಾನಿ, ಪದ್ಮಶ್ರೀ ಪುರಸ್ಕೃತ ಡಾ.ಸುಬ್ಬಣ್ಣ ಅಯ್ಯಪ್ಪನ್ (70) ಅವರು ಜಿಲ್ಲೆಯ ಶ್ರೀರಂಗಪಟ್ಟಣದ ಸಾಯಿ ಆಶ್ರಮದ ಬಳಿ ಕಾವೇರಿ‌ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೈಸೂರಿನ ವಿಶ್ವೇಶ್ವರ ನಗರ ಕೈಗಾರಿಕಾ ಪ್ರದೇಶದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ಪತ್ನಿ ಜೊತೆಗೆ ವಾಸವಾಗಿದ್ದ ಡಾ.ಸುಬ್ಬಣ್ಣ ಅಯ್ಯಪ್ಪನ್ ಮೇ 7ರಂದು ಮನೆಯಿಂದ ನಾಪತ್ತೆಯಾಗಿದ್ದರು. ಅವರು ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಸದ್ಯ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. …

Read More »

ಧಾರವಾಡ ಹೊರವಯಲದ ಕೋಟುರು ಕ್ರಾಸ ಹತ್ತಿರದ ರಾ.ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿ, ಚಾಲಕನಿಗೆ ಗಾಯ…. ಗಾಯಾಳು ಚಾಲಕನನ್ನು ರಕ್ಷಿಸಿದ ಸ್ಥಳೀಯರು

ಧಾರವಾಡ ಹೊರವಯಲದ ಕೋಟುರು ಕ್ರಾಸ ಹತ್ತಿರದ ರಾ.ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿ, ಚಾಲಕನಿಗೆ ಗಾಯ…. ಗಾಯಾಳು ಚಾಲಕನನ್ನು ರಕ್ಷಿಸಿದ ಸ್ಥಳೀಯರು ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್ ವಾಹನವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಪಲ್ಟಿಯಾದ ಪರಿಣಾಮ ಚಾಕನಿಗೆ ಗಾಯವಾಗಿರುವ ಘಟನೆ ಇಂದು ಮಧ್ಯಾಹ್ನ ಧಾರವಾಡ ಹೊರವಲಯದ ಕೋಟುರು ಕ್ರಾಸ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಧಾರವಾಡದಿಂದ ಬೆಳಗಾವಿಗೆ ಕಂಟೇನರ್ ವಾಹನ ತೆರಳುತಿತ್ತು, ಈ ವೇಳೆ ಚಾಲಕನ ನಿಯಂತ್ರ ತಪ್ಪಿ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ …

Read More »

ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಬೇಕು

ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಬೇಕು ರಾಜ್ಯದ ಕಾನೂನು ಸುವ್ಯವಸ್ಥೆಗಿಂತ ಯಾವುದೂ ದೊಡ್ಡದಲ್ಲ: ರಾಜ್ಯದ ಜನರ ರಕ್ಷಣೆಗೆ ಮೊದಲ ಆಧ್ಯತೆ ನೀಡಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ವರದಿ ನೀಡಿ : ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದ ಸಿಎಂ ರಾಜ್ಯದಲ್ಲಿ ಸುಳ್ಳು ಸುದ್ದಿಗಳಿಗೆ ಕಡ್ಡಾಯವಾಗಿ ಕಡಿವಾಣ ಹಾಕಬೇಕು: ಅನಿವಾರ್ಯವಾದರೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: …

Read More »

ಬೆಳಗಾವಿಗೆ ರಜೆಗೆ ಬಂದಿದ್ದ ಐಶ್ವರ್ಯಾ ಆತ್ಮಹತ್ಯೆ… ರಾಹುಲ್ ಕರೆ ತಪಾಸಿಸಿ ಎಂದ ಐಶ್ವರ್ಯಾ ತಂದೆ

ಬೆಳಗಾವಿಗೆ ರಜೆಗೆ ಬಂದಿದ್ದ ಐಶ್ವರ್ಯಾ ಆತ್ಮಹತ್ಯೆ… ರಾಹುಲ್ ಕರೆ ತಪಾಸಿಸಿ ಎಂದ ಐಶ್ವರ್ಯಾ ತಂದೆ ನಿಪ್ಪಾಣಿ ತಾಲೂಕಿನ ರಾಹುಲ್ ಐಶ್ವರ್ಯಗೆ ಫೋನ್ ಕರೆ ಮಾಡಿದ್ದಕ್ಕೆ ಐಶ್ವರ್ಯ ಎಂಬ ಯುವತಿ ಬೆಳಗಾವಿ ನಗರದ ಹೊರ ವಲಯದಲ್ಲಿರುವ ಹೊನಗಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಐಶ್ವರ್ಯ ತಂದೆ ಶಿವಾಜಿ ಆರೋಪಿಸಿದ್ದಾರೆ. ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಶಾಲೆ ರಜೆ ಇದ್ದ ಕಾರಣ ನನ್ನ ಸಹೋದರಿಯ ಮನವಿಗೆ ಐಶ್ವರ್ಯಳನ್ನು ಕಳುಹಿಸಿದ್ದೆ. ಆದರೆ ಐಶ್ವರ್ಯ ಗೆ ನಿಪ್ಪಾಣಿಯ …

Read More »

ದೇಶ ಅಂದಾಗ ಎಲ್ಲರೂ ಒಂದೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ದೇಶ ಅಂದಾಗ ಎಲ್ಲರೂ ಒಂದೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್* * *ಕಾಪು ಮಾರಿಯಮ್ಮನವರ ದೇವಸ್ಥಾನಕ್ಕೆ ಸಚಿವರ ಭೇಟಿ* *ಉಡುಪಿ:* ದೇಶ ಅಂತ ಬಂದಾಗ ನಾವೆಲ್ಲರೂ ಒಂದೇ, ವೈರಿ ರಾಷ್ಟ್ರ ನಮ್ಮ ಮೇಲೆ ಯುದ್ದಕ್ಕೆ ಬರುತ್ತಿದೆ. ಭಾರತಕ್ಕಿದು ಸಂಕಷ್ಟದ ಕಾಲ, ಎಲ್ಲರೂ ಒಗ್ಗಟಾಗಿ ಎದುರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಕಾಪುವಿನ ಪುರಾಣ ಪ್ರಸಿದ್ಧ ಮಾರಿಯಮ್ಮನವರ …

Read More »

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ನಿವೃತ್ತಿ ವಯಸ್ಸು ಏರಿಕೆ

ಬೆಂಗಳೂರು, ಮೇ 09: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 65 ವರ್ಷಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ (Cabinet Meeting) ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ (HK Patil) ಹೇಳಿದರು. ಶುಕ್ರವಾರ (ಮೇ.09) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, 1,500 ಕೋಟಿ ವೆಚ್ಚದ ಸರಗೂರಿನಿಂದ ಹೊಸಪುರಕ್ಕೆ ಬ್ರಿಡ್ಜ್ ನಿರ್ಮಾಣ …

Read More »

‘ಹೈಕಮಾಂಡ್​​ಗೆ ಪತ್ರವನೂ ಬರೆದಿಲ್ಲ, ಕ್ಷಮಾಪಣೆನೂ ಕೇಳಿಲ್ಲ’ –

ಬೆಂಗಳೂರು: ನಾನು ಹೈಕಮಾಂಡ್ ಬಳಿ ಯಾವುದೇ ಕ್ಷಮಾಪಣೆ ಕೇಳಿಲ್ಲ, ಪತ್ರವನೂ ಬರೆದಿಲ್ಲ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಯತ್ನಾಳ ಕ್ಷಮಾಪಣೆ ಕೇಳಿ ಹೈ ಕಮಾಂಡ್​​ಗೆ ಪತ್ರ ಬರೆದಿದ್ದಾರೆ, ನಾನು ಪಕ್ಷದ ಶಿಸ್ತು ಉಲ್ಲಂಘಿಸುವುದಿಲ್ಲ. ಪಕ್ಷದ ಇತಿ ಮಿತಿಯೊಳಗೆ ಕೆಲಸ ಮಾಡುತ್ತೇನೆ ಎಂದು ಪತ್ರ ಬರೆದಿದ್ದೇನೆ ಎಂದು ಸುದ್ದಿಯಾಗುತ್ತಿದೆ. ಎಲ್ಲಿ ಇದೆ‌ ದಾಖಲೆ?. ನಾನು ಯಾರ ಬಳಿಯೂ ಹೋಗಿಲ್ಲ. ಕ್ಷಮಾಪಣೆಯನ್ನೂ ಕೇಳಿಲ್ಲ.‌ ನಾನು …

Read More »

ಭಾರತದಲ್ಲಿ ಅಗತ್ಯಕ್ಕಿಂತ ದುಪ್ಪಟ್ಟು ಆಹಾರ ಧಾನ್ಯ ಸಂಗ್ರಹವಿದೆ, ವದಂತಿಗೆ ಕಿವಿಗೊಡಬೇಡಿ- ಸಚಿವ ಜೋಶಿ

ನವದೆಹಲಿ/ಹುಬ್ಬಳ್ಳಿ: “ದೇಶದಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ ಎಂಬುದು ಶುದ್ಧ ಸುಳ್ಳು. ಯಾರೊಬ್ಬರೂ ಈ ಹುಸಿ ವದಂತಿಗೆ ಕಿವಿಗೊಡಬಾರದು” ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್​​ ಜೋಶಿ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಮಾಹಿತಿ ನೀಡಿರುವ ಅವರು, “ದೇಶದ ವಿವಿಧೆಡೆ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಕೊರತೆಯಿದೆ ಎಂದು ಕೆಲವರು ಸುಳ್ಳು ವದಂತಿ ಹರಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಸ್ತುತ ಸನ್ನಿವೇಶದಲ್ಲಿ ಜನರನ್ನು ದಿಕ್ಕು ತಪ್ಪಿಸುವ …

Read More »

ವಿಮಾನ ಪ್ರಯಾಣಿಕರಿಗೆ ಸೂಚನೆ: ಬೋರ್ಡಿಂಗ್​ಗೆ ಕನಿಷ್ಠ 3 ಗಂಟೆ ಮುಂಚೆ ಏರ್​ಪೋರ್ಟ್​ನಲ್ಲಿರಿ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರು ಇನ್ಮುಂದೆ ವಿಮಾನ ಹೊರಡುವ ಕನಿಷ್ಠ ಮೂರು ಗಂಟೆ ಮುಂಚೆ ನಿಲ್ದಾಣದಲ್ಲಿ ಹಾಜರಾಗಬೇಕು ಎಂದು ಕೆಇಎ ಮನವಿ ಮಾಡಿದೆ. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆವಹಿಸಬೇಕು ಎಂಬ ಕೇಂದ್ರ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಈ ಹೊಸ ನಿರ್ದೇಶನವನ್ನು ಹೊರಡಿಸಲಾಗಿದೆ. ದೇಶದೆಲ್ಲೆಡೆ ಭದ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಹೆಚ್ಚಿಸಲಾಗಿದೆ. ಪ್ರಯಾಣಕ್ಕೂ ಮುನ್ನ ಸುಗಮ ಚೆಕ್​ ಇನ್​, ಭದ್ರತೆ ಮತ್ತು …

Read More »