Breaking News

ಜಿಲ್ಲೆ

ಗೋಕಾಕ: ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಗೋಕಾಕ: ಸಮೀಪದ ಮರಡಿಮಠ ಗ್ರಾಮದ ಬಳಿಯ ಕೊಣ್ಣೂರು ಪುರಸಭೆ ಕಟ್ಟಡದ ಪಕ್ಕ ಕೊಳೆತ ಸ್ಥಿತಿಯಲ್ಲಿ ಅನಾಮಧೇಯ ಯುವಕನ ಶವ ಪತ್ತೆಯಾಗಿದೆ.   ಕೊಳೆತ ಸ್ಥಿತಿಯಲ್ಲಿರುವುದರಿಂದ ಯುವಕ ಯಾರೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೇಂದ್ರ ಆರೋಗ್ಯ ಇಲಾಖೆʼಯಿಂದ ʼಕಚೇರಿʼಗಳಿಗೆ ಹೊಸ ʼಗೈಡ್‌ ಲೈನ್ಸ್‌ʼ ಜಾರಿ: ಉದ್ಯೋಗಿಗಳೇ ನೀವು ಇವುಗಳನ್ನ ಪಾಲಿಸ್ಲೇಬೇಕು

ಬೆಂಗಳೂರು: ಕೇಂದ್ರ ಆರೋಗ್ಯ ಇಲಾಖೆ ಕಚೇರಿಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದ್ದು, ಉದ್ಯೋಗಿಗಳು ಕಡ್ಡಾಯವಾಗಿ ಇವುಗಳನ್ನ ಪಾಲಿಸಿಲೇ ಬೇಕು ಎಂದು ತಾಕೀತು ಮಾಡಿದೆ. ಕೇಂದ್ರ ಆರೋಗ್ಯ ಇಲಾಖೆ ಉದ್ಯೋಗಿಗಳಿಗೆ ನೀಡಿದ ಸಾಮಾನ್ಯ ಹಾಗೂ ನಿರ್ಧಿಷ್ಟ ಮಾರ್ಗಸೂಚಿಗಳು ಈ ಕೆಳಗಿನಂತಿವೆ. ಸಾಮಾನ್ಯ ‌ಮಾರ್ಗಸೂಚಿಗಳು ಇಂತಿವೆ..! * ವ್ಯಕ್ತಿಯಿಂದ ವ್ಯಕ್ತಿಗೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು. * ಕಚೇರಿಯಲ್ಲಿ ಇರುವಷ್ಟು ಸಮಯ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. * ಸ್ಯಾನಿಟೈಸರ್ ಬಳಸಬೇಕು ಅಥವಾ ಸೋಪ್ ಬಳಸಿ …

Read More »

ಲೋಕಸಭಾ ಉಪಚುನಾವಣೆಯಲ್ಲಿ ಮತ್ತೇ ಅರಳಲಿದೆ ಕಮಲ : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ರವಿವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಜರುಗಿದ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು, ಇದರಿಂದ ತಳಮಟ್ಟದಿಂದ ಪಕ್ಷ ಸಂಘಟಿಸಲು ಗ್ರಾಮ ಪಂಚಾಯತಿ ಚುನಾವಣೆ ಉತ್ತಮ ಅಡಿಪಾಯ ಎಂದು …

Read More »

ಗೋಕಾಕ : ಇಬ್ಬರು ಮಕ್ಕಳೊಂದಿಗೆ ಘಟಪ್ರಭಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ !

ಗೋಕಾಕ : ಮನೆಯಲ್ಲಿ ಜಗಳವಾಡಿ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದ ಮಹಿಳೆ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಗೋಕಾಕ ತಾಲ್ಲೂಕಿನ ಅರಭಾಂವಿಯ ಸಾವಿತ್ರಿ ರಾಜು ಬನಾಜ(30), ಪೂಜಾ (4) ಲಕ್ಷ್ಮಿ (2), ಮೃತರು. ಮನೆಯಲ್ಲಿ ಜಗಳವಾಡಿ ತಮ್ಮಇಬ್ಬರು ಮಕ್ಕಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ, ಕಾಣೆಯಾಗಿದ್ದರು. ಈ ಬಗ್ಗೆ ಗಂಡನ ಮನೆಯವರು ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದರು. ಆದ್ರೆ ಭಾನುವಾರ ಬೆಳಿಗ್ಗೆ ಗೋಕಾಕ …

Read More »

ಗೋಕಾಕ: ಇಲ್ಲಿಯ ರೋಟರಿ ರಕ್ತ ಭಂಡಾರದಲ್ಲಿ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರಲ್ಲಿ ಪಾಲ್ಗೊಂಡ ಹಳೆಯ ವಿದ್ಯಾರ್ಥಿಗಳು.

ಗೋಕಾಕ : ಎಲ್ಲ ದಾನಗಳಲ್ಲಿ ಶ್ರೇಷ್ಠವಾದ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವಂತೆ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಅರ್ಥಪೂರ್ಣವಾದ ಸಾಮಾಜಿಕ ಕಳಿಕಳಿಯ ಮಾರ್ಗದಲ್ಲಿ ಜೀವನ ಸಾಗಿಸೋಣವೆಂದು ಇಲ್ಲಿಯ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಶೋಕ ಕೌಜಲಗಿ ಹೇಳಿದರು. ರವಿವಾರದಂದು ಇಲ್ಲಿಯ ರೋಟರಿ ರಕ್ತ ಭಂಡಾರದಲ್ಲಿ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ರವಿವಾರ ದಿ. 21 ರಂದು ಇಲ್ಲಿಯ ಶುಭ …

Read More »

ಆರೋಗ್ಯ ಇಲಾಖೆಯಿಂದ ನೂತನವಾಗಿ ಪ್ರಾರಂಭಿಸಲಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಚಿವ ರಮೇಶ ಜಾರಕಿಹೊಳಿ

ಗೋಕಾಕ: ಜನತೆ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿ, ಎಲ್ಲ ರೀತಿಯ ಸೌಲಭ್ಯಗಳೊಂದಿಗೆ ವಿಶೇಷ ಆಧುನಿಕ ತಂತ್ರಜ್ಞಾನ ಸಹಕಾರದೊಂದಿಗೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.   ರವಿವಾರದಂದು ನಗರದ ಗುರುವಾರ ಪೇಠೆಯಲ್ಲಿ ಆರೋಗ್ಯ ಇಲಾಖೆಯಿಂದ ನೂತನವಾಗಿ ಪ್ರಾರಂಭಿಸಲಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯವಂತರಾಗಿರಿರೆಂದು ಕರೆ ನೀಡಿದರು. …

Read More »

ಇವರಿಗೆ ಕಾಮನ್ ಸೆನ್ಸ್ ಇದೆಯಾ? 10 ರೂ. ಪಾವತಿಸಿ ಅಂತ ತಿಳಿಸಲು ಈ ವಿ.ವಿ. ಖರ್ಚು ಮಾಡಿದ್ದು 22 ರೂ.!

ಧಾರವಾಡ: ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿಯಲ್ಲಿ ದೇಶದ ಯಾವುದೇ ಪ್ರಜೆ ಯಾವುದೇ ರೀತಿಯ ಮಾಹಿತಿಯನ್ನು ಪಡೆಯಬಹುದು. ಅದೇ ರೀತಿಯ ಮಾಹಿತಿಯನ್ನು ಕೇಳಿ ಒಬ್ಬರು ಸಲ್ಲಿಸಿದ್ದ ಅರ್ಜಿಗೆ ಕರ್ನಾಟಕ ವಿಶ್ವವಿದ್ಯಾಲಯದ ಆರ್​ಟಿಐ ಉತ್ತರಿಸಿದ ಅಧಿಕಾರಿಗಳು ಉತ್ತರಿಸಿದ ರೀತಿಯೇ ನಗು ತರಿಸುವಂತಿದೆ. ಧಾರವಾಡದ ಕೆ.ಎಸ್. ಜಯಂತ್​ ಕೆಲವು ಮಾಹಿತಿ ಕೋರಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 2021ರ ಜನವರಿ 1ರಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಫೆಬ್ರವರಿ 10ರಂದು ಉತ್ತರ ಬಂದಿದೆ. ‘ನೀವು ಕೇಳಿರುವ …

Read More »

ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ 11ತಿಂಗಳ ಕಂದ; ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿಗೆ ಪತ್ರ ಬರೆದ ಸಂಸದ

ಬೆಂಗಳೂರು: ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಸಮಸ್ಯೆಯಿಂದ ಬಳಲುತ್ತಿರುವ 11 ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. 11 ತಿಂಗಳ ಮಗು ಜನೀಶ್ ಚಿಕಿತ್ಸೆಗೆ 16 ಕೋಟಿ ರೂ.ಇಂಜಕ್ಷನ್ ಅಗತ್ಯವಿದ್ದು, ಇದನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಬೇಕಿದೆ. ಹೀಗಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿದ್ದು, ಔಷಧದ ಮೇಲಿನ ಎಲ್ಲಾ ತೆರಿಗೆಗಳನ್ನು ಮನ್ನಾ ಮಾಡುವ ಮೂಲಕ ಮಗುವಿಗೆ ನೆರವಾಗುವಂತೆ ಪತ್ರದಲ್ಲಿ …

Read More »

ಬೆಲೆ ಏರಿಕೆ ಎಫೆಕ್ಟ್ , ಭಾರವಾಯ್ತು ಜನರ ಬದುಕು..!

ಬೆಂಗಳೂರು, ಫೆ.12- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಸಿ, ತರಕಾರಿ ಬೆಲೆಗಳ ನಿರಂತರ ಏರಿಕೆಯಿಂದ ಜನರ ಬದುಕು ದುಸ್ತರವಾಗಿದೆ. ಕೊರೊನಾ ಸೋಂಕಿನಿಂದ ಆರ್ಥಿಕವಾಗಿ ಕಂಗೆಟ್ಟು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಜನ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಕೆಲವು ವಾರಗಳಿಂದ ಬೇಳೆಕಾಳು, ಆಹಾರ ಪದಾರ್ಥ, ಹಣ್ಣು-ತರಕಾರಿಗಳ ಬೆಲೆ ಗಗನ ಮುಖಿಯಾಗಿದ್ದು, ಜನ ತತ್ತರಗೊಂಡಿದ್ದಾರೆ. ಕೆಳ ಹಾಗೂ ಮಧ್ಯಮ ವರ್ಗದ ಜನರ ಬದುಕಂತೂ ಹೇಳತೀರದಾಗಿದೆ. ಬೆಲೆ ಏರಿಕೆಗಳ ಹುಚ್ಚಾಟದಿಂದ ಪ್ರತಿದಿನ ಬಡವರ ಪರದಾಟ ಹೆಚ್ಚಾಗಿದೆ. ಪೆಟ್ರೋಲ್, …

Read More »

ಹೊಸ ಮದ್ಯದಂಗಡಿಗೆ ಲೈಸನ್ಸ್ ನೀಡುವ ಪ್ರಸ್ತಾವ ಇಲಾಖೆ ಮುಂದಿಲ್ಲ :ಸಚಿವ ಗೋಪಾಲಯ್ಯ

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಹೊಸ ಲೈಸನ್ಸ್ ನೀಡುವ ಪ್ರಸ್ತಾವ ಇಲಾಖೆ ಮುಂದಿಲ್ಲ. ಈಗಾಗಲೇ ಹಳೆ ನಿಯಮದಂತೆ CL-07 ಲೈಸನ್ಸ್ ನೀಡುತ್ತಿದ್ದು, ಕಾನೂನು ಮೀರಿ ಲೈಸನ್ಸ್ ನೀಡಿದ್ದರೆ ಅದನ್ನು ರದ್ದು ಮಾಡಿ, ಅಧಿಕಾರಿಗಳನ್ನು ಅಮಾನತು ಮಾಡಲಾಗುತ್ತದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಎಚ್ಚರಿಕೆ ನೀಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಒಂದು ಲೈಸನ್ಸ್ ಪಡೆದು ಮೂರ್ನಾಲ್ಕು ಬಾರ್​​​ಗಳನ್ನು ನಡೆಸುತ್ತಿರುವ ವಿಚಾರದ ಬಗ್ಗೆ ಸಚಿವರ ಗಮನ ಸೆಳೆದಾಗ, ಆ ರೀತಿ ಯಾವುದೇ ದೂರುಗಳು ನನ್ನ ಗಮನಕ್ಕೆ …

Read More »