ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಬುಧವಾರ ಸಂಭ್ರಮದಿಂದ ಭಾರತ ಹುಣ್ಣಿಮೆ ಜಾತ್ರೆ ನಡೆಯಿತು. ರಾಜ್ಯ ಹಾಗೂ ಹೊರ ರಾಜ್ಯಗಳ 20 ಲಕ್ಷಕ್ಕೂ ಅಧಿಕ ಭಕ್ತರು ಗುಡ್ಡಕ್ಕೆ ಬಂದು ದೇವಿ ದರ್ಶನ ಪಡೆದರು. ಎಲ್ಲಿ ನೋಡಿದರೂ ಜನಸಾಗರವೇ ಕಣ್ಣಿಗೆ ರಾಚುತ್ತಿತ್ತು. ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ ಎಂಬ ಜೈಕಾರ ಮುಗಿಲು ಮುಟ್ಟಿತ್ತು. ಇಡೀ ಗುಡ್ಡದ ಪರಿಸರ ಭಂಡಾರದ ಓಕುಳಿಯಲ್ಲಿ ಮಿಂದೆದ್ದಿತು.
Read More »ಯಲ್ಲಮ್ಮನ ಸನ್ನಿಧಿಯಲ್ಲಿ ಭಾರತ ಹುಣ್ಣಿಮೆ ಸಂಭ್ರಮ
ಯಲ್ಲಮ್ಮನ ಸನ್ನಿಧಿಯಲ್ಲಿ ಭಾರತ ಹುಣ್ಣಿಮೆ ಸಂಭ್ರಮ ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಬುಧವಾರ ಸಂಭ್ರಮದಿಂದ ಭಾರತ ಹುಣ್ಣಿಮೆ ಜಾತ್ರೆ ನಡೆಯಿತು. ರಾಜ್ಯ ಹಾಗೂ ಹೊರ ರಾಜ್ಯಗಳ 20 ಲಕ್ಷಕ್ಕೂ ಅಧಿಕ ಭಕ್ತರು ಗುಡ್ಡಕ್ಕೆ ಬಂದು ದೇವಿ ದರ್ಶನ ಪಡೆದರು. ಎಲ್ಲಿ ನೋಡಿದರೂ ಜನಸಾಗರವೇ ಕಣ್ಣಿಗೆ ರಾಚುತ್ತಿತ್ತು. ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ ಎಂಬ ಜೈಕಾರ ಮುಗಿಲು ಮುಟ್ಟಿತ್ತು. ಇಡೀ ಗುಡ್ಡದ ಪರಿಸರ ಭಂಡಾರದ ಓಕುಳಿಯಲ್ಲಿ ಮಿಂದೆದ್ದಿತು.
Read More »ದೇವಸ್ಥಾನ ಬಂದ ಬಗ್ಗೆ ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿ ಶೇರ್ ಮಾಡಬೇಡಿ
ಉಗರಗೋಳ: ‘ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿರುವ ಯಲ್ಲಮ್ಮ ದೇವಿ ದೇವಸ್ಥಾನ ಬಂದ್ ಆಗಿಲ್ಲ. ಭಕ್ತರು ಯಾವುದೇ ವದಂತಿಗೆ ಕಿವಿಗೊಡಬಾರದು ಎಂದು ಯಲ್ಲಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಹೇಳಿದ್ದಾರೆ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವ ಯಲ್ಲಮ್ಮ ದೇವಸ್ಥಾನವನ್ನು ಎರಡ್ಮೂರು ವರ್ಷದ ಅವಧಿಗೆ ಬಂದ್ ಮಾಡಲಾಗಿದೆ. ದೇವಿ ದರ್ಶನಕ್ಕೆ ಅವಕಾಶವಿಲ್ಲ ಎಂದು ಹಲವು ಭಕ್ತರು ವಿಚಾರಿಸುತ್ತಿದ್ದಾರೆ. ಅದು ಶುದ್ಧಸುಳ್ಳು ಎಂದು ಪ್ರತಿಕ್ರಿಯಿಸಿದ್ದಾರೆ. ಯಲ್ಲಮ್ಮ ದೇವಸ್ಥಾನದಲ್ಲಿ ಎಂದಿನಂತೆ, ದೇವಿಗೆ ವಿಶೇಷ ಪೂಜೆ ನೆರವೇರುತ್ತಿದೆ. …
Read More »ಫೋನ್ ನಲ್ಲಿ ಮಾತನಾಡುವ ನೆಪ ಮಾಡಿ ಹಣ ದೊಚಿದ ಖದೀಮ.
ಮುನವಳ್ಳಿ: ಫೋನ್ ನಲ್ಲಿ ಮಾತನಾಡುವ ನೆಪ ಮಾಡಿ ವ್ಯಕ್ತಿಯೊರ್ವ ಹಣ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಹೋಟೆಲ್ ಒಂದರಲ್ಲಿ ಈ ಕಳ್ಳತನ ನಡೆದಿದೆ . ಹೋಟೆಲ್ ಡ್ರಾ ನಲ್ಲಿ ಇದ್ದ 4 ಸಾವಿರ ರೂಪಾಯಿಯನ್ನು ಯಾರಿಗೂ ಗೊತ್ತಿಲ್ಲದ ಹಾಗೆ ಪೋನ್ ನಲ್ಲಿ ಮಾತನಾಡುವ ರೀತಿ ನಟಿಸಿ ಕಳ್ಳತನ ಮಾಡಲಾಗಿದೆ.. ಹೋಟೆಲ್ ನಲ್ಲಿ ಕಳ್ಳತನ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸಂಪೂರ್ಣವಾಗಿ …
Read More »“ಎಪಿಎಂಸಿ ಸರ್ಕಲ್ ನಿಂದ ಧಾರವಾಡ ರೋಡ” ವರೆಗೆ ಮರು ಡಾಂಬರೀಕರಣದ ಭೂಮಿ ಪೂಜೆ ಸತೀಶ್ ಜಾರಕಿಹೊಳಿ ಭಾಗಿ.
ಸವದತ್ತಿ: ಪಟ್ಟಣದ ಭಗೀರಥ ಸರ್ಕಲನಲ್ಲಿ ಇಂದು “ಎಪಿಎಂಸಿ ಸರ್ಕಲ್ ನಿಂದ ಧಾರವಾಡ ರೋಡ” 08.Km ವರೆಗೆ ಮರು ಡಾಂಬರೀಕರಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾನ್ಯ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರೊಂದಿಗೆ ಭಾಗಿಯಾಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದೆ. ಈ ಸಂಧರ್ಭದಲ್ಲಿ ಮುಖಂಡರು, ಗುರು ಹಿರಿಯರು, ಕಾರ್ಯಕರ್ತರು, ತಾಲೂಕಾ ಅಧಿಕಾರಿಗಳು, ಯುವ ಮಿತ್ರರು ಉಪಸ್ಥಿತರಿದ್ದರು.
Read More »ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸವದತ್ತಿ: ತಾಲ್ಲೂಕಿನ ವಟ್ನಾಳ ಗ್ರಾಮದಲ್ಲಿ ಬೆಳಗಾವಿಯ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಾನಸ ಪದವಿ ಪೂರ್ವ ಕಾಲೇಜುಗಳಿಂದ ಜರುಗಿದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಇಲ್ಲಿನ ಜಿ.ಜಿ. ಚೋಪ್ರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪೂಜಾ ಕಾಳೆ ಭಾವಗೀತೆ ಮತ್ತು ಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ, ಜಾನಪದ ಗೀತೆಯಲ್ಲಿ ದ್ವಿತೀಯ ಸ್ಥಾನ, ಕೀರ್ತಿ ಗಾಣಗೇರ …
Read More »ನೀರು ಕೊಟ್ಟು, ರಸ್ತೆ ಕಿತ್ತುಕೊಂಡರು
ಸವದತ್ತಿ: ನಿರಂತರ ನೀರು (24X7) ಪೂರೈಕೆಗಾಗಿ ಪಟ್ಟಣದ ಬಹುಪಾಲು ರಸ್ತೆಗಳನ್ನು ಅಗೆದು ಹಾಕಲಾಗಿದೆ. ಕಾಮಗಾರಿ ಮುಗಿದ ಮೇಲೆ ಮತ್ತೆ ರಸ್ತೆ ದುರಸ್ತಿ ಮಾಡಿಲ್ಲ. ಇದೇ ಪರಿಸ್ಥಿತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲೂ ತಲೆದೋರಿದೆ. ಕೊರಕಲು ರಸ್ತೆಗಳಿಂದ ಜನ ಬೇಸತ್ತುಹೋಗಿದ್ದಾರೆ. ಅಧಿಕಾರಿಗಳು ಮಾತ್ರ ಒಬ್ಬರ ಮೇಲೊಬ್ಬರ ನೆಪ ಹೇಳಿಕೊಂಡು ದಿನ ಕಳೆಯುತ್ತಿದ್ದಾರೆ. ಸುಪ್ರಸಿದ್ಧ ಪ್ರೇಕ್ಷಣೀಯ ಸ್ಥಾನ ಯಲ್ಲಮ್ಮನ ಗುಡ್ಡವನ್ನು ಸುತ್ತವರಿದು ಸವದತ್ತಿ ಪಟ್ಟಣ ಹಾಗೂ ಗ್ರಾಮಗಳಿವೆ. ವಿಶಾಲವಾಗಿ ಹರಿದ ಮಲಪ್ರಭೆಯಿಂದ ಸಾಕಷ್ಟು ನೀರಿನ …
Read More »ಟಿಎಚ್‌ಒಗೆ ಪಿಡಿಒ ಅವಾಚ್ಯ ಪದ ಬಳಕೆ: ಖಂಡನೆ
ಸವದತ್ತಿ: ಇಂಚಲ ಪಿಡಿಒ, ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಅವಾಚ್ಯವಾಗಿ ಬೈದು, ನಿಂದಿಸಿದ್ದನ್ನು ಖಂಡಿಸಿ ಶಿಸ್ತುಕ್ರಮಕ್ಕೆ ಆಗ್ರಹಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ಪ್ರತಿಭಟಿಸಿ ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಿದರು. ಮುಖ್ಯ ವೈದ್ಯಾಧಿಕಾರಿ ಎಚ್.ಎಂ. ಮಲ್ಲನಗೌಡರ ಮಾತನಾಡಿ, ‘ಇಂಚಲ ಗ್ರಾಮದ ಪಿಎಚ್‌ಸಿಯಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದ್ದು, ಪರ್ಯಾಯವಾಗಿ ಚಚಡಿಯ ಪಿಎಚ್‌ಸಿಯ ಡಾ.ವಿಶಾಲು ಗದಗ ಮತ್ತು ಡಾ. ನಾಗರಾಜಗೌಡ ಮಾಳಿಪಾಟೀಲರನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಇಲಾಖೆಯಿಂದ …
Read More »ಸವದತ್ತಿ: 99 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ
ಸವದತ್ತಿ: ಇಲ್ಲಿನ ಗುರ್ಲಹೊಸೂರಿನ ಚಿದಂಬರೇಶ್ವರ ದೇವಸ್ಥಾನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಶುಕ್ರವಾರ ಜರುಗಿತು. ಪಿಐ ಧರ್ಮಾಕರ ಧರ್ಮಟ್ಟಿ ಮಾತನಾಡಿ, ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಮಾತ್ರವಲ್ಲದೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಧರ್ಮಸ್ಥಳ ಸಂಘ ಆರ್ಥಿಕ ನೆರವು ನೀಡುತ್ತಿರುವ ಕಾರ್ಯ ಶ್ಲಾಘನೀಯ. ತಾಲ್ಲೂಕಿನ 99 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ನೀಡಿ ಬಡ ಮಕ್ಕಳನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕಾರ್ಯ ಮಾದರಿಯಾಗಿದೆ ಎಂದರು. ವೇದಿಕೆಯಲ್ಲಿ 99 ಮಂದಿ …
Read More »ರಥದ ಕಳಸ ಬಿದ್ದು ಬಾಲಕ ಸಾವು
ಚಚಡಿ: ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಸೋಮವಾರ, ರಥೋತ್ಸವ ವೇಳೆ ರಥದ ಮೇಲಿನ ಬೆಳ್ಳಿಯ ನವಿಲು ಬಿದ್ದು ಶಿವಾನಂದ ರಾಜಕುಮಾರ ಸಾವಳಗಿ (13) ಎಂಬ ಬಾಲಕ ಮೃತಪಟ್ಟಿದ್ದಾನೆ. ಪ್ರತಿ ವರ್ಷದ ವಾಡಿಕೆಯಂತೆ ಶ್ರಾವಣದ ಪ್ರಯುಕ್ತ ಸಂಗಮೇಶ್ವರ ರಥೋತ್ಸವಕ್ಕೆ ಸಿದ್ಧತೆಯಾಗಿತ್ತು. 30 ಅಡಿ ಎತ್ತರದ ರಥದ ಮೇಲಿನ ಕಳಸದ ಮೇಲೆ 5 ಕೆಜಿ ತೂಕದ ಬೆಳ್ಳಿಯ ನವಿಲು ಪ್ರತಿಷ್ಠಾಪಿಸಲಾಗಿತ್ತು. ಸಾವಿರ ವರ್ಷಗಳ ಇತಿಹಾಸಯುಳ್ಳ ಈ ಜಾತ್ರೆಯಲ್ಲಿ ಇದೇ ಮೊದಲ ಸಲ ಬೆಳ್ಳಿಯ …
Read More »