Breaking News
Home / ಜಿಲ್ಲೆ / ಬೆಳಗಾವಿ (page 300)

ಬೆಳಗಾವಿ

ರಮೇಶ ಜಾರಕಿಹೊಳಿ ಅಭಿಮಾನಿಗಳು ಹಾಗೂ ಬೆಂಬಲಿಗರಿಂದ ರಸ್ತೆ ತಡೆ, ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ.

ಗೋಕಾಕ: ರಮೇಶ ಜಾರಕಿಹೊಳಿ ಅವರ ಕೌಜಲಗಿ ಗ್ರಾಮದ ಅಭಿಮಾನಿ ಬಳಗ ಹಾಗೂ ಬೆಂಬಲಿಗರು ಗುರುವಾರದಂದು ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಕಂದಾಯ ನಿರೀಕ್ಷಕ ಎಮ್.ಆಯ್.ಮಠ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು. ಗ್ರಾಮದ ರವಿವರ್ಮ ಚೌಕದಲ್ಲಿ ಸೇರಿದ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ಟೈರ್ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, …

Read More »

ಸಿಂಹಗಳಿಗೆ ಗೋಮಾಂಸ ಬದಲಿಗೆ ಕೋಳಿ ಮಾಂಸ

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಮೃಗಾಲಯಕ್ಕೆ ಕೆಲವು ದಿನಗಳ ಹಿಂದೆ ಮೂರು ಸಿಂಹಗಳನ್ನು ತರಿಸಲಾಗಿದ್ದು, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯ ಪರಿಣಾಮ ಅವುಗಳಿಗೆ ಗೋಮಾಂಸದ ಬದಲಿಗೆ ಕೋಳಿ ಮಾಂಸವನ್ನು ಆಹಾರವಾಗಿ ನೀಡಲಾಗುತ್ತಿದೆ. ‘ಬನ್ನೇರಘಟ್ಟ ಜೈವಿಕ ಉದ್ಯಾನದಿಂದ ತರಲಾಗಿರುವ ‘ನಕುಲ’, ‘ಕೃಷ್ಣ’ ಹಾಗೂ ‘ನಿರುಪಮಾ’ ಹೆಸರಿನ 11 ವರ್ಷದ ಸಿಂಹಗಳಿಗೆ ದಿನಕ್ಕೆ ತಲಾ 7ರಿಂದ 9 ಕೆ.ಜಿ. ದನದ ಮಾಂಸ ಬೇಕು. ಆದರೆ, ಕಾಯ್ದೆ ಜಾರಿ ಪರಿಣಾಮ ಆ ಮಾಂಸ …

Read More »

ಬೆಳಗಾವಿ ಝೂದಲ್ಲಿ ಸಿಂಹ ,ಶೀಘ್ರವೇ ಮೃಗಾಲಯದಲ್ಲಿ ಹುಲಿ ಸಫಾರಿ : ಸತೀಶ್ ಜಾರಕಿಹೊಳಿ

ಬೆಳಗಾವಿ – : ರಾಣಿ ಚನ್ನಮ್ಮ ಕಿರು ಮೃಗಾಲಯ ಉತ್ತರ ಕರ್ನಾಟಕದ ಹೆಮ್ಮೆಯಾಗಿದೆ. ಅದರ ಅಭಿವೃದ್ಧಿಗಾಗಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಯಮಕನಮರಡಿ ಶಾಸಕರಾದ ಸತೀಶ್ ಜಾರಕಿಹೊಳಿ ತಿಳಿಸಿದರು. ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ಮಂಗಳವಾರ (ಮಾ.೦೨) ಭೇಟಿ ನೀಡಿ ಮಾಧ್ಯಮಗೋಷ್ಠಿ ನಡೆಸಿದರು.   ಈಗಾಗಲೇ ಮೃಗಾಲಯಕ್ಕೆ 3 ಸಿಂಹಗಳು ಆಗಮಿಸಿವೆ. ಮುಂಬರುವ ದಿನಗಳಲ್ಲಿ ಹುಲಿ,ಚಿರತೆ, ಕರಡಿ ಮುಂತಾದ ಪ್ರಾಣಿಗಳನ್ನು ಕರೆತರುವ ಯೋಜನೆ ಇದ್ದು, ಅವುಗಳಿಗೆ …

Read More »

ಕೆ.ಆರ್.ಎಸ್. ಡ್ಯಾಂ ಮೇಲೆ ಯುವಕನ ಉದ್ಧಟತನ – ಇನ್ಸ್ ಪೆಕ್ಟರ್ ಅಮಾನತು

ಮಂಡ್ಯ: ಕೆ.ಆರ್.ಎಸ್. ಡ್ಯಾಂ ಮೇಲೆ ಯುವಕನಿಗೆ ಪೊಲೀಸ್ ವಾಹನ ಚಲಾಯಿಸಲು ಅವಕಾಶ ನೀಡಿದ ಭದ್ರತಾ ವಿಭಾಗದ ಇನ್ಸ್ ಪೆಕ್ಟರ್ ರನ್ನು ಅಮಾನತು ಮಾಡಲಾಗಿದೆ. ಕೆ.ಆರ್.ಎಸ್. ಡ್ಯಾಂ ಮೇಲೆ ಸಾರ್ವಜನಿಕರಿಗೆ ನಿಷೇಧವಿದ್ದು, ನಿರ್ಬಂಧವಿದ್ದಾಗ್ಯೂ ಕೂಡ ಪೊಲಿಸರಿಂದಲೇ ನಿಯಮ ಉಲ್ಲಂಘನೆಯಾಗಿದೆ. ಭದ್ರತೆ ನೋಡಿಕೊಳ್ಳಬೇಕಿದ್ದ ಇನ್ಸ್ ಪೆಕ್ಟರ್ ಎಸ್.ಬಿ.ಸ್ವಾಮಿ ಯುವಕನ ಮೋಜು ಮಸ್ತಿಗಾಗಿ ಡ್ಯಾಂ ಮೇಲೆ ವಾಹನ ಚಲಾಯಿಸಲು ಪೊಲೀಸ್ ವಾಹನವನ್ನೇ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪೊಲೀಸ್ ನಡೆಗೆ …

Read More »

15 ದಿನದಲ್ಲಿ ಹುಲಿ, ಚಿರತೆ ಸಾಫಾರಿಗೂ ಅವಕಾಶ: ಶಾಸಕ ಸತೀಶ ಜಾರಕಿಹೊಳಿ

  ಬೆಳಗಾವಿ: ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ  ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೆಳಗಾವಿಯ ರಾಣಿ ಚನ್ನಮ್ಮ ಮೃಗಾಲಯದಿಂದ  ಪ್ರವಾಸೋದ್ಯಮ ಇಲಾಖೆ ಮಹತ್ವ ಬರಲಿದೆ   ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಭೂತರಾಮನಹಟ್ಟಿ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮೈಸೂರು ಮಾದರಿಯಲ್ಲಿ ಬೆಳಗಾವಿಯ ಮೃಗಾಲಯಕ್ಕೆ ಒತ್ತು ನೀಡಲಾಗುವುದು. ಇದರಿಂದ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯಗಳ ಸಂಪರ್ಕಕೊಂಡಿಯಾಗಲಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಜನತೆ ಮೈಸೂರಿಗೆ …

Read More »

ಗೋಕಾಕ : ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ 16 ನೇ ಶರಣ ಸಂಸ್ಕøತಿ ಉತ್ಸವದ ಯುವ ಸಮಾವೇಶದಲ್ಲಿ ಐಪಿಎಸ್ ರವಿ ಚಣ್ಣನ್ನವರ ಅವರನ್ನು ಶ್ರೀಮಠದಿಂದ ಸನ್ಮಾನಿಸುತ್ತಿರುವುದು.

ಗೋಕಾಕ: ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಸಾಧನೆ ಮಾಡುವ ಛಲ ಇರಬೇಕು. ವಿದ್ಯಾರ್ಜನೆಯೇ ನನ್ನ ಕಸಬು ಎಂದು ಐಪಿಎಸ್ ರವಿ ಚಣ್ಣನ್ನವರ ಹೇಳಿದರು. ಸೋಮವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಇಲ್ಲಿನ ಶ್ರೀ ಶೂನ್ಯ ಸಂಪಾದನ ಮಠದ 16 ನೇ ಶರಣ ಸಂಸ್ಕøತಿ ಉತ್ಸವದ ಯುವ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಯುವ ಜನತೆಗೆ ಜ್ಞಾನಾರ್ಜನೆ ಮುಖ್ಯವಾಗಿದೆ ಅದನ್ನು ಕಲಿಯಬೇಕು. ನನಗೆ ಸ್ವಾಮಿ ವಿವೇಕಾನಂದ, ಚಂದ್ರಶೇಖರ ಆಝಾದ, ಭಗತ್‍ಸಿಂಗ್ ಅವರ …

Read More »

ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರುಳುಗಾರಿಕೆ.

ಕರೋಣದಿಂದಾಗಿ ಈ ಭಾರಿ ಜನರು ಜೀವ ಕಳೆದುಕೊಂಡು ಜೀವನ‌ ನರಕಯಾತನೆ ಅನುಭವಿಸುತ್ತಿದ್ದಾರೆ..ಮನೆ ಮಾಡಿಕೊಳ್ಳಲು ಮರಳು ಸಿಗದಂತಾ ಪರಿಸ್ಥಿತಿ ನಿರ್ಮಾಣವಾಗಿದೆ…ಆದ್ರೆ ಕೆಲವರು ಇದನ್ನೆ ಸದ್ಬಳಿಕೆ ಮಾಡಿಕೊಂಡು ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ.ಹೌದು ಅಕ್ರಮವಾಗಿ ಕೃತಕ ಮರಳು ತಯಾರಿಕೆಗಳನ್ನು ಮಾಡಿಕೊಂಡು ಜನರ ಫಲವತ್ತಾದ ಜಮೀನುಗಳನ್ನ ನಾಶಮಾಡುತ್ತಿರುವ ದೃಶ್ಯ ಕಂಡು ಬರೋದು ಬಾಗಲಕೋಟ ಜಿಲ್ಲೆಯ ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲೂಕಿನಾದ್ಯತ ನಡೆದಿದೆ.ಬನಹಟ್ಟಿ ತಾಲೂಕಿನ‌ ಬಂಡಿಗಣ್ಣಿ ಕ್ರಾಸ್ ಹತ್ತಿರ ಪ್ರಕಾಶ್ ಜಂಬಗಿ ಎಂಬಾತ ಹೊರವಲಯದ …

Read More »

ಲಕ್ಷ್ಮಿ ಹೆಬ್ಬಾಳ್ಕರ್ ಮಾರ್ಕೆಟಿಂಗ್ ವೋಮನ್ ಎಂದ ರಮೇಶ್ ಜಾರಕಿಹೊಳಿ

ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಟಾಕ್‍ಫೈಟ್ ಮುಂದುವರಿದಿದೆ. ಲಕ್ಷ್ಮಿ ಹೆಬ್ಬಾಳ್ಕರ್‍ರನ್ಬು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲಿಸಿದ್ದು ನಾನೇ ಎಂದು ಪದೇಪದೇ ಹೇಳುತ್ತಿದ್ದ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದ್ದ, ಲಕ್ಷ್ಮಿ ಹೆಬ್ಬಾಳ್ಕರ್ ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿಸಿದ್ದು ನಾನೇ ಅಂತಾ ಹೇಳಿದ್ದರು. ಈ ವಿಚಾರಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ ಲಕ್ಷ್ನೀ ಹೆಬ್ಬಾಳ್ಕರ್ ಮಾರ್ಕೆಟಿಂಗ್ ವುಮೆನ್ ಅಂತಾ ಲೇವಡಿ ಮಾಡಿದ್ರು. ಕೇಂದ್ರ ಸಚಿವ …

Read More »

ಬೆಳವಡಿ ಮಲ್ಲಮ್ಮ ಉತ್ಸವ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಣೆ….

ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯಲ್ಲಿ ಬೆಳವಡಿ ಮಲ್ಲಮ್ಮ ಉತ್ಸವವನ್ನು ಭಾನುವಾರ ಸರಳ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಯಿತು. ಸೋಂದಾದಿಂದ ಆಗಮಿಸಿದ ವೀರಜ್ಯೋತಿಯನ್ನು ಶಾಸಕ ಮಹಾಂತೇಶ ಕೌಜಲಗಿ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಬರಮಾಡಿಕೊಂಡು ಪೂಜೆ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬೆಳವಡಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ನಂತರ ಬೆಳವಡಿ ಮಲ್ಲಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

Read More »

ಗೋಕಾಕ: ಜಿಲ್ಲಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯಲ್ಲಿ ಖಾನಾಪೂರದ ರಾಜು ಗಾವಡೆ ಮಿಸ್ಟರ್ ಬಾಡಿ ಲೈನ್ 2021 ಚಾಂಪಿಯನ್ ಆಪ್ ಚಾಂಪಿಯನ್ ಆಗಿ ಬಹುಮಾನ ಪಡೆಯುತ್ತಿರುವುದು.

ಗೋಕಾಕ: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಗೋಕಾಕ ತಾಲೂಕಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಶನಿವಾರದಂದು ಆಯೋಜಿಸಿದ್ದ 5ನೇ ಜಿಲ್ಲಾ ಮಟ್ಟದ (ಬೆಳಗಾವಿ ನಗರ ಹೊರತು ಪಡಿಸಿ) ದೇಹದಾಢ್ರ್ಯದ ಸ್ಪರ್ಧೆಯಲ್ಲಿ ಖಾನಾಪೂರದ ರಾಜು ಗಾವಡೆ ಮಿಸ್ಟರ್ ಬಾಡಿ ಲೈನ್ 2021 ಚಾಂಪಿಯನ್ ಆಪ್ ಚಾಂಪಿಯನ್ ಆಗಿ ಆಯ್ಕೆಯಾಗಿದ್ದಾರೆ. ಬೆಳಗಾವಿ ಗ್ರಾಮೀಣದ ರನ್ನರ್ ಆಫ್ ಆಗಿ ಸುನೀಲ ಬಾತಖಾಂಡೆ, ಖಾನಾಪೂರದ ಬೇಸ್ಟ್ ಫೋಜರ್ ಪ್ರಶಸ್ತಿಯನ್ನು ಸಂದೀಪ ಅಂಗಡಿ ಪಡೆದಿದ್ದಾರೆ. ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯಲ್ಲಿ …

Read More »