Home / ಜಿಲ್ಲೆ / ಬೆಂಗಳೂರು (page 71)

ಬೆಂಗಳೂರು

ರಾಜ್ಯದಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆ : ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದ್ದು, ಇಂದಿನಿಂದ ಸೆಪ್ಟಂಬರ್ 2 ರವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.   ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇಂದಿನಿಂದ ಮೂರು ದಿನ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, …

Read More »

ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಧ್ವನಿ ಎತ್ತಿದ RTI ಕಾರ್ಯಕರ್ತನ ಮೇಲೆ ಹಲ್ಲೆ

ಬೆಂಗಳೂರು: ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಅರ್ಜಿ ಸಲ್ಲಿಸಿದ್ದ RTI ಕಾರ್ಯಕರ್ತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸರ್ಜಾಪುರದ ಸೋಂಪುರ ಬಳಿ ನಡೆದಿದೆ. ಮಾಡ್ರನ್ ಸ್ಪೇಸ್ ಕಂಪನಿಯ ಯತೀಶ್ ಮತ್ತು ಮಂಜುನಾಥ್ ಅಕ್ರಮ ಕಟ್ಟಡ ಕಾಮಗಾರಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ RTI ಕಾರ್ಯಕರ್ತ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ರು. ಅರ್ಜಿ ಪರಿಶೀಲಿಸಿ ಎಚ್ಚೆತ್ತುಕೊಂಡ ಅಧಿಕಾರಿಗಳು, ಡ್ರೀಮ್ಸ್ ಇನ್ ಪ್ರಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಸಂಬಂಧಿಸಿದ ಸೋಂಪುರದ ಸರ್ವೆ …

Read More »

ಶಾಲೆಗಳ ಆರಂಭದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧಾರ!

ಬೆಂಗಳೂರು, ಆ. 30: ರಾಜ್ಯದಲ್ಲಿ ಶಾಲೆಗಳ ಆರಂಭದ ಕುರಿತು ತಾಂತ್ರಿಕ ಸಮಿತಿ ಸಭೆಯಲ್ಲಿ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧಾರ ತೆಗೆದು ಕೊಳ್ಳಲಿದ್ದಾರೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಸೋಮವಾರ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದರು. ನಂತರ ಮಾತನಾಡಿದ ನಾಗೇಶ್, ಒಂದನೇ ತರಗತಿಯಿಂದ ಶಾಲೆಗಳನ್ನು ಆರಂಭಿಸಬೇಕೇ …

Read More »

ಲಾರಿಯಲ್ಲಿ ತುಂಬಿದ್ದ ಸಸಿಗಳ ಅಡಿಯಲ್ಲಿತ್ತು 3,400 ಕೆ.ಜಿ. ಗಾಂಜಾ!

ಬೆಂಗಳೂರು: ನರ್ಸರಿಯಿಂದ ತಂದಿದ್ದ ಸಸಿಗಳ ಜೊತೆಯಲ್ಲೇ ಬೃಹತ್‌ ಪ್ರಮಾಣದ ಗಾಂಜಾ ಸಾಗಣೆ ಮಾಡುತ್ತಿದ್ದ ಮೂವರನ್ನು ಎನ್‌ಸಿಬಿ ಬೆಂಗಳೂರು ವಲಯದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಲಾರಿಯಲ್ಲಿದ್ದ 3,400 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ಡಿ.ಶಿಂಧೆ, ಎಂ.ಆರ್‌.ಕಾಂಬ್ಳೆ ಹಾಗೂ ಎನ್‌.ಜೋಗದಾಂದ್‌ ಬಂಧಿತರು. ಇವರೆಲ್ಲಾ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯವರು. ಲಾರಿಯ ಮೂಲಕ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಬೆನ್ನಲ್ಲೇ ಜಂಟಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಹಾಗೂ ಹೈದರಾಬಾದ್‌ ಅಧಿಕಾರಿಗಳ ತಂಡ ಹೈದರಾಬಾದ್‌ …

Read More »

ಬೆಂಗಳೂರು ಅಭಿವೃದ್ಧಿಗೆ ನನ್ನ ಸಮಯ ಮೀಸಲಿಡುತ್ತೇನೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು :ನಮ್ಮ ಮೆಟ್ರೋ ರಾಮನಗರದವರೆಗೂ ಹೋಗಬೇಕು ಅಂತ ಚಿಂತನೆ ಇದೆ. ರಾಮನಗರ, ರಾಜಾನುಕುಂಟೆ, ಮಾಗಡಿವರೆಗೂ ಮೆಟ್ರೋ ಮಾರ್ಗ ವಿಸ್ತರಿಸುವ ಗುರಿಯಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಮೆಟ್ರೋ ಅಗತ್ಯವಾಗಿದೆ. ಹೀಗಾಗಿ ನಾಯಂಡಹಳ್ಳಿ-ಕೆಂಗೇರಿಯವರೆಗೆ ಮೆಟ್ರೋ ಅಗತ್ಯ ಇತ್ತು. ನಮ್ಮ ಮೆಟ್ರೋ ಬೆಂಗಳೂರಿನ ಭವಿಷ್ಯದ ಕೊಂಡಿ. ದೇಶ-ವಿದೇಶಗಳಿಂದ ಬರುವ ಗಣ್ಯರಿಗೆ ಉತ್ತಮ ಸಾರಿಗೆ ಬೇಕು. ಅದನ್ನು ನಮ್ಮ …

Read More »

ಬೆಂಗಳೂರಿನಲ್ಲಿ ಹೆಚ್ಚಾದ ಪುಡಿ ರೌಡಿಗಳ ಉಪಟಳ: ಬಾರ್​ಗೆ ನುಗ್ಗಿ ದಾಂಧಲೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಉಪಟಳ ಹೆಚ್ಚಾಗಿದ್ದು, ಮಾರಕಾಸ್ತ್ರಗಳನ್ನ ಹಿಡಿದು ಬಾರ್​ಗೆ ನುಗ್ಗಿ ರೌಡಿಗಳು ಗಲಾಟೆ ನಡೆಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಸುಮಾರು 7.30ರ ಸುಮಾರಿಗೆ ಪ್ರಕರಣ ನಡೆದಿದೆ. ಇಟ್ಟಮಡು ಬಳಿ ​ಎಸ್​​ಎಲ್​ವಿ ಬಾರ್​​ಗೆ ನುಗ್ಗಿ ಗ್ಲಾಸ್​ಗಳನ್ನ ಒಡೆದು ಹಾಕಿದ್ದಾರೆ. ಜೊತೆಗೆ ಪಕ್ಕದ ಬಾರ್​ಗೂ ನುಗ್ಗಿ ಗ್ಲಾಸ್​ಗಳನ್ನ ಒಡೆದು ಹಾಕಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ …

Read More »

ಸಾರ್ವಜನಿಕ ಗಣೇಶೋತ್ಸವದ ಕುರಿತಂತೆ ಇಂದು ರಾಜ್ಯ ಸರ್ಕಾರ ನಿರ್ಧರಿಸುವ ಸಾಧ್ಯತೆ

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಸ್ 3 ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಕುರಿತಂತೆ ಇಂದು ರಾಜ್ಯ ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ.   ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಬೇರೆ ಎದುರಾಗಿದೆ. ಸಾಮೂಹಿಕ ಗಣೇಶ ಆಚರಣೆ ಬಗ್ಗೆ ಸರ್ಕಾರ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ರಾಜ್ಯದ ಜನ ಸಾಮೂಹಿಕವಾಗಿ ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರದಿಂದ ಅನುಮತಿ ಇದೆಯಾ? ಇಲ್ಲವಾ ಎನ್ನುವ ಗೊಂದಲದಲ್ಲಿದ್ದಾರೆ. ಹೀಗಾಗಿ ಇಂದು ಗಣೇಶೋತ್ಸವ …

Read More »

ರೇಪ್ ಕೇಸ್ ಬಗ್ಗೆ ಮಾತಾಡದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಣ್ಣಲ್ಲವೇ?: ಹೆಚ್.ಎಂ. ರೇವಣ್ಣ ಆಕ್ರೋಶ

ಬೆಂಗಳೂರು : ಶೋಭಾ ಕರಂದ್ಲಾಜೆ ನಾನು ಕೇಂದ್ರ ಸಚಿವೆ ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಲ್ಲ ಅಂತಾರೆ. ಸಚಿವೆ ಆದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಆದರೆ ನಮ್ಮ ಮನೆಯಲ್ಲಿ ಆದರೆ ಹೀಗೆ ಮಾತಾಡೋದ? ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದಾರೆ. ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈದ್ಯರು ಅತ್ಯಾಚಾರ ನಡೆದಿದೆ ಅಂತಾರೆ. ಪೊಲೀಸರು ದರೋಡೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. …

Read More »

ಕೋವಿಡ್ ಮೂರನೆ ಅಲೆಯ ಸಂಬಂಧ ಯಾವ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ?

ಬೆಂಗಳೂರು, ಆ.28: ಸಂಭಾವ್ಯ ಕೋವಿಡ್ ಮೂರನೆ ಅಲೆಯ ಸಂಬಂಧ ಯಾವ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಕೋವಿಡ್ ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಶನಿವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ಪೀಠವೂ, ಸೋಂಕು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ. ರಾಜ್ಯ ವ್ಯಾಪ್ತಿಯಲ್ಲಿ ಸಂಭಾವ್ಯ ಕೋವಿಡ್ ಮೂರನೆ ಅಲೆ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳೇನು. …

Read More »

ಹಿಂದಿನಿಂದ ಬಂದು ಯುವತಿಗೆ ಮುತ್ತಿಟ್ಟು ಓಡಿದ ಯುವಕ:

ಬೆಂಗಳೂರು ಹಾಡಹಗಲೇ ನಾಲ್ವರು ಪುಂಡರ ಜೊತೆ ಬಂದಿದ್ದ ಓರ್ವ ಯುವಕ 16 ವರ್ಷದ ಅಪ್ರಾಪ್ತೆಗೆ ಮುತ್ತಿಟ್ಟಿದ್ದಾನೆ. ಬೆಂಗಳೂರಿನ ದೊಡ್ಡಬಿದರುಕಲ್ಲು ಬಳಿ ಶನಿವಾರ ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ. ಅಪ್ರಾಪ್ತೆ ಕಿರುಚಾಡ್ತಿದ್ದಂತೆ ಯುವಕ ಮುತ್ತು ಕೊಟ್ಟು ಪರಾರಿಯಾಗಿದ್ದಾನೆ. ಮುತ್ತು ನೀಡಿದ್ದು ಅಲ್ಲದೇ ಸೋಮವಾರ ಒಬ್ಬಳೇ ಸಿಗು ಎಂದು ವಾರ್ನಿಂಗ್ ನೀಡಿದ್ದಾನೆ. ಈ ಎಲ್ಲ ಘಟನೆಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪ್ರಾಪ್ತೆ ದೊಡ್ಡಮ್ಮನ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದು, …

Read More »