Breaking News
Home / ಜಿಲ್ಲೆ / ಬೆಳಗಾವಿ / ಸವದತ್ತಿ (page 4)

ಸವದತ್ತಿ

ಸವದತ್ತಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸವದತ್ತಿಯ ರೇಣುಕಾ ಯಲ್ಲಮ್ಮಾ ದೇವಸ್ಥಾನದ ವರಾಂಡಾಕ್ಕೆನುಗ್ಗಿದ ನೀರು

ಸವದತ್ತಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸವದತ್ತಿಯ ರೇಣುಕಾ ಯಲ್ಲಮ್ಮಾ ದೇವಸ್ಥಾನದ ವರಾಂಡಾಕ್ಕೆ ನೀರು ನುಗ್ಗಿದ್ದು ದೇವಿಯ ದರ್ಶನವನ್ನು ಪಡೆಯಲು ಭಕ್ತರು ಪರದಾಡುವ ಪ್ರಸಂಗ ನಿರ್ಮಾಣವಾಗಿತ್ತು. ಹೌದು ಇಂದು ಗುರುವಾರ ಮಧ್ಯಾಹ್ನದ ವೇಳೆಗೆ ಸವದತ್ತಿಯಲ್ಲಿ ಸುರಿದ ಧಾರಾಕಾರ ಮಳಿಯಿಂದಾಗಿ ಸವದತ್ತಿ ಅಧಿದೇವತೆ ರೇಣುಕಾ ಯಲ್ಲಮ್ಮಾ ದೇವಸ್ಥಾನದ ವರಾಂಡಾಕ್ಕೆ ನೀರು ನುಗ್ಗಿದೆ. ಪರಿಣಾಮವಾಗಿ ದೇವಿಯ ದರ್ಶನಕ್ಕೆ ಬಂದಿದ್ದ ಭಕ್ತರು ದೇವಿಯ ದರ್ಶನವನ್ನು ಪಡೆಯಲು ಪರದಾಡಬೇಕಾಯಿತು. ಏಕಾಏಕಿಯಾಗಿ ಮಳೆ ರಭಸವಾಗಿ ಬೀಳಲಾರಂಭಿಸಿದ್ದರಿಂದ ಭಕ್ತರು ಓಡಿ …

Read More »

ಬಡ ಕುಟುಂಬದ ಹೆಣ್ಣು ಹೆತ್ತವರ ಕಷ್ಟಕ್ಕೆ ನೆರವಾಗುವ ಪ್ರಯತ್ನ.: ಸತೀಶ್ ಜಾರಕಿಹೊಳಿ ಆಪ್ತ ಪಂಚನ ಗೌಡ ದ್ಯಾಮಣ್ಣವರ

ಬಡ ಕುಟುಂಬದ ಹೆಣ್ಣು ಹೆತ್ತವರ ಕಷ್ಟಕ್ಕೆ ನೆರವಾಗುವ ಪ್ರಯತ್ನ. ನನ್ನ ಕ್ಷೇತ್ರದಲ್ಲಿ ಬಡ ಕುಟುಂಬದ ತಂದೆ ತಾಯಂದಿರಿಗೆ ಅವರ ಹೆಣ್ಣು ಮಕ್ಕಳ ಮದುವೆ ಹೊರೆ ತಪ್ಪಿಸಲು ನಾವು ಮಾಡುತ್ತಿರುವ ಸಹಾಯ ಕಾರ್ಯ ದಿನೇ ದಿನೇ ಹೆಚ್ಚುತ್ತಲೇ ಇದೆ. ಅದರಂತೆಯೇ ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದ ರೇಬಣ್ಣವರ ಕುಟುಂಬದ ಸುಪುತ್ರಿಯ ಮದುವೆಗೆ ಅನುಕೂಲವಾಗುವಂತೆ ಟ್ರೆಜರಿ, ಖಾಟ್, ಅಡುಗೆ ಪಾತ್ರೆಗಳು ಹಾಗೂ ಇನ್ನಿತರ ಅವಶ್ಯಕ ವಸ್ತುಗಳನ್ನು ನೀಡಿದೆ. ಈ ಸಂದರ್ಭದಲ್ಲಿ ರೇಬಣ್ಣವರ …

Read More »

ಯಲ್ಲಮ್ಮನ ಗುಡ್ಡದಲ್ಲಿ ಸಡನ್ ಜೆಸಿಬಿ ದಾಳಿ ಎಲ್ಲ ಮನೆ ಗಳು ಧ್ವಂಸ

: ಯಲ್ಲಮ್ಮನ ಗುಡ್ಡದಲ್ಲಿ ಸಡನ್ ಜೆಸಿಬಿ ದಾಳಿ ಎಲ್ಲ ಮನೆ ಗಳು ಧ್ವಂಸ ಸವದತ್ತಿ: ಸುಮಾರು ವರ್ಷ ಗಳಿಂದ ವಾಸಿಸುತ್ತಿದ್ದ ಲಂಬಾಣಿ ಜನರು ಅಲ್ಲಿ ಶೆಡ್ಡು ಗಳನ್ನ ನಿರ್ಮಿಸಿ ವಾಸಿಸುತ್ತಿದ್ದ ಜನರಿಗೆ ಇವಾಗ ಬಿಗ್ ಶಾಕ್ ಆಗಿದೆ ಜಿಸಿಬಿ ಹಿಂದ ಎಲ್ಲ ಶೆಡ್ಡು ಗಳಾನ ತೆರವು ಗೊಳಿಸಿ ಅವರಿಗೆ ಆಶ್ರಯ ಇಲ್ಲದಂತಾಗಿದೆ ಯಾಕೆ ಏಕಾ ಏಕಿ ಖಾಲಿ ಮಾಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕೊಡದೆ ಲಾಟಿ ರುಚಿ ತೋರಿಸುವ ಮೂಲಕ …

Read More »

ಸೂಕ್ಷ್ಮ ಸ್ವಭಾವದ ವ್ಯಕ್ತಿತ್ವವುಳ್ಳ ಇಲ್ಲಿನ ಪಿಎಸ್‌ಐ ಶಿವಾನಂದ ಗುಡಗನಟ್ಟಿ, ಶಿಕ್ಷಣ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ

ಸವದತ್ತಿ: ಪೊಲೀಸ್ ಅರ್ಥ ರಕ್ಷಕ ಮತ್ತು ಕಾನೂನು ಪಾಲಕ. ಇವೆರಡರ ಜೊತೆಗೂ ಇಲ್ಲೊಂದು ಸಮಾಜಮುಖಿ ಕಾರ್ಯ ನಡೆದಿದೆ. ಸವದತ್ತಿ ಠಾಣೆಯ ಪೊಲೀಸ್ ಅಧಿಕಾರಿ ಕಾನೂನು ಪಾಲನೆ ಜೊತೆಗೆ ಸಂಗೀತ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಾವೂ ಸಹ ಮುಂದಿದ್ದೇವೆಂದು ನಿಖರವಾಗಿ ತೋರಿಸಿ ಸಾರ್ವಜನಿಕ ವಲಯದಲ್ಲಿ ಅತೀವ ಪ್ರಂಶಸೆಗೆ ಪಾತ್ರರಾಗಿದ್ದಾರೆ. ಸೂಕ್ಷ್ಮ ಸ್ವಭಾವದ ವ್ಯಕ್ತಿತ್ವವುಳ್ಳ ಇಲ್ಲಿನ ಪಿಎಸ್‌ಐ ಶಿವಾನಂದ ಗುಡಗನಟ್ಟಿ, ಶಿಕ್ಷಣ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಬೆತ್ತದ ಜೊತೆಗೆ …

Read More »

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ‘ಬನದ ಹುಣ್ಣಿಮೆ ಸಾರ್ವಜನಿಕ ಪ್ರವೇಶ ಇಲ್ಲ.

ಸವದತ್ತಿ (ಬೆಳಗಾವಿ): ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ‘ಬನದ ಹುಣ್ಣಿಮೆ’ ಅಂಗವಾಗಿ ಸೋಮವಾರ (ಜ.17) ನಡೆಯಬೇಕಿದ್ದ ಜಾತ್ರೆಯನ್ನು ಕೋವಿಡ್ ಕಾರಣದಿಂದ ರದ್ದುಪಡಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಸರಳವಾಗಿ ನಡೆಯಲಿವೆ. ಬೆಳಿಗ್ಗೆ ಮತ್ತು ಸಂಜೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಜರುಗಲಿದೆ. ಆದರೆ, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.   ದೇವಸ್ಥಾನಕ್ಕೆ ಸೀಮಿತವಾಗಿ ಅಧಿಕಾರಿಗಳು, ಅರ್ಚಕರು ಹಾಗೂ ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳಲಾಗುವುದು ಎಂದು ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ.   ನಿಷೇಧದ …

Read More »

ಸವದತ್ತಿ ಯಲ್ಲಮ್ಮ ದೇಗುಲದ ದರ್ಶನಕ್ಕೆ ಸೆಪ್ಟೆಂಬರ್ 28 ರಿಂದ ಅವಕಾಶ

ಬೆಳಗಾವಿ: ಸೆಪ್ಟೆಂಬರ್ 28 ರಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತಾದಿಗಳ ದರ್ಶನಕ್ಕೆ ಅನುಮತಿ ನೀಡಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶಿಸಿದ್ದಾರೆ. ಕಳೆದ 17ತಿಂಗಳಿಂದ ಕೊವಿಡ್ ಹಿನ್ನೆಲೆಯಲ್ಲಿ ದೇವಿ ದರ್ಶನಕ್ಕೆ ಅವಕಾಶವನ್ನು ಸ್ಥಗಿತಗೊಳಿಸಲಾಗಿತ್ತು. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಲ್ಲಮ್ಮ ಗುಡ್ಡದಲ್ಲಿರುವ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದರ್ಶನಕ್ಕೆ ಅನುಮತಿ ನೀಡಲಾಗಿದ್ದರೂ, ಜನಸಂದಣಿ ಆಗುವಂತಹ ಉತ್ಸವ, ಜಾತ್ರೆ ಕಾರ್ಯಕ್ರಮ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ಕಡ್ಡಾಯವಾಗಿ ಕೊವಿಡ್ ನಿಯಮ …

Read More »

ಸವದತ್ತಿ: ಅನ್ನದಾನ ಮಹಾದಾನ ಹೇಳಿಕೆ ಯೊಂದಿಗೆ ಇವತ್ತಿನ ವಿಷಯ

ಸವದತ್ತಿ: ಅನ್ನದಾನ ಮಹಾದಾನ ಹೇಳಿಕೆ ಯೊಂದಿಗೆ ಇವತ್ತಿನ ವಿಷಯ ಮತ್ತೆ ಇವತ್ತು ಶನಿವಾರ ಬಂತು ನಮ್ಮ ತಂಡ ಅನ್ನ ಸಂತರ್ಪಣೆ ಮಾಡಲು ಇವತ್ತು ಸಜ್ಜಾಗಿದ್ದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದಲ್ಲಿ ನಮ್ಮ ತಂಡ ಇಂದಿನ ಕಾರ್ಯಕ್ರಮ ರೂಪಿಸಿದೆ   ಹೌದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಇಂದಿನ ಅನ್ನ ಸಂತರ್ಪಣೆ ಮಾಡಲು ಶ್ರೀ ಸಂತೋಷ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಅಲ್ಲಿ ಎಲ್ಲ ತಂಡ …

Read More »

ನೂತನ ” ಶ್ರೀದೇವಿ ಇನ್ಸೂರೆನ್ಸ್ ಜೋನ್” ಉದ್ಘಾಟಿಸಿದ ಸತೀಶ ಜಾರಕಿಹೊಳಿ

ಸವದತ್ತಿ: ತಾಲೂಕಿನ ಯರಗಟ್ಟಿಯಲ್ಲಿ ನೂತನ ನಿರ್ಮಾಣವಾದ ಶ್ರೀದೇವಿ ಇನ್ಸೂರೆನ್ಸ್ ಜೋನ್ ನನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸೋಮವಾರ ಉದ್ಘಾಟಿಸಿ, ಹೊಲ್ ಸೆಲ್ ಕಿರಾಣಿ ಅಂಗಡಿಯನ್ನು ಪರಿಶೀಲಿಸಿದರು.   ಕಾಂಗ್ರೆಸ್ ಮುಖಂಡರು ಬಸವರಾಜ್ ಸಾಯನ್ನವರ.     ಪಂಚನಗೌಡ ದ್ಯಾಮನಗೌಡರ, ರವೀಂದ್ರ ಯಲಿಗಾರ, ವಿಶ್ವಾಸ ವೈದ್ಯ, ಯುವ ನಾಯಕ ಗೌತಮ ದ್ಯಾಮನಗೌಡರ ಮಲ್ಲು ಜಕಾತಿ, ಆ.ಆ. ಟೋಪೋಜಿ, ಯಶವಂತ ಯಲಿಗಾರ, ಈರಣ್ಣ ಸಂಗಪನವರ, ಹರಳಿ , ಹಾಗೂ ಸವದತ್ತಿ ತಾಲೂಕಿನ …

Read More »

ದೇವಸ್ಥಾನಗಳ ಅರ್ಚಕರಿಗೆ ಆಹಾರದ ಕಿಟ್ ಮತ್ತು ಶಾಸಕರ ನಿಧಿಯಿಂದ 3 ಅಂಬುಲನ್ಸ್ ನೀಡಿದ ಆನಂದ ಮಾಮನಿ

ಸವದತ್ತಿ– .  ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ತಾಲೂಕಿನ ದೇವಸ್ಥಾನಗಳ ಅರ್ಚಕರಿಗೆ ಆಹಾರದ ಕಿಟ್ ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಅನುದಾನದಡಿ ೪೪ ಲಕ್ಷ ರೂ ವೆಚ್ಚದಲ್ಲಿ ಯರಗಟ್ಟಿ, ಮುನವಳ್ಳಿ, ಸವದತ್ತಿ ಸರ್ಕಾರಿ ಆಸ್ಪತ್ರೆಗಳಿಗೆ ೩ ಅಂಬ್ಯುಲೆಸ್ಸ್ ವಾಹನ ಲೋಕಾರ್ಪಣೆಗೊಳಿಸಿದರು.           ಸರ್ಕಾರ ಬಡವರ ಜತೆಗಿದ್ದು ಯಾವುದೇ ಬಡ ಕುಟುಂಬಗಳು ಹಸಿವಿನಿಂದ ಮಲಗಬಾರದು ಎಂದು ಪ್ರತಿ ತಿಂಗಳು ಉಚಿತ …

Read More »

ಚಚಡಿ ಗ್ರಾಮದ ಬಳಿ ಭೀಕರ ಅಪಘಾತ : ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಸಚಿವ ಮುರಗೇಶ್ ನಿರಾಣಿ

ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲ್ಲೂಕಿ ಚಚಡಿ ಗ್ರಾಮದ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರು ಮಧ್ಯೆ ನಡೆದ ಅಪಘಾತದಲ್ಲಿ ಗಾಯಗೊಂಡವರನ್ನು ಸಚಿವ ಮುರಗೇಶ್ ನಿರಾಣಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.   ಕಾರು -ಬಸ್ ನಡುವೆ ಇಂದು ಭೀಕರ ಅಪಘಾತ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಬೆಳಗಾವಿಯಿಂದ ಬಾಗಲಕೋಟೆಗೆ ಹೊರಟ್ಟಿದ್ದ ಗಣಿ ಮತ್ತು ವಿಜ್ಞಾನ ಸಚಿವ ಮುರಗೇಶ್ ನಿರಾಣಿ ಕಾರು ನಿಲ್ಲಿಸಿದ್ದಾರೆ. ಅಪಘಾತ ಸ್ಥಳಕ್ಕೆ ತೆರಳಿ, …

Read More »