Breaking News
Home / ಜಿಲ್ಲೆ / ಬೆಂಗಳೂರು ಗ್ರಾಮಾಂತರ (page 6)

ಬೆಂಗಳೂರು ಗ್ರಾಮಾಂತರ

ಪಿಎಸ್​ಐ ಹಗರಣ: 8 ದಿನ ಸಿಐಡಿ ಕಸ್ಟಡಿಗೆ ಅಮೃತ್ ಪಾಲ್​​

ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣದ ಆರೋಪಿಯಾಗಿರುವ ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪಾಲ್​​ ಅವರನ್ನು ಎಂಟು ದಿನಗಳ ಕಾಲ ಸಿಐಡಿ ಪೊಲೀಸರ ವಶಕ್ಕೆ ನೀಡಿ ನಗರದ ಎಸಿಎಂಎಂ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಸಿಐಡಿ ಮನವಿ ಪುರಸ್ಕರಿಸಿದ ಬೆಂಗಳೂರಿನ ಒಂದನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯವು ಸೆ.12ರ ವರೆಗೆ ಅಮೃತ್ ಪೌಲ್ ಅವರನ್ನು ಸಿಐಡಿ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ. ಪ್ರಕರಣದಲ್ಲಿ ಏಳನೇ ಆರೋಪಿಯಾಗಿರುವ …

Read More »

ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ಕೇಂದ್ರ ಸರ್ಕಾರ ನೀಡುತ್ತಿದ್ದ 5 ಕೆ.ಜಿ ಉಚಿತ ಅಕ್ಕಿ ಸೌಲಭ್ಯ ಈ ತಿಂಗಳಿಗೆ ಅಂತ್ಯ

ಬೆಂಗಳೂರು : ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಉಚಿತ ಅಕ್ಕಿ ಸೌಲಭ್ಯ ಈ ತಿಂಗಳಿಗೆ ಅಂತ್ಯವಾಗಲಿದೆ.   ಹೌದು, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ 2020 ರಿಂದ ಪಡಿತರ ಚೀಟಿದಾರರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪ್ರತಿ ಯುನಿಟ್ ಗೆ 5 ಕೆಜಿ ಅಕ್ಕಿ ಅಥವಾ ಗೋಧಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಆದರೆ. ಉಚಿತ ಅಕ್ಕಿ ಸೌಲಭ್ಯ ಈ …

Read More »

SC/ST ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ‘ಬಿಗ್‌ ಶಾಕ್‌’: ‘ಉಚಿತ ವಿದ್ಯುತ್ ಯೋಜನೆ’ ಆದೇಶ ವಾಪಸ್ಸು

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗಿರುವಂತ ಬಿಪಿಎಲ್ ಪಡಿತರ ಚೀಟಿದಾರ ಎಸ್ಸಿ, ಎಸ್ಟಿ ಸಮುದಾಯದವರಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡೋದಾಗಿ ಘೋಷಣೆ ಮಾಡಿತ್ತು. ಇದೀಗ ಈ ಯೋಜನೆಯನ್ನು ಹಿಂಪಡೆದು, ಬಿಗ್ ಶಾಕ್ ನೀಡಿದೆ.   ಈ ಕುರಿತಂತೆ ರಾಜ್ಯ ಸರ್ಕಾರದ ಇಂಧನ ಇಲಾಖೆ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳ …

Read More »

ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಸೇರಿ ಹಲವರ ವಿರುದ್ಧ FIR ದಾಖಲಿಸಲು ಸೂಚಿಸಿದ ನ್ಯಾಯಾಲಯ

ಬೆಂಗಳೂರು, ಸೆ.3:ವೇತನ ನೀಡದೆ ವಂಚನೆ ಸೇರಿದಂತೆ ಇನ್ನಿತರೆ ಆರೋಪಗಳ ಸಂಬಂಧ ಪವರ್ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಸೇರಿ ಹಲವರ ವಿರುದ್ಧ ಎಫ್‍ಐಆರ್ ದಾಖಲಿಸಲು ನ್ಯಾಯಾಲಯ ಸೂಚಿಸಿದೆ ಎಂದು ವರದಿಯಾಗಿದೆ. ದೂರುದಾರ ಶಶಿಧರ್ ಎಂಬುವರ ಅರ್ಜಿ ವಿಚಾರಣೆ ನಡೆಸಿದ ನಗರದ 3ನೆ ಎಸಿಎಂಎಂ ವಿಶೇಷ ನ್ಯಾಯಾಲಯ ಇಲ್ಲಿನ ಯಶವಂತಪುರ ಠಾಣಾಧಿಕಾರಿಗೆ ಎಫ್‍ಐಆರ್ ದಾಖಲಿಸಲು ಸೂಚಿಸಿದೆ ಎಂದು ತಿಳಿದುಬಂದಿದೆ.   ಪವರ್ ಸುದ್ದಿ ವಾಹಿನಿ ಸಂಸ್ಥೆ, ವ್ಯವಸ್ಥಾಕ ನಿರ್ದೇಶಕ …

Read More »

10 ಪ್ರಭಾವಿಗಳ ಸೆಳೆಯಲು ಬಿಜೆಪಿ ತಂತ್ರ; 150 ಟಾರ್ಗೆಟ್‌ ಗುರಿ ಮುಟ್ಟಲು ಕಾರ್ಯತಂತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿ ಹೋದ ಬೆನ್ನಲ್ಲೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಹತ್ತು ಮಂದಿ ಶಾಸಕರ ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿದೆ.   ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು ಬಿಜೆಪಿಗೆ ಬರಲು ಉತ್ಸುಕರಾಗಿರುವವರ ಬಗ್ಗೆ ಮಾಹಿತಿ ನೀಡಿದ್ದರು. ಮಂಗಳೂರಿನಲ್ಲಿ ಮೋದಿ ಅವರು ಭಾಗವಹಿಸಿದ್ದ ಕೋರ್‌ ಕಮಿಟಿಯಲ್ಲೂ ವಿಷಯ ಪ್ರಸ್ತಾವವಾಗಿದ್ದು, ಬಿಜೆಪಿ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ಸ್ವಸಾಮರ್ಥ್ಯ ಹಾಗೂ ವರ್ಚಸ್ಸು ಹೊಂದಿದ್ದರೆ ಸೇರಿಸಿಕೊಳ್ಳಬಹುದು ಎಂಬ ಅಭಿ ಪ್ರಾಯ …

Read More »

ಶಿವಮೂರ್ತಿ ಶರಣರು, ಚಿತ್ರದುರ್ಗದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ಬಂಕಾಪುರ ಹೆದ್ದಾರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಸಂಬಂಧ ಪೋಕ್ಸೋ ಕಾಯಿದೆಯಡಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೂರ್ತಿ ಶರಣರು, ಚಿತ್ರದುರ್ಗದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ಬಂಕಾಪುರ ಹೆದ್ದಾರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಆರೋಪದ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸ್ವಾಮೀಜಿಯನ್ನ ಬಂಧಿಸಿ ಚಿತ್ರದುರ್ಗಕ್ಕೆ ಕರೆದೊಯ್ದಿದ್ದಾರೆ. ಶ್ರೀಮಠದ ಪೀಠಾಧ್ಯಕ್ಷರದ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ …

Read More »

ನಟ, ಸಂಸದ ಜಗ್ಗೇಶ್ ಮನೆಗೆ ನುಗ್ಗಿದ ಮಳೆ ನೀರು, ಗಮನ ಹರಿಸುವಂತೆ ಅಧಿಕಾರಿಗಳಿಗೆ ಮನವಿ

ಬೆಂಗಳೂರು: ಬಿಜೆಪಿಯ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್‌ ಅವರ ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಗ್ಗೇಶ್ ಮನವಿ ಮಾಡಿದ್ದಾರೆ. ತುಮಕೂರಿನ ಮಾಯಸಂದ್ರದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದ ನೀರು ನಮ್ಮ ಮನೆಗೆ ನುಗ್ಗಿದ್ದರಿಂದ 20 ದಿನಗಳಿಂದ ನನ್ನ ಪತ್ನಿ ನಿದ್ದೆ ಮಾಡಿಲ್ಲ~ ಎಂದು ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ನಟ ಜಗ್ಗೇಶ್ ದೂರಿದ್ದಾರೆ. ಈ ಕುರಿತು TNIE …

Read More »

ಸ್ವಾತಂತ್ರ್ಯ ದಿನಾಚರಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಚಾಮರಾಜಪೇಟೆ ಮೈದಾನ

ಬೆಂಗಳೂರು: ಹಲವು ವಿವಾದಗಳ ಬಳಿಕ ಚಾಮರಾಜಪೇಟೆ ಮೈದಾನದಲ್ಲಿ ಇಂದು ಬೆಳಿಗ್ಗೆ ಎಂಟು ಗಂಟೆಗೆ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿಲಾಯಿತು.   ಇದೇ ಪ್ರಥಮ ಬಾರಿಗೆ ಈ ಮೈದಾನದಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಧ್ವಜಾರೋಹಣವನ್ನು ಉಪವಿಭಾಗಾಧಿಕಾರಿಗಳಾದ ಡಾ.ಎಂ. ಜಿ. ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಪಿ.ಸಿ. ಮೋಹನ್, ಶಾಸಕರಾದ ಜಮೀರ್ ಅಹಮ್ಮದ್, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ …

Read More »

ನಳಿನ್‌ ಕುಮಾರ್‌ ಕಟೀಲ್‌ ನಿರ್ಗಮನ, ಕರ್ನಾಟಕ ಬಿಜೆಪಿಗೆ ಸಾರಥಿ ಯಾರು?

ಬೆಂಗಳೂರು, ಆಗಸ್ಟ್‌ 11: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುರ್ಚಿ ಅಲುಗಾಡುತ್ತಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಬಗ್ಗೆ ಊಹಾಪೋಹಗಳು ಎದ್ದಿವೆ ಎಂದು ಮೂಲಗಳು ತಿಳಿಸಿವೆ.   ಬುಧವಾರ ಕರ್ನಾಟಕದ ಬಿಜೆಪಿ ನಾಯಕರು ನಳಿನ್ ಕುಮಾರ್ ಕಟೀಲ್ ಅವಧಿ ಮುಗಿದಾಗ ಆಗಸ್ಟ್ ಅಂತ್ಯದ ವೇಳೆಗೆ ಅಧಿಕಾರ ತ್ಯಜಿಸುತ್ತಾರೆ ಎಂದು ಸುಳಿವು ನೀಡಿದರು. ಆದಾಗ್ಯೂ ಕಟೀಲ್ ಮತ್ತು ಕೆಲವು …

Read More »

ಯಶವಂತಪುರದಿಂದ ಬೆಳಗಾವಿಗೆ ಪ್ರತಿದಿನ ವಿಶೇಷ ರೈಲು

ಬೆಂಗಳೂರು,ಆಗಸ್ಟ್‌ 10: ಪ್ರತಿದಿನ ಒಂದು ಬಾರಿ ಬೆಂಗಳೂರಿನಿಂದ ಬೆಳಗಾವಿ ಮಧ್ಯೆ ಸೂಪರ್‌ ಫಾಸ್ಟ್‌ ವಿಶೇಷ ರೈಲನ್ನು ಓಡಿಸಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಕೃಷ್ಣಾ ಜನ್ಮಾಷ್ಟಾಮಿ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣೇಶ ಚತುರ್ಥಿ ಅಂಗವಾಗಿ ಈ ಸೂಪರ್‌ ಫಾಸ್ಟ್‌ ವಿಶೇಷ ರೈಲುಗಳ ಸೇವೆ ಓದಗಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ಆಗಸ್ಟ್‌ 12ರಂದು ರಾತ್ರಿ 9.30ಕ್ಕೆ ಯಶವಂತಪುರದಿಂದ ಹೊರಡಲಿರುವ ಈ ರೈಲು ಮಾರನೇ ದಿನ ಬೆಳಗಾವಿಗೆ 8.25ಕ್ಕೆ ತಲುಪಲಿದೆ. ಯಶವಂತಪುರ- ಬೆಳಗಾವಿ …

Read More »