– ಸಂಪರ್ಕಕ್ಕೆ ಬಂದಿದ್ದ 20 ಮಂದಿಗೆ ಕ್ವಾರಂಟೈನ್ – ಟಾಯ್ಲೆಟ್‍ನಲ್ಲೇ ಕುಸಿದು ಬಿದ್ದಿದ್ದ ವೃದ್ಧ – ಸೋಮವಾರ ಸಂಜೆ ಕೊರೊನಾ ದೃಢ ಬೆಂಗಳೂರು: ಕೊರೊನಾ ಸೋಂಕಿತರ ಸಾವು ಕರ್ನಾಟಕದಲ್ಲಿ 8ಕ್ಕೆ ಏರಿದ್ದು, ಕಳೆದ ದಿನವೇ ಇಬ್ಬರು ಒಂದೇ ದಿನ ಮೃತಪಟ್ಟಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿಯ 65 ವರ್ಷದ ವೃದ್ಧ ಮೂರು ಆಸ್ಪತ್ರೆಗೆ ಅಲೆದಾಡಿ ಕೊನೆಗೆ ಮೃತಪಟ್ಟಿದ್ದಾರೆ. ಭಾನುವಾರ ಮೃತ ವೃದ್ಧ ಕಫ, ಕೆಮ್ಮು ಎಂದು ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾರೆ. …
Read More »ಬಾರ್ ಒಪನ್- ಓಡೋಡಿ ಬಂದ ಗ್ರಾಹಕರಿಗೆ ನಿರಾಶೆ
ಧಾರವಾಡ: ಬಾರ್ ಬಾಗಿಲು ಒಪನ್ ಆಗಿದ್ದನ್ನು ನೋಡಿ ಜನರು ಓಡೋಡಿ ಬಂದಿದ್ದು, ಕೊನೆಗೆ ನಿರಾಶೆಯಿಂದ ಸಪ್ಪೆ ಮೋರೆ ಹೊತ್ತು ವಾಪಸ್ ನಡೆದಿದ್ದಾರೆ. ನಗರದ ಟೋಲ್‍ಗೇಟ್ ಬಳಿಯ ದುರ್ಗಾ ವೈನ್ಸ್‍ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಬಂದಿದ್ದರು. ಬಾರ್ ಬಾಗಿಲು ಓಪನ್ ಆಗುತ್ತಿದ್ದಂತೆ ಒಡೋಡಿ ಬಂದ ಜನರು, ಬಾರ್ ಶುರುವಾಯ್ತಾ ಎಂದು ಕೇಳಿದ್ದಾರೆ. ಆದರೆ ಅಧಿಕಾರಿಗಳು ಆಗಮಿಸಿದ್ದಕ್ಕೆ ಕಾರಣವೇ ಬೇರೆ ಇತ್ತು. ಬಂದ ಜನರಿಗೆಲ್ಲ ಬಾರ್ ಒಪನ್ ಆಗಿಲ್ಲ ಎಂದು ಹೇಳುವಷ್ಟರಲ್ಲಿ ಅಬಕಾರಿ …
Read More »ಚನ್ನಣ್ಣವರ್ ಬಗ್ಗೆ ಸಿಎಂ ಬಳಿ ನಾನು ದೂರಿಲ್ಲ:ಲಕ್ಷ್ಮಣ ಸವದಿ
ಬೆಂಗಳೂರು – ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಇತ್ತೀಚೆಗೆ ಸಂಭವಿಸಿದ ಒಂದು ಘಟನೆಯ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿ ರವಿ ಚನ್ನಣ್ಣನವರ್ ಅವರ ವಿರುದ್ಧ ನಾನು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದೇನೆ ಎಂಬುದಾಗಿ ಕೆಲವು ಸೋಶಿಯಲ್ ಮೀಡಿಯಾಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ. ರವಿಚನ್ನಣ್ಣವರ್ ಅವರೊಬ್ಬ ಒಳ್ಳೆಯ ಅಧಿಕಾರಿ ಎಂಬುದನ್ನು ನಾನು ಬಲ್ಲೆ. ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ವಿನ: ಅವರು …
Read More »ಕೊರೋನಾ ಹಿನ್ನೆಲೆಯಲ್ಲಿ ಸೋಮವಾರ ದೂರವಾಣಿ ಮೂಲಕ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿದರು. ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಕಳೆದ ಜನೆವರಿಯಿಂದ ಬೆಂಗಳೂರಿನಲ್ಲಿರುವ ಕೆಎಂಎಫ್ ಚೇರಮನ್ ಬಾಲಚಂದ್ರ ಜಾರಕಿಹೊಳಿ, ಕೊರೋನಾ ಹಿನ್ನೆಲೆಯಲ್ಲಿ ಸೋಮವಾರ ದೂರವಾಣಿ ಮೂಲಕ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿದರು. ಮೂಡಲಗಿಯ ಈರಣ್ಣ ದೇವಸ್ಥಾನದ ಆವರಣದಲ್ಲಿ ಸೋಮವಾರ ದೂರವಾಣಿ ಮೂಲಕ ಮೂಡಲಗಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಲಾಕ್ ಡೌನ್ ಸಂಪೂರ್ಣವಾಗಿ ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಪ್ರಸ್ತುತ ವಿಶ್ವದಾದ್ಯಂತ ಕಾಡುತ್ತಿರುವ ಪ್ರಬಲ ಕೊರೋನಾ ವೈರಸ್ ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ …
Read More »ಕೊಪ್ಪಳ:ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದನ್ನು ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ದಾಳಿ
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ವೆಂಕಟಾಪುರ ಮತ್ತು ತುಮರಿಕೊಪ್ಪ ಗ್ರಾಮಗಳ ತಾಂಡ ಬಳಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದನ್ನು ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ, ಅಲ್ಲಿದ್ದ ಪರಿಕರಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಕಳ್ಳಭಟ್ಟಿ ತಯಾರಿಕಾ ಘಟಕದ ಮೇಲೆ ತಹಶೀಲ್ದಾರ್ ಎಂ.ಸಿದ್ದೇಶ್ ನೇತೃತ್ವದಲ್ಲಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಅಬಕಾರಿ ಇಲಾಖೆ, ಕಂದಾಯ, ಮತ್ತು ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಕಳ್ಳಭಟ್ಟಿ ತಯಾರಿಕೆ …
Read More »ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ, ಬಡವರನ್ನು ಬದುಕಿಸಿಕೊಳ್ಳಲು ಸ್ಥಿತಿವಂತರು ಸಹಾಯ ಮಾಡಿ: ಡಿಸಿಎಂ ಕಾರಜೋಳ
ಚಿತ್ರದುರ್ಗ: ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಸ್ಥಿತಿವಂತರು ಬಡವರನ್ನು ಬದುಕಿಸಿಕೊಳ್ಳಲು ಆರ್ಥಿಕ ಸಹಾಯ ಮಾಡಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕೇಳಿಕೊಂಡಿದ್ದಾರೆ. ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನೆರೆ ಹಾವಳಿ, ಬರಗಾಲ ಸೇರಿದಂತೆ ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದೇವೆ. ಇದೆಲ್ಲವನ್ನೂ ಮುಗಿಸಿಕೊಂಡು 2020ರಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸೋಣ ಎಂದಾಗ ಈ ಮಹಾಮಾರಿ ಕೊರೊನಾ ವೈರಸ್ ಅಂಟಿಕೊಂಡಿದೆ. ಈ ಕೊರೊನಾ ನಿರ್ಮೂಲನೆ …
Read More »ಆರ್ಥಿಕ ಪರಿಸ್ಥಿತಿ ನಿಭಾಯಿಸಲು 12 ಸಾವಿರ ನಿವೇಶನಗಳ ಹರಾಜಿಗೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು : ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಲಾಕ್ ಡೌನ್ ಅನುಷ್ಠಾನ ಮಾಡಿದ ಪರಿಣಾಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಬಿಡಿಎ ವ್ಯಾಪ್ತಿಯಲ್ಲಿ 12 ಸಾವಿರ ಕಾರ್ನರ್ ನಿವೇಶನಗಳನ್ನು ಹರಾಜು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. 12 ಸಾವಿರ ನಿವೇಶನಗಳನ್ನು ಮಾರಾಟ ಮಾಡುವುದರಿಂದ ಸುಮಾರು15 ಸಾವಿರ ಕೋಟಿ ರೂ ಆದಾಯ ನಿರೀಕ್ಷೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಡಿಯಲ್ಲಿ ತಿಳಿಸಿದರು.ಅನಧಿಕೃತ ಕಟ್ಟಡಗಳ ಸಂಬಂಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ವಿಲೇವಾರಿಗೆ ಕ್ರಮ …
Read More »ಕ್ವಾರೆಂಟೈನ್ ಟೈಂನಲ್ಲಿ ‘ಪಕೋಡಾ’ ಹುಡುಕಿದ ಅಗ್ನಿಸಾಕ್ಷಿ ತಂಡ
ಬೆಂಗಳೂರು: ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್ ನೇತೃತ್ವದಲ್ಲಿ ಬಹುಭಾಷಾ ನಟರ ತಂಡ ಈ ಹಿಂದೆ ಮನೆಯಲ್ಲೇ ಇದ್ದುಕೊಂಡು ಶಾರ್ಟ್ ಫಿಲ್ಮ್ ಮಾಡುವ ಮೂಲಕ ಸಾಮಾಜಿಕ ಅಂತರದ ಮಹತ್ವವನ್ನು ಸಾರಿತ್ತು. ಈ ಚಿತ್ರ ಇತರರಿಗೆ ಪ್ರೇರಣೆಯಾಗಿತ್ತು ಸಹ. ಅದೇ ರೀತಿ ಇದೀಗ ಅಗ್ನಿಸಾಕ್ಷಿ ಧಾರಾವಾಹಿ ತಂಡ ಸಹ ಇಂತಹದ್ದೇ ಪ್ರಯತ್ನವನ್ನು ಮಾಡಿದ್ದು, ಫನ್ನಿಯಾಗಿರುವ ಕಥೆಯನ್ನಿಟ್ಟುಕೊಂಡು ಜನತೆಯನ್ನು ನಗಿಸಿದ್ದಾರೆ. ಬಿಗ್‍ಬಿ ನೇತೃತ್ವದಲ್ಲಿ ಮಾಡಿದ ಶಾರ್ಟ್ ಫಿಲ್ಮ್‍ನಲ್ಲಿ ಕನ್ನಡಕ ಹುಡುಕುವ ಕಾನ್ಸೆಪ್ಟ್ ಇತ್ತು. ಆದರೆ …
Read More »ದೊಡ್ಡಬಳ್ಳಾಪುರಕ್ಕೂ ಕಾಲಿಟ್ಟ ಕೊರೊನಾ- ರೈಲ್ವೇ ಉದ್ಯೋಗಿಗೆ ಸೋಂಕು
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇಷ್ಟು ದಿನ ನಿರಾಳವಾಗಿದ್ದ ದೊಡ್ಡಬಳ್ಳಾಪುರ ತಾಲೂಕಿಗೂ ಕೊರೊನಾ ಕಾಲಿಟ್ಟಿದ್ದು, 39 ವರ್ಷದ ವ್ಯಕ್ತಿ (ರೋಗಿ ನಂಬರ್-246) ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕಿತ ರೈಲ್ವೆ ಇಲಾಖೆಯಲ್ಲಿ ಟ್ರಾಕ್ ಮಿಷಿನ್ ಮೈಂಟೈನರ್ ಆಗಿದ್ದು, ಮಾರ್ಚ್ 14 ರಿಂದ 18ರ ನಡುವೆ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿಯ ನಿಜಾಮುದ್ದೀನ್ …
Read More »ಜಮಾತ್ ನಂಜಿಗೆ ಬೆಚ್ಚಿಬಿದ್ದ ಕುಡಚಿ – ಒಂದೇ ಊರಲ್ಲಿ 10ಕ್ಕೆ ಏರಿದ ಸೋಂಕಿತರ ಸಂಖ್ಯೆ
ಬೆಳಗಾವಿ(ಚಿಕ್ಕೋಡಿ): ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕರ್ನಾಟಕದಲ್ಲಿಯು ತನ್ನ ಅಟ್ಟಹಾಸ ಮುಂದುವರೆಸಿದೆ. ಹೆಚ್ವು ಸೋಂಕಿತರು ಇರುವ ಪಟ್ಟಿಗೆ ಈಗ ಬೆಳಗಾವಿ ಜಿಲ್ಲೆಯು ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಭಾನುವಾರ 14 ಇದ್ದ ಸೊಂಕಿತರ ಸಂಖ್ಯೆ ಸೋಮವಾರಕ್ಕೆ 17ಕ್ಕೆ ಏರಿಕೆಯಾಗಿದೆ. ಬೆಳಗಾವಿ ಜಿಲ್ಲೆಯ ಕುಡಚಿ ಪಟ್ಟಣದಲ್ಲಿ ಮತ್ತೆ ಮೂವರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ಈ ಮೂಲಕ ಬೆಳಗಾವಿ ಜಿಲ್ಲೆ ಡೋಂಜರ್ ಝೋನ್‍ನತ್ತ ಹೆಜ್ಜೆ ಇಟ್ಟಿದೆ. ಸೋಮವಾರ ಮಧ್ಯಾಹ್ನ ಹೆಲ್ತ್ ಬುಲಿಟಿನ್ ಬಿಡುಗಡೆಯಾಗಿದ್ದು, ಅದರಲ್ಲಿ ಬೆಳಗಾವಿ …
Read More »
Laxmi News 24×7