Breaking News
Home / ಜಿಲ್ಲೆ (page 836)

ಜಿಲ್ಲೆ

ಜೀವ ಹೋಗ್ತಿದೆ ಅಂದ್ರೂ ಡೋಂಟ್‍ಕೇರ್ – ಸೋಂಕಿತರಿಗೆ ಆಕ್ಸಿಜನ್ ನೀಡಲು ಆರ್ಡರ್ ಬರ್ಬೇಕಂತೆ

ನೆಲಮಂಗಲ: ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್‍ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಉಸಿರಾಟ ತೊಂದರೆ ಇದ್ದರೂ ಆಂಬುಲೆನ್ಸ್ ಗೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪವೊಂದು ಕೇಳಿಬಂದಿದೆ ನೆಲಮಂಗಲದ ಮಾದವಾರದಲ್ಲಿರುವ ಬಿಐಇಸಿ ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದ ಸೋಂಕಿತರಲ್ಲಿ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಆದರೆ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಆಕ್ಸಿಜನ್ ವ್ಯವಸ್ಥೆ ಇಲ್ಲ. ಗಂಟೆಗಟ್ಟಲೇ ಕಾದರೂ ಸ್ಥಳಕ್ಕೆ ಅಂಬುಲೆನ್ಸ್ ಬರಲಿಲ್ಲ. ಅಲ್ಲದೆ ಉಸಿರು ಹೋಗ್ತಿದೆ ಅಂದರೂ ಇಲ್ಲಿ ಡೋಂಟ್ ಕೇರ್ ಎಂದಿದ್ದಾರೆ. ಉಸಿರಾಡಲು ಆಗ್ತಿಲ್ಲ ಅಂತ …

Read More »

ಮಕ್ಕಳಿಗೆ ಆರೋಗ್ಯ ಕಾರ್ಡ್‌; ಈ ವರ್ಷವೇ ಲಭ್ಯ ರಾಜೀವ್‌ ಗಾಂಧಿ ವಿ.ವಿ.ಯೋಜನೆ

ಬೆಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಪತ್ರ ಸಾಮಾನ್ಯ. ಇನ್ನು ಅದರ ಜತೆ ಆರೋಗ್ಯದ ಮಾಹಿತಿಯನ್ನು ಒಳಗೊಂಡಿರುವ “ಆರೋಗ್ಯ ಕಾರ್ಡ್‌’ ಕೂಡ ನೀಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರೋಗ್ಯ ಕಾರ್ಡ್‌ ದೊರೆಯಲಿದೆ. ಕೊರೊನಾದಿಂದ ಶಾಲೆಗಳ ಆರಂಭ ವಿಳಂಬವಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಅತಿಯಾದ ಗಮನ ಅಗತ್ಯವಾಗಿರುವುದರಿಂದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಸರಕಾರಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಸ್ವಾಸ್ಥ್ಯ ನಿಗಾವಣೆಗೆ ಯೋಜನೆ ಸಿದ್ಧಪಡಿಸಿದೆ. ಪ್ರತಿ ವಿದ್ಯಾರ್ಥಿಯ …

Read More »

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ದಾವಣಗೆರೆ: ವಸತಿ ಶಾಲೆಗಳಿಗೆ 6 ನೇ ತರಗತಿಯ ಪ್ರವೇಶಕ್ಕಾಗಿ ಹೊರಡಿಸಲಾಗಿದ್ದ ಆನ್‍ಲೈನ್ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಸೆ.5 ರವರೆಗೆ ವಿಸ್ತರಿಸಲಾಗಿದೆ. 2020-21 ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇದರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಪರಿಶಿಷ್ಟ ಜಾತಿ/ಪಂಗಡ ವರ್ಗದ ಪ್ರತಿಭಾನ್ವಿತ ವಸತಿ ಶಾಲೆ, ಮಾಯಕೊಂಡ ವಸತಿ ಶಾಲೆಗಳಿಗೆ ಪ್ರವೇಶಕ್ಕೆ ಆ.25 ಕೊನೆಯ ದಿನವೆಂದು ನಿಗದಿಪಡಿಸಲಾಗಿತ್ತು. ಆದರೆ …

Read More »

ಐವರು ಐಪಿಎಸ್ ಅಧಿಕಾರಿಗಳ ವರ್ಗಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಪ್ರಮುಖ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಐವರು ಐಪಿಎಸ್ ಹಾಗೂ ಒಬ್ಬರು ಕರ್ನಾಟಕ ಸೇವೆಯ ಡಿಸಿಪಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮೂಲಗಳ ಪ್ರಕಾರ ಈ ಹಿಂದೆ CCB ವಿಭಾಗದಲ್ಲಿ DCP ಆಗಿದ್ದ ಕುಲ್​ದೀಪ್​ ಕುಮಾರ್ ಜೈನ್​ರನ್ನು ACB ಎಸ್​ಪಿಯಾಗಿ ನೇಮಿಸಲಾಗಿದ್ದು, ರವಿಕುಮಾರ್​ವರನ್ನು CCBಯ ಡಿಸಿಪಿ ಗ್ರೇಡ್​ 2 ರಿಂದ CCB ಡಿಸಿಪಿ ಗ್ರೇಡ್ 1 ಆಗಿ ವರ್ಗಾಯಿಸಲಾಗಿದೆ. ಅಂತೆಯೇ ಬೆಳಗಾವಿಯ ಡಿಸಿಪಿ ಆಗಿದ್ದ ಸೀಮಾ ಅನಿಲ್ ಲಟ್ಕರ್​ರನ್ನು CCB ಎಐಜಿ …

Read More »

ಬೆಳಗಾವಿ: 170 ಮಂದಿ ಗುಣಮುಖ

ಬೆಳಗಾವಿ: ‘ಜಿಲ್ಲೆಯಲ್ಲಿ ಹೊಸದಾಗಿ 289 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 17 ಮಂದಿ ಗುಣಮುಖರಾಗಿದ್ದು ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾಡಳಿತ ತಿಳಿಸಿದೆ. ‘ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ತಾಲ್ಲೂಕಿನ ಇಬ್ಬರು, ಅಥಣಿ, ಸವದತ್ತಿ ಹಾಗೂ ಚಿಕ್ಕೋಡಿಯ ತಲಾ ಒಬ್ಬರು ಸೇರಿ ಐವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಅವರಿಗೆ ಉಸಿರಾಟದ ತೊಂದರೆ ಇತ್ತು’ ಎಂದು ಮಾಹಿತಿ ನೀಡಿದೆ. ‘2,651 ಮಂದಿಯ ಪರೀಕ್ಷಾ ವರದಿ ಬರುವುದು ಬಾಕಿ …

Read More »

ರಸ್ತೆ ಬದಿ ನಿಲ್ಲಿಸಿದ್ದ ಬೈಕ್, ತಳ್ಳೋಬಂಡಿಗಳನ್ನ ರಾಜಕಾಲುವೆಗೆ ಎಸೆದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ

ರಾಯಚೂರು: ಗಣೇಶ ವಿಸರ್ಜನೆ ವೇಳೆ ಧ್ವನಿವರ್ಧಕಕ್ಕೆ ಅವಕಾಶ ನೀಡದ ಹಿನ್ನೆಲೆ ಕೆಲ ಕಿಡಿಗೇಡಿಗಳು ರಸ್ತೆ ಬದಿ ನಿಲ್ಲಿಸಿದ್ದ ಬೈಕ್, ತಳ್ಳೋಬಂಡಿಗಳನ್ನ ರಾಜಕಾಲುವೆಗೆ ಎಸೆದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ ನಗರದ ಬಂಗೀಕುಂಟದಲ್ಲಿ 20 ಕ್ಕೂ ಹೆಚ್ಚು ಬೈಕ್ ಹಾಗೂ 10 ತಳ್ಳೋಬಂಡಿ ಹಾಗೂ ಟಂಟಂನ ಗಾಜು ಪುಡಿಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಾಲ್ಕೈದು ಬೈಕ್ ಗಳನ್ನ ರಾಜಕಾಲುವೆಗೆ ಎಸೆದಿದ್ದಾರೆ. ನಿಯಮ ಮೀರಿ ಹೆಚ್ಚು ಜನ ಸೇರಿ ಮೆರವಣಿಗೆ ಮಾಡಲಾಗಿದೆ.ಧ್ವನಿವರ್ಧಕ, ವಿದ್ಯುತ್ ದ್ವೀಪಗಳನ್ನ …

Read More »

ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಡಿಗ್ರಿ ತರಗತಿಗಳು ಅಕ್ಟೋಬರ್‌ 1 ರಿಂದ ಆಫ್‍ಲೈನ್ ಆಗಲಿದೆ.

ಬೆಂಗಳೂರು: ಕೋವಿಡ್‌ 19ನಿಂದಾಗಿ ಸದ್ಯ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಡಿಗ್ರಿ ತರಗತಿಗಳು ಅಕ್ಟೋಬರ್‌ 1 ರಿಂದ ಆಫ್‍ಲೈನ್ ಆಗಲಿದೆ. ಎಂದಿನಂತೆ ತರಗತಿ ಆರಂಭಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಸಿದ್ಧತೆಗಳು ಆರಂಭವಾಗಿದೆ. ಕೊರೊನಾದೊಂದಿಗೆ ಬದುಕಬೇಕಿರುವ ಕಾರಣ ಉನ್ನತ ಶಿಕ್ಷಣ ಇಲಾಖೆ ಅಕ್ಟೋಬರ್‌ ತಿಂಗಳಿನಿಂದ ಡಿಗ್ರಿ ಕಾಲೇಜು ಆರಂಭಿಸಲು ಮುಂದಾಗುತ್ತಿದೆ. ಈಗ ಹೇಗೆ ಕಚೇರಿಗಳನ್ನು ತೆರೆಯಲು ಸರ್ಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆಯೋ ಅದೇ ರೀತಿಯಾಗಿ ಕಾಲೇಜಿನಲ್ಲಿ ಅಳವಡಿಸಬೇಕಾದ ನಿಯಮಗಳ ಬಗ್ಗೆ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ …

Read More »

ಬುಲೆಟ್ ಮೇಲಿತ್ತು 103 ಪ್ರಕರಣಗಳು – ಫೈನ್ ಕಂಡು ಬೆಚ್ಚಿಬಿದ್ದ ಮಾಲೀಕ

ಬೆಂಗಳೂರು: ಬುಲೆಟ್ ಬೈಕ್ ಮಾಲೀಕನೊಬ್ಬ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡ ಕಟ್ಟಿರುವ ಘಟನೆ ಸಿಲಿಕಾನ್ ಸಿಟಿಯ ಆಡುಗೊಡಿಯಲ್ಲಿ ನಡೆದಿದೆ. ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದೇ ಸಂಚಾರ, ಒನ್ ವೇ ಹೀಗೆ ಸುಮಾರು 103 ಬಾರಿ ಬೈಕ್ ಸವಾರ ರಾಜೇಶ್ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಈ ಕಾರಣದಿಂದ ಸಂಚಾರಿ ಪೊಲೀಸರು ಆತನಿಗೆ ನೋಟಿಸ್ ನೀಡಿದ್ದರು. ಪರಿಣಾಮ ಇಂದು ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಗೆ ಬಂದ ರಾಜೇಶ್ ಬರೋಬ್ಬರಿ …

Read More »

ಸಿಎಂ ಆಗಲೇಬೇಕು ಎಂಬ ಹಠಕ್ಕೆ ಬಿದ್ದಂತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್………!

ಬೆಂಗಳೂರು: ಸಿಎಂ ಆಗಲೇಬೇಕು ಎಂಬ ಹಠಕ್ಕೆ ಬಿದ್ದಂತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜ್ಯೋತಿಷ್ಯದ ಮೊರೆ ಹೋಗಿದ್ದು, ಕಚೇರಿಯಲ್ಲಿ ಓಡಾಡಲು ಪ್ರತ್ಯೇಕ ಬಾಗಿಲನ್ನೇ ನಿರ್ಮಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಸಿಎಂ ಆಗಲು ಕಚೇರಿ ಹಾಗೂ ಅಧಿಕೃತ ನಿವಾಸ ಕಚೇರಿಯನ್ನು ಶ್ವೇತ ವರ್ಣಕ್ಕೆ ಬದಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯ ಪಟ್ಟಕ್ಕೇರಲು ಜ್ಯೋತಿಷಿಗಳ ಸಲಹೆಯಂತೆ ಕಾಂಗ್ರೆಸ್ ಕಚೇರಿಯಲ್ಲಿ ಓಡಾಡಲು ಕುಬೇರ ಮೂಲೆಯಲ್ಲಿ ಹೊಸ ಬಾಗಿಲನ್ನೇ …

Read More »

ಅಥಣಿ ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಕಡಿಮೆಯಾಗಿದ್ದರಿಂದ ನದಿ ತೀರದಲ್ಲಿ ಪ್ರವಾಹ ಇಳಿಮುಖ

ಅಥಣಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಹಾಗೂ ಅಥಣಿ ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಕಡಿಮೆಯಾಗಿದ್ದರಿಂದ ನದಿ ತೀರದಲ್ಲಿ ಪ್ರವಾಹ ಇಳಿಮುಖವಗುತ್ತಿದ್ದು,  ನದಿ ತೀರದ ಗ್ರಾಮದ ಜನರು  ನಿರಾಳರಾಗಿದ್ದಾರೆ. ಆದ್ರೆ ಈ ಗ್ರಾಮದಲ್ಲಿ ಸಾಂಕ್ರಾಮಿಕ  ರೋಗದ ಭೀತಿ ಎದುರಾಗಿದೆ. ತಾಲೂಕಿನ ನದಿ ತೀರದ ಗ್ರಾಮಗಳಾದ ಝುಂಜರವಾಡ, ಶಿರಹಟ್ಟಿ, ಸವದಿ, ನದಿ ಇಂಗಳಗಾಂವ, ಜನವಾಡ, ಸಪ್ತಸಾಗರ, ದರೂರ, ಹಲ್ಯಾಳ, ಮಹಿಷವಾಡಗಿ, ಅವರಖೋಡ, ಖವಟಗೊಪ್ಪ, ಸೇರಿದಂತೆ ಇತರೆ ನದಿ ತೀರದ ಗ್ರಾಮಗಳಲ್ಲಿ  ಸೊಳ್ಳ, …

Read More »