Breaking News
Home / ಜಿಲ್ಲೆ / ಕೊಪ್ಪಳ (page 7)

ಕೊಪ್ಪಳ

ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಬಂದರೂ ಕ್ವಾರಂಟೈನ್ ಮಾಡದ ಜಿಲ್ಲಾಡಳಿತ

ಕೊಪ್ಪಳ: ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಿಂದ ನಾಲ್ವರು ಕಾರ್ಮಿಕರು ರಾಜ್ಯಕ್ಕೆ ವಲಸೆ ಬಂದರೂ ಅವರನ್ನು ಕ್ವಾರಂಟೈನ್ ಮಾಡದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಸೋಮವಾರ ಸಂಜೆ 6ಕ್ಕೆ ಮಹಾರಾಷ್ಟ್ರದಿಂದ ಕೊಪ್ಪಳಕ್ಕೆ ಆಗಮಿಸಿದ್ದು, ಇದುವರೆಗೂ ಕಾರ್ಮಿಕರನ್ನು ಕ್ವಾರಂಟೈನ್ ಮಾಡಿಲ್ಲ. ಕೊಪ್ಪಳ ಜಿಲ್ಲೆಯ ನಾಲ್ವರು ಕಾರ್ಮಿಕರು ಸಹ ಬೇಕರಿಯಲ್ಲಿ ಕೆಲಸ ಮಾಡುವವರಾಗಿದ್ದು, ಮಾಹಾರಾಷ್ಟ್ರದ ಖೇಡ್ ನಿಂದ ಆಗಮಿಸಿದ್ದಾರೆ. ಸೋಮವಾರ ಸಂಜೆಯಿಂದ ಕೊಪ್ಪಳ …

Read More »

ಅನಾವಶ್ಯಕವಾಗಿ ರಸ್ತೆಗೆ ಬಂದು ತಿರುಗಾಡುತ್ತಿದ್ದರು. ಅಂತವರಿಗೆ ಕೊಪ್ಪಳ ಪೊಲೀಸರು ವಿನೂತನ ಶಿಕ್ಷೆ ನೀಡಿದ್ದಾರೆ.

ಕೊಪ್ಪಳ: ಲಾಕ್‍ಡೌನ್ ಶುರುವಾದಗಿನಿಂದ ಪೊಲೀಸರು ಹಗಲಿರುಳು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಕೆಲವರು ಅನಾವಶ್ಯಕವಾಗಿ ರಸ್ತೆಗೆ ಬಂದು ತಿರುಗಾಡುತ್ತಿದ್ದರು. ಅಂತವರಿಗೆ ಕೊಪ್ಪಳ ಪೊಲೀಸರು ವಿನೂತನ ಶಿಕ್ಷೆ ನೀಡಿದ್ದಾರೆ. ಪೊಲೀಸರು ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಗೋಣಿ ಚೀಲದ ಪಿಪಿಇ ಕಿಟ್ ಹಾಕಿಸಿದ್ದಾರೆ. ಈ ಮೂಲಕ ಕೊಪ್ಪಳ ನಗರ ಠಾಣಾ ಪೊಲೀಸರು ವಿಭಿನ್ನ ರೀತಿಯಲ್ಲಿ ಕೊರೊನಾ ವೈರಸ್ ಜಾಗೃತಿ ಮೂಡಿಸಿದ್ದಾರೆ. ಭಾರತ ಲಾಕ್‍ಡೌನ್ ನಡುವೆಯೂ ವಾಹನ …

Read More »

ಪ್ರತಿ ಮನೆಗೆ ತೆರಳಿ ಕೊರೊನಾ ಪರೀಕ್ಷೆ ನಡೆಸಿ: ಬಿ.ಸಿ.ಪಾಟೀಲ್

ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ಯಾನರ್ ನೀಡಿ – 263 ಜನರ ಸ್ಯಾಂಪಲ್ ಪರೀಕ್ಷೆ, ಎಲ್ಲವೂ ನೆಗೆಟಿವ್ – ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಕೊರೊನಾ ಪ್ರಕರಣವಿಲ್ಲ ಕೊಪ್ಪಳ: ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಥರ್ಮಲ್ ಸ್ಕ್ಯಾನರ್ ಬಳಸಿ ಪ್ರತಿಯೊಬ್ಬರ ಆರೋಗ್ಯ ಪರೀಕ್ಷಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ …

Read More »

” ಕೊಪ್ಪಳ:ಅಂಜನಾದ್ರಿ ಬೆಟ್ಟದಲ್ಲಿ ಆಹಾರ, ನೀರಿಗಾಗಿ ಮಂಗಗಳ ನರಳಾಟ”

ಕೊಪ್ಪಳ: ಮಹಾಮಾರಿ ಕೊರೊನಾ ವೈರಸ್ ವಿಶ್ವದ ಮನುಕುಲವನ್ನೇ ಬೆಚ್ಚಿ ಬೀಳಿಸಿದ್ದಲ್ಲದೇ ಮೂಕ ಪ್ರಾಣಿಗಳನ್ನು ಕಂಗಾಲಾಗಿಸಿದೆ. ಕೊರೊನಾ ಭೀತಿಯಿಂದ ದೇಶವನ್ನು ಲಾಕ್‍ಡೌನ್ ಮಾಡಿ ಜನರಿಗೆ ಅಗತ್ಯ ವಸ್ತು, ಆಹಾರ ಒದಗಿಸುವ ಪ್ರಯತ್ನವೆನೋ ನಡೆಯುತ್ತಿದೆ. ಆದರೆ ಲಾಕ್‍ಡೌನಿಂದ ಆಹಾರ ಸಿಗದೇ ಮೂಕ ಪ್ರಾಣಿಗಳು ನರಳುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿರುವ ಆಂಜನೇಯ ಹುಟ್ಟಿದ ಸ್ಥಳ ಎಂದೇ ಪ್ರಖ್ಯಾತಿ ಪಡೆದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಸಾವಿರಾರು ಮಂಗಗಳು ನಿತ್ಯ ಆಹಾರಕ್ಕಾಗಿ ಪರದಾಡುವಂತಾಗಿದೆ. ಲಾಕ್‍ಡೌನ್‍ನಿಂದಾಗಿ ಕಳೆದ ಒಂದು …

Read More »

ಮಾಸ್ಕ್ ಹಾಕಿಕೊಂಡು ಡಿಸಿ ಭೇಟಿ ಮಾಡಿದ ಅರ್ಜುನ್ ಇಟಗಿ

ಕೊಪ್ಪಳ: ಗಾಯಕ ಅರ್ಜುನ್ ಇಟಗಿಗೂ ಕೊರೊನಾ ಭೀತಿ ಎದುರಾಗಿದೆ. ಹೀಗಾಗಿ ಇಂದು ಅರ್ಜುನ್ ಮಾಸ್ಕ್ ಹಾಕಿಕೊಂಡು ಬಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿರುವ ಅರ್ಜುನ್ ಇಟಗಿ, ಡಿಸಿ ಸುನೀಲ್ ಕುಮಾರ್ ಭೇಟಿ ಮಾಡಿದ್ದಾರೆ. ಕಾರ್ಯಕ್ರಮವೊಂದಕ್ಕೆ ಅನುಮತಿ ಪಡೆಯಲು ಅರ್ಜುನ್ ತನ್ನ ತಂದೆಯೊಂದಿಗೆ ಆಗಮಿಸಿದ್ದಾರೆ. ಅರ್ಜುನ್ ಜೊತೆಗೆ ತಂದೆ ಕೂಡ ಮಾಸ್ಕ್ ಹಾಕಿಕೊಂಡು ಬಂದಿದ್ದಾರೆ. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ತಾನು ಮಾಸ್ಕ್ ಹಾಕಿಕೊಂಡು ಬಂದಿರುವ ಅರ್ಜುನ್, …

Read More »

ಸತೀಶ ಜಾರಕಿಹೊಳಿ ಅವರಿಗೆ ದೇವರು ಒಳ್ಳೆಯದು ಮಾಡಲಿ :ರಮೇಶ ಜಾರಕಿಹೊಳಿ ..

ಕೊಪ್ಪಳ: ಸತೀಶ ಜಾರಕಿಹೊಳಿ ಅವರಿಗೆ ದೇವರು ಒಳ್ಳೆಯದು ಮಾಡಲಿ ಅಂತಾ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಸತೀಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಒಲಿದು ಬಂದ ಹಿನ್ನೆಲೆ ಮಾಧ್ಯದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮದು ಬಿಜೆಪಿ ಪಕ್ಷ. ಕಾಂಗ್ರೆಸ್ ಮುಗಿದು ಹೋದ ಅಧ್ಯಾಯ. ಹೀಗಾಗಿ ಸಹೋದರರ ಕುರಿತು ನಾನು ಯಾವುದೇ ಹೇಳಿಕೆ ನೀಡಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ. ನಮ್ಮ ಸಹೋದದರರ ಬಗ್ಗೆ ಯಾಕೆ ಗೊಂದಲ ಸೃಷ್ಠಿ …

Read More »

ಪ್ರಗತಿಪರ ಹಾಗೂ ರೈತಸಂಘ ಬಸವೇಶ್ವರ ವೃತ್ತದಲ್ಲಿ ಯತ್ನಾಳ್ ಹೇಳಿಕೆ ಖಂಡಿಸಿ ಪ್ರತಿಭಟನೆ.

ಪ್ರಗತಿಪರ ಹಾಗೂ ರೈತಸಂಘ ಬಸವೇಶ್ವರ ವೃತ್ತದಲ್ಲಿ ಯತ್ನಾಳ್ ಹೇಳಿಕೆ ಖಂಡಿಸಿ ಪ್ರತಿಭಟನೆ… ಕೊಪ್ಪಳ: ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ರೈತಸಂಘಟನೆಗಳು ಜಿಲ್ಲೆಯ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಕಲಿ ಹೋರಾಟಗಾರ ಎಂಬ ಹೇಳಿಕೆ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ, ವಿರೋಧಿಸಿ ಹಾಗೂ ಸಚಿವ ವಿ. ಸೋಮಣ್ಣ ಇವರಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಶಾಸಕತ್ವ ರದ್ದುಗೊಳಿಸಿ ಎಂದು ಕೊಪ್ಪಳದಲ್ಲಿ ಗುರುವಾರ ಎ,ಪಿ,ಎಂ,ಸಿ …

Read More »

ಶೀಘ್ರವಾಗಲಿ, ಇಲ್ಲವೇ ಹಾಲಿ ಅವರೇ ಮುಂದುವರೆಯಲಿ: ಸತೀಶ ಜಾರಕಿಹೊಳಿ

ಕೊಪ್ಪಳ: ವಾಲ್ಮೀಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ಅವಶ್ಯವಿದೆ. ಈ ಕಾರಣಕ್ಕೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಇಂದು ನಗರದಲ್ಲಿ ಮಾದ್ಯಮಮಿತ್ರಗಳೊಂದಿಗೆ ಮಾತನಾಡಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಕೂಡಲೇ ಮಾಡದಿದ್ದರೆ ಮತ್ತೇ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ಕ್ಯಾಶಿನೋ ತೆರೆಯುವ ವಿಚಾರವಾಗಿ ಪ್ರತಿಕ್ರಿಯಿಸಿ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ಈ ಕಾರಣಕ್ಕೆ ಏನೇನೋ ಮಾಡ್ತಿದ್ದಾರೆ.ಸಿ.ಟಿ.ರವಿ ಹೀಗೆ …

Read More »

ಸರ್ಕಾರಿ ಬಸ್ ತಪಾಸಣೆ ಮಾಡುತ್ತಿದ್ದ ನಕಲಿ ಸಾರಿಗೆ ಅಧಿಕಾರಿಯನ್ನು ಕಂಡಕ್ಟರ್ ಪತ್ತೆ ಹಚ್ಚಿ ಮೇಲಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ: ಸರ್ಕಾರಿ ಬಸ್ ತಪಾಸಣೆ ಮಾಡುತ್ತಿದ್ದ ನಕಲಿ ಸಾರಿಗೆ ಅಧಿಕಾರಿಯನ್ನು ಕಂಡಕ್ಟರ್ ಪತ್ತೆ ಹಚ್ಚಿ ಮೇಲಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಹುಲಗಿಯಿಂದ ಗಂಗಾವತಿ ಕಡೆ ಹೊರಟಿದ್ದ ಬಸ್‍ನ್ನು ತಪಾಸಣೆ ಮಾಡುವ ನೆಪದಲ್ಲಿ ಬಂದ ಆತ, ಟಿಕೆಟ್ ಮತ್ತು ಕ್ಯಾಶ್ ತಪಾಸಣೆ ಮಾಡಿದ್ದಾನೆ. ಈ ವೇಳೆ ಬಸ್ ಕಂಡೆಕ್ಟರ್ ಗೆ ಸಂಶಯ ಬಂದು ವಿಚಾರಣೆ ಮಾಡಿದಾಗ ನಕಲಿ ಅಧಿಕಾರಿ ಎಂದು ತಿಳಿದು ಬಂದಿದೆ. ಬಸ್ ಪ್ರಯಾಣಿಕನ ಸೋಗಿನಲ್ಲಿ ಬಸ್ …

Read More »