Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ (page 28)

ಚಿಕ್ಕೋಡಿ

ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ ಸ್ಟೆಬಲ್ ಕುಡಿದ ಅಮಲಿನಲ್ಲಿ ತಹಸಿಲ್ದಾರ್ ಖಾಸಗಿ ಕಾರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾನೆ.

    ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ಘಟನೆ ನಡೆದಿದೆ. ಕಾಗವಾಡ ತಹಶಿಲ್ದಾರರ ಪ್ರಮೀಳಾ ದೇಶಪಾಂಡೆ ಹಾಗೂ ಕಾರು ಚಾಲನೆ ಮಾಡುತ್ತಿದ್ದ ಅವರ ಪತಿ  ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕೋಡಿಯಿಂದ ತಮ್ಮ ಖಾಸಗಿ ವಾಹನದಲ್ಲಿ ಕರ್ತವ್ಯಕ್ಕೆ ಕಾಗವಾಡಕ್ಕೆ ಹೋಗುವಾಗ ಚಿಕ್ಕೋಡಿ ತಾಲುಕಿನ ಮಾಂಜರಿ ಗ್ರಾಮದ ಬಳಿ ಪೊಲೀಸ್ ಕಾನ್ ಸ್ಟೆಬಲ್ ಬೈಕ್  ತಹಶಿಲ್ದಾರರ ವಾಹನಕ್ಕೆ ಡಿಕ್ಕಿ ಹೊಡೆದಿದೆ . ತಹಶಿಲ್ದಾರ ಪ್ರಮೀಳಾ ದೇಶಪಾಂಡೆ ಅವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಪೊಲೀಸ್ …

Read More »

ಚಿಕ್ಕೋಡಿ:ಮಹಾಮಾರಿ ಕೊರೊನಾ ವೈರಸ್ ಗ್ರಾಮೀಣ ಭಾಗಕ್ಕೂ ವಕ್ಕರಿಸಿದೆ.

ಬೆಳಗಾವಿ/ಚಿಕ್ಕೋಡಿ: ಮಹಾಮಾರಿ ಕೊರೊನಾ ವೈರಸ್ ಗ್ರಾಮೀಣ ಭಾಗಕ್ಕೂ ವಕ್ಕರಿಸಿದೆ. ಜಿಲ್ಲೆಯ ಕಾಗವಾಡ ತಾಲೂಕಿನ ಮೊಳವಾಡ, ಹುಕ್ಕೇರಿ ತಾಲೂಕಿನ ದೊಂಡಗಟ್ಟಿ ಹಾಗೂ ಮೊದಗಾ ಗ್ರಾಮದವರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಮೊಳವಾಡ ಗ್ರಾಮದ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಹುಕ್ಕೇರಿ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ದೊಂಡಗಟ್ಟಿ ಹಾಗೂ ಮೊದಗಾ ಗ್ರಾಮದ ತಲಾ ಒಬ್ಬ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಲಾಕ್‍ಡೌನ್‍ಗೂ ಮುನ್ನವೇ ಮೊಳವಾಡ ಗ್ರಾಮದ 15 ಜನರ ತಂಡ …

Read More »

ಹುಕ್ಕೇರಿ ಸದಲಗಾ ಪಟ್ಟಣದಲ್ಲಿರುವ ಏಕವೀರಾ ತಾಯಿ ದೇವಸ್ಥಾನದ ಕೆರೆಯನ್ನು ದುರಸ್ತಿ

ಚಿಕ್ಕೋಡಿ – ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ಸದಲಗಾ ಪಟ್ಟಣದಲ್ಲಿರುವ ಏಕವೀರಾ ತಾಯಿ ದೇವಸ್ಥಾನದ ಕೆರೆಯನ್ನು ದುರಸ್ತಿ ಮಾಡಿಸಿದ್ದಾರೆ. ಆ ಮಾರ್ಗವಾಗಿ ಹೋಗುವಾಗ ಹತ್ತಿರವಿರುವ ಕೆರೆ‌ ಹಾಗೂ ಸುತ್ತಮುತ್ತಲಿ‌ನ ಪರಿಸ್ಥಿತಿಯನ್ನು ಗಮನಿಸಿದರು. ಅದು ಹೂಳು ಮತ್ತು ಪಾಚಿಯಿಂದ ತುಂಬಿರುವುದನ್ನು ಗಮನಿಸಿದ ಶಾಸಕರು  ಕೂಡಲೆ  ಸಂಪೂರ್ಣ ಕೆರೆಯನ್ನು ದುರಸ್ತಿ ಹಾಗೂ ಸ್ವಚ್ಛ ಮಾಡಿಸಿದರು . ಶಾಸಕರ ಈ ಕಳಕಳಿಗೆ ಏಕವೀರಾತಾಯಿ ದೇವಸ್ಥಾನದ ಕಮಿಟಿಯವರು ಕೃತಜ್ಞತೆ ಸಲ್ಲಿಸಿದರು.

Read More »

:ಇಂದಿನಿಂದ‌ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭ ಹಿನ್ನಲೆ

  ಚಿಕ್ಕೋಡಿ :ಇಂದಿನಿಂದ‌ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭ ಹಿನ್ನಲೆ ಬೆಳಿಗ್ಗೆ 7 ಗಂಟೆಯಿಂದ ಬಸ್ ಸಂಚಾರ ಆರಂಭ ಹಿನ್ನಲೆ ಇನ್ನೂ ಬಸ್ ನಿಲ್ದಾಣದತ್ತ ಸುಳಿಯದ ಪ್ರಯಾಣಿಕರು ಖಾಲಿ ಖಾಲಿ ಇರುವ ಚಿಕ್ಕೋಡಿ ನಿಲ್ದಾಣ ಸಂಜೆ 7 ಗಂಟೆವರೆಗೂ ಬಸ್ ಸಂಚಾರ. ಇನ್ನೂ ಸುಮಾರು ೩೫ ಬಸ್ ಗಳು ತಾಲೂಕಿನ ಮತ್ತು ಪಕ್ಕದ ಜಿಲ್ಲೆಗಳಿಗೆ ಸಂಚಾರ ಸಿದ್ದತೆ. ಚಿಕ್ಕೋಡಿ ವಿಭಾಗದಲ್ಲಿ ಆರು ಘಟಕಗಳಿಂದ 234 ಬಸ್‌ಗಳನ್ನು ಸಂಚಾರಕ್ಕೆ ವ್ಯವಸ್ಥೆ …

Read More »

ಮಹಾರಾಷ್ಟ್ರದಿಂದ ಕಳ್ಳ ಮಾರ್ಗದ ಮೂಲಕ ಬಂದ ಮೂವರ ವಿರುದ್ಧ ಎಫ್‍ಐಆರ್

ಚಿಕ್ಕೋಡಿ: ಕಳ್ಳ ಮಾರ್ಗದಿಂದ ರಾಜ್ಯ ಪ್ರವೇಶಿಸಿದ ಮೂವರ ವಿರುದ್ಧ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದಿಂದ ಪಾಸ್ ಇಲ್ಲದೇ ಕಳ್ಳ ಮಾರ್ಗದಿಂದ ಬಂದ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಮಹಾರಾಷ್ಟ್ರದ ಮೀರಜ ನಗರದಿಂದ ಯಾವುದೇ ಪಾಸ್ ಇಲ್ಲದೇ ಬಂದಿದ್ದ ಆರೋಪಿಗಳನ್ನು ಹುಕ್ಕೇರಿ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಅವರ ತಂಡ ಪತ್ತೆ ಹಚ್ಚಿದೆ. ಪತ್ನಿ ಹಾಗೂ ಮಗನನ್ನು ಕಳ್ಳ ಮಾರ್ಗದಿಂದ ಹುಕ್ಕೇರಿ ಪಟ್ಟಣದ ಕಲಾಲ್ ಗಲ್ಲಿಯ ಮನೆಗೆ …

Read More »

ದುರ್ಯೋಧನ ಐಹೊಳೆ ವಿರುದ್ಧ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಆಕ್ರೋಶ

ಚಿಕ್ಕೋಡಿ: ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕಾಗಿರುವ ರಾಯಬಾಗ ಶಾಸಕರು ತಮ್ಮ ಕ್ಷೇತ್ರದಲಿ ಒಂದು ಊರಿಗೆ ಕೇವಲ 20 ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ವಿಷಾದನೀಯ ಸಂಗತಿ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಆಕ್ರೋಶ ವ್ಯಕ್ತ ಪಡಿಸಿದರು. ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಬಾಗ ಶಾಸಕರ ಮೂರು ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿರುವ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿ ಹಳ್ಳಿಗಳ ಬಡ ಮತ್ತು …

Read More »

ತಮ್ಮ ವೇತನದಿಂದ ಕಂಟೈನ್ಮೆಂಟ್ ಝೋನ್‍ನಲ್ಲಿರೋ ಬಡವರಿಗೆ ಉಚಿತ ದಿನಸಿ ವಿತರಿಸ್ತಿರೋ ಪೇದೆ

ಬೆಳಗಾವಿ/ಚಿಕ್ಕೋಡಿ: ಕಂಟೈನ್ಮೆಂಟ್ ಝೋನ್‍ನಲ್ಲಿರುವ ಬಡ ಜನರು ಹೊರಗೆ ಬರಲಾಗದೆ ಅವರ ಜೀವನ ತುಂಬಾ ಕಷ್ಟವಾಗಿದೆ. ಇದೀಗ ಇವರ ಸ್ಥಿತಿಯನ್ನ ನೋಡಿ ಪೊಲೀಸ್ ಕಾನ್ಸ್‌ಟೇಬಲ್ ಸಹಾಯ ಮಾಡುತ್ತಿದ್ದಾರೆ. ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಬಿ.ಕೆ.ನಾಗನೂರೆ ದಿನನಿತ್ಯ ಬಡವರಿಗೆ ತರಕಾರಿ ಹಂಚುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಸಂಕೇಶ್ವರ ಪಟ್ಟಣವನ್ನ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಸಂಕೇಶ್ವರ ಪಟ್ಟಣದಲ್ಲಿ ಬಡವರು ದಿನಗೂಲಿ ಇಲ್ಲದೇ ಆಹಾರಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ …

Read More »

ಚಿಕ್ಕೋಡಿ ಪೊಲೀಸ್ ಠಾಣೆ ಪೇದೆ ಓರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ

ಚಿಕ್ಕೋಡಿ: ಕರ್ತವ್ಯ ಮುಗಿಸಿ ಊರಿಗೆ ತೆರಳುತ್ತಿದ್ದ ಚಿಕ್ಕೋಡಿ ಪೊಲೀಸ್ ಠಾಣೆ ಪೇದೆ ಓರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದ ಹತ್ತಿರ ಗುರುವಾರ ಸಂಭವಿಸಿದೆ. ಮೃತ ಪೇದೆ ರಮೇಶ ನಾಯಿಕ(೨೫) ಎಂದು ಗುರ್ತಿಸಲಾಗಿದೆ. ಈತನು ಕರ್ತವ್ಯ ಮುಗಿಸಿ ದ್ವಿಚಕ್ರ ವಾಹನದ ಮೂಲಕ ತನ್ನ ಊರು ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮಕ್ಕೆ ತೆರಳುವಾಗ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯ ನಾಗರಮುನ್ನೋಳ್ಳಿ ಗ್ರಾಮ ವ್ಯಾಪ್ತಿಯ ಬೆಳಗಲಿ ಕ್ರಾಸ್ …

Read More »

ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ- ಶಿಕ್ಷಕ ಅಮಾನತು………..

ಚಿಕ್ಕೋಡಿ: ಏಳನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕ ಅಸಭ್ಯವಾಗಿ ವರ್ತಿಸಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದ್ದು, ಶಿಕ್ಷಕನನ್ನು ಅಮಾನತು ಮಾಡಿ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ. ಶಿಕ್ಷಕ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಲೈಂಗಿಕ ಕಿರುಕುಳ ನಿಡುತ್ತಿದ್ದ ಎಂದು ಶಾಲಾ ವಿದ್ಯಾರ್ಥಿನಿಯರು ಶಿಕ್ಷಣ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದರು. ದೂರು ಪರಿಶಿಲಿಸಿ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 1966 ರ ನಿಯಮ 3 (1) ಉಲ್ಲಂಘನೆ ಅಡಿಯಲ್ಲಿ …

Read More »

ಚಿಕನ್ ತರಲು ಹೋದ ವೃದ್ಧ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

ಚಿಕ್ಕೋಡಿ (ಬೆಳಗಾವಿ): ಚಿಕನ್ ತರಲು ಹೋದ ವೃದ್ಧನೋರ್ವ ನಾಪತ್ತೆಯಾಗಿರುವ ಘಟನೆ ರಾಯಬಾಗ ತಾಲೂಕಿನಲ್ಲಿ ನಡೆದಿದ್ದು, ಕುಟುಂಬಸ್ಥರಲ್ಲಿ ಆತಂಕ ಶುರುವಾಗಿದೆ. ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮಪ್ಪ ತಿಪ್ಪಣ್ಣ ಭಜಂತ್ರಿ (80) ಕಾಣೆಯಾದ ವೃದ್ಧ. ರಾಮಪ್ಪ ಅವರು ಏಪ್ರಿಲ್ 28ರಂದು ಸಂಜೆ 4 ಗಂಟೆ ಸುಮಾರಿಗೆ ಸೈಕಲ್ ತೆಗೆದುಕೊಂಡು ಬೂದಿಹಾಳ ಗ್ರಾಮಕ್ಕೆ ಹೋಗಿ ಚಿಕನ್ ತರುತ್ತೇನೆ ಎಂದು ಹೇಳಿ ಹೋಗಿದ್ದರು. ರಾತ್ರಿಯಾದರೂ ಮನೆಗೆ ಮರಳಿ ಬಂದಿಲ್ಲ. ಎಲ್ಲಿದ್ದಾರೆ ಎನ್ನುವ ಸುಳಿವು ಕೂಡ …

Read More »