Breaking News
Home / ಜಿಲ್ಲೆ / ಬೆಂಗಳೂರು (page 321)

ಬೆಂಗಳೂರು

ಮುಖ್ಯ ಶಿಕ್ಷಕರನ್ನು ಕೊರೊನಾ ಸೇವೆಯಿಂದ ಕೈ ಬಿಡಿ- ಸುರೇಶ್ ಕುಮಾರ್

ಬೆಂಗಳೂರು: ಶಾಲಾ ಮುಖ್ಯೋಪಾಧ್ಯಾಯರನ್ನು ಕೋವಿಡ್ ಸೇವೆಯಿಂದ ಮುಕ್ತಿಗೊಳಿಸಲು ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ. ಈ ಸಂಬಂಧ ಆಯುಕ್ತರಿಗೆ ಪತ್ರ ಬರೆದಿರುವ ಸಚಿವರು, ಕೋವಿಡ್ ಸಂದರ್ಭದಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರುಗಳನ್ನು ತುರ್ತು ಸೇವೆಗೆ ಬಳಸಿಕೊಳ್ಳಲಾಗಿದೆ. ಶೈಕ್ಷಣಿಕ ಚಟುವಟಿಕೆಗಳಿಗೆ ಶಾಲೆಗಳಲ್ಲಿ ಶಿಕ್ಷಕರ, ವಿಶೇಷವಾಗಿ ಮುಖ್ಯ ಶಿಕ್ಷಕರ ಅಲಭ್ಯತೆಯ ಹಿನ್ನೆಲೆಯಲ್ಲಿ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ ಎಂದು ಬರೆದಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳ ಕಲಿಕೆಯನ್ನು ಮುಂದುವರಿಸುವ ದೂರದೃಷ್ಟಿ ಯೋಜನೆಯಾದ ವಿದ್ಯಾಗಮನ ಅನುಷ್ಠಾನ, ಮಧ್ಯಾಹ್ನ ಉಪಹಾರ …

Read More »

ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ  ಕಾನೂನು ರೀತಿಯಲ್ಲಿ ಅನುಮತಿ ನೀಡಿ,

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಜಯಂತಿಯಂದು, ಬೆಳಗಾವಿಯ ಪೀರನವಾಡಿಯಲ್ಲಿ ಅವರ ಪ್ರತಿಮೆ ತೆರವುಗೊಳಿಸಿರುವುದು ನಿಜಕ್ಕೂ ಕನ್ನಡಿಗರಿಗೆ ಆಗಿರುವ ಅಪಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ  ಕಾನೂನು ರೀತಿಯಲ್ಲಿ ಅನುಮತಿ ನೀಡಿ, ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ  ಬೆಳಗಾವಿ ಜಿಲ್ಲಾಡಳಿತಕ್ಕೆ ಅವರು  ಮನವಿ ಮಾಡಿದ್ದಾರೆ. ಆ. 15 ರಂದು ಬೆಳಗಿನ ಜಾವ ಕೆಲ ಯುವಕರು ಪೀರಣವಾಡಿಯ …

Read More »

ಪ್ರಥಮ್‌ ವಿರುದ್ಧ ಪ್ರಕರಣ…………

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಪ್ರಥಮ್‌ ವಿರುದ್ಧ ಪ್ರಕರಣ ದಾಖಲಾಗಿದೆ.ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಸ್‌ಡಿಪಿಐ ಸದಸ್ಯ ಉಮರ್‌ ಫಾರೂಕ್‌ ಎಂಬವರು ದೂರು ನೀಡಿದ್ದಾರೆ. ದೂರಿನ ಅನ್ವಯ ಐಪಿಸಿ ಸೆಕ್ಷನ್‌ 295(ಧಾರ್ಮಿಕ ಭಾವನೆಗೆ ಧಕ್ಕೆ) ಅಡಿ ಪ್ರಕರಣ ದಾಖಲಾಗಿದೆಚಿತ್ರನಟ ಪ್ರಥಮ್‌ ಫೇಸ್‌ಬುಕ್‌ನಲ್ಲಿ ಮುಸ್ಲಿಮ್‌ ಸಮುದಾಯದ ಧಾರ್ಮಿಕ ಭಾವನೆಗೆ ನೋವುಂಟು ಮಾಡುವಂತಹ , ಇಂತಹ ಮುಗ್ಧ ಮುಸ್ಲಿಮ್‌ಗಳು ಅನ್‌ ಎಜ್ಯುಕೇಟೆಡ್‌ ಇರಬೇಕು. ಇಲ್ಲ ಅಂದ್ರೆ …

Read More »

ಗುಟ್ಟು ಗುಟ್ಟಾಗಿ ಪರಿಹಾರ ಕೊಡಿ ಅನ್ನೋ ಪಕ್ಷದ ನಾಯಕರ ಮಾತಿಗೆ ಜಮೀರ್ ಅಹ್ಮದ್ ಗೊಂದಲದಲ್ಲಿ ಸಿಲುಕಿದ್ದಾರೆ

ಬೆಂಗಳೂರು: ಕೆಜಿ ಹಳ್ಳಿ ಗಲಾಟೆಯಲ್ಲಿ ಮೃತರಾದ ಮೂವರ ಕುಟುಂಬಕ್ಕೆ ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ 5 ಲಕ್ಷ ರೂ. ಪರಿಹಾರ ನೀಡುವದಾಗಿ ಘೋಷಣೆ ಮಾಡಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕರು ನೀಡಿರುವ ಎಚ್ಚರದ ಸಂದೇಶಕ್ಕೆ ಜಮೀರ್ ಅಹ್ಮದ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೆ.ಜೆ.ಹಳ್ಳಿ ಗಲಾಟೆಯಲ್ಲಿ ಮೃತಪಟ್ಟ ಮೂವರು ಯುವಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಕೊಡುವುದಾಗಿ ಶಾಸಕ ಜಮೀರ್ ಅಹ್ಮದ್ …

Read More »

ಕೊರೊನಾ ಸಂಕಷ್ಟದ ನಡುವೆ ಬಿಜೆಪಿ ನಾಯಕರಿಂದ ಸ್ಥಾನಮಾನಕ್ಕೆ ಲಾಬಿ

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ದೇಶದ್ಯಾಂತ ಲಾಕ್‍ಡೌನ್ ಮಾಡಲಾಗಿತ್ತು. ಲಾಕ್‍ಡೌನ್ ನಿಂದಾಗಿ ರಾಜ್ಯದಲ್ಲಿ ಅಲ್ಲ ಇಡೀ ದೇಶದ ರಾಜಕೀಯ ವಿದ್ಯಮಾನಗಳು ಸ್ತಬ್ಧವಾಗಿದ್ದವು. ಆದರೆ ಲಾಕ್‍ಡೌನ್ ಅನ್‍ಲಾಕ್ ಆಗ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಪುನಾರಂಭಗೊಂಡಿದೆ. ಸ್ಥಾನಮಾನದ ಲೆಕ್ಕಾಚಾರದಲ್ಲಿರುವ ಆಡಳಿತ ಪಕ್ಷದ ನಾಯಕರು ದೆಹಲಿ ದಂಡಯಾತ್ರೆ ಶುರು ಮಾಡಿದ್ದು ಹೈಕಮಾಂಡ್ ನಾಯಕರ ಮನ ಗೆಲಲ್ಲು ಪ್ರಯತ್ನ ಆರಂಭಿಸಿದ್ದಾರೆ. ಅನ್‍ಲಾಕ್ ಬಳಿಕ ನಾಲ್ಕನೇ ಬಾರಿಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ದೆಹಲಿ ದಂಡಯಾತ್ರೆ ಮಾಡುತ್ತಿದ್ದಾರೆ. …

Read More »

ಬೆಂಗಳೂರು ಗಲಭೆ – ಇಬ್ಬರು ಕಾಂಗ್ರೆಸ್ ಕಾರ್ಪೋರೇಟರ್​ಗಳಿಗೆ ನೋಟಿಸ್

ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಕಾಂಗ್ರೆಸ್ ಕಾರ್ಪೋರೇಟರ್ ಗಳಿಗೆ ನೋಟಿಸ್ ನೀಡಿದ್ದಾರೆ. ಮಾಜಿ ಮೇಯರ್ ಸಂಪತ್‍ರಾಜ್ ಮತ್ತು ಪುಲಕೇಶಿನಗರ ಕಾರ್ಪೋರೇಟರ್ ಅಬ್ದುಲ್ ರಕೀಬ್ ಝಾಕೀರ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಮನೆ ಮೇಲಿನ ದಾಳಿ, ಡಿ ಜೆ ಹಳ್ಳಿ, ಕೆಜಿಹಳ್ಳಿ ಮತ್ತು ಕಾವಲ್‍ಬೈರಸಂದ್ರದಲ್ಲಿ ನಡೆದಿದ್ದ ದಳ್ಳುರಿ ಹಿಂದೆ ರಾಜಕೀಯ ದ್ವೇಷದ ಕಾರಣವಿದೆ ಎಂಬ ಕಾರಣಕ್ಕಾಗಿ ಇಬ್ಬರು ಕಾಂಗ್ರೆಸ್ ಪಾಲಿಕೆ ಸದಸ್ಯರನ್ನ …

Read More »

ಕೊತ್ತಂಬರಿ, ಕರಿಬೇವಿನ ಸೊಪ್ಪು ತರೋಕೆ ಹೋದವ್ರ ಲಿಸ್ಟ್ ಇದೆ: ಅಶೋಕ್

ಬೆಂಗಳೂರು: ಕೊತ್ತಂಬರಿ, ಕರಿಬೇವಿನ ಸೊಪ್ಪು ತರೋಕೆ ಹೋದವರ ಲಿಸ್ಟ್ ಎಲ್ಲಾ ಇದೆ. ಯಾವ ಯಾವ ಕಾಂಗ್ರೆಸ್ ನಾಯಕರ ಕೈಲಿ ಕೊತ್ತಂಬರಿ, ಕರಿಬೇವಿನ ಸೊಪ್ಪು ಇದೆ ಅಂತ ಮಾಹಿತಿ ಇದೆ ಎಂದು ಕಂದಾಯ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಅಖಂಡ ಶ್ರೀನಿವಾಸ ಮೂರ್ತಿಯವರನ್ನು ಸೆಳೆಯಲು ಬಿಜೆಪಿ ಒತ್ತಡ ಹಾಕ್ತಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅಖಂಡ ಶ್ರೀನಿವಾಸ ಮೂರ್ತಿಯವರನ್ನು ಬಿಜೆಪಿಗೆ ಕರೆಯೋದೇ ಇಲ್ಲ. …

Read More »

ಡಿಜೆ ಹಳ್ಳಿ, ಕೆಜಿಹಳ್ಳಿಗೆ ಇಂದು ಕಟೀಲ್ ನೇತೃತ್ವದ ನಿಯೋಗ ಭೇಟಿ

ಬೆಂಗಳೂರು,ಆ.17- ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ರಾಜಧಾನಿ ಬೆಂಗಳೂರಿನ ಡಿಜೆ ಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣದ ಘಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗ ಇಂದು ಸಂಜೆ ಭೇಟಿ ನೀಡಲಿದೆ. ಬಿಜೆಪಿ ಮುಖಂಡರ ನಿಯೋಗದ ಜೊತೆಗೆ ನಳಿನ್ ಕುಮಾರ್ ಕಟೀಲ್ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದು, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ನಿವಾಸಕ್ಕೂ ಭೇಟಿ ನೀಡುವರು. ಇದಕ್ಕೂ ಮುನ್ನ ಗೃಹ ಸಚಿವರ …

Read More »

ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

ಬೆಂಗಳೂರು: ಆರೋಪಿ ನವೀನ್‌ ವಿರುದ್ಧ ದೂರು ನೀಡಿದ್ದ ವ್ಯಕ್ತಿಯೇ ಈಗ ಡಿಜೆ ಹಳ್ಳಿ ಠಾಣೆಯಲ್ಲಿ ಗಲಾಟೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ.ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದಕ್ಕೆ ನವೀನ್‌ ವಿರುದ್ಧ ಫಿರ್ದೋಸ್‌ ಪಾಶಾ ನೀಡಿದ್ದರು. ಆದರೆ ಈಗ ತನ್ನ ಸ್ಕೂಟರ್‌ ಅನ್ನು ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ವತ್ತಿನ ನಾಶ ಹಾಗೂ ನಷ್ಟ ಪ್ರತಿಬಂಧಕ ಅಧಿನಿಯಮ 1981 ಮತ್ತು ಐಪಿಸಿ ಸೆಕ್ಷನ್‌ …

Read More »

ವೃದ್ಧನ ಶವವನ್ನು ಕುಟುಂಬಸ್ಥರು ಸೈಕಲ್ ನಲ್ಲಿ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದ ಘಟನೆಗೆ ಕುರಿತು, ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರ ವಿರುದ್ಧ ಕಿಡಿ

ಬೆಂಗಳೂರು: ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಕೊರೊನಾ ಶಂಕಿತ ವೃದ್ಧನ ಶವವನ್ನು ಕುಟುಂಬಸ್ಥರು ಸೈಕಲ್ ನಲ್ಲಿ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದ ಘಟನೆಗೆ ಕುರಿತು, ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ, ಎಲ್ಲಿದೆ ನಿಮ್ಮ ಸರ್ಕಾರ ?. ಅವರಿಗೆ ಏಕೆ ಆ್ಯಂಬುಲೇನ್ಸ್ ಒದಗಿಸಲಿಲ್ಲ. ?  ಈ ಅಸಮರ್ಥ ಸರ್ಕಾರಕ್ಕೆ ಮಾನವೀಯತೆ ಇಲ್ಲವಾಗಿದ್ದು, ಪಿಡುಗು ಪರಿಸ್ಥಿತಿಯನ್ನು ನಿಭಾಯಿಸಿಲು ಸರ್ಕಾರ ಸಂಪೂರ್ಣ …

Read More »