Breaking News
Home / ಜಿಲ್ಲೆ / ಬೆಂಗಳೂರು (page 341)

ಬೆಂಗಳೂರು

ಕೊವಿಡ್ ಅವ್ಯವಹಾರವನ್ನು ಗುರುವಾರ ದಾಖಲೆ‌ ಸಮೇತ ಬಯಲು : ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಯಡಿಯೂರಪ್ಪ ಹೇಳಿದ್ದರು, ಬಿಐಇಸಿ(ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ)ಯಲ್ಲಿ ದೊಡ್ಡ ಕೋವಿಡ್ ಸೆಂಟರ್ ಮಾಡಿದ್ದೇವೆ ಅಂತ, ಅದಕ್ಕೆ ಹೇಗಿದೆ ಅಂತ ನೋಡೋಕೆ ಬಂದಿದ್ದೆವು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಪ್ರಾರಂಭಿಸಿರುವ ಕೊವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಇನ್ನೂ ಸಂಪೂರ್ಣ ಕೆಲಸ ಆಗಿಲ್ಲ, ನಾವು ಮಾರ್ಚ್​​ನಲ್ಲೇ ಈ ಬಗ್ಗೆ ಸಲಹೆ ಕೊಟ್ಟಿದ್ದೆ. ಆದರೆ, …

Read More »

ಕ ರೋನಾ ಇದೆ ಎಂದು ಹಂಗಿಸಿದಕ್ಕೆ ಆತ್ಮ ಹತ್ಯೆ ಮಾಡಿಕೊಂಡ ಸೋಂಕಿತ..

ಬೆಂಗಳೂರು: ಕೊರೊನಾ ಸೋಂಕಿತರನ್ನು ಜನರು ಅವಮಾನಿಸುತ್ತಿದ್ದು, ಇದರಿಂದ ನೊಂದ ಸೋಂಕಿತರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಸಮಾಜ ಎಷ್ಟೇ ಬದಲಾಗಿದ್ದರೂ ವಿದ್ಯಾವಂತರು ಹೆಚ್ಚಿದ್ದರೂ ಕೂಡ ಜನರ ಮನ:ಸ್ಥಿತಿ ಮಾತ್ರ ಇನ್ನೂ ಬದಲಾಗುತ್ತಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪತ್ನಿ ಮತ್ತು ಮಗನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಕೀಲಾಗಿ ನೋಡುತ್ತಿದ್ದುದಕ್ಕೆ ಬೇಸರಗೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಸರುಘಟ್ಟದಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ನಿವಾಸಿ ನಾಗರಾಜು (56) ಮೃತ …

Read More »

ಬೆಂಗಳೂರಿನಲ್ಲಿ ಮಳೆ; ವಿದ್ಯುತ್ ಶಾಕ್​ಗೆ ಬಾಲಕಿ ಸಾವು; ಟಿ ದಾಸರಹಳ್ಳಿಯ ಹಲವು ಪ್ರದೇಶ ಜಲಾವೃತ

ಬೆಂಗಳೂರು(ಜುಲೈ 21): ನಗರದಲ್ಲಿ ನಿನ್ನೆ ಸಂಜೆಯ ನಂತರದಿಂದಲೂ ವಿವಿಧೆಡೆ ಭಾರೀ ಮಳೆಯಾಗಿದೆ. ತಗ್ಗಿದ ಪ್ರದೇಶಗಳು ಬಹಳ ಹೊತ್ತು ಜಲಾವೃತಗೊಂಡವು. ಯಲಹಂಕ, ದೊಡ್ಡಬೊಮ್ಮಸಂದ್ರ, ಟಿ. ದಾಸರಹಳ್ಳಿ ಪ್ರದೇಶಗಳಲ್ಲಿ ಮಳೆ ನೀರು ಹಲವು ಅಪಾರ್ಟ್ಮೆಂಟ್, ಮನೆಗಳಿಗೆ ನುಗ್ಗಿತ್ತು. ಇಲ್ಲಿಯ ರಸ್ತೆಗಳು ಕೆರೆಯಂತಾದವು. ಆರ್.ಟಿ. ನಗರದಲ್ಲಿ ಬಾಲಕಿಯೊಬ್ಬಳು ವಿದ್ಯುತ್ ಶಾಕ್​ನಿಂದ ಮೃತಪಟ್ಟ ದುರಂತ ಘಟನೆಯೂ ನಿನ್ನೆ ರಾತ್ರಿ ಸಂಭವಿಸಿದೆ. ಕಾವಲ್ ಬೈರಸಂದ್ರದಲ್ಲಿ 8 ವರ್ಷದ ಫಾತಿಮಾ ಮೃತಪಟ್ಟ ಬಾಲಕಿ. ನಿನ್ನೆ ರಾತ್ರಿ 8ಗಂಟೆಯ ಸಮಯದಲ್ಲಿ …

Read More »

ಸೋಂಕಿತರು ಬಳಸಿದ ಹಾಸಿಗೆ ಹಾಸ್ಟೆಲ್​ ವಿದ್ಯಾರ್ಥಿಗಳಿಗೆ ನೀಡಿದರೇ ಸರ್ಕಾರದ ವಿರುದ್ಧ ಹೋರಾಟ ಗ್ಯಾರಂಟಿ‘ – ಡಿ.ಕೆ ಶಿವಕುಮಾರ್​​

ಬೆಂಗಳೂರು): ಕೊರೋನಾ  ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಮತ್ತು ಕೋವಿಡ್-19 ಚಿಕಿತ್ಸಾ ಸಲಕರಣೆ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸೇರಿದಂತೆ ರಾಜ್ಯಾದ್ಯಂತ ಸೋಂಕಿತರ ಪರದಾಟ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಭೆ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಹಿರಿಯ ಮುಖಂಡರು, ಕಾಂಗ್ರೆಸ್ ಕೋವಿಡ್ ಕಾರ್ಯಪಡೆ ಹಾಗೂ ವೈದ್ಯ ಘಟಕದ ಪ್ರತಿನಿಧಿಗಳು ಭಾಗಿಯಾಗಿದ್ದರು. ಹಾಗೆಯೇ ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ವಿಧಾನಸಭೆ …

Read More »

ಮಾಸ್ಕ್ ಏಕೆ ಧರಿಸಬೇಕು?………..

ಬೆಂಗಳೂರು: ಕೊರೊನಾ ಆತಂಕ ಮತ್ತು ತಡೆಗಾಗಿ ಸಾರ್ವಜನಿಕರು ಮಾಸ್ಕ್ ಧರಿಸುತ್ತಿದ್ದಾರೆ. ಆದ್ರೆ ಮಾಸ್ಕ್ ಧರಿಸೋದು ಹೇಗೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. ಮಾಸ್ಕ್ ಏಕೆ ಧರಿಸಬೇಕು?: ಕೋವಿಡ್-19 ವೈರಸ್ ವ್ಯಕ್ತಿಯಿಂದ ವ್ಯಕ್ತಿಯ ನಡುವೆ ಆಗುವ ಸಂಪರ್ಕದಿಂದ ಸುಲಭವಾಗಿ ಹರಡುತ್ತದೆ. ವೈರಸ್ ಗಳನ್ನು ಹೊತ್ತ ನೀರಿನ ಹನಿಗಳು ಬೇಗನೆ ಒಣಗಿ, ಬೀಜಕಣಗಳಾಗಿ ತೇಲಾಡಿ ನಂತರ ನೆಲ ಅಥವಾ ಇನ್ಯಾವುದೇ ಪದರುಗಳ ಮೇಲೆ ಚಿಮ್ಮುತ್ತವೆ. ಕೋವಿಡ್-19 ಸಂಭವಿಸಲು ಕಾರಣವಾದ ಸಾರ್ಸ್-ಸಿಓವಿ-2 ವೈರಸ್ …

Read More »

ಬೆಂಗಳೂರಿನ ಎಎಸ್‍ಐ ಇವರಿಗೆ ಕೊರೊನಾ ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಕೊರೊನಾ ತನ್ನ ಮರಣಕೇಕೆಯನ್ನು ಮುಂದುವರಿಸಿದ್ದು, ನಗರದಲ್ಲಿ ಮತ್ತೊಬ್ಬ ಕೊರೊನಾ ವಾರಿಯರ್ ಸಾವನ್ನಪ್ಪಿದ್ದಾರೆ. ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತಿದ್ದ ವಾರಿಯರ್ ಮಹಾಮಾರಿ ಕೊರೊನಾಗೆ ಮೃತಪಟ್ಟಿದ್ದಾರೆ. ಮೃತ ಎಎಸ್‍ಐ ಬೆಂಗಳೂರಿನ ಸಿಟಿ ಆರ್ಮ್ ರಿಸರ್ವ್ ಸೌತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಕೊರೊನಾ ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ ನಗರದಲ್ಲಿ 33 ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿದೆ. …

Read More »

ಕೊರೊನಾ ಆತಂಕ- ಮಗುವಿಗೆ ಹಾಲುಣಿಸುವ ಮುನ್ನ ತಾಯಂದಿರು ತೆಗೆದುಕೊಳ್ಳಬೇಕಾದ ಕ್ರಮಗಳು

ಬೆಂಗಳೂರು: ಕೊರೊನಾ ಆತಂಕ ಮಾತ್ರ ಕಡಿಮೆ ಆಗುತ್ತಲೇ ಇಲ್ಲ. ಪಕ್ಕದ ಬೀದಿಯಲ್ಲಿ ಬಂತು, ಮನೆಯ ಹಿಂದೆಯ ನಿವಾಸಿಗೆ ಸೋಂಕು ತಗುಲಿತು ಎಂಬ ವಿಷಯಗಳನ್ನು ನೀವು ಕೇಳಿರುತ್ತೀರಿ. ಕೊರೊನಾ ಭಯ ಬೇಡ ಮುಂಜಾಗ್ರತೆ ಇರಲಿ ಎಂದು ತಜ್ಞರು ಸೇರಿದಂತೆ ಸರ್ಕಾರ ಸಲಹೆಗಳನ್ನು ನೀಡುತ್ತಾ ಬಂದಿದೆ. ಆರೋಗ್ಯ ಇಲಾಖೆ ಸಹ ಕೊರೊನಾಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರು ನೀಡುವ ಪ್ರಯತ್ನವನ್ನು ಮಾಡುತ್ತಿದೆ. ಮನೆಯಲ್ಲಿ ಮಕ್ಕಳು ಮತ್ತು ಹಿರಿಯರು ಇದ್ರೆ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು …

Read More »

ಹಿಂದೂ ಸಂಪ್ರದಾಯದಂತೆ ಪತಿಗೆ ಪತ್ನಿ ಪಾದಪೂಜೆ………..

ಬೆಂಗಳೂರು: ಭೀಮನ ಅಮಸ್ಯೆ ದಂಪತಿಗೆ ಪವಿತ್ರ ದಿನವಾಗಿದ್ದು, ಹಿಂದೂ ಸಂಪ್ರದಾಯದಂತೆ ಪತಿಗೆ ಪತ್ನಿ ಪಾದಪೂಜೆ ಮಾಡುತ್ತಾರೆ. ಈ ಕ್ಷಣಗಳನ್ನು ನೆನಪಿರಲಿ ಪ್ರೇಮ್ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಪತ್ನಿಯ ಪಾದ ಪೂಜೆಯಿಂದ ಜಾಕ್‍ಪಾಟ್ ಹೊಡಿಯಲಿದೆ ಎಂದು ಬರೆದಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಸುಂದರ ಕ್ಷಣಗಳನ್ನು ಪ್ರೇಮ್ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿರುವ ಅವರು, ನಿನ್ನ ಪ್ರೀತ್ಸಿದ್ಮೇಲೆ ಆಯಸ್ಸು ಜಾಸ್ತಿ ಆಯಿತು. ಮದುವೆ ಆದ್ಮೇಲೆ ಅದೃಷ್ಟ ಕುಲಾಯಿಸ್ತು. …

Read More »

ಗೂಗ್ಲಿ ಸಿನಿಮಾ ತೆರೆಕಂಡ ನಿನ್ನೆಗೆ 7 ವರ್ಷವಾಗಿದೆ. ಈ ಸಮಯದಲ್ಲಿ ಚಿತ್ರತಂಡ ಸಿನಿಮಾದ ಯಶಸ್ಸನ್ನು ನೆನಪಿಸಿಕೊಂಡಿದೆ.

ಬೆಂಗಳೂರು: ಪವನ್ ಒಡೆಯರ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಗೂಗ್ಲಿ ಸಿನಿಮಾ ತೆರೆಕಂಡ ನಿನ್ನೆಗೆ 7 ವರ್ಷವಾಗಿದೆ. ಈ ಸಮಯದಲ್ಲಿ ಚಿತ್ರತಂಡ ಸಿನಿಮಾದ ಯಶಸ್ಸನ್ನು ನೆನಪಿಸಿಕೊಂಡಿದೆ. 2013ರ ಜುಲೈ 19ರಂದು ಗೂಗ್ಲಿ ಸಿನಿಮಾ ತೆರೆಕಂಡಿತ್ತು. ಯಶ್ ನಾಯಕನಾಗಿ, ಕೃತಿ ಕರಬಂಧ ನಾಯಕಿಯಾಗಿ ಮಿಂಚಿದ್ದರು. ಲವ್, ಕಾಲೇಜ್ ಲೈಫ್, ಸಕ್ಸಸ್ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡಿದ್ದ ಸಿನಿಮಾ ಅಂದು ಕಾಲೇಜು ಯುವಕ-ಯುವತಿಯರಿಗೆ ಬಹಳ ಇಷ್ಟ ಆಗಿತ್ತು. …

Read More »

ದ್ರೋಣ ಅಂತಾ ಕಾಗೆ ಹಾರಸಿರೋ ಪ್ರತಾಪ ನನ್ನ ಪೊಲೀಸರು ಬಂಧಿಸಿದ್ದಾರೆ..

ಬೆಂಗಳೂರು(ಜು.20): ಕ್ವಾರಂಟೈನ್ ನಿಯಮ ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್​ ಈಗ ಬೆಂಗಳೂರು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಕ್ಕಿಬಿದ್ದ ಡ್ರೋನ್​​ ಪ್ರತಾಪ್​​​​​ನನ್ನು ವಶಕ್ಕೆ ಪಡೆದ ಪೊಲೀಸರು ಈಗ ಬೆಂಗಳೂರು ಕರೆ ತಂದಿದ್ದಾರೆ. ಡ್ರೋನ್ ಪ್ರತಾಪ್ ಜುಲೈ 15ರಂದು ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದಿದ್ದ. ತಲಘಟ್ಟಪುರದ ಅಪಾರ್ಟ್ಮೆಂಟ್​ವೊಂದರಲ್ಲಿ ಈತ ಕ್ವಾರಂಟೈನ್ ಆಗಿದ್ದ. ಆತನ ಕೈಗೆ ಬಿಬಿಎಂಪಿಯಿಂದ ಕ್ವಾರಂಟೈನ್ ಸ್ಟಿಕರ್ ಕೂಡ ಅಂಟಿಸಲಾಗಿತ್ತು. ಆದರೆ, ಅದಾಗಿ ಎರಡೇ ದಿನಕ್ಕೆ ಈತ ಖಾಸಗಿ …

Read More »